ಪೆಟ್ರೋಲ್ ಬಂಕ್ ಬಿಜಿನೆಸ್ ಮಾಡುವುದರಿಂದ ದೊಡ್ಡ ಮಟ್ಟದಲ್ಲಿ ಲಾಭ ಕಾಣಬಹುದು ಎನ್ನುವುದು ಎಲ್ಲರ ಅಭಿಪ್ರಾಯ, ಇದು ನಿಜ ಕೂಡ ಹೌದು. ಯಾಕೆಂದರೆ ಸದ್ಯಕ್ಕೆ ಈಗ ಜಗತ್ತಿನಲ್ಲಿ ವಾಹನಗಳ ಬಳಕೆ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತಿದೆ. ಪ್ರತಿ ಮನೆಯಲ್ಲಿ ಕೂಡ ಕನಿಷ್ಠ ಒಂದಾದರೂ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನವಾದರೂ ಇದ್ದೇ ಇರುತ್ತದೆ. ಹೀಗಾಗಿ ಇವುಗಳಿಗೆ ಪೆಟ್ರೋಲ್ ಡೀಸೆಲ್ ಅವಶ್ಯಕತೆ ಇದ್ದೇ ಇದೆ, ಖಾಲಿ ಆದಾಗಲೆಲ್ಲಾ ರೀಫಿಲ್ ಮಾಡಿಸಲೇ ಬೇಕಾಗುತ್ತದೆ.
ಹಾಗಾಗಿ ಇದು ಕೂಡ ಪ್ರತಿನಿತ್ಯವು ಚೆನ್ನಾಗಿ ದುಡ್ಡು ನೋಡಬಹುದು ದಂತಹ ಬಿಸಿನೆಸ್ ಆಗಿದೆ. ಈ ಕಾರಣದಿಂದಲೇ ನೀವೇನಾದರೂ ಪೆಟ್ರೋಲ್ ಬಂಕ್ ಆರಂಭಿಸಲು ಇಚ್ಚಿಸುತ್ತಿದ್ದೀರಾ ಎಂದರೆ ಪೆಟ್ರೋಲ್ ಬಂಕ್ ಆರಂಭಿಸುವುದು ಹೇಗೆ? ಬಂಡವಾಳ ಎಷ್ಟಿರಬೇಕು? ಇದರ ಲೈಸನ್ಸ್ ಪಡೆಯುವುದು ಹೇಗೆ? ಇತ್ಯಾದಿ ಮಾಹಿತಿಗಳನ್ನು ಆಸಕ್ತರಿಗಾಗಿ ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಪೆಟ್ರೋಲ್ ಬಂಕ್ ನಲ್ಲಿ ಕೂಡ ಎರಡು ವಿಧ ಇದೆ ಒಂದು ಸರ್ಕಾರಿ ಪೆಟ್ರೋಲ್ ಬಂಕ್ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಇವು ಸರ್ಕಾರಿ ಪೆಟ್ರೋಲ್ ಬಂಕ್ ಗಳಾಗಿವೆ. ರಿಲಯನ್ಸ್ & SR ಇತ್ಯಾದಿಗಳು ಪ್ರೈವೇಟ್ ಪೆಟ್ರೋಲ್ ಬಂಕ್ ಗಳಾಗಿವೆ ಇವುಗಳನ್ನು ಆರಂಭಿಸಬೇಕು ಎನ್ನುವುದಾದರೆ ಡೀಲರ್ಶಿಪ್ ಪಡೆದುಕೊಳ್ಳಬೇಕು.
ಈ ಸುದ್ದಿ ಓದಿ:- ಕೇವಲ 10 ನಿಮಿಷದಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಿರಿ.! ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
ಅದಕ್ಕೂ ಮುನ್ನ ಔಟ್ಲೆಟ್ ಗಳಲ್ಲಿ ಎಷ್ಟು ವಿಧ ಎಂದು ತಿಳಿದುಕೊಳ್ಳಬೇಕು. ಇದು ಕೂಡ ಎರಡು ರೀತಿಯಲ್ಲಿ ಇರುತ್ತದೆ. ಒಂದು ರೂರಲ್ ರಿಟೇಲ್ ಪೆಟ್ರೋಲ್ ಬಂಕ್ ಹಳ್ಳಿ ಹಾಗೂ ಪಟ್ಟಣ ಪ್ರದೇಶದಲ್ಲಿ ಮಾತ್ರ ಇರುತ್ತದೆ. ಮತ್ತೊಂದು ರೆಗುಲರ್ ರಿಟೇಲ್ ಪೆಟ್ರೋಲ್ ಬಂಕ್ ಸ್ಟೇಟ್ ಹೈವೆಗಳಲ್ಲಿ ಓಪನ್ ಮಾಡಬಹುದು.
ಡೀಲರ್ಶಿಪ್ ಪಡೆದುಕೊಳ್ಳುವುದಕ್ಕೆ ಇರುವ ನೀತಿ ನಿಭಂದನೆಗಳು:-
* ನಾವು ಜಾಗ ಸೆಲೆಕ್ಟ್ ಮಾಡುವುದು ಕೂಡ ಒಂದು ಇಂಪಾರ್ಟೆಂಟ್ ವಿಷಯವಾಗಿದೆ ಯಾವಾಗಲೂ ಟೋಲ್ ಗೇಟ್ ಒಂದು ಕಿಲೋಮೀಟರ್ ದೂರದಲ್ಲಿ ಪೆಟ್ರೋಲ್ ಬಂಕ್ ಇಡಬೇಕು. ಇಲ್ಲವಾದಲ್ಲಿ ಪರ್ಮಿಷನ್ ಸಿಗುವುದಿಲ್ಲ
* ರೂರಲ್ ಏರಿಯಾದಲ್ಲಿ ಜಾಗ ಕನಿಷ್ಠ 300sq.ft, ಹೈವೆಗಳಲ್ಲಿ ಆದರೆ 500sq.ft ಇರಬೇಕು.
* ಜಾಗ ನಿಮ್ಮ ಹೆಸರಿನಲ್ಲಿ ಇರಬೇಕು ಹಾಗಾಗಿ ಸ್ವಂತದಾದರೆ ಬಹಳ ಒಳ್ಳೆಯದು. ಇಲ್ಲವಾದಲ್ಲಿ ಲೀಝ್ ಗೆ ಪಡೆದುಕೊಳ್ಳಬೇಕು (ಕನಿಷ್ಠ 30 ವರ್ಷಗಳವರೆಗೆ) ಅದಕ್ಕೆ ಸಂಬಂಧಿಸಿದ ಡಾಕ್ಯುಮೆಂಟ್ ಗಳನ್ನು ಕೂಡ ಪ್ರೊವೈಡ್ ಮಾಡಬೇಕು
* ನೀವು ಯಾವ ಕಂಪನಿಯ ಪೆಟ್ರೋಲ್ ಬಂಕ್ ಆರಂಭಿಸಲು ಇಚ್ಛಿಸುತ್ತಿದ್ದೀರ ಅದರ ಜಾಹೀರಾತುಗಳು ನ್ಯೂಸ್ ಪೇಪರ್ ನಲ್ಲಿ ನೋಡಿ ತಿಳಿದುಕೊಂಡು ಅಥವಾ ಕಂಪನಿ ವೆಬ್ಸೈಟ್ಗಳಲ್ಲಿ ನೋಡಿ ತಿಳಿದುಕೊಂಡು ಅಪ್ಲೈ ಮಾಡಿ ಟೆಂಡರ್ ಹಾಕಬೇಕು. ಅರ್ಜಿ ಸಲ್ಲಿಸಿದವರ ಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಇದ್ದು ಸ್ಪರ್ಧೆ ಇದ್ದರೆ ಕಂಪನಿ ಲಾಟರಿ ಮೂಲಕ ಆಯ್ಕೆ ಮಾಡಿ ಕೊಳ್ಳುತ್ತದೆ ಮತ್ತು ಈ ವಿಚಾರವಾಗಿ ಕಂಪನಿ ಆಡಳಿತ ಮಂಡಳಿ ತೀರ್ಮಾನವೇ ಅಂತಿಮವಾಗಿರುತ್ತದೆ ಆದರೆ ಇದು ಪಾರದರ್ಶಕವಾಗಿ ನಡೆಯುತ್ತದೆ.
ಈ ಸುದ್ದಿ ಓದಿ:-ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!
* ಕಂಪನಿಯಿಂದ ಒಮ್ಮೆ ಪರ್ಮಿಷನ್ ಸಿಕ್ಕಿದ ಮೇಲೆ GST ನಂಬರ್ ಗಾಗಿ ಅಪ್ಲೈ ಮಾಡಬೇಕು, ಬಂಕ್ ಹೆಸರಿನಲ್ಲಿ ಬ್ಯಾಂಕ್ ಗಳಲ್ಲಿ ಕರೆಂಟ್ ಅಕೌಂಟ್ ಓಪನ್ ಮಾಡಿಸಬೇಕು
* 21 – 55ರ ವಯೋಮಾನದ ಒಳಗಿನ ಭಾರತದ ಯಾವುದೇ ಪೌರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅಥವಾ ಕಂಪನಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಪೂರ್ತಿ ಮಾಹಿತಿ ಪಡೆಯಿರಿ.