ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಮಹತ್ತರದ ತೀರ್ಪು ನೀಡಿದ ಹೈಕೋರ್ಟ್.!

ಹಿಂದೂ ಉತ್ತರಾದಿತ್ವದ ಕಾಯ್ದೆ 2005ರ (Hindu Succession act 2005) ತಿದ್ದುಪಡಿ ನಂತರ ಹೆಣ್ಣು ಮಕ್ಕಳ ಆಸ್ತಿ ಕುರಿತಾದ ಸಾಕಷ್ಟು ನಿಯಮಗಳು ಬದಲಾಗಿವೆ. ಈ ತಿದ್ದುಪಡಿ ಬರುವ ಮುನ್ನ ಹೆಣ್ಣುಮಕ್ಕಳು ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಸಮಾನ ಪಾಲು ಹೊಂದಿದ್ದರು ಆದರೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಅವರಿಗೆ ಸಮಪಾಲು ಇರಲಿಲ್ಲ.

WhatsApp Group Join Now
Telegram Group Join Now

ತಿದ್ದು ಪಡಿಯಾದ ನಂತರ ಈಗ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಯಲ್ಲಿ ಕಂಡು ಮಕ್ಟಳಷ್ಟೇ ಹೆಣ್ಣುಮಕ್ಕಳು ಕೂಡ ಸಮಾನ ಪಾಲು ಪಡೆದು ಅರ್ಹರಾಗಿದ್ದಾರೆ. ಆದರೆ 2005ರಕ್ಕೂ ಮೊದಲೇ ಆಸ್ತಿ ವಿಭಾಗಗಳಾಗಿ ರಿಜಿಸ್ಟರ್ ಆಗಿ ಹೋಗಿದ್ದರೆ ಹಕ್ಕು ಕೇಳಲು ಸಾಧ್ಯವಿಲ್ಲ ಮತ್ತು 2005ರ ಮೊದಲು ಅಥವಾ ನಂತರವೇ ಆಗಲಿ ಹಕ್ಕು ಬಿಡುಗಡೆ ಪತ್ರ ಮಾಡಿಕೊಟ್ಟಿದ್ದರೆ ಅಂತಹವರು ಈಗ ಆಸ್ತಿಯಲ್ಲಿ ಪಾಲು ಪಡೆಯಲು ಆಗುವುದಿಲ್ಲ.

ಇದನ್ನು ಹೊರತುಪಡಿಸಿ ಇರುವ ಇನ್ನೊಂದು ಸಾಮಾನ್ಯವಾದ ಪ್ರಶ್ನೆ ಏನೆಂದರೆ 2005ರ ಮೊದಲು ಹೆಣ್ಣು ಮಕ್ಕಳು ಮೃ’ತಪಟ್ಟಿದ್ದರೆ ಅವರ ಮಕ್ಕಳು ಪಾಲು ಕೇಳಬಹುದೇ ಎಂದು. ಕಾನೂನಿನಲ್ಲಿ ಈ ಹಿಂದೆ 2005ಕ್ಕೂ ಮೊದಲು ಹೆಣ್ಣು ಮಕ್ಕಳು ಜೀವಂತವಾಗಿದ್ದರೆ ಮಾತ್ರ ಅವರಿಗೆ ತಂದೆಯ ಆಸ್ತಿಯಲ್ಲಿ ಪಾಲು ಸಿಗುತ್ತದೆ ಎಂದು ಇತ್ತು.

ಈ ಸುದ್ದಿ ಓದಿ:- ಆಸ್ತಿ ಮತ್ತು ಜಮೀನಿಗೆ ಕರಾರು ಪತ್ರ, ಒಪ್ಪಂದ ಪತ್ರ ಬರೆಯುವುದು ಹೇಗೆ ನೋಡಿ.!

ತಿದ್ದುಪಡಿ ನಂತರ ಹೆಣ್ಣು ಮಕ್ಕಳು ಬದುಕಿದ್ದರು ಅಥವಾ ಇಲ್ಲದಿದ್ದರೂ ಅವರ ವಾರಸುದಾರರು ಅವರ ಪಾಲನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ ಮತ್ತು ಈಗ 2005 ಕ್ಕೂ ಮೊದಲೇ ಹೆಣ್ಣು ಮಕ್ಕಳು ಮೃ’ತ ಪಟ್ಟಿದ್ದರೂ ಅವರ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ತಿದ್ದುಪಡಿ ತರಲಾಗಿದೆ.

ಹೆಣ್ಣು ಮಕ್ಕಳಿಗೆ ಕೋ-ಪಾರ್ಸನರಿ ಹಕ್ಕುಗಳನ್ನು ನೀಡಲು ಕಾಯ್ದೆಗೆ ತಿದ್ದುಪಡಿ ಆದ ಅವಧಿಗೆ ಅಂದರೆ ಸೆಪ್ಟೆಂಬರ್ 9, 2005 ಕ್ಕೂ ಮುನ್ನ ಹೆಣ್ಣು ಮಕ್ಕಳು ಮೃತಪಟ್ಟಿದ್ದಾಳೆ ಎನ್ನುವ ಕಾರಣಕ್ಕೆ ಪೂರ್ವಜರ ಆಸ್ತಿಯ ಮೇಲಿನ ಹಕ್ಕುಗಳನ್ನು ಆಕೆಯ ಕಾನೂನಾತ್ಮಕ ವಾರಸುದಾರರಿಂದ ಕಸಿದುಕೊಳ್ಳುವಂತಿಲ್ಲ ಎಂದು ಹೈ ಕೋರ್ಟ್ ಪ್ರಕರಣ ಒಂದರಲ್ಲಿ ಮಹತ್ವದ ತೀರ್ಪು ನೀಡಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಚೆನ್ನಬಸಪ್ಪ ಎನ್ನುವವರು ಇತ್ತೀಚಿಗೆ ಅಪೀಲು ಸಲ್ಲಿಸಿದರು ಅದನ್ನು ವಜಾಗೊಳಿಸುವ ‌ ವೇಳೆ ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ ವಿನೀತ್ ಶರ್ಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟ ನಿಲುವು ತೋರಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಸುದ್ದಿ ಓದಿ:- 1 ರೂಪಾಯಿ ಖರ್ಚು ಮಾಡದೆ ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಕಂಪ್ಯೂಟರ್ ಕೋರ್ಸ್ ಕಲಿತು ಉಚಿತವಾ ಸರ್ಟಿಫಿಕೇಟ್ ಕೂಡ ಪಡೆಯಬಹುದು, ಇಲ್ಲಿದೆ ನೋಡಿ ಮಾಹಿತಿ…!

ತಿದ್ದುಪಡಿ ಕಾಯ್ದೆಯು ಲಿಂಗ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಹೆಣ್ಣು ಮಕ್ಕಳು ಮತ್ತು ಅವರ ವಾರಸುದಾರರು ಸರಿಯಾದ ಪಾಲನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ, ಅದೇ ರೀತಿ ತಿದ್ದುಪಡಿ ನಿಯಮಗಳು ಪೂರ್ವನ್ವಯವಾಗಿದೆ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಮಗಳು ತೀರಿಕೊಂಡಾಗ ಆಕೆ ಕಾನೂನು ವಾರಸುದಾರರಿಗೆ ಆಕೆಯ ಪೂರ್ವಜರ ಆಸ್ತಿಯಲ್ಲಿ ಹಕ್ಕು ಲಭಿಸಲಿದೆ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳು ಕೂಡ ಆಸ್ತಿಯಲ್ಲಿ ಸಮಾನರು ಎನ್ನುವುದನ್ನು ಈ ತೀರ್ಪು ಎತ್ತಿ ಹಿಡಿಯುತ್ತದೆ.

ಪುತ್ರನಂತೆ ಪುತ್ರಿಯೂ ಕೂಡ ಮ.ರಣ ಹೊಂದಿದಾಗ ಪೂರ್ವಜರ ಆಸ್ತಿಯಲ್ಲಿ ಆಕೆಯ ಉತ್ತರಾಧಿಕಾರಿಗಳು ಸಮಾನವಾದ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ. 2023ರ ಅಕ್ಟೋಬರ್ 3ರಂದು ಗದಗದ ಪ್ರಧಾನ ಸಿವಿಲ್ ನ್ಯಾಯಾಲಯ ಮೃತ ಪುತ್ರಿಯ ಕಾನೂನಾತ್ಮಕ ವಾರಸುದಾರರಿಗೆ ಪೂರ್ವಜರ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕು ಎಂದು ಆದೇಶಿಸಿತ್ತು.

ಈ ಮಹಿಳೆಯರ ಗೃಹಲಕ್ಷ್ಮಿ ಹಣ ಮತ್ತು ಅಕ್ಕಿ ಹಣ ಬಂದ್, 5 ಲಕ್ಷ BPL ಕಾರ್ಡ್ ಕ್ಯಾನ್ಸಲ್, ಹೊಸ ಪಟ್ಟಿ ಬಿಡುಗಡೆ ನಿಮ್ಮ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!

ಈ ಆದೇಶ ಪ್ರಶ್ನಿಸಿ ಚನ್ನಬಸಪ್ಪ ಎನ್ನುವವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು ಆದರೆ ಹೈಕೋರ್ಟ್ ಕೂಡ ಹಿಂದೆ ಇದೇ ರೀತಿ ಪ್ರಕರಣವಾಗಿತ್ತಾ ವಿನಿತ್ ಶರ್ಮಾ ಅವರ ಕೇಸ್ ನಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಚ್ಛರಿಸಿ ಇಂತಹ ಸಾರ್ವಕಾಲಿಕ ಅನ್ವಯ ಮಹತ್ವವಾದ ತೀರ್ಪನ್ನು ನೀಡಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now