ಮಳೆ ನೀರಿನ ಸಂರಕ್ಷಣೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿರುವ ವಿಷಯ ಆಗಿದೆ. ಯಾಕೆಂದರೆ ಭೂ ಭಾಗದ 75% ನೀರು ಇದ್ದರೂ ಬಳಕೆ ಯೋಗ್ಯವಾಗಿರುವುದು ಇದರಲ್ಲಿ ಕೆಲವೇ ಪ್ರಮಾಣ. ಈಗಿನ ಕಾಲದಲ್ಲಿ ನೀರಿನ ಅಭಾವದ ಸಮಸ್ಯೆ ಬಗ್ಗೆ ಎಲ್ಲರಿಗೂ ಅನುಭವ ಆಗಿಯೇ ಇರುತ್ತದೆ ಪಟ್ಟಣಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಕೂಡ ಈಗ ಮನೆ ಬಳಕೆ ನೀರಿಗೆ ಸಂಕಷ್ಟ ಎದುರಾಗಿದೆ.
ಹಾಗಾಗಿ ಹಳ್ಳಿ ದಿಲ್ಲಿ ಎನ್ನುವ ವ್ಯತ್ಯಾಸ ಇಲ್ಲದೆ ಎಲ್ಲರೂ, ಮಳೆ ನೀರಿ ಕೊಯ್ಲಿನ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಪರಿಸರದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಕೂಡ ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳಲೇಬೇಕು ಎನ್ನುವುದು ತಜ್ಞರ ಸಲಹೆ. ಹಾಗಾದರೆ ಇದು ಹೇಗೆ ಮನೆ ಕಟ್ಟುವ ಸಮಯದಲ್ಲಿಯೇ ಇದನ್ನು ಹೇಗೆ ಪ್ಲಾನ್ ಮಾಡಬೇಕು ಎನ್ನುವುದರ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲು ಬಯಸುತ್ತಿದ್ದೇವೆ.
ಈ ಸುದ್ದಿ ಓದಿ:- ರೈತರಿಗೆ ಸರ್ಕಾರದಿಂದ 10000 ಉಚಿತ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಹಣ ಪಡೆಯಲು ಯಾರು ಅರ್ಹರು ಸಂಪೂರ್ಣ ಮಾಹಿತಿ.!
ಒಬ್ಬ ವ್ಯಕ್ತಿಗೆ 30*20 ಸೈಟ್ ಇದೆ ಎಂದರೆ ಆತ ಕಾಂಪೌಂಡ್ ಪಾರ್ಕಿಂಗ್ ಏರಿಯಾ ಒಳಗೊಂಡಂತೆ ಎಲ್ಲೂ ಕೂಡ ಒಂದು ಚೂರು ಜಾಗ ಬಿಡದೆ ಕವರ್ ಮಾಡಿಕೊಂಡು ಬಿಡುತ್ತಾನೆ ಇವನಂತೆ ಅಕ್ಕಪಕ್ಕದ ಮನೆಯವರು ಕೂಡ ಯೋಚಿಸುತ್ತಾರೆ ಅವರು ಕೂಡ ಜಾಗ ಬಿಡುವುದಿಲ್ಲ ಇನ್ನು ರಸ್ತೆಗಳಲ್ಲಿ ಈಗ ಪೂರ್ತಿ ಕಾಂಕ್ರೀಟ್ ರೋಡ್ ಬರುತ್ತಿದೆ ಡ್ರೈನೇಜ್ ವ್ಯವಸ್ಥೆಯಿಂದ ಸೇರಿದಂತೆ ಎಲ್ಲವೂ ಕಾಂಕ್ರೀಟ್ ಮಯವಾಗುತ್ತಿದೆ.
ಈ ರೀತಿ ಮಣ್ಣೇ ಕಾಣದ ರೀತಿ ಹಾಗೆ ಕಾಂಕ್ರೀಟ್ ಮುಚ್ಚಿರುವುದರಿಂದ ಇವುಗಳ ಮೇಲೆ ಬಿದ್ದ ನೀರು ಎಲ್ಲೂ ಇಂಗದೆ ಹರಿದು ಹೋಗಿ ಬಿಡುತ್ತದೆ. ಹೀಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಎಡವಟ್ಟಿನಿಂದಲೇ ಇಂದು ನಾವು ಹವಮಾನ ವೈಪರಿಸ್ಥಿತಿಗಳನ್ನು ಅನುಭವಿಸುವಂತಾಗಿದೆ.
ಈ ಸುದ್ದಿ ಓದಿ:- ಜನನ & ಮ.ರಣ ಪ್ರಮಾಣ ಪತ್ರ ಇನ್ಮುಂದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಪಡೆಯಬಹುದು ಹೇಗೆ ನೋಡಿ.!
ಆದರೆ ಈ ರೀತಿ ಮಳೆ ನೀರನ್ನು ಇಂಗಲು ಬಿಟ್ಟರೆ ಅಥವಾ ಮಳೆ ನೀರಿನ ಕೊಯ್ಲು ಅಳವಡಿಸಿಕೊಂಡರೆ ಕೊಳವೆಬಾವಿ ಫೇಲ್ ಆಗುವ 20 ಕೇಸ್ ಗಳಲ್ಲಿ 5 ಆದರೂ ಕಡಿಮೆ ಮಾಡಬಹುದು ಎನ್ನುವುದು ತಜ್ಞರು ನೀಡುವ ಸಲಹೆ ಹಾಗಾಗಿ ಈ ಮಳೆ ನೀರನ್ನು ಕೊಯ್ಲು ಎನ್ನುವ ವಿಚಾರಕ್ಕೆ ಹೆಚ್ಚು ಪ್ರಚಲಿತಕ್ಕೆ ಬಂದಿದೆ.
ಈ ಬಗ್ಗೆ ಪ್ರಸಿದ್ಧವಾದ ಕನ್ಸ್ಟ್ರಕ್ಷನ್ ಕಂಪನಿ ಡೈರೆಕ್ಟರ್ ಹೇಳುವ ಮಾತು ಏನೆಂದರೆ ಮನೆ ಕಟ್ಟುವವರು ದಯವಿಟ್ಟು ಇದರ ಬಗ್ಗೆ ಯೋಚನೆ ಮಾಡಿ ನೀವು ಮಳೆ ನೀರಿನ ಕೊಯ್ಲು ಅಳವಡಿಕೆ ಮಾಡುವುದರಿಂದ ನಿಮ್ಮ ಬೋರ್ವೆಲ್ ಗೆ ಮರು ಪೂರಣ ಮಾಡಬಹುದು. ಮಳೆ ನೀರು ಕೊಯ್ಲು ಮಾಡುವುದಕ್ಕೆ ಹಲವಾರು ವಿಧಾನಗಳಿವೆ ಇವುಗಳಲ್ಲಿ ಕೆಲವು ವಿಧಾನಗಳಲ್ಲಿ ಡೈರೆಕ್ಟಾಗಿ ನೀವು ಮಳೆ ನೀರನ್ನು ಯೂಸ್ ಕೂಡ ಮಾಡಬಹುದು ಇನ್ನು ಹತ್ತಾರು ಅನುಕೂಲತೆ ಇದೆ.
ಈ ಸುದ್ದಿ ಓದಿ:- ರೈತರ ಬೆಳೆ ವಿಮೆ ಹಣ ಬಿಡುಗಡೆ.! ನಿಮ್ಮ ಖಾತೆಗೂ ಇನ್ಸೂರೆನ್ಸ್ ಹಣ ಬಂದಿದೆಯೇ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.!
ನೀರು ಜೀವಜಲ, ಅತ್ಯದ್ಭುತ ಸಂಪನ್ಮೂಲ ಇದನ್ನು ವ್ಯರ್ಥವಾಗಿ ವೇಸ್ಟ್ ಆಗಲು ಬಿಡಬೇಡಿ ಎನ್ನುವ ಸಲಹೆ ನೀಡುತ್ತಾರೆ ಖಂಡಿತವಾಗಿಯೂ ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ ಯಾಕೆಂದರೆ ಚಿಕ್ಕ ಮನೆಯಾಗಿದ್ದರೆ ಅಷ್ಟೆಲ್ಲ ಖರ್ಚು ಮಾಡಿ ಮಳೆ ನೀರಿನ ಸಂಗ್ರಹಣೆ ಮಾಡಲು ಟ್ಯಾಂಕ್ ಮಾಡಿಸುವುದು ಸೂಕ್ತ.
ಆದರೆ ಬೋರ್ವೆಲ್ ಇಲ್ಲ ಅಂದರೆ ಪಕ್ಕದಲ್ಲಿ ಬೋರ್ ಇದ್ದವರಿಗೆ ಅನುಕೂಲವಾಗುತ್ತದೆ ಆದರೆ ಹೀಗೆ ಎಲ್ಲರಿಗಾಗಿ ಯೋಚನೆ ಮಾಡುವ ವಿಶಾಲ ಹೃದಯ ಎಲ್ಲರಿಗೂ ಇರುವುದಿಲ್ಲ. ಇನ್ನು ದೊಡ್ಡ ಮನೆ, ಫ್ಯಾಕ್ಟರಿ, ಶೆಡ್ ಇತ್ಯಾದಿ ಜಾಗ ಹೊಂದಿದ್ದರೆ ಟ್ಯಾಂಕ್ ಕಟ್ಟಿಸಲು ಮಾಡುವ ಖರ್ಚಿಗಿಂತ ಡ್ರಮ್‌ಗಳನ್ನು ಬಳಸಿ ಡೈರೆಕ್ಟ್ ಶೇಖರಣೆ ಮಾಡಬಹುದು.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ
ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ವಾಹನಗಳನ್ನು ತೊಳೆಯಲು, ಗಾರ್ಡನಿಂಗ್ ಹೀಗೆ ಹತ್ತಾರು ಕೆಲಸಗಳಿಗೆ ಇದನ್ನು ಉಪಯೋಗಿಸಬಹುದು. ಹಾಗಾದರೆ ಯಾವುದು ಬೆಸ್ಟ್ ಎನ್ನುವ ಕನ್ಫ್ಯೂಷನ್ ಆಗಿದ್ದರೆ ಈ ವಿಚಾರದ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.