ಡಯಾಬಿಟಿಸ್ ಎನ್ನುವುದು ಮೊದಲೆಲ್ಲಾ ವಯಸ್ಸಾದ ಮೇಲೆ ಬರುವಂತಹ ವಯೋಸಹಜ ಕಾಯಿಲೆ ಎನಿಸಿತ್ತು. ಆದರೆ ಈಗ 40ರ ಆಸು ಪಾಸಿನವರು ಕೂಡ ಡಯಾಬಿಟಿಕ್ ಗಳಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಧುನಿಕ ಜೀವನಶೈಲಿ ಹಾಗೂ ರಾಸಾಯನಿಕ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು.
ಆದರೆ ಈಗಿನ ಕಾಲದ ಕಾಂಪಿಟೇಶನ್ ಜಗತ್ತಿನಲ್ಲಿ ನಾವು ಇದಕ್ಕೆ ಒಗ್ಗಿಕೊಂಡೇ ಬದುಕಬೇಕಾಗಿದೆ. ನಮಗಾಗಿ ಪ್ರಪಂಚವನ್ನು ಬದಲಾಯಿಸಿಕೊಳ್ಳಲಾಗದ ಕಾರಣ ಇರುವುದರಲ್ಲೇ ಆರಿಸಿಕೊಂಡು ಜಾಗೃತಿಯಲ್ಲಿ ಬದುಕಿದರೆ ಅಪಾಯದ ಪ್ರಮಾಣವನ್ನು ಅಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.
ಇಲ್ಲವಾದಲ್ಲಿ ಇರುವ ತನಕವೂ ಕೂಡ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತಾ ಆರೋಗ್ಯಕ್ಕೆ ಸೈಡ್ ಎಫೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. ಈ ಶುಗರ್ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು ಎಂದರೆ ವ್ಯಾಯಾಮ ಮಾಡುವುದು ಸರಿಯಾದ ಆಹಾರ ಕ್ರಮ ಅನುಸರಿಸುವುದು ಬಹಳ ಮುಖ್ಯ.
ಆಹಾರ ತಿನ್ನುವುದು ಮಾತ್ರವಲ್ಲದೆ ನಾವು ಸೇವಿಸುವ ಆಹಾರದಲ್ಲಿ ಯಾವ ಅಂಶಗಳು ಎಷ್ಟು ಪ್ರಮಾಣದಲ್ಲಿ ಇದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಸೇವಿಸ ಬೇಕಾಗುತ್ತದೆ. ಶುಗರ್ ಬಂದವರು ಸಕ್ಕರೆ ಪದಾರ್ಥ ತಿನ್ನಬಾರದು ಸಿಹಿ ಪದಾರ್ಥಗಳನ್ನು ಅವಾಯ್ಡ್ ಮಾಡಬೇಕು ಎನ್ನುವುದಷ್ಟೇ ಎಲ್ಲರೂ ಹೇಳುತ್ತಾರೆ ಹೊರತು ಸಿಹಿ ಪದಾರ್ಥಗಳು ಮಾತ್ರವಲ್ಲದೇ ಉಳಿದ ಆಹಾರದಲ್ಲೂ ಕೂಡ ಸಕ್ಕರೆ ಅಂಶ ಇರುತ್ತದೆ ಎನ್ನುವುದನ್ನು ಎಲ್ಲರೂ ಮನದಟ್ಟು ಮಾಡುವುದಿಲ್ಲ.
ನಾವು ತಿನ್ನುವ ಹಣ್ಣು ತರಕಾರಿ ಸೊಪ್ಪು ಧಾನ್ಯ ಹಾಲು ಎಲ್ಲದರಲ್ಲೂ ಕೂಡ ಸಕ್ಕರೆ ಅಂಶ ಇರುತ್ತದೆ. ಇವುಗಳ ಸೇವನೆಯಿಂದ ಕೂಡ ದೇಹಕ್ಕೆ ಸಕ್ಕರೆ ಅಂಶ ಸೇರುತ್ತಾ ಹೋಗುತ್ತದೆ, ಹಾಗಾದರೆ ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವ ಗೊಂದಲ ಉಂಟಾಗುವುದು ನಿಜ. ಇದರ ಬಗ್ಗೆ ಕೆಲ ಅಗತ್ಯ ಇನ್ಫರ್ಮೇಶನ್ ಗಳನ್ನು ಈ ಲೇಖನದ ಮೂಲಕ ತಿಳಿಸ ಬಯಸುತ್ತಿದ್ದೇವೆ.
ನೇರವಾಗಿ ಹೇಳುವುದಾದರೆ ಸಕ್ಕರೆ ಅಂಶ ಇರುವ ಎಲ್ಲಾ ಪದಾರ್ಥಗಳನ್ನು ಗ್ಲಿಸಮಿಕ್ ಫುಡ್ ಎಂದು ಕರೆಯಬಹುದು. ರಾಗಿ, ಜೋಳ, ಅಕ್ಕಿ, ಪಪ್ಪಾಯ, ಸೀಬೆಹಣ್ಣು, ಸೇಬಿನ ಹಣ್ಣು ಬಾಳೆಹಣ್ಣು, ಜೇನುತುಪ್ಪ, ಬೆಲ್ಲ, ಡ್ರೈ ಫ್ರೂಟ್ಸ್ ಎಲ್ಲದರಲ್ಲೂ ಈ ಅಂಶ ಇರುತ್ತದೆ. ಹಾಗಾಗಿ ಆಹಾರ ಸೇವನೆ ಮಾಡುವ ಮುನ್ನ ಅದರ ಗ್ಲಿಸಮಿಕ್ ಇಂಡೆಕ್ಸ್ ಒಮ್ಮೆ ಗಮನಿಸಬೇಕು.
ಗ್ಲಿಸಮಿಕ್ ಇಂಡೆಕ್ಸ್ ಮಾತ್ರವಲ್ಲ ಮತ್ತೊಂದು ಅಂಶ ಇದೆ. ಅದೇನೆಂದರೆ, ಕೆಲವೊಮ್ಮೆ ಆಹಾರಗಳು ಕೂಡ ಚೀಟಿಂಗ್ ಮಾಡುತ್ತದೆ. ಸೇವಿಸಿದಾಗ ಗ್ಲಿಸಮಿಕ್ ಅಂಶ ಕಡಿಮೆ ಇದ್ದರೂ ಆಹಾರ ಸೇವನೆ ಆಗಿ ಅದು ದೇಹಕ್ಕೆ ರಕ್ತ ಸೇರುವಾಗ ಲೋಡ್ ಹೆಚ್ಚಾಗುತ್ತದೆ. ಇಂತಹ ಪದಾರ್ಥಗಳನ್ನು ಗ್ಲಿಸಮಿಕ್ ಲೋಡ್ ಹೆಚ್ಚಿರುವ ಆಹಾರ ಪದಾರ್ಥಗಳು ಎನ್ನುತ್ತೇವೆ. ಹೀಗಾಗಿ ಒಬ್ಬೊಬ್ಬರು ಒಂದೊಂದು ರೀತಿ ಹೇಳಿ ಕನ್ಫ್ಯೂಷನ್ ಕ್ರಿಯೇಟ್ ಮಾಡುವುದು.
ಇದಕ್ಕೆ ಸ್ಪಷ್ಟತೆ ಕೊಡುವುದಾದರೆ ನೀವು ಯಾವುದೇ ಪದಾರ್ಥ ತಿನ್ನುವಾಗ ಒಮ್ಮೆ ಗ್ಲಿಸಮಿಕ್ ಇಂಡೆಕ್ಸ್ ನೋಡಿ ಇದರಲ್ಲಿ ಗ್ಲಿಸಮಿಕ್ ಇಂಡೆಕ್ಸ್ ಲೋ ಇರುವ ಆಹಾರ ಪದಾರ್ಥಗಳನ್ನು ಸೇವಿಸಿ. ಉದಾಹರಣೆಗೆ ಬಾಳೆಹಣ್ಣು ತುಂಬಾ ಹಣ್ಣಾದಾಗ ಗ್ಲಿಸಮಿಕ್ ಅಂಶ ಹೆಚ್ಚಾಗಿರುತ್ತದೆ.
ಅದರ ಬದಲು ಸ್ವಲ್ಪ ಹಣ್ಣಾದಾಗಲೇ ಸೇವಿಸಿ. ರಾಗಿ, ಜೋಳ ಇವುಗಳಲ್ಲಿ ಗ್ಲಿಸಮಿಕ್ ಅಂಶ ಹೆಚ್ಚಾಗಿದ್ದರು ಗ್ಲಿಸಮಿಕ್ ಲೋಡ್ ಕಡಿಮೆ ಇರುತ್ತದೆ ಹಾಗಾಗಿ ಇವುಗಳ ಸೇವನೆ ಅಪಾಯವಲ್ಲ. ಹೀಗೆ ಇದರ ದೊಡ್ಡಪಟ್ಟಿಯೇ ಇದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕಿದ್ದರೆ ಮತ್ತು ಯಾವ ಪದಾರ್ಥಗಳಲ್ಲಿ ಎಷ್ಟು ಗ್ಲಿಸಮಿಕ್ ಅಂಶ ಇದೆ ಎನ್ನುವುದನ್ನು ಇನ್ನು ವಿವರವಾಗಿ ತಿಳಿದುಕೊಳ್ಳಬೇಕಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.