ಕಾರ್ಮಿಕ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಸರ್ಕಾರದಿಂದ ಸಿಗಲಿದೆ 60,000 ಸಹಾಯಧನ. ಅರ್ಜಿ ಸಲ್ಲಿಸುವುದು ಹೇಗೆ ಬೇಕಾಗುವ ದಾಖಾಲೆಗಳೇನು ಸಂಪೂರ್ಣ ಮಾಹಿತಿ.

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಈಗಾಗಲೇ ಸಾಕಷ್ಟು ಯೋಜನೆಗಳ ಮೂಲಕ ಅನೇಕ ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತರಾಗಿರುವ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಈಗಾಗಲೇ.

ಉಚಿತ ಬಸ್ ಪಾಸ್, ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಆಕರ್ಷಕ ಮೊತ್ತದ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಕಿಟ್, ಕೆಲವು ಕಾರ್ಮಿಕರಿಗೆ ಉಚಿತ ವಸತಿ ಸೌಲಭ್ಯ ಮತ್ತು ಲಾಕ್ಡೌನ್ ಅವಧಿಯಲ್ಲಿ ಸಹಾಯಧನ ಸೇರಿದಂತೆ ಇನ್ನು ಮುಂತಾದ ಅನೇಕ ಸೌಲಭ್ಯಗಳನ್ನು ನೀಡಿದೆ. ಅದೇ ರೀತಿ ಲೇಬಲ್ ಕಾರ್ಡ್ ಹೊಂದಿರುವವರಿಗೆ ಗೃಹ ಲಕ್ಷ್ಮಿ ಬಾಂಡ್ ಯೋಜನೆ ಮೂಲಕ ಮದುವೆ ಖರ್ಚಿಗಾಗಿ 60,000 ತನಕ ಸಹಾಯಧನ ನೀಡುತ್ತಿದೆ.

ಈ ಲೇಖನದಲ್ಲಿ ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ ಮಾಹಿತಿಗಾಗಿ ಪೂರ್ತಿ ಓದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ. ಯೋಜನೆ :- ಗೃಹಲಕ್ಷ್ಮೀ ಬಾಂಡ್
ನಿಯಮ 49 :- ನೋಂದಾಯಿತ ಕಟ್ಟದ ಕಾರ್ಮಿಕರ ಮೊದಲ ಮದುವೆ ಅಥವಾ ಅವನ / ಅವಳ ಅವಲಂಭಿತರ ಮದುವೆಗೆ ನೀಡುವ ಸಹಾಯಧನ.

1. ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಕಾರ್ಮಿಕರಿಂದ ಅರ್ಜಿಯನ್ನು ಸ್ವೀಕರಿಸಿ ಫಲಾನುಭವಿಯ ಮೊದಲನೆ ಮದುವೆಗೆ ಅಥವಾ ಅವನ / ಅವಳ ಎರಡು ಅವಲಂಬಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ.60,000 ಗಳನ್ನು ಮಂಜೂರು ಮಾಡುತ್ತದೆ.

2. ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಮಂಜೂರು ಮಾಡಲಾಗುತ್ತದೆ.
●ಈ ಸಹಾಯಧನ ಪಡೆಯಲು ಅರ್ಜಿದಾರನು ನೋಂದಣಿಯಾಗಿ ಮದುವೆ ದಿನಾಂಕಕ್ಕೆ ಸರಿಯಾಗಿ ಒಂದು ವರ್ಷ ಪೂರ್ಣಗೊಂಡಿರಬೇಕು.
●ನೋಂದಣಿದಾರನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅರ್ಹರಿರುತ್ತಾರೆ.
●ನೋಂದಣಿಯಾದ ಕಟ್ಟಡ ಕಾರ್ಮಿಕ ಅಥವಾ ಆತನ ಇಬ್ಬರು ಮಕ್ಕಳುಗಳು ಸಹಾಯಧನ ಪಡೆಯಬಹುದು.
●ನೋಂದಣಿದಾರನ ಮಕ್ಕಳುಗಳು ಸಹಾಯಧನ ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸಿನಲ್ಲಿ ಮುದುವೆಯಾಗಿರಬೇಕು.
●ವಿವಾಹ ನೋಂದಣಾಧಿಕಾರಿದಗಳಿಂದ ಪಡೆದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಪೂರಕ ದಾಖಲಾತಿಗಳು :-
●ಕಾರ್ಮಿಕ ಮಂಡಳಿಯಿಂದ ನೀಡಲಾದ ಮೂಲ ●ಗುರುತಿನ ಚೀಟಿ ಹೊಂದಿರಬೇಕು
●ಉದ್ಯೋಗ ಧೃಡೀಕರಣ ಪತ್ರ
●ಬ್ಯಾಂಕ್ ಖಾತೆ ವಿವರಗಳು
●ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ಪ್ರಮಾಣ ಪತ್ರ
●ಆಧಾರ್ ಕಾರ್ಡ್
●ಮದುವೆ ಆಮಂತ್ರಣ ಪತ್ರ
●ಮದುವೆ ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ನಡೆದಿದ್ದರೆ ಅಫಿಡವಿಟ್ ಸಲ್ಲಿಸಬೇಕು
●ರೇಷನ್ ಕಾರ್ಡ್

ಅನ್ವಯಿಸುವ ವಿಧಾನ :-
●ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕನು ಅರ್ಜಿ ಸಲ್ಲಿಸಬೇಕು.
●ನೊಂದನಾಧಿಕಾರಿಗಳ ಹಿರಿಯ/ ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ ನಡೆಯುತ್ತದೆ.
●ಕಾರ್ಮಿಕ ಅಧಿಕಾರಿಗಳಿಂದ ಪರಿಶೀಲನೆ ಮತ್ತು ಅನುಮೋದನೆ ಆಗುತ್ತದೆ.
●ನಂತರ ನೇರವಾಗಿ ನೀವು ಕೊಟ್ಟ ಬ್ಯಾಂಕ್ ಖಾತೆ ಸಂಖ್ಯೆಗೆ ಹಣ DBT ಮೂಲಕ ಜಮೆ ಆಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :-
●ಹತ್ತಿರದಲ್ಲಿರುವ ಯಾವುದೇ ಕಂಪ್ಯೂಟರ್ ಸೆಂಟರ್, ಅಥವಾ ಸೇವಾ ಸಿಂಧು ಕೇಂದ್ರಕ್ಕೆ ಮೇಲ್ಕಂಡ ಎಲ್ಲಾ ದಾಖಲೆಗಳೊಂದಿಗೆ ಹೋಗಿ ಅರ್ಜಿ ಸಲ್ಲಿಸಬೇಕು.

ಇತರೆ ಪ್ರಮುಖ ವಿಷಯಗಳು :-
● ನೋಂದಣಿಯಾಗಿ ಒಂದು ವರ್ಷ ತುಂಬಿದವರು ಮಾತ್ರ ಅರ್ಜಿ ಸಲ್ಲಿಸಬೇಕು.
●ಮದುವೆ ಆದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.
●ನೋಂದಣಿದಾರನ ಅಥವಾ ಆತನ ಎರಡು ಮಕ್ಕಳ ಮೊದಲ ಮದುವೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now