ಮೊದಲನೆಯದಾಗಿ ಯಾವ ನಿಗಮಗಳ ಕಡೆಯಿಂದ ಈ ಒಂದು ಗಂಗಾಕಲ್ಯಾಣ ಉಚಿತ ಬೋರ್ವೆಲ್ ಅರ್ಜಿಯನ್ನು ಆಹ್ವಾನ ಮಾಡಿ ದ್ದಾರೆ, ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ, ಅರ್ಜಿಯನ್ನು ಹಾಕುವ ರೈತರ ಆಧಾರ್ ಕಾರ್ಡ್, ಸಣ್ಣ ಅಥವಾ ಅತಿ ಸಣ್ಣ ರೈತರ ಪ್ರಮಾಣ ಪತ್ರ, ರೇಷನ್ ಕಾರ್ಡ್, ಪಹಣಿ ಅಥವ ಉತಾರ ಅಥವಾ ಆರ್ ಟಿ ಸಿ. ಈ ಎಲ್ಲಾ ದಾಖಲಾತಿಗಳನ್ನು ಒಂದು ಸೆಟ್ ಇಟ್ಟುಕೊಳ್ಳಬೇಕು.
ಆನಂತರ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವ ವೆಬ್ಸೈಟ್ ನಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ನೋಡುವುದಾದರೆ. ಸೇವಾ ಸಿಂಧು ವೆಬ್ಸೈಟ್ ನಲ್ಲಿ ನೀವು ಇದೊಂದು ಗಂಗಾ ಕಲ್ಯಾಣ ಉಚಿತ ಬೋರ್ವೆಲ್ ಯೋಜನೆಗೆ ಅರ್ಜಿಯನ್ನು ಹಾಕಬಹುದಾಗಿರು ತ್ತದೆ. ಆ ಒಂದು ವೆಬ್ಸೈಟ್ ನಲ್ಲಿ ಹೋಗಿ ನೀವು ಗಂಗಾ ಕಲ್ಯಾಣ ಉಚಿತ ಬೋರ್ವೆಲ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಅಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ನೀವು ಅಲ್ಲಿ ಹಾಕುವುದರ ಮೂಲಕ ಈ ಒಂದು ಅರ್ಜಿಯನ್ನು ಭರ್ತಿ ಮಾಡಬೇಕು.
ಆನಂತರ ಅಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ಮಾಡುವುದರ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಅದರಲ್ಲೂ ಸಣ್ಣ ಅಥವಾ ಅತಿ ಸಣ್ಣ ರೈತರು ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹು ದಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವಂತಹ ರೈತರು ಮಾತ್ರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಈ ಒಂದು ಯೋಜನೆಯ ಮುಖ್ಯ ಉದ್ದೇಶ ಏನು ಎಂದರೆ ನಮ್ಮ ದೇಶದಲ್ಲಿರುವಂತಹ ಎಲ್ಲ ರೈತರು ಕೂಡ ವ್ಯವಸಾಯದಲ್ಲಿ ಹೆಚ್ಚು ಅಭಿವೃದ್ಧಿಯನ್ನು ಹೊಂದಬೇಕು.
ಅವರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು ಅವರು ವ್ಯವಸಾಯದಲ್ಲಿ ಇನ್ನೂ ಹೆಚ್ಚಿನ ಲಾಭವನ್ನು ಪಡೆಯುವುದು, ಅದೇ ರೀತಿಯಾಗಿ ನಮ್ಮ ದೇಶವು ರೈತರಿಗೆ ಮೊದಲ ಆದ್ಯತೆಯನ್ನು ನೀಡುತ್ತಿದೆ. ಇದರ ಉದ್ದೇಶ ನಮ್ಮ ದೇಶದಲ್ಲಿ ರೈತರು ಯಾವುದೇ ಕಾರಣಕ್ಕೂ ಯಾವುದೇ ನಷ್ಟ ಎದುರಾದರೂ ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬಾರದು, ಅವರು ಎಲ್ಲರಂತೆ ಜೀವನವನ್ನು ನಡೆಸಬೇಕು ಎನ್ನುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ.
ಆದ್ದರಿಂದ ರೈತರಿಗೆ ಈ ಎಲ್ಲಾ ರೀತಿಯಾದಂತಹ ಸೌಲಭ್ಯಗಳ ನ್ನು ಒದಗಿಸಿ ಕೊಡುವುದರಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತಿದೆ ಎಂದೇ ಹೇಳಬಹುದು. ಕೇವಲ ಬೋರ್ವೆಲ್ ಕೊರಸಿ ಕೊಡುವಂತಹ ಯೋಜನೆಯಷ್ಟೇ ಅಲ್ಲದೆ ಅವರಿಗೆ ಉಚಿತವಾಗಿ ಬಿತ್ತನೆ ಬೀಜಗಳು, ರಸಗೊಬ್ಬರಗಳು. ವ್ಯವಸಾಯಕ್ಕೆ ಸಂಬಂಧಿಸಿದಂತ ಕೆಲವೊಂದು ಪ್ರಕರಣಗಳನ್ನು ಕೂಡ ರೈತರಿಗೆ ಉಚಿತವಾಗಿ ಕೊಡುತ್ತಿದೆ.
ಅದರಲ್ಲೂ ಕೆಲವೊಂದಷ್ಟು ಹಣ ವನ್ನು ಪಡೆಯುವುದರ ಮೂಲಕ ಅವರಿಗೆ ಕೆಲವೊಂದಷ್ಟು ಸಬ್ಸಿಡಿ ಹಣವನ್ನು ಕೊಡುವುದರ ಮೂಲಕ ರೈತರಿಗೆ ಸಹಾಯವನ್ನು ಮಾಡುತ್ತಿ ದ್ದಾರೆ. ಈಗಾಗಲೇ ಹೇಳಿದಂತೆ ಇದರ ಉದ್ದೇಶ ರೈತರು ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ಹೊಂದಲಿ ಎನ್ನುವುದು. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾರೆಲ್ಲಾ ಅರ್ಹರು ಎಂದು ನೋಡುವುದಾದರೆ, ಉಪ್ಪಾರ ಜನಾಂಗದ ರೈತರು, ಮಡಿವಾಳ ಜನಾಂಗದ ರೈತರು, ಹಾಗೆಯೇ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಈ 3 ಜಾತಿಯವರಿಗೆ ಈ ಬಾರಿ ಈ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಆದ್ದರಿಂದ ಈ ಮೂರು ಜಾತಿಯವರು ಈ ಒಂದು ಅರ್ಜಿಯನ್ನು ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.