ಇತ್ತೀಚಿನ ದಿನಗಳಲ್ಲಿ ಹಲವಾರು ಜನರನ್ನು ಕಾಡುತ್ತಿರುವ ಸಮಸ್ಯೆಯ ಎಂದರೆ ಅದು ಬೊಜ್ಜು. ಹೌದು ಚಿಕ್ಕವಯಸ್ಸಿನಿಂದ ಹಿಡಿದು ದೊಡ್ಡವರ ತನಕ ಈ ಒಂದು ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅಲ್ಲದೆ ಹೊಟ್ಟೆಯ ಭಾಗದಲ್ಲಿ ಹೆಚ್ಚಾಗಿ ಬೊಜ್ಜು ಕಂಡುಬರುತ್ತದೆ. ನಾವು ಹೊಟ್ಟೆಯ ಬೊಜ್ಜನ್ನು ಕರಗಿಸಲು ಯಾವುದೇ ಹರಸಾಹಸ ಮಾಡಿದರೂ ಸಹ ಅದು ನಮ್ಮಿಂದ ಸಾಧ್ಯವಾಗುತ್ತಿಲ್ಲ ನಮ್ಮ ದೇಹದಲ್ಲಿ ಬೊಜ್ಜು ಶೇಖರಣೆ ಆಗಲು ನಾನಾ ಕಾರಣಗಳನ್ನು ನಾವು ನೋಡಬಹುದು. ಇತ್ತೀಚಿಗೆ ನಮ್ಮ ಜೀವನಶೈಲಿಯಲ್ಲಿ ಆಗಿರುವಂತಹ ಬದಲಾವಣೆಯಿಂದಾಗಿ ಹಾಗೆಯೇ ನಾವು ಸೇವಿಸುತ್ತಾ ಇರುವಂತಹ ಜಂಕ್ ಫುಡ್ ಗಳ ಸೇವನೆ ಹಾಗೆಯೇ ಹೊರಗಿನ ತಿಂಡಿಗಳು ಹೆಚ್ಚಾಗಿ ಸೇವಿಸುತ್ತೇವೆ, ಹೆಚ್ಚಿನ ಸ್ವೀಟ್ಸ್ ತಿನ್ನುತ್ತಾ ಇರುವುದರಿಂದ ನಮ್ಮ ದೇಹದಲ್ಲಿ ಬೇಡವಾದ ಅಂತಹ ಬೊಜ್ಜು ಶೇಖರಣೆಯಾಗುತ್ತಿದೆ. ಕೂತಲ್ಲಿಯೇ ಕೂತು ಕೆಲಸ ಮಾಡುತ್ತಿದ್ದರೂ ಸಹ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಿದೆ.
ಬೊಜ್ಜನ್ನು ಕರಗಿಸಲು ನಾವು ನಾನ ಪ್ರಯತ್ನಗಳನ್ನು ಮಾಡಿದರೂ ಸಹ ಅದು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅದಕ್ಕೋಸ್ಕರ ನಾವಿಲ್ಲಿ ಒಂದು ಮನೆಮದ್ದನ್ನು ತಿಳಿಸುತ್ತಿದ್ದೇವೆ. ಇದನ್ನು ಬಳಸಿದರೆ ನೀವು ನಿಮ್ಮ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮನೆಮದ್ದನ್ನು ಮಾಡಲು ಮುಖ್ಯವಾಗಿ ಬೇಕಾಗಿರುವುದು ಓಂ ಕಾಳು 3.5 ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ಓಂಕ ಕಾಳನ್ನು ಹಾಕಿ ಸ್ಟವ್ ಮೇಲೆ ಇಟ್ಟು ಒಂದು ಕುದಿ ಬರುವತನಕ ಕುದಿಸಿಕೊಳ್ಳಿ ನಂತರದಲ್ಲಿ ಸ್ವವ್ ಅನ್ನು ಲೋ ಪ್ಲೇಮ್ ನಲ್ಲಿ ಇಟ್ಟು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. 3.5 ಲೋಟ ನೀರು 3 ಲೋಟದಷ್ಟು ಆಗುವ ವರೆಗು ನೀರನ್ನು ಕುದಿಸಿ ಕೊಳ್ಳಬೇಕಾಗುತ್ತದೆ. ನಂತರ ನೀವು ಒಂದು ಪಾತ್ರೆಯಲ್ಲಿ ಶೋಧಿಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀವು ಒಂದು ಲೋಟ ನೀರನ್ನು ಕುಡಿಯಬೇಕು.
ನಂತರ ಉಳಿದ 2 ಲೋಟ ನೀರನ್ನು ಮಧ್ಯಾಹ್ನ ಊಟದ ನಂತರ ಒಂದು ಲೋಟ ಹಾಗೆಯೆ ರಾತ್ರಿ ಊಟದ ನಂತರ ಒಂದು ಲೋಟ ಕುಡಿಯುತ್ತಾ ಬಂದರೆ ನಿಮಗೆ ಇರುವಂತಹ ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತದೆ. ಈ ಒಂಕಾಳು ನಮ್ಮ ದೇಹದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುತ್ತದೆ ನಾವು ತಿಂದ ಆಹಾರವನ್ನು ಡೈಜೆಸ್ಟ್ ಮಾಡುವಲ್ಲಿ ಇದು ತುಂಬಾ ಸಹಾಯಕಾರಿಯಾಗಿದೆ. ಹಾಗೆಯೇ ಓಂಕಾಳಿನ ಸೇವನೆ ಮಾಡುವುದರಿಂದ ಯಾರಿಗೆಲ್ಲ ಮಲಬದ್ಧತೆಯ ಸಮಸ್ಯೆ ಇದೆ ಅಂತವರಿಗೆ ಇದು ಒಂದು ಉತ್ತಮವಾದಂತಹ ಒಂದು ಪದಾರ್ಥ ಅಥವಾ ಮನೆಮದ್ದು ಎಂದು ಹೇಳಬಹುದು. ನಾವು ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ನೀರನ್ನು ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆಯ ಬೊಜ್ಜು ಅಥವಾ ನಮ್ಮ ದೇಹದ ಬೊಜ್ಜನ್ನು ಇದು ಪರಿಣಾಮಕಾರಿಯಾಗಿ ಕರಗಲು ಸಹಾಯ ಮಾಡುತ್ತದೆ.
ಓಂಕಾಳು ಎನ್ನುವಂತಹದ್ದು ಹೀಟ್ ಪ್ರಕೃತಿಯನ್ನು ಹೊಂದಿದ್ದು ಯಾರಿಗೆಲ್ಲಾ ಬಾಡಿ ಹೀಟ್ ಇರುತ್ತದೆ ಅಂಥವರು ಈ ಒಂದು ಲೋಟ ಓಂಕಾಳಿನ ಒಂದು ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು ಕುಡಿಯುವುದರಿಂದ ಅವರಿಗೆ ಹೀಟ್ ಆಗುವುದನ್ನು ತಡೆಗಟ್ಟುತ್ತದೆ. ಈ ಒಂದು ನೀರನ್ನು ಕುಡಿದ ನಂತರ ನೀವು ಹೊರಗಡೆ ತಿಂಡಿಗಳನ್ನು ಹೆಚ್ಚಾಗಿ ತಿನ್ನಬಾರದು ಅಂದರೆ ಎಣ್ಣೆಯಲ್ಲಿ ಕರಿದಂತಹ ಆಹಾರ ಪದಾರ್ಥಗಳು, ಸ್ವೀಟ್ಸ್ ಇನ್ನಿತರ ಯಾವುದೇ ಪದಾರ್ಥಗಳನ್ನು ನೀವು ಸೇವನೆ ಮಾಡಬಾರದು. ಮನೆಯಲ್ಲಿ ಆರೋಗ್ಯಕರ ಆಹಾರವನ್ನು ಮಾಡಿ ಹೊಟ್ಟೆ ತುಂಬಾ ಸೇವಿಸಿದರು ಸಹ ನಿಮಗೆ ಬೊಜ್ಜು ಹೆಚ್ಚಾಗುವುದಿಲ್ಲ. ಆದರೆ ಎಣ್ಣೆಯಲ್ಲಿ ಕರಿದ ಅಥವಾ ಸ್ವೀಟ್ಸ್ ಗಳನ್ನು ತಿನ್ನುವುದರಿಂದ ನಿಮ್ಮ ಬೊಜ್ಜು ಕರಗುವುದಿಲ್ಲ ಇನ್ನೂ ಜಾಸ್ತಿಯಾಗುತ್ತದೆ. ಇದರ ಜೊತೆಯಲ್ಲಿ ನೀವು ಒಂದು ದಿನಕ್ಜೆ 3 ರಿಂದ 4 ಲೀಟರ್ ನೀರನ್ನು ಕುಡಿಯಬೇಕು.
ನೀವು ಹೆಚ್ಚು ಹೆಚ್ಚು ನೀರು ಕುಡಿದಷ್ಟು ನೀವು ತಿಂದ ಆಹಾರ ಅತಿವೇಗವಾಗಿ ಡೈಜೆಸ್ಟ್ ಆಗುತ್ತದೆ ಹಾಗೆಯೇ ನೀವು ಸ್ವಲ್ಪವಾದರೂ ದಿನದಲ್ಲಿ ವ್ಯಾಯಾಮ ಮಾಡಬೇಕು ಹೀಗಿದ್ದರೆ ಬೊಜ್ಜು ಕಡಿಮೆಯಾಗುತ್ತಾ ಬರುತ್ತದೆ. ಮನೆಯಲ್ಲಿ ಹಣ್ಣು-ತರಕಾರಿ ರೀತಿಯಾದಂತಹ ಒಂದು ಆರೋಗ್ಯಕರವಾದ ನೈಸರ್ಗಿಕ ಆಹಾರ ಪದಾರ್ಥವನ್ನು ಅಭ್ಯಾಸ ಮಾಡಿಕೊಳ್ಳಬೇಕು. ದಿನಪೂರ್ತಿ ಒಂದೇ ಕಡೆಯಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿರುವರಿಗೆ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಅದ್ದರಿಂದ ಅಂತಹವರು ಸ್ವಲ್ಪ ಬಿಡುವಿನ ಸಮಯದಲ್ಲಿ ವಾಕಿಂಗ್ ಮಾಡುವಂತಹ ಅಭ್ಯಾಸವನ್ನು ಮಾಡಿಕೊಳ್ಳಬೇಕು. ನೀವು ಬೆಳಗ್ಗೆ ಎದ್ದ ತಕ್ಷಣ ಸ್ವಲ್ಪವಾದರು ವ್ಯಾಯಾಮ ಮಾಡಿದರೆ ನಿಮ್ಮ ಮನಸ್ಸಿಗೆ ಸ್ವಲ್ಪ ಸಮಾಧಾನವಿರುತ್ತದೆ ಹಾಗೆಯೇ ನಿಮ್ಮ ದೇಹವು ಸ್ವಲ್ಪ ಹಗುರವಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.