ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವ ಯೋಜನೆ ಕೂಡ ದೇಶದಲ್ಲಿ ಜಾರಿಯಲ್ಲಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMPBS) ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಈ ರೀತಿ ಬೆಳೆ ವಿಮೆ ಮಾಡಿಸಲಾಗುತ್ತಿದೆ. ಇದರ ಉದ್ದೇಶ ಏನೆಂದರೆ, ಒಂದು ವೇಳೆ ಬೆಳೆ ಯಾವುದಾದರು ಕಾರಣದಿಂದ ಹಾನಿಗೆ ಒಳಗಾಗಿದ್ದರೂ ಸಂಪೂರ್ಣವಾಗಿ ನಷ್ಟವಾಗುವ ಬದಲು ಕಂಪನಿಗಳು ಈ ವಿಮೆ ಕಟ್ಟಿಕೊಡುತ್ತವೆ.
ಈ ಉದ್ದೇಶಕ್ಕಾಗಿ ಬೆಳೆ ವಿಮೆ ಮಾಡಿಸಲಾಗುತ್ತದೆ. ನೀವು ಕೂಡ ಕಳೆದ ವರ್ಷ ನಿಮ್ಮ ಬೆಳೆಗೆ ವಿಮೆ ಮಾಡಿದ್ದರೆ ಬರಗಾಲದ ಕಾರಣದಿಂದಾಗಿ ಬೆಳೆ ಹಾನಿ ಉಂಟಾಗಿರುವುದರಿಂದ ಈಗ ವಿಮೆ ಹಣವು ಕ್ಲೈಮ್ ಆಗುತ್ತಿದೆ. ಈಗಾಗಲೇ ಹಲವು ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದ್ದು ನೀವಿನ್ನು ಹಣ ಪಡೆದಿಲ್ಲ ಎಂದರೆ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ಸ್ಟೇಟಸ್ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಕೆಳಗಿನ ಹಂತಗಳನ್ನು ಪಾಲಿಸಿ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ
* ಮೊದಲಿಗೆ ಕರ್ನಾಟಕ ಸರ್ಕಾರ ಅಧಿಕೃತ ವೆಬ್ಸೈಟ್ ಆದ ಸಂರಕ್ಷಣೆ ವೆಬ್ಸೈಟ್ಗೆ ಭೇಟಿ ನೀಡಿ
ವೆಬ್ ಸೈಟ್ ವಿಳಾಸ :- https://samrakshane.karnataka.gov.in
* ತಕ್ಷಣ ಸ್ಕ್ರೀನ್ ಮೇಲೆ ವಿಮೆ, ಋತು ಮತ್ತು ವರ್ಷದ ಆಯ್ಕೆ ಎನ್ನುವ ಆಪ್ಷನ್ ಬರುತ್ತದೆ.
Year 2023-24, select insurance season – Khariff ಆಯ್ಕೆ ಮಾಡಿ Go ಮೇಲೆ ಕ್ಲಿಕ್ ಮಾಡಿ
* ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ ಇದರಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ Farmers ವಿಭಾಗದಲ್ಲಿ check status ಎಂಬ ಆಯ್ಕೆ ಕಾಣುತ್ತದೆ ಕ್ಲಿಕ್ ಮಾಡಿ
* Check Status ಎನ್ನುವ ಪೇಜ್ ಗೆ ಹೋಗುತ್ತೀರಿ.
ಈ ಸುದ್ದಿ ಓದಿ:- ಆಪಲ್ ಬೆಳೆಯುವುದು ಎಷ್ಟು ಸುಲಭ ಗೊತ್ತಾ.? ಹೆಚ್ಚು ಕೆಲಸಾನೂ ಇರಲ್ಲ, ಖರ್ಚು ಬರಲ್ಲ ಈ ರೈತನ ಮಾತನ್ನೊಮ್ಮೆ ಕೇಳಿ.!
* professional, Mobile No. Aadhar card ಎಂಬ ಮೂರು ವಿಧಾನ ಇರುತ್ತದೆ. ಇದರಲ್ಲಿ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಿ.
a) professional ಸೆಲೆಕ್ಟ್ ಮಾಡಿದರೆ Application No. (ನೀವು ಕ್ರಾಪ್ ಇನ್ಸೂರೆನ್ಸ್ ಮಾಡಿಸುವಾಗಲೇ ಈ ನಂಬರ್ ಕೊಟ್ಟಿರುತ್ತಾರೆ) ಮತ್ತು Captcha Code ಎಂಟ್ರಿ ಮಾಡಬೇಕು
b) Mobile No. ಸೆಲೆಕ್ಟ್ ಮಾಡಿದರೆ Mobile No. ಮತ್ತು Captcha Code ಎಂಟ್ರಿ ಮಾಡಬೇಕು.
c) Aadhar ಸೆಲೆಕ್ಟ್ ಮಾಡಿದ್ದರೆ Aadhar No. ಮತ್ತು Captcha Code ಹಾಕಬೇಕು
* ಇಷ್ಟಾದ ಮೇಲೆ Search ಮೇಲೆ ಕ್ಲಿಕ್ ಮಾಡಿದರೆ ಕಂಪ್ಲೀಟ್ ಡೀಟೇಲ್ಸ್ ಬರುತ್ತದೆ.
* Insurance company details ಬಂದಿರುತ್ತದೆ ಯಾವ ಕಂಪನಿಯಿಂದ ಇನ್ಶೂರೆನ್ಸ್ ಹಣ ಬಂದಿದೆ ಎನ್ನುವ ಹಾಗೂ ಇದರ ಸಂಬಂಧಿತ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:- ಬರ ಪರಿಹಾರ ಹಣ ಯಾರಿಗೆ ಬಂದಿಲ್ಲ ಅವರು ಈ ರೀತಿ ಮಾಡಿ.! ನಿಮ್ಮ ಅಕೌಂಟ್ ಗೆ ಹಣ ಜಮೆ ಆಗುತ್ತೆ.!
* ಇತರ ನಂತರ ಅಪ್ಲಿಕೇಶನ್ ಡಿಟೇಲ್ಸ್ (application details) ಇರುತ್ತದೆ. ಇದರಲ್ಲಿ Application No., Survey No., Crop ID, Crop Code, Payment type, ಯಾವ ಖಾತೆಗೆ ಹಣ ಜಮೆ ಆಗಿದೆ Account No. (last 4 digit), UTR No.(payment status), Amout (ಎಷ್ಟು ಹಣ ಬೆಳೆ ವಿಮೆ ಸಿಕ್ಕಿದೆ ಎನ್ನುವುದರ ವಿವರ), Payment date (ಯಾವ ದಿನಾಂಕದಂದು ಹಣ ಜಮೆ ಆಗಿದೆ ಎನ್ನುವುದರ ವಿವರ) ಈ ಎಲ್ಲ ಮಾಹಿತಿಗಳು ಸಿಗುತ್ತದೆ.
* ಸಮೀಕ್ಷೆ ಮಾಡಿ ಸಂಬಂಧಿತ ಅಧಿಕಾರಿಗಳು ವರದಿ ನೀಡಿರುವ ಪ್ರಕಾರವಾಗಿ ಆ ದಾಖಲೆಯಲ್ಲಿ ತೋರಿಸಿದಂತೆ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎನ್ನುವುದರ ಆಧಾರದ ಮೇಲೆ ಪರಿಹಾರದ ಮೊತ್ತ ನಿಗದಿ ಆಗುತ್ತದೆ.