ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಅದರಲ್ಲೂ ಮಹಾನಗರದಲ್ಲಿ ಮನೆ ಮಾಡುವುದು ಹಲವರಿಗೆ ಅನಿವಾರ್ಯತೆ, ಕೆಲವರಿಗೆ ಪ್ರತಿಷ್ಠೆ. ಸಾಮಾನ್ಯವಾಗಿ ಪ್ರತಿ ತಿಂಗಳು ಬಾಡಿಗೆ ಕಟ್ಟಲು ಕಷ್ಟಪಡುವವರು ಬಾಡಿಗೆ ಹಣವನ್ನು ಉಳಿಸೋಣ ಎಂದು ಸಾಲ ಸೋಲ ಮಾಡಿಯಾದರೂ ಮನೆ ಕಟ್ಟಿ ಬಾಡಿಗೆ ದುಡ್ಡಲ್ಲಿ ಸಾಲ ತೀರಿಸಿ ಆಸ್ತಿ ಹೊಡೆದುಕೊಳ್ಳಬಹುದು ಎಂದು ಪ್ಲಾನ್ ಮಾಡುತ್ತಾರೆ.
ಈ ರೀತಿ ಆಸೆಪಡುವವರು ಆದಷ್ಟು ಖರ್ಚು ಕಡಿಮೆಯಾಗಲಿ ಎಂದು ಕಡಿಮೆ ಹಣಕ್ಕೆ ಸಿಗುವ ಸೈಟ್ ಖರೀದಿಸಲು ಹೋಗುತ್ತಾರೆ ಆದರೆ ನಂತರ ನಡೆಯುವುದೇ ಬೇರೆ. ಇತ್ತ ಸೈಡ್ ಕೂಡ ಇಲ್ಲ ಕಷ್ಟಪಟ್ಟು ಕೂಡಿಟ್ಟ ಹಣವೂ ಮೋಸವಾಗಿರುತ್ತದೆ ಇದನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನ ಜಿಲ್ಲಾಧಿಕಾರಿಗಳಾದ ಕೆಎ ದಯಾನಂದರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಬರಹ ಬರೆದು ಜನಸಾಮಾನ್ಯರಿಗೆ ಯಾವ ಸೈಟ್ ಗಳನ್ನು ಖರೀದಿಸಬೇಕು, ಖರೀದಿಸಬಾರದು ಎಂದು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ರೆವಿನ್ಯೂ ಸೈಟ್, ಡಿಸಿ ಕನ್ವರ್ಷನ್ ಸೈಟ್ ಮತ್ತು ಅಪ್ರೂವ್ಡ್ ಲೇಔಟ್ ಸೈಟ್ ಎಂದು ಮೂರು ಬಗೆಯಲ್ಲಿ ಇರುತ್ತದೆ. ಇದರಲ್ಲಿ ರೆವಿನ್ಯೂ ಬಹಳ ಕಡಿಮೆ ಬೆಲೆಗೆ ಅದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಗೆ ಡಿಸಿ ಕನ್ವೆಷನ್ ಸೈಟ್ ಮತ್ತು ಅಪ್ರೂವ್ಡ್ ಲೇಔಟ್ ಸೈಟಿಗೆ ಇನ್ನೂ ಹೆಚ್ಚಿನ ಬೆಲೆ ಇರುತ್ತದೆ. ಆದರೆ ಕಡಿಮೆ ದುಡ್ಡಿಗೆ ಸೈಟ್ ಖರೀದಿಸಿರುವವರಲ್ಲಿ ಬಹುತೇಕರು ಮೋಸ ಹೋಗಿದ್ದಾರೆ.
ಕೆಲವರಿಗೆ ವಿಸ್ತೀರ್ಣದಲ್ಲಿ ಮೋಸವಾಗಿದ್ದರೆ, ಕೆಲವರಿಗೆ ದಾಖಲೆ ಬೇರೆ ಹೆಸರಲ್ಲಿ ಇರುತ್ತದೆ ಆದರೂ ಮಾರಾಟ ಮಾಡಿರುತ್ತಾರೆ, ಕೆಲವೊಮ್ಮೆ ಸರ್ಕಾರದ ಭೂಮಿ ಕಬಳಸಿ ಮೋಸ ಮಾಡಿ ಮಾರಿರುತ್ತಾರೆ ಕ್ರಮ ಕೈಗೊಂಡಾಗ ಬಡಜನರ, ಅಮಾಯಕರ ಮೇಲೆ ಬರೆ ಬಿದ್ದಿರುತ್ತದೆ.
ಈ ರೀತಿ ಮನೆ ಆಸೆಯಿಂದ ಹಣ ಕಳೆದುಕೊಂಡು ಮೋಸದ ಜಾಲಕ್ಕೆ ಸಿಕ್ಕಿ ಕೋರ್ಟು ಕಚೇರಿಗೆ ಅಲೆಯುತ್ತಿರುವ. ಪ್ರತಿದಿನವೂ ತಮ್ಮ ಕಚೇರಿಗಳಿಗೆ ಬರುವ ಈ ಬಗ್ಗೆ ನೂರಾರು ಕೇಸ್ ಗಳನ್ನು ಗಮನಿಸಿದ್ದ ಜಿಲ್ಲಾಧಿಕಾರಿಗಳು ಅಂತಿಮವಾಗಿ ಜನಸಾಮಾನ್ಯರರೊಡನೆ ಸೈಟ್ ಖರೀದಿ ಕುರಿತು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.
ಅನುಮೋದಿತ ಬಡಾವಣೆಯ ನಿವೇಶನಗಳು(Approved sites):-
ಕೃಷಿ ಭೂಮಿಯನ್ನು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿಕೊಂಡು, ನಂತರ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆದು, ಅನುಮೋದಿತ ನಕ್ಷೆಯಂತೆ ರಸ್ತೆ, ಸಿ.ಎ ಸೈಟ್ ಮತ್ತು ಪಾರ್ಕ್ ಜಾಗಗಳನ್ನು ರಿಲಿಂಕ್ವೀಸ್ ಡೀಡ್ ಮೂಲಕ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿ ಅಥವಾ ನಗರ ಸಭೆ ಅಥವಾ ನಗರ ಪಾಲಿಕೆಗಳು ಅಥವಾ BBMPಗೆ ಶೇ 45%ರಷ್ಟನ್ನು ಬಿಟ್ಟುಕೊಟ್ಟ ನಂತರವಷ್ಟೇ ಉಳಿದ ನಿವೇಶನಗಳಿಗೆ ಮಾತ್ರ ಖಾತೆದಾರನಿಗೆ ಹಕ್ಕುಳ್ಳವನಾಗಿದ್ದು.
ಆ ನಿವೇಶನಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ. ಖರೀದಿದಾರನು ಭೂ ಪರಿವರ್ತನಾ ಆದೇಶ ಮತ್ತು ಅನುಮೋದಿತ ನಕ್ಷೆ ಮಾರಟದಾರನಿಗೆ ಇರುವ ಹಕ್ಕುಗಳನ್ನು ಪರಿಶೀಲಿಸಿ ನಿವೇಶನ ಖರೀದಿಸಿದಲ್ಲಿ ಕಾನೂನಿನಲ್ಲಿ ಮಾನ್ಯತೆ ಪಡೆದ ನಿವೇಶನಗಳಾಗುತ್ತವೆ. ಅಂತಹ ನಿವೇಶನಗಳು ‘ಎ’ ಖಾತೆ ದಾಖಲಿಸಲಾಗುತ್ತದೆ. ಮನೆಕಟ್ಟಲು ಪ್ಲ್ಯಾನ್ ಅನುಮೊದನೆ ದೊರೆಯುತ್ತದೆ.
ಈ ಎಲ್ಲಾ ಕ್ರಮವಹಿಸುವುದರಿಂದ ಮಾರಾಟದಾರನಿಗೆ ಸಮಯ, ಅಭಿವೃದ್ದಿ ವೆಚ್ಚ ಹಾಗೂ ಅನುಮೋದಿತ ನಕ್ಷೆಯಂತೆ ರಸ್ತೆ, ಸಿಎ, ಸೈಟ್ ಮತ್ತು ಪಾರ್ಕ್ ಜಾಗವನ್ನು ರಿಲಿಂಕ್ವೀಸ್ ಡೀಡ್ ಮೂಲಕ ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿ ಅಥವಾ ನಗರ ಸಭೆ ಅಥವಾ ನಗರ ಪಾಲಿಕೆಗಳು ಅಥವಾ BBMPಗೆ ಪಾಲು ಬಿಟ್ಟುಕೊಡುವುದರಿಂದ. ನಿವೇಶನಗಳ ಬೆಲೆ ಕೂಡ ಹೆಚ್ಚಾಗಿರುತ್ತದೆ. ಆದಾದರಿಂದ ಯಾವುದೇ ಕಾನೂನಾತ್ಮಕ ಸಮಸ್ಯೆಗಳು ಬರುವುದಿಲ್ಲ ಹಾಗೂ planned ಲೇ ಔಟ್ ಆಗಿರುತ್ತದೆ, ಇಂತಹ ನಿವೇಶನಗಳು ಖರೀದಿಗೆ ಅರ್ಹವಾಗಿದೆ ಎಂದು ತಿಳಿಸಿದ್ದಾರೆ.
2. ಡಿಸಿ ಕನ್ವೆಷನ್ ಸೈಟ್ಗಳು (DC Covertion Sites):-
ಕೃಷಿ ಭೂಮಿಯನ್ನು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಕೊಂಡು, ನಂತರ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆಯದೆ ಹಾಗೆ ನಿವೇಶನಳಾಗಿ ಅಭಿವೃದ್ಧಿಪಡಿಸಿ ಡಿ.ಸಿ ಕನ್ವರ್ಷನ್ ಸೈಟ್ ಗಳೆಂದು ಮಾರಾಟ ಮಾಡುತ್ತಾರೆ.
ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಕೊಂಡು, ನಂತರ ಸಂಬಂದಿಸಿದ ಯೋಜನಾ ಪ್ರಾಧಿಕಾರದಿಂದ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆದು, ಅನುಮೋದಿತ ನಕ್ಷೆಯಂತೆ ರಸ್ತೆ, ಸಿ.ಎ ಸೈಟ್ ಮತ್ತು ಪಾರ್ಕ್ ಜಾಗವನ್ನು ರಿಲಿಂಕ್ವೀಸ್ ಡೀಡ್ ಮೂಲಕ ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿ ಅಥವಾ ನಗರ ಸಭೆ ಅಥವಾ ನಗರ ಪಾಲಿಕೆಗಳು ಅಥವಾ BBMPಗೆ 45%ರಷ್ಟು ಜಮೀನು ಬಿಟ್ಟುಕೊಡಬೇಗುವುದರಿಂದ, ಜಮೀನು ಕಡಿಮೆಯಾಗುತ್ತದೆ ಎಂದು ದುರಾಸೆಯಿಂದ ರಸ್ತೆ, ಪಾರ್ಕ್ ಸಿ.ಎ ಸೈಟ್ ನೀಡಬೇಕಾದದ್ದನ್ನು ಸೇರಿಸಿ ಮಾರಾಟ ಮಾಡುತ್ತಾರೆ.
ಲೇಔಟ್ ಅನುಮೊದನೆ ಆಗದ್ದರಿಂದ ತಾವೆ ತಯಾರಿಸಿಕೊಂಡ ಸ್ಕೆಚ್ ತೋರಿಸಿ ಒಂದೆ ನಿವೇಶನ ಹಲವರಿಗೆ ಮಾರಾಟ ಮಾಡಿರುವ ಸಾವಿರಾರು ಪ್ರಕರಣಗಳಿವೆ. ರೆಸಿಡೆನ್ಸಿಯಲ್ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುವುದರಿಂದ ಖರೀದಿದಾರರು ಸ್ವಲ್ಪ ಕಡಿಮೆ ದರಕ್ಕೆ ಸಿಗುತ್ತವೆಂದು ಡಿಸಿ ಕನ್ವರ್ಷನ್ ಸೈಟಗಳೆಂದು ಖರೀದಿಸಿ ಮೋ’ಸ ಹೊಗುತ್ತಾರೆ.
ಇಂತಹ ನಿವೇಶನಗಳಿಗೆ ಎ ಖಾತಾ ಮಾಡುವುದಾಗಲಿ ಅಥವಾ ಮನೆ ಕಟ್ಟುವಾಗ ಮನೆಯ ಪ್ಲ್ಯಾನ್ ಗಾಗಲಿ ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಸಿಗುವುದಿಲ್ಲ. ಒಂದು ಪಕ್ಷ ಎ ಖಾತಾ ಮಾಡಿದ್ದರು ಅದು ಕಾನುನೂಬಾಹೀರವಾಗಿಯೇ ಆಗಿರುತ್ತದೆ. ಕೆಲವರು ಎರಡು ಎಕರೆ ಭೂ ಪರಿವರ್ತನೆ ಮಾಡಿಸಿದ್ದರೆ, ಸ್ಥಳೀಯ ಸಂಸ್ಥೆಗಳಲ್ಲಿ ಜಮೀನುದಾರನ ಹೆಸರಿಗೆ ಎ ಖಾತಾ ದಾಖಲಿಸಿ, ಅದನ್ನೆ ಎ ಖಾತ ಸೈಟ್ಗಳೆಂದು ರಸ್ತೆ, ಪಾರ್ಕ್ ಸಿ.ಎ ಸೈಟ್ ನೀಡಬೇಕಾದದ್ದನ್ನು ಸೇರಿಸಿ ಮಾರಾಟ ಮಾಡುತ್ತಾರೆ.
ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಜಾಣ ಕುರುಡರಂತೆ ಅವುಗಳಿಗೆ ಖಾತೆ ದಾಖಲಿಸಿಕೊಟ್ಟು ಸರಕಾರಕ್ಕೆ ಸೇರಬೇಕಾದ ಅಂದಾಜು ಶೇ 45% ರಷ್ಟು ಜಮೀನನ್ನು ಸೇರಿಸಿ ಮಾರಾಟ ಮಾಡಿ ಖಾತೆ ದಾಖಲಿಸಲು ಸಹಕರಿಸುತ್ತಾರೆ. ದೂರುಗಳು ಬಂದು ಹ’ಗ’ರ’ಣ’ಗಳಾದಾಗ ಆ ಅಧಿಕಾರಿಗೆ ಶಿ’ಕ್ಷೆ ಆಗುತ್ತದೆ ಆದರೆ ಅಲ್ಲಿ ಮಾರಾಟ ಮಾಡಿದ ವ್ಯಕ್ತಿ ಮಾರಾಟ ಮಾಡಿಯಿಗಿರುತ್ತದೆ, ಅಂತಿಮವಾಗಿ ಸೈಟ್ ಕಳೆದುಕೊಂಡು ಶಿ’ಕ್ಷೆ ಅನುಭವಿಸುವುದು ಮೋ’ಸ ಹೋಗಿ ಸೈಟ್ ಖರೀದಿಸಿದಾತನೆ ಹಾಗಾಗಿ ಈ ಬಗ್ಗೆ ಎಚ್ಚರವಿರಲಿ ಎಂದಿದ್ದಾರೆ.
3. ರೆವಿನ್ಯೂ ಸೈಟ್ (Revenue Site):-
ಕಾನೂನು ಪ್ರಕಾರ ಕೃಷಿ ಜಮೀನು ಮಾತ್ರ ಪಹಣಿಯಲ್ಲಿ ನಮೂದಾಗುತ್ತದೆ. ಪಹಣಿಯನ್ನು ಕಂದಾಯ ಇಲಾಖೆ ನಿರ್ವಹಿಸುತ್ತದೆ. ಕಂದಾಯ ಭೂಮಿಯಲ್ಲಿ ನಿವೇಶನ ಮಾಡಿ ಮಾರಾಟ ಮಾಡಬೇಕೆಂದರೆ, ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿಕೊಂಡು ನಂತರ ಯೋಜನಾ ಪ್ರಾಧಿಕಾರದಲ್ಲಿ ಬಡಾವಣೆ ಅನುಮೋದನೆ ಮಾಡಿಸಿಕೊಂಡು ನಿವೇಶನ ಮಾರಾಟ ಮಾಡಬೇಕಿರುತ್ತದೆ.
ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿಕೊಂಡು ನಂತರ ಯೋಜನಾ ಪ್ರಾಧಿಕಾರದಲ್ಲಿ ಬಡಾವಣೆ ಅನುಮೋದನೆ ಪಡೆಯದೆ ದುರಾಸೆ ಮತ್ತು ಲಾಭದ ಆಸೆಗೆ ಕೃಷಿ ಭೂಮಿಯಲ್ಲೆ ಬಡಾವಣೆ ರೂಪದಲ್ಲಿ ಅಭಿವೃದ್ದಿಪಡಿಸಿ ನಿವೇಶನಗಳನ್ನು ಮಾರಾಟ ಮಾಡುವ ನಿವೇಶನಗಳನ್ನು ರೆವೆನ್ಯೂ ನಿವೇಶನಗಳೆಂದು ಕರೆಯುತ್ತೇವೆ. ಇದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ.
ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿಕೊಂಡು ನಂತರ ಯೋಜನ ಪ್ರಾಧಿಕಾರದಲ್ಲಿ ಬಡಾವಣೆ ಅನುಮೋದನೆ ಪಡೆಯದೆ ಇರುವುದರಿಂದ ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ ಅಥವಾ ಪಟ್ಟಣಪಂಚಾಯಿತಿ ಅಥವಾ ನಗರ ಸಭೆ ಅಥವಾ ನಗರ ಪಾಲಿಕೆಗಳು ಅಥವಾ BBMPಯಲ್ಲಾಗಲಿ ಯಾವುದೇ ಖಾತೆ ಮಾಡಲು ನಿಯಮದಲ್ಲಿ ಅವಕಾಶವಿಲ್ಲ. ಮಾಡಿದರೂ ಸಹ ಎ ಖಾತಾ ಮಾಡುವುದಿಲ್ಲ.
ಹಾಗಾಗಿ ಅಂತಹ ನಿವೇಶನಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಅತ್ತ ಪಹಣಿಯಲ್ಲಿ ನಿವೇಶನದಾರರ ಹೆಸರು ನಮೂದಿಸಲು ಸಾದ್ಯವಿರುವುದಿಲ್ಲ. ಜಮೀನು ಮೂಲ ಖಾತೆದಾರನ ಹೆಸರಿನಲ್ಲಿಯೇ ಉಳಿಯುವುದರಿಂದ ಬೆಂಗಳೂರಿನಲ್ಲಿ ಸಾವಿರಾರು ಪ್ರಕರಣಗಳಲ್ಲಿ ಒಂದೆ ನಿವೇಶನ ತೋರಿಸಿ ಜಿಪಿಯೆದಾರನ ಮೂಲಕ ಅಥವಾ ಖಾತೆದಾರನೆ ಹಲವರಿಗೆ ಕ್ರಯ ಮಾಡುವುದು ಅಥವಾ ನಿವೇಶನಗಳನ್ನು ಮಾರಾಟ ಮಾಡಿ ಜಮೀನು ಇಲ್ಲದಿದ್ದರು.
ಪಹಣಿಯಲ್ಲಿ ವಿಸ್ತೀರ್ಣ ಜಮೀನುದಾರನ ಹೆಸರಿನಲ್ಲಿ ಉಳಿಯುವುದರಿಂದ ಆ ಒಟ್ಟು ಜಮೀನನ್ನು ಮತ್ತೊಬ್ಬ ಗಟ್ಟಿ ವ್ಯಕ್ತಿಗೆ ಮಾರಾಟ ಮಾಡುವುದು ಸರ್ವೆ ಸಾಮಾನ್ಯ. ಖರೀದಿ ಮಾಡಿದ ಗಟ್ಟಿ ವ್ಯಕ್ತಿಗೆ ಗೊತ್ತಿದ್ದು ಖರೀದಿಸಿ ಭೂ ಪರಿವರ್ತನೆ ಮಾಡಿಸಿಕೊಂಡು ಅಥವಾ ಮಾಡಿಸಿಕೊಳ್ಳದೆ ನಿವೇಶನದಾರರಿಗೆ ಹಲವು ರೀತಿಯ ಕಿ’ರು’ಕು’ಳ ಕೊಟ್ಟು ಖಾಲಿ ಮಾಡಿಸುತ್ತಾರೆ.
ನ್ಯಾಯಾಲಯಗಳಲ್ಲಿ ಖಾತೆ ಪಹಣಿ ಅವರ ಹೆಸರಿಗೆ ಇರುವುದರಿಂದ ರೆವೆನ್ಯೂ ನಿವೇಶನಗಳಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲದ್ದರಿಂದ ಗಟ್ಟಿ ವ್ಯಕ್ತಿಯ ಪರವಾಗಿಯೇ ಆದೇಶವಾಗುತ್ತವೆ. ಎಂಬ ಸತ್ಯವನ್ನು ನಿವೇಶನ ಖರೀದಿದಾರರು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.