ಚಿಟ್ ಫಂಡ್ ಬದಲು ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ಲಾಭ, ಕೋಟ್ಯಾಧಿಪತಿಗಳಾಗಲು ಇದು ಬೆಸ್ಟ್.! 100% ನಿಮ್ಮ ಹಣ ಸೇಫ್.!

ಜನರು ಚಿಟ್ ಫಂಡ್ ಗಳಲ್ಲಿ (Chit fund) ಹೂಡಿಕೆ ಮಾಡಲು ಬಯಸುತ್ತಾರೆ ಇದರ ಉದ್ದೇಶ ಲಾಭ ಮಾಡುವುದು ಅಥವಾ ಸುಲಭವಾಗಿ ತಕ್ಷಣಕ್ಕೆ ಹಣ ಸಿಗುತ್ತದೆ ಎಂದು ಇರಬಹುದು. ಪ್ರತಿಯೊಬ್ಬರಿಗೂ ಕೂಡ ಈ ಚಿಟ್ ಫಂಡ್ ಎಂದರೆ ಆಡು ಭಾಷೆಯಲ್ಲಿ ಚೀಟಿ ಎಂದು ಕರೆಯಲಾಗುವ ಈ ವ್ಯವಹಾರದ ಬಗ್ಗೆ ಗೊತ್ತೇ ಇದೆ.

WhatsApp Group Join Now
Telegram Group Join Now

ನಮ್ಮ ಕೆಲಸದ ಸ್ಥಳಗಳು ಅಥವಾ ಅಕ್ಕಪಕ್ಕದ ಮನೆಯವರು ಸೇರಿ ಈ ರೀತಿ ಚೀಟಿ ಹಾಕಿರುತ್ತೇವೆ ಆದರೆ ಇದುವರೆಗೂ ಎಷ್ಟು ಜನರು ಈ ರೀತಿ ಚೀಟಿಗೆ ಹಣ ಹಾಕಿ ಶ್ರೀಮಂತರಾಗಿದ್ದರೆ ಎಂದು ನೋಡಿದರೆ ಯಾರು ಸಹ ಈ ರೀತಿ ಚೀಟಿಯನ್ನು ಹಾಕಿ ಕೊಟ್ಯಾಧಿಪತಿಗಳಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಹಣಕಾಸು ತಜ್ಞರು.

ಈ ಸುದ್ದಿ ಓದಿ:- ಆಸ್ತಿಗೆ ಸಂಬಂಧಪಟ್ಟ ವಿಲ್ ಎಂದರೇನು.? ಯಾರು ಬರೆಯಬಹುದು.? ಇದರಿಂದ ಎಷ್ಟು ಲಾಭಗಳಿವೆ ನೋಡಿ.!

ಚೀಟಿಗಳಿಗಿಂತ ಮ್ಯೂಚುವಲ್ ಫಂಡ್ ಗಳು (Mutual funds) ಹೆಚ್ಚು ಲಾಭ ಹಾಗೂ ಶ್ರೀಮಂತರಾಗಿಸುತ್ತದೆ ಎನ್ನುವ ಭರವಸೆಯನ್ನು ನೀಡುತ್ತಾರೆ. ಇದರೊಂದಿಗೆ ಚೀಟಿ ಹಾಕುವುದು ಎಷ್ಟೊಂದು ರಿಸ್ಕ್ ಮತ್ತು ಮ್ಯೂಚುವಲ್ ಫಂಡ್ ಗಳಲ್ಲಿ ಈ ರಿಸ್ಕ್ ಇಲ್ಲವೇ ಎನ್ನುವ ಪ್ರಶ್ನೆಗಳಿಗೆ ಈ ಅಂಕಣದಲ್ಲಿ ಉತ್ತರ ನೀಡಲು ಬಯಸುತ್ತೇವೆ.

ಮತ್ತು ಇವುಗಳ ನಡುವೆ ಇರುವ ವ್ಯತ್ಯಾಸಗಳು ಹಾಗೂ ಎರಡರಲ್ಲಿ ಯಾವುದು ಯಾಕೆ ಬೆಸ್ಟ್ ಎನ್ನುವುದನ್ನು ಅರ್ಥ ಮಾಡಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ಚಿಟ್ ಫಂಡ್ ಗಳು ಅನ್ ಆರ್ಗನೈಜ್ಡ್ ಆಗಿರುತ್ತವೆ ಇವುಗಳು ಬಡವರ ಹಾಗೂ ಮಧ್ಯಮ ವರ್ಗದವರಿಗೆ ತಕ್ಷಣದ ಹಣಕಾಸಿನ ಅವಶ್ಯಕತೆ ಪೂರೈಸಿಕೊಳ್ಳಲು ಮತ್ತು ಸರಳ ವಿಧಾನದಲ್ಲಿ ಹಣ ಹೂಡಿಕೆ ಮಾಡಲು ರೂಪಿಸಿಕೊಂಡ ವ್ಯವಸ್ಥೆ ಆಗಿತ್ತು.

ಈ ಸುದ್ದಿ ಓದಿ:- ನಿಮ್ಮ ಮೊಬೈಲ್ ನಲ್ಲೇ ಸರ್ಚ್ ನಲ್ಲಿ ಕೇವಲ ಹೆಸರು ಹಾಕಿ ಸಾಕು.! ಮತದಾರರ ಸಂಪೂರ್ಣ ಮಾಹಿತಿ ಪಡೆಯಬಹುದು.!

ಆದರೆ ಈಗ ಆ ಸ್ಥಾನವನ್ನು ಮ್ಯೂಚುವಲ್ ಫಂಡ್ ಗಳು ಕೂಡ ಆವರಿಸುತ್ತಿವೆ. ಸಾಮಾನ್ಯವಾಗಿ ಚಿಟ್ ಫಂಡ್ ಗಳಲ್ಲಿ ಪ್ರತಿ ತಿಂಗಳು ಹಣ ಹಾಕಿ 20 ಅಥವಾ 40 ತಿಂಗಳು ಆದಮೇಲೆ ಕೊನೆಯಲ್ಲಿ ಹಣ ಪಡೆದುಕೊಂಡವರಿಗೆ ಹೆಚ್ಚಿನ ಹಣ ಸಿಗುತ್ತದೆ ಮತ್ತು ಈ ರೀತಿ ಚಿಟ್ ಹಾಕಿದವರಿಂದ ನಡೆಸುವವರು ಕಮಿಷನ್ ಕೂಡ ತೆಗೆದುಕೊಳ್ಳುತ್ತಾರೆ.

ಹೆಚ್ಚೆಂದರೆ 6 – 6.5% ಲಾಭ ಸಿಗಬಹುದು ಅಷ್ಟೇ, ಇನ್ನು ಕೆಲವು ಕಡೆ 7-10% ಸಿಗಬಹುದು. ಆದರೆ ಈ ರೀತಿ ಚೀಟಿಗಳು ಹಣ ತೆಗೆದುಕೊಳ್ಳುವವರಿಂದ ಅಷ್ಟೇ ಬಡ್ಡಿಯನ್ನು ವಸೂಲಿ ಮಾಡುತ್ತವೆ. ಇಲ್ಲಿ ಒಬ್ಬರ ಹಣವು ಒಬ್ಬರ ಅಗತ್ಯತೆಯು ಉಳಿದವರಿಗೆ ಲಾಭವಾಗಿರುತ್ತದೆ‌.

ಈ ಸುದ್ದಿ ಓದಿ:- ಬ್ಯಾಂಕ್ ಗಳು ನಿಮಗೆ ಯಾವ ರೀತಿ ಮೋಸ ಮಾಡುತ್ತಿವೆ ಗೊತ್ತಾ.? ಬ್ಯಾಂಕ್ ಅಕೌಂಟ್ ಇರುವ ಪ್ರತಿಯೊಬ್ಬರು ಈ ವಿಚಾರ ತಿಳಿದುಕೊಳ್ಳಿ.!

ಆದರೆ ಒಂದು ವೇಳೆ ಚೀಟಿ ಹಾಕಿಸಿದ ವ್ಯಕ್ತಿ ಅದನ್ನು ನಡೆಸದೆ ಹಣ ತೆಗೆದುಕೊಂಡು ಹೊರಟು ಹೋದಾಗ ಯಾರು ಸಹಾಯಕ್ಕೆ ಬರುವುದಿಲ್ಲ. ಇತ್ತೀಚಿನ ದಿನಗಳಂತೂ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಇಂತಹ ಚೀಟಿ ನಡೆಸುವವರು, ಅನ್ ಆರ್ಗನೈಜ್ಡ್ ಚಿಟ್ ಫಂಡ್ ಗಳು (Un Organized) ಮೋ’ಸ ಮಾಡಿ ಹೋದ ಬಗ್ಗೆ ಕೇಳುತ್ತಲೇ ಇದ್ದೇವೆ.

ಮ್ಯೂಚುವಲ್ ಫಂಡ್ ಗಳು ಆರ್ಗನೈಸಡ್ (Organized) ಆಗಿರುತ್ತವೆ ಇವು SEBI ಕಂಟ್ರೋಲ್ ನಲ್ಲಿ ಇರುತ್ತವೆ ಮತ್ತು RBI ಇದಕ್ಕೆ ಜವಾಬ್ದಾರಿ ಆಗಿರುತ್ತದೆ. ಅನ್ ಆರ್ಗನೈಸ್ಡ್ ಚಿಟ್ ಫಂಡ್ ಗಳಿಗೆ RBI ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ. ಮ್ಯೂಚುಯಲ್ ಫಂಡ್ ಗಳಲ್ಲೂ ಕೂಡ ಕರೋನದಂತಹ ಸಮಯದಲ್ಲಿ ಮೈನಸ್ ಆಗಿರಬಹುದು. ಆದರೆ ಕೆಲಸ ಸಮಯ ಬಿಟ್ಟು ನೋಡಿದರೆ ಅದು ಮತ್ತೆ ಚೇತರಿಸಿಕೊಂಡು ಬೆಳೆಯುತ್ತದೆ.

ಈ ಸುದ್ದಿ ಓದಿ:- ಇ-ಸ್ಟ್ಯಾಂಪ್ ಪೇಪರ್ ಎಂದರೇನು.? ಹೇಗೆ ಬರೆಯಬೇಕು ಸಂಪೂರ್ಣ ಮಾಹಿತಿ.

ಆದರೆ ಒಂದು ಬಾರಿ ಹಣ ತೆಗೆದುಕೊಂಡವರು ಮೋ’ಸ ಮಾಡಿ ಓಡಿ ಹೋದರೆ ಅದು ಎಂದು ವಾಪಾಸ್ ಸಿಗುವುದಿಲ್ಲ. ಮ್ಯೂಚುವಲ್ ಫಂಡ್ ಗಳಲ್ಲಿ ಕೂಡ ಸಾಕಷ್ಟು ವಿಭಿನ್ನ ರೀತಿಯ ಚಿಟ್ ಫಂಡ್ಗಳು ಇವೆ, ನಿಮ್ಮ ಅಗತ್ಯತೆಗೆ ಹಾಗೂ ಅನುಕೂಲತೆಗೆ ಸೂಕ್ತವಾದದ್ದನ್ನು ಆರಿಸಿಕೊಂಡು ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳಬಹುದು.

ಇದರಲ್ಲಿ ಸಿಗುವ ಲಾಭ 20% ವರೆಗೂ ಇರುತ್ತದೆ ಮತ್ತು ಒಂದು ವೇಳೆ ನೀವು ತಕ್ಷಣದ ಹಣಕಾಸಿನ ಅವಶ್ಯಕತೆಗಾಗಿ ಚೀಟಿ ಹಾಕಿ ಮೊದಲ ಅಥವಾ ಎರಡು ತಿಂಗಳಲ್ಲಿ ಹಣ ತೆಗೆದುಕೊಳ್ಳಲು ಯೋಚಿಸುವುದಾದರೆ 20-40% ಬಡ್ಡಿ ಕಟ್ಟುವ ಬದಲು ಪರ್ಸನಲ್ ಲೋನ್ ಗಳು (personal loan) 10% ಸಿಗುತ್ತವೆ ಅವುಗಳನ್ನು ಅನುಸರಿಸಿ ಎನ್ನುವ ಸಲಹೆಯನ್ನು ನೀಡುತ್ತಾರೆ ಆರ್ಥಿಕ ತಜ್ಞರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now