ಅಣ್ಷೆ ಸೊಪ್ಪು : ಕನ್ನಡದಲ್ಲಿ ಅನ್ನೆಸೊಪ್ಪು, ಖಡಕತಿರಾ, ಹಣ್ಣೆಸೊಪ್ಪು ಎಂತಲೂ, ಸಂಸ್ಕೃತದಲ್ಲಿ ವಿತುನ ಎಂತಲೂ ವೈಜ್ಞಾನಿಕವಾಗಿ ಸಿಲೊಶಿಯ ಅರ್ಜೆಂಶಿಯ ಎಂತಲೂ ಇಂಗ್ಲೀಷ್ ನಲ್ಲಿ ವಾಟರ್ ಸ್ಪಿನ್ಚ್ ಎಂತಲೂ ಕರೆಯುವ ಈ ಗಿಡ ಮೂಲಿಕೆಯು ಹುಲ್ಲು ಗಾವಲಿನಲ್ಲಿ, ಬೀಳು ಭೂಮಿಯಲ್ಲಿ ಬೆಳೆಯುತ್ತದೆ. ರಾಗಿಯ ಹೊಲದಲ್ಲಿ ಕಳೆಯಂತೆ ಬೆಳೆಯುತ್ತದೆ. ಈ ಗಿಡವನ್ನು ಸೊಪ್ಪು ತರಕಾರಿಯನ್ನು ಆಹಾರದಲ್ಲಿ ಬಳಸುವ ಹಾಗೆ ಇದನ್ನು ಒಂದು ಆಹಾರ ಪದಾರ್ಥವಾಗಿ ಬಳಸುತ್ತಾರೆ. ಇದು 1 ರಿಂದ 3 ಅಡಿ ಎತ್ತರ ಬೆಳೆಯುತ್ತದೆ. ಇದರ ಕಾಂಡವು ವಿರಳವಾಗಿ ಕವಲು ಹೊಡೆದಿರುತ್ತದೆ. ಸರಳವಾದ, ನೀಳ ಅಥವಾ ಕರ್ನೆಯ ಆಕಾರದ ಎಲೆಗಳನ್ನು ಹೊಂದಿದ್ದು ಇವು ಪರ್ಯಾಯವಾಗಿ ಜೋಡಣೆ ಆಗಿರುತ್ತವೆ. ಇದರ ಕಾಂಡದ ತುದಿ ಮತ್ತು ಎಲೆಯ ಕಂಕುಳಲ್ಲಿ ಉದ್ದನೆಯ ಪುಷ್ಪ ಮಂಜರಿಯು ಬೆಳೆಯುತ್ತವೆ. ಈ ಹೂಗಳು ಬೆಳೆಯುವಾಗ ಮೊದಲು ಕೆಂಪು ಬಣ್ಣದಲ್ಲಿ ಇರುತ್ತವೆ ಕಾಲ ಕ್ರಮೇಣ ಇವು ಬಲಿತಂತೆ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಈ ಹೂಗಳನ್ನು ಕಾಪಾಡುವ ಹೂ ಸೂಚಿಗಳು ಬೆಳ್ಳಗೆ ಹೊಳಪಿರುವ ಪೊರೆಯಂತೆ ಇರುತ್ತವೆ. ಈ ಗಿಡದಲ್ಲಿ ಬೆಳೆಯುವ ಹಣ್ಣುಗಳಲ್ಲಿ ಕಪ್ಪಾದ ಹೊಳಪಿನಿಂದ ಕೂಡಿದ ಸಣ್ಣ ಬೀಜಗಳು ಇರುತ್ತವೆ.
ಅಣ್ಣೆ ಸೊಪ್ಪಿನಲ್ಲಿ ಸಾಂಬಾರು ತಂಬುಳಿಯನ್ನು ತಯಾರಿಸಿ ಸೇವಿಸುವುದು ಅಂದಿನ ಕಾಲದಿಂದಲೂ ರೂಢಿಯಲ್ಲಿ ಇದೆ. ಅಣ್ಣೆ ಸೊಪ್ಪು ಬೇರನ್ನು ಅರೆದು ಕುಡಿಸುವುದರಿಂದ ಭಂಗಿ ಸೊಪ್ಪಿನ ಸೇವನೆಯಿಂದ ಅಥವಾ ಇತರೆ ಡ್ರಗ್ಸ್ ಸೇವನೆಯಿಂದ ಉಂಟಾದ ದೋಷ ಪರಿಹಾರ ಆಗುತ್ತದೆ. ಈ ಎಲೆಯ ರಸ, ಕಷಾಯ ಅಥವಾ ಚೂರ್ಣ ಸೇವನೆಯಿಂದ ಪಿತ್ತಕೋಶ( ಲಿವರ್) ಬಲಗೊಳ್ಳುತ್ತದೆ ಹಾಗೂ ಗೊನ್ಹೊರಿಯ ರೋಗವು ವಾಸಿ ಯಾಗುತ್ತದೆ. ಈ ಗಿಡದ ಬೀಜಗಳನ್ನು ಅರೆದು ಕುಡಿದರೆ ಭೇದಿ ನಿಲ್ಲುತ್ತದೆ. ಬೀಜದ ಚೂರ್ಣ ಅಥವಾ ಬೀಜಗಳನ್ನು ಅರೆದು ಪ್ರತಿ ನಿತ್ಯ 5 ರಿಂದ 10 ಗ್ರಾಂ ನಷ್ಟು ಸೇವಿಸುವುದರಿಂದ ವೀರ್ಯ ವೃದ್ಧಿ ಯಾಗುತ್ತದೆ. ಈ ಗಿಡದ ಬೀಜವನ್ನು ಅರೆದು ಗಂಧ ಮಾಡಿಕೊಂಡು ಕಣ್ಣಿಗೆ ಕಣ್ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ರೋಗಗಳು ಮತ್ತು ಸಂಜೆ ಇರುಳುಗಣ್ಣು ವಾಸಿಯಾಗುತ್ತದೆ. ಅಣ್ಣೆ ಸೊಪ್ಪಿನಿಂದ ಮಾಡಿದ ಜ್ಯೂಸ್ ಅನ್ನು ಕುಡಿದರೆ ಕೊಲೆಸ್ಟ್ರಾಲ್, ಜಾಂಡೀಸ್, ಮಲಬದ್ಧತೆ, ಅಜೀರ್ಣ, ಹನಿಮಿಯ ಮುಂತಾದವುಗಳು ನಿವಾರಣೆ ಆಗುತ್ತದೆ.
ಅಣ್ಣೆ ಸೊಪ್ಪು / ನೀರಿನ ಪಾಲಕ್ನ ಎಲೆಗಳು ಅತ್ಯಂತ ಪೌಷ್ಠಿಕಾಂಶವನ್ನು ಹೊಂದಿದ್ದು, ಹೇರಳ ಪ್ರಮಾಣದ ವಿಟಮಿನ್ಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಅವು ಆಹಾರದ ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಎ ಮತ್ತು ವಿಟಮಿನ್ ಸಿ ಯ ಅತ್ಯುತ್ತಮ ಮೂಲಗಳಾಗಿವೆ, ಇದು ಅದರ ವಿವಿಧ ಆರೋಗ್ಯ ಪ್ರಯೋಜನಗಳಿಗೆ ಸಾಕ್ಷಿಯಾಗಿದೆ. ಆರೋಗ್ಯ ಪ್ರಯೋಜನ: ಇದರಲ್ಲಿ ಕ್ಯಾಲೋರಿಗಳು ಮತ್ತು ಕೊಬ್ಬುಗಳಲ್ಲಿ ಬಹಳ ಕಡಿಮೆ. ಇದರ ಎಲೆಗಳು ಉತ್ತಮ ಪ್ರಮಾಣದ, ಕರಗುವ ಆಹಾರದ ಫೈಬರ್ ಅನ್ನು ಹೊಂದಿರುತ್ತವೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ತೂಕ ಕಡಿಮೆ ಮಾಡಿಕೊಳ್ಳುವ ಕಾರ್ಯಕ್ರಮಗಳಲ್ಲಿ ಆಹಾರ ತಜ್ಞರಿಂದ ಶಿಫಾರಸ್ಸು ಮಾಡಲಾದ ಅತ್ಯುತ್ತಮ ತರಕಾರಿ ಮೂಲಗಳಲ್ಲಿ ಈ ಹಸಿರು ನೀರಿನ ಪಾಲಕ ಒಂದಾಗಿದೆ. ಇವುಗಳ ಸೇವನೆ ಇಂದ ರಾತ್ರಿ ಕುರುಡುತನ, ತುರಿಕೆ ಕಣ್ಣುಗಳು ಮತ್ತು ಕಣ್ಣಿನ ಹುಣ್ಣುಗಳನ್ನು ಕಡಿಮೆ ಮಾಡುತ್ತದೆ.
ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಹೃದಯ ಸ್ನಾಯುವನ್ನು ಬಲಪಡಿಸುತ್ತದೆ. ಕ್ಯಾನ್ಸರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಗ್ಯಾಸ್ಟ್ರಿಕ್ ಅಲ್ಸರ್ ಅನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಆಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ – ಎ, ವಿಟಮಿನ್ – ಸಿ, ವಿಟಮಿನ್ – ಇ, ವಿಟಮಿನ್ – ಕೆ ಪೋಷಕಾಂಶಗಳು ಹೆಚ್ಚಾಗಿ ಇರುತ್ತವೆ. ಅಲ್ಲದೆ ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ಸತು ಖನಿಜಗಳು ಅಧಿಕ ವಾಗಿ ಇರುತ್ತವೆ. ನಾಟಿ ವೈದ್ಯದಲ್ಲಿ ಅಣ್ಣೆ ಬೀಜಕ್ಕೆ ಸೊಪ್ಪಿನಷ್ಟೇ ಪ್ರಾಧಾನ್ಯತೆ ಇದೆ. ನಾಟಿ ವೈದ್ಯದಲ್ಲಿ ಕೋಲಾಣಿ ಎಂದು ಕರೆಯುವ ಅಣ್ಣೆ ಬೀಜವನ್ನು ಮೂಲವ್ಯಾಧಿ ಗುಣಪಡಿಸಲು ಬಳಸುತ್ತಾರೆ ಎನ್ನಲಾಗಿದೆ. ಅಣ್ಣೆ ಬೀಜದ ಜತೆ ನಾಲ್ಕೈದು ರೀತಿ ಬೀಜ ಮತ್ತು ಸೊಪ್ಪು ಬೆರೆಸಿ ಮಾಡುವ ಔಷಧ ಮೂಲವ್ಯಾಧಿಗೆ ರಾಮ ಬಾಣವಂತೆ. ಇಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿರುವ ಈ ಅಣ್ಣೆ ಸೊಪ್ಪು ಕೆರೆ ದಡಗಳಲ್ಲಿ, ಹೆಚ್ಚು ನೀರು ಇರುವ ಸ್ಥಳಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಆದ್ದರಿಂದ ಇದನ್ನು ಆಹಾರದಲ್ಲಿ ಬಳಸಿ ಆರೋಗ್ಯ ವನ್ನು ಉತ್ತಮವಾಗಿ ಇರಿಸಿಕೊಳ್ಳಿ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ