ಮನೆ ಅಥವಾ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಪ್ರತಿಯೊಬ್ಬರಿಗೂ ಬೇಕು. ಯಾಕೆಂದರೆ ಮನೆಯನ್ನು ವಿಭಾಗ ಮಾಡಿಕೊಳ್ಳುವಾಗ ಇದರ ಅವಶ್ಯಕತೆ ಇರುತ್ತದೆ ಅಥವಾ ಆ ಮನೆ ಮೇಲೆ ನೀವು ಲೋನ್ ಪಡೆದುಕೊಳ್ಳಬೇಕು, ಸರ್ಕಾರದ ಯಾವುದಾದರೂ ಯೋಜನೆಗಳ ಫಲ ಪಡೆದುಕೊಳ್ಳಬೇಕು ಅಂತಹ ಸಂದರ್ಭದಲ್ಲಿ ಕೂಡ ದಾಖಲೆಪತ್ರಗಳ ಅವಶ್ಯಕತೆ ಇರುತ್ತದೆ.
ಆದರೆ ಅನೇಕರು ಇದನ್ನು ಕಳೆದುಕೊಂಡಿರುತ್ತಾರೆ, ಇನ್ನು ಕೆಲವರು ಬಹಳ ಹಳೆಯ ದಾಖಲೆ ಪತ್ರ ಆಗಿರುವುದರಿಂದ ಅದು ಅಳಿಸಿ ಹೋಗಿರುತ್ತದೆ ಅಥವಾ ಹರಿದು ಹೋಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಇದನ್ನು ಹೇಗೆ ಮರಳಿ ಪಡೆಯಬಹುದು ಅನ್ನುವುದರ ಬಗ್ಗೆ ಈ ಹಂತದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ದಾನವಾಗಿ ಕೊಟ್ಟ ಆಸ್ತಿ ಹಿಂಪಡೆಯಬಹುದ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
● ಮನೆಯ ಹಕ್ಕುಪತ್ರ ಇಲ್ಲದಿದ್ದಲ್ಲಿ ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಜೊತೆಗೆ ಆಧಾರ್ ಕಾರ್ಡ್ ನೊಂದಿಗೆ ಸ್ಥಳೀಯ ಸಿವಿಲ್ ಇಂಜಿನಿಯರ್ ಬಳಿ ತೆರಳಿ ನಿಮ್ಮ ಮನೆಯ ನಕ್ಷೆಯನ್ನು ಪಡೆದುಕೊಳ್ಳಬೇಕು. ನೀವು ಮನೆಯ ನಕ್ಷೆಯನ್ನು ಪಡೆದುಕೊಂಡ ನಂತರ ಅದನ್ನು ನಿಮ್ಮ ಗ್ರಾಮಪಂಚಾಯಿತಿಗೆ ನೀಡಿ ಮೊದಲು ಫಾರಂ 11B ಮಾಡಿಸಿಕೊಳ್ಳಿ. ಗ್ರಾಮ ಪಂಚಾಯತಿಯ ಅಧಿಕಾರಿಗಳು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದಿಸಿದರೆ 11B ಸಿಗುತ್ತದೆ.
● ನಂತರ ನೀವು ಫಾರಂ-9 ಮತ್ತು ಫಾರಂ-11 ಪಡೆದುಕೊಳ್ಳಬೇಕಾಗುತ್ತದೆ.
● ಇದನ್ನು ಪಡೆಯಲು ಈಗಾಗಲೇ ಪಡೆದುಕೊಂಡಿರುವ ಫಾರಂ-11B ಜೆರಾಕ್ಸ್, ಆಧಾರ್ ಕಾರ್ಡ್, ವಿದ್ಯುತ್ ಬಿಲ್ ಮನೆಯ ನಕ್ಷೆ ಹಾಗೂ ಮನೆಯ ಫೋಟೋ ಜೊತೆಗೆ ಸದರಿ ಗ್ರಾಮ ನಕ್ಷೆ ಮತ್ತು ಕರ ರಶೀದಿ ಇವುಗಳ ಜೊತೆ ಅರ್ಜಿಯನ್ನು ಭರ್ತಿ ಮಾಡಿ ಗ್ರಾಮಪಂಚಾಯಿತಿಯ ಗಣಕ ಶಾಖೆಗೆ ಇದನ್ನು ಕೊಡಬೇಕು.
● ಇ-ಸ್ವತ್ತುನ್ನು ಪಡೆಯಬೇಕು, ಅದಕ್ಕಾಗಿ ನೀವು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ದಾಖಲೆಗಳನ್ನು ಹಾಗೂ ಸ್ಥಳದ ಪರಿಶೀಲನೆಯನ್ನು ಮಾಡುತ್ತಾರೆ. ಇ-ಸ್ವತ್ತು ತಂತ್ರಾಂಶದ ಮೂಲಕ ಅಪ್ಲೋಡ್ ಮಾಡಿ ಆಸ್ತಿ ಪತ್ರವನ್ನು ಪಡೆಯುವುದಕ್ಕೆ ಮೋಜಿನಿಗೆ ವರ್ಗಾಯಿಸುತ್ತಾರೆ. ನಂತರ ನೀವು ನಾಡಕಚೇರಿಯಲ್ಲಿ ಮೋಜಿನಿ ಆಗುವುದಕ್ಕೊಸ್ಕರ ಶುಲ್ಕವನ್ನು ಪಾವತಿಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು
● ಇದಾದ ಮೇಲೆ ಇಪ್ಪತ್ತೊಂದು ದಿನಗಳ ಒಳಗಾಗಿ PDO ಮತ್ತು ಅರ್ಜಿದಾರರು ಮತ್ತು ಬಾಜುದಾರರ ಸಮ್ಮುಖದಲ್ಲಿ ಸ್ಥಳಪರಿಶೀಲನೆ ನಡೆಯುತ್ತದೆ.
● ನಿಮ್ಮ ಆಸ್ತಿಗೆ ನಕ್ಷೆ ಬಂದನಂತರ ದ್ವಿತೀಯ ದರ್ಜೆ ಸಹಾಯಕ ಅದನ್ನು ಅನುಮೋದಿಸಿ ಕಾರ್ಯದರ್ಶಿ ಅಥವಾ PDO ಗೆ ಕಳುಹಿಸುತ್ತಾರೆ, ಇ-ಸ್ವತ್ತಿನ ಮೇಲೆ ಡಿಜಿಟಲ್ ಸಹಿ ಮಾಡುವ ಮೂಲಕ ಆವರು ಅನುಮೋದಿಸುತ್ತಾರೆ.
ಆಸ್ತಿ ಖರೀದಿ & ಮಾರಟ ಮಾಡುವವರಿಗೆ ಪ್ರಮುಖ ಸುದ್ದಿ ನಾಳೆಯಿಂದ ಜಾರಿ ಆಗಲಿದೆ ಹೊಸ ರೂಲ್ಸ್.!
● ನಿಮ್ಮ ಆಸ್ತಿಯನ್ನು ಗ್ರಾಮಪಂಚಾಯತಿಯಲ್ಲಿ ಇ- ಸ್ವತ್ತು ಮಾಡಿಸಲು ಸರ್ಕಾರದ ಶುಲ್ಕ 50ರೂ.ಇರುತ್ತದೆ. ಇ-ಸ್ವತ್ತನ್ನು 45 ದಿನಗಳಲ್ಲೇ ಈಗ ಪಡೆಯಬಹುದಾಗಿದೆ. ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಭಿವೃದ್ಧಿಪಡಿಸಿರುವ ಲಿಂಕ್ ನ ಮೂಲಕ ಅದರ ಸ್ಟೇಟಸ್ ಕೂಡ ಚೆಕ್ ಮಾಡಬಹುದು. ಇ-ಸ್ವತ್ತು ಮಾಡಿಸುವುದರಿಂದ ಇ-ಸ್ವತ್ತು ತಂತ್ರಾಂಶವನ್ನು ಬಳಸಿ ಆನ್ಲೈನ್ ಮೂಲಕ ವಿತರಿಸಿದ ಫಾರಂ-9 ಮತ್ತು ಫಾರಂ-11 ನ್ನು ನಿಮ್ಮ ಆಸ್ತಿಯನ್ನು ರಿಜಿಸ್ಟರ್ ಮಾಡಿಸುವಾಗ ಬಳಸಬಹುದು.
PDO ಗಳ ಡಿಜಿಟಲ್ ಸಹಿ ಇರುವುದರಿಂದ ಅಕ್ರಮಗಳನ್ನು ತಡೆಯುವುದಕ್ಕೆ ಸಹಾಯವಾಗುತ್ತದೆ. ಸಾರ್ವಜನಿಕರು ಅವಶ್ಯಕತೆ ಇದ್ದರೆ ಇ-ಸ್ವತ್ತುನ್ನು ಮಾಡಿಸಿಕೊಂಡು ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ನಿಮ್ಮ ಆಸ್ತಿಯನ್ನು ನೊಂದಾಯಿಸಿಕೊಳ್ಳಬಹುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಯನ್ನು ಮಾರುವಾಗ ಅಥವಾ ಕೊಂಡುಕೊಳ್ಳುವಾಗ ಇ-ಸ್ವತ್ತು ಕಡ್ಡಾಯವಾಗಿರುತ್ತದೆ.