ಕೃಷಿ ಕ್ಷೇತ್ರವು ಬಹಳ ಆದಾಯ ತರುವಂತಹ ಕ್ಷೇತ್ರವಾಗಿದೆ. ಕೃಷಿಯಲ್ಲಿ ನಾನಾ ರೀತಿಯ ಬೇಸಾಯ ಪದ್ಧತಿ ಇದ್ದು ರೈತರು ಆಧುನಿಕ ಯಂತ್ರೋಪಕರಣಗಳ ಸಹಾಯ ಹಾಗೂ ವೈಜ್ಞಾನಿಕ ಕೃಷಿ ಅಳವಡಿಸಿಕೊಂಡರೆ ಕೈತುಂಬ ಆದಾಯ ಪಡೆಯಬಹುದು ಮತ್ತು ರೈತನಿಗೆ ಇರುವ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ.
ರೈತನು ಕೂಡ ಕೃಷಿ ಆದಾಯದ ಜೊತೆಗೆ ಕೃಷಿಗೆ ಪೂರಕವಾದ ಇನ್ನಿತರ ಕಸುಬುಗಳಲ್ಲಿ ತೊಡಗಿ ಕೊಡುವುದರಿಂದ ಕೂಡ ಕೃಷಿಗೂ ಅನುಕೂಲವಾಗುತ್ತದೆ ಮತ್ತು ಖರ್ಚಿಗೆ ಸಮಯಕ್ಕೆ ಆದಾಯವು ಸಿಗುತ್ತದೆ ಇಂತಹ ಕಸುಬುಗಳಲ್ಲಿ ಮೊದಲಿಗೆ ನೆನಪಾಗುವುದು ಹೈನುಗಾರಿಕೆ.
ಹೈನುಗಾರಿಕೆಯಲ್ಲಿ ರೈತನಿಗೆ ಎಷ್ಟು ಆದಾಯ ಇದೆ ಎಂದರೆ ನಿಜಕ್ಕೂ ಪಶುಗಳು ದೈವಕ್ಕೆ ಸಮಾನ ಎಂದು ಇದಕ್ಕೆ ಹೇಳುವುದು ಎನಿಸುತ್ತದೆ ಯಾಕೆಂದರೆ ಹಸುಗಳಿಂದ ಸಿಗುವ ಪ್ರತಿಯೊಂದು ವಸ್ತು ಕೂಡ ರೈತನಿಗೆ ವರದಾನವೇ ಇಂದು ಅದೆಷ್ಟೋ ರೈತ ಕುಟುಂಬಗಳು ಬೆಳೆ ಹಾನಿಯಾಗಿದ್ದರು ಮಳೆ ಬರದೆ ಇದ್ದರೂ ಜೀವನ ನಿರ್ವಹಣೆಗೆ ಸಮಸ್ಯೆಯಾಗದಂತೆ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಹೈನುಗಾರಿಕೆಯಿಂದ ಬರುತ್ತಿರುವ ಹಣವೇ ಕಾರಣ ಎನ್ನಬಹುದು.
ಈ ಸುದ್ದಿ ಓದಿ:- 3 ಲಕ್ಷ ಹಣ ಡೆಪೋಸಿಟ್ ಮಾಡಿದ್ರೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು.!
ಪ್ರತಿಯೊಬ್ಬ ರೈತನ ಮನೆಯಲ್ಲಿ ಕನಿಷ್ಠ ಎರಡು ಹಸುಗಳು ಇದ್ದೇ ಇರುತ್ತವೆ ಇವುಗಳು ಕೊಡುವ ಹಾಲನ್ನು ಡೈರಿಗೆ ಹಾಕಿ ಮನೆ ಖರ್ಚು ನಿಭಾಯಿಸಿಕೊಂಡು ಕೃಷಿಗೆ ಬಂಡವಾಳ ಮಾಡಿಕೊಳ್ಳುತ್ತಾರೆ. ಇದನ್ನು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಎಷ್ಟು ಅನುಕೂಲ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿ ಈಗ ಕರ್ನಾಟಕದಲ್ಲಿ ಅನೇಕ ಪಾರಂಗಳು ಇವೆ.
ಇನ್ನಷ್ಟು ರೈತರಿಗೆ ಪ್ರೋತ್ಸಾಹ ಸಿಗಲಿ ಎನ್ನುವ ಉದ್ದೇಶದಿಂದ ಇದರ ಕುರಿತ ಪ್ರಮುಖ ಸಂಗತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಉತ್ತರ ಕರ್ನಾಟಕ ಮೂಲದ ರೈತರೊಬ್ಬರು 2016 ರಿಂದ ಕೃಷಿಯಲ್ಲಿ ತೊಡಗಿಕೊಂಡು ಹೈನುಗಾರಿಕೆ ಆರಂಭಿಸಿದ್ದಾರೆ. ಈ ರೈತರು ಆರಂಭದಲ್ಲಿ ತಮ್ಮ ಮನೆಯಲ್ಲಿದ್ದ ಒಂದು ಹಸುವು 12 ಲೀಟರ್ ಹಾಲು ಕೊಡುತ್ತಿದ್ದದನ್ನು ಅವಲಂಬಿಸಿದ್ದರಂತೆ.
ನಂತರ ಇದರ ಲಾಭ ಅರಿತು ಐದು ಜನ ಅಣ್ಣತಮ್ಮಂದಿರು ಒಟ್ಟುಗೂಡಿ ಪೂರ್ಣ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡರಂತೆ ಜೊತೆಗೆ ಕೃಷಿಯನ್ನು ಕೂಡ ಮಾಡುತ್ತಿದ್ದಾರೆ. ಮೈಸೂರು ಮಂಡ್ಯ ಕಡೆಗಳಿಂದ 10 ಹಸುಗಳನ್ನು ಮಾಡಿಕೊಂಡ ಇವರು ಈ ಹಸುಗಳು ಎರಡು ಸಮಯ ಕೊಡುತ್ತಿದ್ದ ಹಾಲಿನಿಂದ ಲಕ್ಷಾಂತರ ಹಣ ಗಳಿಸಿದರಂತೆ.
ಈ ಸುದ್ದಿ ಓದಿ:- ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ ಎಚ್ಚರ.! ಚೆಕ್ ವ್ಯವಹಾರ ಮಾಡುವವರು ತಪ್ಪದೆ ನೋಡಿ.!
ಈ ರೀತಿ ಹಾಲಿನ ಇಳುವರಿ ಚೆನ್ನಾಗಿ ಆಗಲು ಬರುವ ಆದಾಯದಲ್ಲಿ 60% ಅವುಗಳ ಆರೋಗ್ಯಕ್ಕೆ ಮತ್ತು ಅವುಗಳಿಗೆ ನೀಡುವ ಮೇವಿಗೆ ಖರ್ಚು ಮಾಡಬೇಕು ಆದರೂ 40% ಉಳಿಯುತ್ತದೆ. ಆದರೂ ನಷ್ಟವೇನಿಲ್ಲ ಏಕೆಂದರೆ ಹಸುಗಳನ್ನು ಚೆನ್ನಾಗಿ ಸಾಕಿದರೆ ಅವುಗಳು ಹಾಕುವ ಕರುವಿನಿಂದಲೂ ಕೂಡ ನಮಗೆ ಲಕ್ಷಾಂತರ ಹಣವಾಗುತ್ತದೆ.
ಆ ಕರುಗಳನ್ನು ಸಾಕಿ ಮಾರಿಯೇ ಲಕ್ಷ ಲಕ್ಷ ಹಣ ಗಳಿಸಿದ್ದೇವೆ ವರ್ಷಕ್ಕೆ ಒಂದು ಕರು ಎಂದರು 20 ಹಸುಗಳಿಂದ ಇಪ್ಪತ್ತು ಕರು ಖಂಡಿತ ಆಗುತ್ತದೆ. ಹೈನುಗಾರಿಕೆ ನಮ್ಮ ಕೈ ಹಿಡಿದಿದೆ ನಮ್ಮ ಜಮೀನಿನಲ್ಲಿ ಶುಂಠಿ ಪಪ್ಪಾಯ ಎಲ್ಲವನ್ನು ಬೆಳೆಯುತ್ತದೆ ಒಂದು ರೂಪಾಯಿ ಕೂಡ ಸರ್ಕಾರಿ ರಸಗೊಬ್ಬರಗಳಿಗೆ ಖರ್ಚು ಮಾಡುವುದಿಲ್ಲ ಹಸುಗಳು ಕೊಡುವ ಗೋಮೂತ್ರ ಹಾಗೂ ಸೆಗಣಿಯಿಂದಲೇ ನಮ್ಮ ಜಮೀನಿಗೆ ಗೊಬ್ಬರ ಆಗುತ್ತದೆ.
ನಾವೇ ಒಂದು ಲಾರಿ ಗೊಬ್ಬರಕ್ಕೆ ರೂ.12,000 ತೆಗೆದುಕೊಂಡು ಬೇರೆ ಕಡೆಗೆ ಗೊಬ್ಬರ ಕಳುಹಿಸಿ ಕೊಡುತ್ತೇವೆ ಇಷ್ಟೆಲ್ಲಾ ಅನುಕೂಲತೆಯಾಗಿದೆ ಎಂದು ಹೇಳುತ್ತಾರೆ. ಹೀಗೆ ಶ್ರದ್ಧೆ ಆಸಕ್ತಿ ಇದ್ದರೆ ಖಂಡಿತವಾಗಿಯೂ ಎಲ್ಲಾ ಕೆಲಸಗಳು ಕೈ ಹಿಡಿಯುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ ಇದು ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ ಎನ್ನುವುದೇ ನಮ್ಮ ಆಶಯ.