ಹೈನುಗಾರಿಕೆ ದೇಶದ ರೈತರ ಆರ್ಥಿಕ ಚೇತರಿಕೆಯ ಪ್ರಮುಖ ಅಂಶವಾಗಿದೆ. ಕೃಷಿ ಚಟುವಟಿಕೆ ಜೊತೆ ಹೈನುಗಾರಿಕೆಯನ್ನು ಅಳವಡಿಸಿಕೊಂಡು ದೇಶದ ಅದೆಷ್ಟೋ ರೈತ ಕುಟುಂಬ ಬದುಕುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಚಟುವಟಿಕೆಗಳಲ್ಲಿ ರೈತರಿಗೆ ನೆರವಾಗಲು ನಾನಾ ಯೋಜನೆಗಳನ್ನು ಜಾರಿಗೆ ತಂದಿವೆ.
ಮತ್ತು ಕೃಷಿಗೆ ಸಂಬಂಧಪಟ್ಟ ಹಾಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ನೀಡುವುದು, ರಸಗೊಬ್ಬರಗಳನ್ನು ನೀಡುವುದು ಕೃಷಿ ಉಪಕರಣಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಸಹಾಯಧನ ನೀಡುವುದು ಮತ್ತು ಕಿಸ್ಸನ್ ಸಮ್ಮಾನ್ ಅಂತಹ ಮಹತ್ತರವಾದ ಯೋಜನೆಗಳನ್ನು ದೇಶದ ರೈತರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಜಾರಿಗೆ ತಂದಿದೆ. ಇದರ ಬೆನ್ನೆಲ್ಲೇ ಮತ್ತೊಂದು ರೈತರಿಗೆ ಅನುಕೂಲವಾಗುವ ಮತ್ತೊಂದು ಯೋಜನೆ ಜಾರಿಗೆ ಆಗಿದೆ.
ಈ ಬಾರಿ ರಾಜ್ಯ ಸರ್ಕಾರವು ಈ ಯೋಜನೆ ಮೂಲಕ ರೈತರಿಗೆ ನೆರವಾಗಿದೆ. ಹೈನುಗಾರಿಕೆ ಕೂಡ ರೈತರು ನಂಬಿ ಬದುಕುತ್ತಿರುವ ಬದುಕಾಗಿರುವ ಕಾರಣ ಹೈನುಗಾರಿಕೆಯಲ್ಲಿ ರೈತರನ್ನು ಪ್ರೋತ್ಸಾಹಿಸಲು ಈ ರೂಪದಲ್ಲಿ ಸಹಾಯ ಮಾಡುತ್ತಿದೆ. ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳುವ ಸಲುವಾಗಿ ರೈತರಿಗೆ ಸಹಾಯಧನ ನೀಡುತ್ತಿದೆ.
ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದು ಮತ್ತು ದನ ಕರುಗಳ ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲ ರೈತರು ಕೂಡ ಸುಸ್ಸಜಿತವಾದ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವುದು ಈ ಯೋಜನೆ ಉದ್ದೇಶವಾಗಿದ್ದು ಇದರೊಂದಿಗೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತರಿ ಯೋಜನೆ ಅಡಿ ಗ್ರಾಮೀಣ ಜನತೆಗೆ ಉದ್ಯೋಗ ಸೃಷ್ಟಿಸಿದ ಅನುಕೂಲತೆಯು ಆಗಲಿದೆ ಎಂದು ಈ ಯೋಜನೆ ಜಾರಿಗೆ ತಂದಿದೆ.
ಈಗಾಗಲೇ ವರ್ಷದಲ್ಲಿ 200 ದಿನಗಳ ಕೆಲಸವನ್ನು ಮಹತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಇರುವ ಕೆಲಸಗಾರರಿಗೆ ಸರ್ಕಾರ ನೀಡುತ್ತಿದೆ. ಕೆರೆಗಳ ಹೂಳೆತ್ತುವ ಕೆಲಸ, ದನಕರುಗಳಿಗೆ ನೀರು ಕುಡಿಯುವ ತೊಟ್ಟಿ ನಿರ್ಮಿಸುವುದು, ಕೃಷಿಹೊಂಡ ಇನ್ನು ಮುಂತಾದ ಯೋಜನೆಗಳಲ್ಲಿ ಇದುವರೆಗೆ ಈ ಕಾರ್ಮಿಕರು ಬಾಗಿ ಆಗುತ್ತಿದ್ದರು. ಇನ್ನು ಮುಂದೆ ಕೊಟ್ಟಿಗೆ ನಿರ್ಮಾಣ ಕಾರ್ಯದಲ್ಲೂ ಕೂಡ ಇವರಿಗೆ ಉದ್ಯೋಗ ದೊರಕಿಸಿ ಕೊಡುವ ಯೋಜನೆ ಮಾಡಿ ಕೊಟ್ಟಿಗೆ ನಿರ್ಮಾಣ ಮಾಡಿಸಿಕೊಳ್ಳುವ ರೈತರುಗಳಿಗೆ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯ ಧನವನ್ನು ಕೂಡ ನೀಡುತ್ತಿದೆ.
ಈ ಯೋಜನೆಯಲ್ಲಿ ಫಲಾನುಭವಿಗಳು ಆಗಬೇಕು ಎಂದರೆ ರೈತರುಗಳಿಗೆ ಕೆಲ ಕಡ್ಡಾಯ ನಿಯಮಗಳಿವೆ ಅದೇನೆಂದರೆ ನೀವು ಕರ್ನಾಟಕದ ರೈತರಾಗಿರಬೇಕು. ಕನಿಷ್ಠ ಪಕ್ಷ ನಾಲ್ಕು ಹಸುಗಳನ್ನಾದರೂ ನೀವು ಹೊಂದಿರಬೇಕು. ಹಸುಗಳನ್ನು ಹೊಂದಿರುವ ಬಗ್ಗೆ ವೈದ್ಯಾಧಿಕಾರಿಗಳಿಂದ ಧೃಢೀಕರಣ ಪತ್ರ ಪಡೆದಿರಬೇಕು. ನರೇಗಾ ಕಾರ್ಡನ್ನು ಹೊಂದಿರಬೇಕು ಜೊತೆಗೆ ಈ ಯೋಜನೆಯಲ್ಲಿ ಈ ಹಿಂದೆ ಅನುಕೂಲತೆ ಪಡೆದಿರಬಾರದು. ಕೊಟ್ಟಿಗೆ ಶೆಡ್ ನಿರ್ಮಾಣ ಮಾಡಿಕೊಳ್ಳಲು 22 ಅಡಿ ಉದ್ದ ಹಾಗೂ 12 ಅಡಿ ಅಗಲದ ಸ್ವಂತ ಜಾಗ ಇರಬೇಕು.
ಇಷ್ಟೆಲ್ಲ ಅರ್ಹತೆ ಇದ್ದಲ್ಲಿ ಈ ಕೂಡಲೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ಭೇಟಿಕೊಟ್ಟು ಯೋಜನೆ ಬಗ್ಗೆ ವಿಚಾರಿಸಿ ಅರ್ಜಿ ಹಾಕಿ ಸರ್ಕಾರದಿಂದ ಸಿಗುವ ಈ ಸಹಾಯಧನ ಪಡೆದುಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕಿಸಾನ್ ಜ್ಯೋತಿ ವೆಬ್ಸೈಟ್ ಅಲ್ಲಿ ಮಾಹಿತಿ ತಿಳಿದುಕೊಂಡು ಅರ್ಜಿ ಹಾಕಿ ಈ ಯೋಜನೆಯ ಉಪಯೋಗ ಪಡೆದುಕೊಳ್ಳಿ ಮತ್ತು ಈ ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ರೈತರಿಗೆ ವಿಷಯ ತಲುಪುವ ಹಾಗೆ ಶೇರ್ ಮಾಡಿ.