ಈ ಎರಡು ವಸ್ತುಗಳನ್ನು ಉಪಯೋಗಿಸಿದ್ರೆ ಸಾಕು ನಿಮ್ಮ ಹಲ್ಲುಗಳು ವಜ್ರದಂತೆ ಹೊಳೆಯುತ್ತವೆ. ಎಷ್ಟೇ ಕಲೆ ಇರಲಿ ನಿಮಿಷದಲ್ಲಿ ಮಾಯವಾಗುತ್ತೆ.

ಹಲ್ಲುಗಳು ಪಳಪಳ ಹೊಳೆಯಬೇಕು ಎಂದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ನಾವು ಮತ್ತೊಬ್ಬರ ಜೊತೆ ಮಾತನಾಡುವಾಗ ಅಥವಾ ನಗುವಾಗ ನಮ್ಮ ಹಲ್ಲುಗಳು ಹಳದಿ ಅಥವಾ ಹಲ್ಲುಗಳಲ್ಲಿ ಕಲೆಗಳು ಇದ್ದರೆ ನಾವು ಮಾತನಾಡಲು ಹಿಂಜರಿಯುತ್ತೇವೆ ಅಷ್ಟೇ ಅಲ್ಲದೆ ನಮ್ಮ ಎದುರಿಗೆ ಇರುವಂತಹವರು ನಮ್ಮ ಹಲ್ಲನ್ನು ನೋಡಿ ನಮ್ಮ ಜೊತೆ ಮಾತನಾಡಲು ಹಿಂಜರಿಯ ಬಹುದು ಆದ್ದರಿಂದ ನಮ್ಮ ಹಲ್ಲುಗಳನ್ನು ಆದಷ್ಟು ಶುದ್ಧವಾಗಿ ನಮ್ಮ ಹಲ್ಲುಗಳಲ್ಲಿ ಯಾವುದೇ ಕಲೆಗಳು ಇಲ್ಲದಂತೆ ಪಳಪಳ ಹೊಳೆಯುವ ಹಾಗೆ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಆದ್ದರಿಂದ ನಾವು ಮನೆಯಲ್ಲಿ ಇರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಹಲ್ಲುಗಳನ್ನು ಹೇಗೆ ಬಿಳಿಯಾಗಿಸಿಕೊಳ್ಳಬಹುದು ಎಂಬುವಂತಹ ಒಂದು ಮನೆಮದ್ದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.

ಹಾಗಾದರೆ ಈ ಒಂದು ಮನೆ ಮದ್ದನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಸಾಮಾಗ್ರಿಗಳು ಒಂದು ಸೋಡಾ ಮತ್ತೊಂದು ನಿಂಬೆಹಣ್ಣಿನ ರಸ ಮೊದಲಿಗೆ ಎರಡು ಚಿಟಿಕೆಯಷ್ಟು ಸೋಡವನ್ನು ಕೈಯಲ್ಲಿ ಹಾಕಿಕೊಂಡು ನಂತರ ಅದಕ್ಕೆ ಎರಡರಿಂದ ಮೂರು ಡ್ರಾಪ್ ನಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿ ನಿಮ್ಮ ಹಲ್ಲುಗಳು ಎಲ್ಲಿ ಕಲೆಯಾಗಿರುತ್ತದೆ ಅಥವಾ ಕಪ್ಪಾಗಿರುತ್ತದೆಯೋ ಅಂತಹ ಜಾಗಕ್ಕೆ ನೀವು ಮಸಾಜ್ ಮಾಡುವುದರಿಂದ ನಿಮ್ಮ ಹಲ್ಲಿನಲ್ಲಿ ಇರುವಂತಹ ಕಲೆಗಳು ಹೋಗುತ್ತದೆ. ಎಷ್ಟೇ ಹಳೆಯ ಕಲೆಗಳು ಆದರೂ ಸಹಿತ ಅದು ವೇಗವಾಗಿ ಕಡಿಮೆಯಾಗುತ್ತದೆ ಇದನ್ನು ನೀವು ಕೇವಲ ಎರಡು ದಿನಗಳು ಮಾಡಿದರೆ ಸಾಕು ನಿಮ್ಮ ಹಲ್ಲುಗಳು ಬಿಳುಪಾಗುತ್ತದೆ.

ತುಂಬಾ ಜನರು ಅವರ ಹಲ್ಲುಗಳ ಮೇಲೆ ಗಮನ ಇಟ್ಟುಕೊಂಡು ಕೇರ್ ತೆಗೆದುಕೊಳ್ಳುವುದಿಲ್ಲ ಆದ್ದರಿಂದ ಅವರ ಹಲ್ಲುಗಳು ಹಳದಿಯಾಗುತ್ತದೆ ಹಾಗೆಯೇ ಬಾಯಲ್ಲಿ ವಾಸನೆಯೂ ಸಹ ಬರುತ್ತದೆ ನಮಗೆ ಅಲ್ಲಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ನಮ್ಮ ಬಾಯಿಯನ್ನು ಎಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತೇವೆಯೋ ನಮ್ಮ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ನಾವು ಆಹಾರವನ್ನು ನಮ್ಮ ಬಾಯಿಯ ಮುಖಾಂತರ ಜಗಿದು ತಿನ್ನುವುದರಿಂದ ನಾವು ಮೊದಲು ನಮ್ಮ ಹಲ್ಲುಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ನಮ್ಮ ಹಲ್ಲುಗಳಲ್ಲಿ ಹೆಚ್ಚು ಕ್ರಿಮಿಕೀಟಗಳು ಸೇರಿಕೊಂಡಾಗ ಅದು ನಮ್ಮ ಊಟದ ಜೊತೆ ಹೊಟ್ಟೆಗೆ ಸೇರಿ ನಮಗೆ ಅನಾರೋಗ್ಯ ಸಹ ಉಂಟಾಗಬಹುದು ಆದ್ದರಿಂದ ನಮ್ಮ ಹಲ್ಲುಗಳನ್ನು ಸುಚಿತವನ್ನು ಕಾಪಾಡಿಕೊಳ್ಳಬೇಕು. ನಮ್ಮ ಹಲ್ಲುಗಳು ಹಾಳಾಗದೆ ಇರುವ ಹಾಗೆ ನೋಡಿಕೊಳ್ಳಲು ಕೇವಲ ನಮ್ಮ ಮನೆಯಲ್ಲಿ ಇರುವಂತಹ ಪದಾರ್ಥಗಳೇ ಸಾಕು.

ನಾವು ಹೆಚ್ಚಿನ ದುಬಾರಿಯಾದಂತಹ ಯಾವುದೇ ಪ್ರಾಡಕ್ಟ್ ಗಳನ್ನು ತಂದು ಉಪಯೋಗ ಮಾಡಿಕೊಂಡು ನಮ್ಮ ಹಲ್ಲುಗಳಲ್ಲಿ ಇರುವಂತಹ ಕಲೆಗಳನ್ನು ಹೋಗಲಾಡಿಸುವ ಅವಶ್ಯಕತೆ ಇಲ್ಲ, ಕೇವಲ ಸೋಡಾ ಮತ್ತೆ ನಿಂಬೆಹಣ್ಣಿನ ರಸದಿಂದ ನಮ್ಮ ಹಲ್ಲುಗಳು ಹೊಳೆಯುವ ಹಾಗೆ ಮಾಡಿಕೊಳ್ಳಬಹುದು. ನೀವು ಇದನ್ನು ಮನೆಯಲ್ಲಿ ಮಾಡದೇ ಇದ್ದಲ್ಲಿ ಆಯುರ್ವೇದ ಪ್ರೊಡಕ್ಟ್ ಗಳನ್ನು ಉಪಯೋಗಿಸಿದ್ದೇ ಆದಲ್ಲಿ ಅಲ್ಲಿಯು ಸಹ ನಿಮಗೆ ಇದೇ ರೀತಿಯಾದಂತಹ ಸಾಮಗ್ರಿಗಳನ್ನು ಉಪಯೋಗ ಮಾಡಿ ಪೇಸ್ಟ್ ಗಳನ್ನು ತಯಾರು ಮಾಡಿರುತ್ತಾರೆ ನೀವು ಅದನ್ನು ಸಹ ಉಪಯೋಗ ಮಾಡಿಕೊಳ್ಳಬಹುದು. ಕೇವಲ ಎರಡು ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಹಾಗೆಯೇ ಕಡಿಮೆ ಖರ್ಚಿನಲ್ಲಿ ಈ ರೀತಿ ಉತ್ತಮವಾದ ರೆಮಿಡಿ ತಯಾರಿಸಿ ನೀವು ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: