ಕೋರ್ಟ್ ಆರ್ಡರ್ ಆಗಿದ್ರೂ ಕೂಡ ಜೀವನಾಂಶ ಸಿಗ್ತಿಲ್ವಾ.? ಜೀವನಾಂಶದ ದಾವೆ ಇಷ್ಟೊಂದು ಮಾನಸಿಕವಾಗಿ ಹಿಂಸೆಯಾಗಲು ಕಾರಣವೇನು ನೋಡಿ.!

CrPC section 125, ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 124ರ ಅಡಿ ಹಾಕಿರುವ ಜೀವನಾಂಶದ ಕೇಸ್ ಗಳು ಕೋರ್ಟ್ ಗಳಲ್ಲಿ ಐದರಿಂದ ಆರು ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚಿನ ಕಾಲ ನಡೆಯುತ್ತಿರುವ ಉದಾಹರಣೆಗಳ ಬಗ್ಗೆ ಕೇಳಿದ್ದೇವೆ. ಇದರಿಂದ ಅರ್ಜಿ ಹಾಕಿರುವವರು ಇಷ್ಟು ವರ್ಷಗಳಾದರೂ ಡಿ’ವೋ’ರ್ಸ್ ಕೇಸ್ ಮುಗಿಯುತ್ತಿಲ್ಲ ಎಂದು ಖಿ’ನ್ನ’ತೆ’ಗೆ ಒಳಗಾಗಿರುವ ಉದಾಹರಣೆಗಳು ಇವೆ.

WhatsApp Group Join Now
Telegram Group Join Now

ಉಳಿದ ಎಲ್ಲಾ ಕೇಸ್ ಗಳಿಗಿಂತಲೂ ಜೀವನಾಂಶದ ಕೇಸ್ ಗಳು ಬಹಳ ಮಾನಸಿಕವಾಗಿ ಕುಗ್ಗಿಸುತ್ತವೆ. ಹೀಗಾಗಲು ಏನು ಕಾರಣ ಯಾವ ತಪ್ಪುಗಳಿಂದ ಈ ರೀತಿ ಆಗುತ್ತಿದೆ ಮತ್ತು ಇದಕ್ಕೆ ಪರಿಹಾರ ಏನು ಎನ್ನುವ ವಿಷಯದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಇದರಲ್ಲಿ ಅರ್ಜಿ ಸಲ್ಲಿಸಿದವರಿಗೆ ಆಗುವ ಸಮಸ್ಯೆ ಮಾತ್ರ ಅಲ್ಲದೆ ಜೀವನಾಂಶ ಆದೇಶವಾಗಿದ್ದರು ಜೀವನಾಂಶ ನೀಡದೆ ಇದ್ದಲ್ಲಿ ಪತಿಗೆ ಯಾವ ರೀತಿ ತೊಡಕುಗಳಾಗುತ್ತದೆ ಮತ್ತು ಅವರಿಗಾಗುವ ಸಮಸ್ಯೆ ಏನು ಎನ್ನುವುದರ ಬಗ್ಗೆ ಕೂಡ ತಿಳಿಸುತ್ತಿದ್ದೇವೆ.

ಈ ರೀತಿ ಕೇಸ್ ಗಳಲ್ಲಿ ಅರ್ಜಿ ಸಲ್ಲಿಸಿದವರೇ ಕೋರ್ಟ್ ಗೆ ಅಲೆದು ಅಲೆದು ಸುಸ್ತಾಗಿರುತ್ತಾರೆ. ಎಷ್ಟೋ ಪ್ರಕರಣಗಳಲ್ಲಿ ಅವರಿಗೆ ತಪ್ಪಾಗಿ ಗೈಡ್ ಮಾಡಲಾಗಿರುತ್ತದೆ ಉದಾಹರಣೆಗೆ, ಜೀವನಾಂಶದ ಕೇಸ್ ಹಾಕಿರುವ ಪತ್ನಿಗೆ ನೀವು ಕೆಲಸಕ್ಕೆ ಹೋಗಿರುವುದರಿಂದ ನಿಮಗೆ ಉದ್ಯೋಗ ಇದೆ ಸಂಬಳ ಬರುತ್ತಿದೆ ಎಂದು ಜೀವನಾಂಶ ಸಿಗದೆ ಇರಬಹುದು ಎಂದು ಮಿಸ್ ಗೈಡ್ ಮಾಡಲಾಗಿರುತ್ತದೆ.

ಅಂತಹ ಪ್ರಕರಣಗಳು ಹೆಣ್ಣುಮಕ್ಕಳು BA, B.Com ಓದಿದ್ದರು ಕೂಡ ಕೆಲಸಕ್ಕೆ ಹೋಗದೆ ಅಥವಾ ಕೆಲಸಕ್ಕೆ ಹೋಗುತ್ತಿದ್ದರು ಕೆಲಸವನ್ನು ಬಿಟ್ಟು ಮನೆಯಲ್ಲೇ ಕುಳಿತುಬಿಡುತ್ತಾರೆ. ಇದರಿಂದ ಕೋರ್ಟ್ ಕೇಸ್ ಗಳೇನಾದರೂ ನಾಲ್ಕು ಐದು ವರ್ಷಗಳ ಕಾಲ ನಡೆದುಕೊಂಡು ಹೋದಾಗ ಕೇಸ್ ಗಳಿಗೂ ಹಣ ಖರ್ಚಾಗುತ್ತದೆ, ಇತ್ತ ಉದ್ಯೋಗವು ಇಲ್ಲ, ಅತ್ತ ಜೀವನಾಂಶವು ಬರುತ್ತಿಲ್ಲ ಎನ್ನುವ ಪರಿಸ್ಥಿತಿ ಬರುತ್ತದೆ. ಇಂತಹ ಸಮಸ್ಯೆಗಳಾಗ ಮಾನಸಿಕವಾಗಿ ಖಿ’ನ್ನ’ತೆ’ಗೆ ಒಳಗಾಗುತ್ತಾರೆ.

ಇದು ಸಂಪೂರ್ಣವಾಗಿ ತಪ್ಪು ಮಾಹಿತಿ ಜೀವನಾಂಶವನ್ನು ಯಾವಾಗಲೂ ಕೋರ್ಟ್ ನೀವು ಯಾವ ರೀತಿ ಜೀವನ ನಡೆಸುತ್ತಿದ್ದೀರಾ ಮತ್ತು ನಿಮ್ಮ ಪತಿಯ ಆದಾಯ ಎಷ್ಟಿದೆ ಎನ್ನುವುದರ ಆಧಾರದ ಮೇಲೆ ಡಿಸೈಡ್ ಮಾಡುತ್ತದೆ. ಹಾಗಾಗಿ ನೀವೇನಾದರೂ ಕಡಿಮೆ ಸಂಬಳದ ಕೆಲಸ ಮಾಡುತ್ತಿದ್ದು ನಿಮ್ಮ ಪತಿ ಆರ್ಥಿಕವಾಗಿ ಉತ್ತಮವಾಗಿದ್ದರೆ ಖಂಡಿತವಾಗಿಯೂ ನಿಮಗೆ ಜೀವನಾಂಶ ಆದೇಶ ಆಗಿಯೇ ಆಗುತ್ತದೆ ಹಾಗಾಗಿ ಸ್ವಾವಲಂಬಿಗಳಾಗಿ ನೀವು ಧೈರ್ಯವಾಗಿ ದುಡಿಯಲು ಕಲಿತುಕೊಳ್ಳಿ ಮತ್ತು ಕೇಸ್‌ ನ್ನು ಕೂಡ ಮುನ್ನಡೆಸಿ.

ಅದೇ ರೀತಿ ಪತ್ನಿಗೆ ಜೀವನಾಂಶ ಕೊಡುವಂತೆ ಆದೇಶ ಆಗಿದ್ದರು ಪತಿಯರು ಕೆಲವೊಮ್ಮೆ ನಾವೇಕೆ ಸುಮ್ಮನೆ ಜೀವನಾಂಶ ಕೊಡಬೇಕು ಎಂದು ಹಿಂದೇಟು ಹಾಕುತ್ತಾರೆ. ಆದರೆ ನೆನಪಿರಲಿ ಜೀವನಾಂಶ ಆದೇಶ ಆದ ಮೇಲೆ ಜೀವನಾಂಶ ಕೊಡದೆ ಇದ್ದರೆ ನೀವು ಜೈಲು ಶಿಕ್ಷೆಯನ್ನು ಅನುಭವಿಸ ಬೇಕಾಗಬಹುದು.

ಉಳಿದ ಕೇಸ್ ಗಳಲ್ಲಿ ಜೈಲು ಶಿಕ್ಷೆ ಆದರೆ ದಂಡವನ್ನು ಕಟ್ಟುವಂತಿಲ್ಲ ಕೇಸ್ ಕ್ಲೋಸ್ ಆಗುತ್ತದೆ ಆದರೆ ಜೀವನಾಂಶದ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದರೂ ಕೂಡ ನೀವು ಜೀವನಾಂಶ ಕಟ್ಟದೆ ತಪ್ಪಿಸಿಕೊಳ್ಳುವಂತಿಲ್ಲ ಎನ್ನುವುದು ನೆನಪಿರಲಿ. ಉದಾಹರಣೆಗೆ ತಿಂಗಳಿಗೆ ರೂ.5000 ಜೀವನಾಂಶ ಕೊಡಬೇಕು ಎಂದು ಕೋರ್ಟ್ ತೀರ್ಪು ಕೊಟ್ಟಿದ್ದರೆ ನೀವು ಅದನ್ನು ವರ್ಷ ಎರಡು ವರ್ಷಗಳವರೆಗೆ ಕೊಡದೆ ಇದ್ದರೆ ಅದು ಲಕ್ಷಾಂತರ ರೂಪಾಯಿಯಾಗಿ ಹೊರೆಯಾಗುತ್ತದೆ.

ಆಗ ನಿಮಗೆ ದೊಡ್ಡ ಮೊತ್ತ ಕಟ್ಟಲು ಆರ್ಥಿಕ ಸಂಕಷ್ಟಗಳೆದುರಾಗುತ್ತವೆ. ಹೀಗೆ ಮಾಡಿಕೊಳ್ಳುವುದರ ಬದಲು ನಿಮ್ಮ ಪತ್ನಿ ಹಾಗೂ ಮಕ್ಕಳು ಜೊತೆಯಲ್ಲಿದ್ದರೆ ನೀವು ಅವರಿಗೆ ಅದಕ್ಕಿಂತಲೂ ಹೆಚ್ಚಿನ ಖರ್ಚು ಮಾಡಬೇಕಿತ್ತು ಎನ್ನುವುದನ್ನು ಅರಿತುಕೊಳ್ಳಿ ಮತ್ತು ಅದು ನಿಮ್ಮ ಜವಾಬ್ದಾರಿ ಆಗಿದೆ ಎನ್ನುವುದು ಮನವರಿಕೆಯಾಗಲಿ. ನ್ಯಾಯಾಲಯದ ಆದೇಶವನ್ನು ಗೌರವಿಸಿ ಅವರಿಗೆ ಜೀವನಾಂಶ ಕಟ್ಟುಕೊಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now