ಕ್ಯಾಲೆಂಡರ್ ವರ್ಷದ ಅಂತ್ಯವಾಗಲಿ ಅಥವಾ ಆರ್ಥಿಕ ವರ್ಷದ ಅಂತ್ಯವಾಗಲಿ ಹಲವು ಅನುಭವಗಳನ್ನು ನೀಡಿರುತ್ತದೆ. ಒಂದು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದ ಕೆಲ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ಎಚ್ಚರಿಕೆಯ ಕೊನೆ ಅವಕಾಶ ಹಾಗೂ ಹೊಸತನದ ಸಂಭ್ರಮ ಎರಡನ್ನು ನೀಡುವ ಈ ವೇಳೆಯಲ್ಲಿ 2023 ವರ್ಷವನ್ನು ಸಾಕಷ್ಟು ಅನುಭವಗಳೊಂದಿಗೆ ಮುಗಿಸಿ.
2024ರ ಹೊಸ ವರ್ಷದ ನಿರೀಕ್ಷೆಯಲ್ಲಿರುವವರಿಗೆ ಹಣಕಾಸಿನ ವಿಚಾರವಾಗಿ ಈ ವರ್ಷದಲ್ಲಿ ಮಾಡಬೇಕಾಗಿದ್ದ ಕೆಲವು ಜವಾಬ್ದಾರಿಗಳ ಬಗ್ಗೆ ನೆನಪಿಸುತ್ತಿದ್ದೇವೆ ಮತ್ತು ಇವುಗಳಿಗೆ ಡಿಸೆಂಬರ್ 31 ಕಡೆಯ ದಿನಾಂಕವಾಗಿದೆ. ಹಾಗಾಗಿ ಇವುಗಳನ್ನು ತಿಳಿದುಕೊಂಡು ತಪ್ಪದೆ ಈ ಕಾರ್ಯ ಪೂರ್ತಿ ಮಾಡಿ.
1. ಸ್ಟಾಕ್ ಮಾರ್ಕೆಟ್ (Stock Market) ನಲ್ಲಿ ಹೂಡಿಕೆ ಮಾಡುತ್ತಿರುವವರು ಈ ವಿಷಯದ ಬಗ್ಗೆ ಗಮನ ಕೊಡಿ. ನಿಮ್ಮ ಟ್ರೇಡಿಂಗ್ (trading) ಹಾಗೂ ಡಿಮ್ಯಾಟ್ (Demate account) ಅಕೌಂಟ್ ಗೆ ನಾಮಿನಿ ಅಪ್ಡೇಟ್ (nominee) ಮಾಡಲು ಡಿಸೆಂಬರ್ 31 ಕಡೆ ದಿನಾಂಕವಾಗಿದೆ.
ಈ ಗಡುವಿನ ಒಳಗೆ ನೀವು ನಿಮ್ಮ ನಾಮಿನಿ ಅಪ್ಡೇಟ್ ಮಾಡದೇ ಇದ್ದರೆ ನಿಮ್ಮ ಅಕೌಂಟ್ ಫ್ರೀಝ್ (acount freeze) ಆಗಿಬಿಡುತ್ತದೆ. ಈ ಕಾರಣದಿಂದಾಗಿ ನೀವು ಅನ್ ಫ್ರೀಝ್ ಮಾಡಿಸುವವರೆಗೂ ಟ್ರಾನ್ಸಾಕ್ಷನ್ ಮಾಡಲು ಆಗುವುದಿಲ್ಲ. SEBI ಇದಕ್ಕೆ ಸೆಪ್ಟೆಂಬರ್ 31 ಕಡೆ ದಿನಾಂಕ ಎಂದು ಹೇಳಿತ್ತು ಆದರೆ ಮತ್ತೊಮ್ಮೆ ಡಿಸೆಂಬರ್ 31ರವರೆಗೆ ಸಮಯಾವಕಾಶವನ್ನು ವಿಸ್ತರಿಸಿ ಅವಕಾಶ ಮಾಡಿಕೊಟ್ಟಿದೆ.
ಈ ಅವಧಿಯ ಒಳಗೆ ನೀವು ನಾಮಿನಿ ಪ್ರಕ್ರಿಯೆ ಪೂರ್ತಿ ಗೊಳಿಸದೆ ಇದ್ದರೆ ನಿಮಗೆ ಏನಾದರೂ ಅ’ತಾ’ಚು’ರ್ಯ ಆದಾಗ ಆ ಹಣ ಯಾರಿಗೆ ಹೋಗಬೇಕು ಎನ್ನುವ ವಿಷಯದಲ್ಲಿ ಗೊಂದಲವಾಗುತ್ತದೆ ಹಾಗಾಗಿ ಈ ವಿಷಯದಲ್ಲಿ ನಿರ್ಲಕ್ಷ ಮಾಡಬೇಡಿ, ಇದು ನಿಮ್ಮ ಜವಾಬ್ದಾರಿ ಕೂಡ ಆಗಿದೆ.
2. ಬ್ಯಾಂಕ್ ಗಳಲ್ಲೂ ಲಾಕರ್ ಸೌಲಭ್ಯ (Bank Locker facility) ಹೊಂದಿರುವವರು ಈ ವಿಷಯದ ಬಗ್ಗೆ ಗಮನ ಕೊಡಿ. ನಾಗರಿಕರು ತಮ್ಮ ಬೆಲೆಬಾಳುವ ವಸ್ತುಗಳು ಹಾಗೂ ಪ್ರಮುಖವಾದ ಡಾಕ್ಯುಮೆಂಟ್ ಗಳನ್ನು ಬ್ಯಾಂಕ್ ಲಾಕರ್ ವ್ಯವಸ್ಥೆ ಪಡೆದು ಅದರಲ್ಲಿ ಇಟ್ಟುಕೊಳ್ಳುತ್ತಾರೆ. ಬ್ಯಾಂಕ್ ಗಳು ಈ ರೀತಿ ಲಾಕರ್ ಗಳನ್ನು ಬಾಡಿಗೆಗೆ ಕೊಡುವಾಗ ಕೆಲವು ನೀತಿ ನಿಯಮಗಳನ್ನು ವಿಧಿಸುತ್ತವೆ ಮತ್ತು ಗ್ರಾಹಕನು ಕೂಡ ಇದಕ್ಕೆ ಬದ್ಧನಾಗಿರುತ್ತೇನೆ ಎಂದು ಅದನ್ನು ಸಹಿ ಮಾಡಿ ಲಾಕರ್ ಸೌಲಭ್ಯ ಪಡೆದಿರುತ್ತಾನೆ.
ಈಗ ಸುಪ್ರೀಂ ಕೋರ್ಟ್ (Supreme Court) ಇದರಲ್ಲಿ ಕೆಲ ವಿಷಯಗಳನ್ನು ಸೇರಿಸಿ, ಈ ಬದಲಾಯಿಸಿದ ವಿಷಯಗಳು ಎಲ್ಲಾ ಗ್ರಾಹಕರಿಗೂ ತಿಳಿದಿರಬೇಕು ಎನ್ನುವ ಉದ್ದೇಶಕ್ಕಾಗಿ ಮತ್ತೊಮ್ಮೆ ಬ್ಯಾಂಕ್ ಗಳು ಲಾಕರ್ ಹೊಂದಿರುವ ಗ್ರಾಹಕರಿಂದ ರಿವೈಸ್ಡ್ ಅಗ್ರಿಮೆಂಟ್ ಗೆ ಸಹಿ (Sign to Revised Agriment) ಹಾಕಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಹಾಗಾಗಿ ನೀವು ತಪ್ಪದೆ ನಿಮ್ಮ ಬ್ಯಾಂಕ್ ಗಳಿಗೆ ಹೋಗಿ ಈ ವಿಚಾರದ ಬಗ್ಗೆ ವಿಚಾರಿಸಿ ಸಹಿ ಮಾಡಿ ಇಲ್ಲವಾದಲ್ಲಿ ಮುಂದೊಂದು ದಿನ ನಿಮಗೆ ಲಾಕರ್ ವಿಷಯವಾಗಿ ಸಮಸ್ಯೆಯಾದಾಗ ನೀವು ಸಹಿ ಮಾಡದೆ ಇರುವ ಕಾರಣದಿಂದಾಗಿ ಸಮಸ್ಯೆ ಆದರೂ ಆಗಬಹುದು, ಇದು ನಿಮ್ಮ ಜವಾಬ್ದಾರಿ ಕೂಡ.
* UPI id ಹೊಂದಿರುವವರಿಗೆ NPCI ಗೈಡ್ಲೈನ್ಸ್ (NPCI Guidelines) ಹೊರಡಿಸಿದೆ. ಅದೇನೆಂದರೆ, ಯಾರು ಕಳೆದ ಒಂದು ವರ್ಷದಿಂದ ತಮ್ಮ UPI id ಬಳಸಿಲ್ಲ ಅದು ನಿಷ್ಕ್ರಿಯಗೊಳ್ಳುತ್ತದೆ, ಹಾಗಾಗಿ ಅವುಗಳನ್ನು ಆಕ್ಟಿವೇಟ್ ಮಾಡಿಕೊಳ್ಳಲು ಡಿಸೆಂಬರ್ 31ರವರೆಗೆ ಅವಕಾಶ ಮಾಡಿಕೊಟ್ಟಿದೆ.