ಮನುಷ್ಯನಿಗೆ ಕಾಡುವ ಕಾಯಿಲೆಗಳು ಅನೇಕ. ಅದರಲ್ಲಿ ಕೆಲವು ಕಾಯಿಲೆಗಳು ತಿಳಿಯದೆ ದಾಳಿ ಮಾಡಿ ಬಿಡುತ್ತವೆ. ಅಂತಹ ಕಾಯಿಲೆಗಳಲ್ಲಿ ಲಕ್ವ ಅಥವಾ ಪಾರ್ಶ್ವವಾಯು ಎನ್ನುವುದು ಕೂಡ ಒಂದು. ಈ ಪಾರ್ಶ್ವವಾಯು ಬರುವುದನ್ನು ತಿಳಿಯುವುದು ಸ್ವಲ್ಪ ಕಷ್ಟ.ದೇಹದಲ್ಲಿ ರಕ್ತದ ಒತ್ತಡ ಹೆಚ್ಚಾದಾಗ ಪಾರ್ಶ್ವವಾಯು ಪೀಡಿತ ರಾಗುತ್ತಾರೆ ಎಂದು ಹೇಳುತ್ತಾರೆ. ದೇಹದ ಬಲಭಾಗದ ಕಡೆ ರಕ್ತ ಸಂಚಾರ ಹೆಚ್ಚಾದಾಗ ಬಲ ಭಾಗಕ್ಕೆ, ಹಾಗೂ ದೇಹದಲ್ಲಿ ಎಡಭಾಗದಲ್ಲಿ ರಕ್ತಸಂಚಾರ ಹೆಚ್ಚಾದಾಗ ಎಡ ಭಾಗಕ್ಕೆ ಈ ಲಕ್ವ ಎನ್ನುವುದು ಹೊಡೆಯುತ್ತದೆ. ಮೆದುಳಿನಲ್ಲಿ ರಕ್ತ ಸಂಚಾರ ಕಡಿಮೆಯಾಗಿ ಮೆದುಳಿನ ಕಾರ್ಯ ಶೀಘ್ರವಾಗಿ ಕುಂಠಿತವಾಗುವುದನ್ನು ಮೆದುಳು ಲಕ್ವ ಎನ್ನುತ್ತಾರೆ. ಹಾಗೂ ಇದು ರಕ್ತದ ಕೊರತೆಯಿಂದಲೂ ಆಗಬಹುದು ಅಥವಾ ರಕ್ತಸ್ರಾವ ಮತ್ತು ರಕ್ತ ಸಂಚಾರದ ಅಡೆತಡೆಗಳಿಂದಲೂ ಆಗಬಹುದು ಎಂದೂ ಸಹ ಹೇಳುತ್ತಾರೆ.
ಯಾವುದಾದರೂ ವ್ಯಕ್ತಿಯು ಈ ಕಾಯಿಲೆಗೆ ತುತ್ತಾದಾಗ ಅವರ ಕುಟುಂಬದವರು ತಕ್ಷಣವೇ ಕೆಲವು ಚಿಕಿತ್ಸೆ ಗಳನ್ನು ಮಾಡುವುದರಿಂದ ಲಕ್ವ ಹೊಡೆಯದಂತೆ ತಡೆಗಟ್ಟಬಹುದು. ಏನೆಂದರೆ ವ್ಯಕ್ತಿಗೆ ಲಕ್ವಾ ಹೊಡೆದ ತಕ್ಷಣ ಶುದ್ಧವಾದ ತೆಂಗಿನ ಎಣ್ಣೆಯನ್ನು 100ml ಅಷ್ಟು ವ್ಯಕ್ತಿಗೆ ಕುಡಿಸಿ ನಂತರ 100ml ಬಿಸಿ ನೀರನ್ನು ಕುಡಿಸುವುದರಿಂದ ಲಕ್ವ ರಿವರ್ಸ್ ಆಗುವಂತೆ ಮಾಡಿ ವ್ಯಕ್ತಿಯನ್ನು ಅನಾಹುತದಿಂದ ತಪ್ಪಿಸಬಹುದು. ಪ್ರತಿದಿನವೂ ಊಟದ ನಂತರ ಎರಡು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಪ್ಯಾರಲಿಸಿಸ್ ಹೊಡೆಯುವ ಭಯ ಇರುವುದೇ ಇಲ್ಲ ಎನ್ನುತ್ತಾರೆ ಆಯುರ್ವೇದ ತಜ್ಞರು. ಹಾಗೂ ಪಾರ್ಶ್ವವಾಯು ಪೀಡಿತರಿಗೆ ಬೆಳ್ಳುಳ್ಳಿಯ ಎಣ್ಣೆಯ ಮಸಾಜ್ ಮಾಡುವುದು ಅಥವಾ ಬೆಳ್ಳುಳ್ಳಿಯನ್ನು ಜಜ್ಜಿ ಲೇಪನ ಮಾಡುವುದರಿಂದ ಕೂಡ ಈಗಾಗಲೇ ಲಕ್ವ ಹೊಡೆದಿರುವುದು ಗುಣವಾಗುತ್ತ ಬರುತ್ತದೆ. ನಾವು ಪ್ರತಿನಿತ್ಯವೂ ದೇಹಕ್ಕೆ ಸ್ನಾನವನ್ನು ಮಾಡುತ್ತೇವೆ ಆದರೆ ಆಯುರ್ವೇದದ ಪ್ರಕಾರ ಕನಿಷ್ಠ ಎರಡು ದಿನಗಳಿಗೊಮ್ಮೆಯಾದರೂ ಚೆನ್ನಾಗಿ ಎಣ್ಣೆ ಮೆಸೇಜ್ ಮಾಡಿ ಸ್ನಾನ ಮಾಡುವುದರಿಂದ ಕೂಡ ಪಾರ್ಶ್ವವಾಯು ಆಗದಂತೆ ನೋಡಿಕೊಳ್ಳಬಹುದು.
ಹಾಗೂ ಯಾವಾಗಲೂ ಕೈಕಾಲುಗಳನ್ನು ಸಡಿಲವಾಗಿ ಬಿಡಬಾರದು. ಸುಖಾಸನದಲ್ಲಿ ಕುಳಿತುಕೊಳ್ಳುವುದು ಹಾಗೂ ಕೈಕಾಲುಗಳನ್ನು ಯಾವಾಗಲೂ ದುಂಡಾಗಿ ಇಟ್ಟುಕೊಂಡು ಮಲಗುವ ಅಭ್ಯಾಸ ಮಾಡಿಕೊಳ್ಳುವುದರಿಂದ ರಕ್ತದೊತ್ತಡದಂತಹ ಸಮಸ್ಯೆಗಳು ಬರುವುದಿಲ್ಲ. ಹೀಗಾಗಿ ಸ್ಟ್ರೋಕ್ ಆಗುವ ಸಾಧ್ಯತೆಗಳು ಕಡಿಮೆ. ಹಾಗೂ ಸ್ಟ್ರೋಕ್ ಆದವರಿಗೆ ಪ್ರಾಣಕ್ಕೆ ಹಾನಿಯಾಗುವಂತಹ ಸಾಧ್ಯತೆಗಳು ಇರುತ್ತದೆ. ಆದರೆ ಅದಕ್ಕೆ ಎರಡು ಬಾರಿ ಮಾತ್ರ ಅವಕಾಶವಿರುತ್ತದೆ. ಮೂರನೇ ಬಾರಿ ಏನಾದರೂ ಸ್ಟ್ರೋಕ್ ಅಟ್ಯಾಕ್ ಆದರೆ ಪ್ರಾಣಪಾಯ ಖಂಡಿತ ಅದರಿಂದ ಮೊದಲನೇ ಅಥವಾ ಎರಡನೇ ಬಾರಿಯೇ ಇದನ್ನು ಗುಣ ಪಡಿಸಿಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ಉತ್ತಮ ಜೀವನ ಅಭ್ಯಾಸ ಹಾಗೂ ಪ್ರತಿನಿತ್ಯವೂ ಯೋಗ ವ್ಯಾಯಾಮ ಇವುಗಳನ್ನು ಮಾಡುವುದರಿಂದ ಕೂಡ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಸ್ಟ್ರೋಕ್ ಅಲ್ಲದೆ ಇದೇ ತರಹದ ಹಲವು ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದು. ಮಧುಮೇಹ, ಅಧಿಕ ರಕ್ತದ ಒತ್ತಡ, ಧೂಮಪಾನ, ಅಧಿಕ ಬೊಜ್ಜು, ಕೊಲೆಸ್ಟ್ರಾಲ್ ಹಾಗೂ ಹೃದ್ರೋಗಗಳು ಪಾರ್ಶ್ವವಾಯುಗೆ ಮುಖ್ಯ ಕಾರಣವಾಗಬಹುದು.
ಇವುಗಳನ್ನು ಯಾವಾಗಲೂ ಸಮತೋಲನದಲ್ಲಿ ಇಟ್ಟುಕೊಳ್ಳುವುದರಿಂದ ಕೂಡ ಸ್ಟ್ರೋಕ್ ಆಗದಂತೆ ತಡೆಯಬಹುದು. ಈ ಪಾರ್ಶ್ವವಾಯು ಕಾಡುವ ಮುಂಚೆ ಪ್ರಮುಖವಾಗಿ ಎಂಟು ಸೂಚನೆಗಳನ್ನು ಕೊಡುತ್ತದೆ ಅದು ಯಾವುವೆಂದರೆ ಮುಖ ಇಳಿ ಬೀಳುವುದು ಅಂದರೆ ಮುಖ ಒಂದು ಕಡೆ ಸಂಪೂರ್ಣ ಇಳಿಬಿಟ್ಟ ಹಾಗೆ ಅಥವಾ ಒಂದು ಕಡೆ ಮಾತ್ರ ಜೋಮು ಹಿಡಿಯುವ ಹಾಗೆ ಆಗಿದ್ದರೆ ನೀವು ತಕ್ಷಣ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಆಸ್ಪತ್ರೆಗೆ ಹೋಗುವವರೆಗೂ ವ್ಯಕ್ತಿಗೆ ನಗುವಂತೆ ನೀವು ಹೇಳಬೇಕು ಹಾಗೂ ಆದಷ್ಟು ಬೇಗನೆ ಆಸ್ಪತ್ರೆಗೆ ಸಾಗಿಸಬೇಕು. ಇದೇ ರೀತಿಯ ಇನ್ನೊಂದು ಲಕ್ಷಣವೆಂದರೆ ತೋಳುಗಳನ್ನು ನಿಶ್ಯಕ್ತಿ ಆಗುವುದು. ಪಾರ್ಶ್ವವಾಯು ಆಗುವ ಸೂಚನೆಗಳಿದ್ದವು ಮೊದಲು ಅವರ ತೋಳುಗಳಲ್ಲಿ ಮರಗಟ್ಟಿದ ಅನುಭವ ಆಗುತ್ತದೆ. ನೀವು ಅವರನ್ನು ತಕ್ಷಣ ಕೈಮೇಲೆ ಎತ್ತುವಂತೆ ಹೇಳಬೇಕು ಪಾರ್ಶ್ವವಾಯು ಪೀಡಿತರಲ್ಲಿ ತಕ್ಷಣಾ ಕೈಕೆಳಗೆ ಇಳಿ ಬಿದ್ದುಬಿಡುತ್ತದೆ.
ಪಾರ್ಶ್ವವಾಯು ಪೀಡಿತರಿಗೆ ಮಾತು ತೊದಲುತ್ತದೆ.ಸ್ಟ್ರೋಕ್ ಆಗುವ ಕೆಲವು ಸಮಯದ ಮುಂಚಿನಿಂದಲೇ ಈ ಲಕ್ಷಣ ಕಂಡು ಬರುತ್ತದೆ. ತಲೆನೋವು ಬರುವುದು, ತಲೆತಿರುಗಿ ದಂತಾಗಿ ಸಮತೋಲನ ತಪ್ಪುವುದು, ದೃಷ್ಟಿ ದುರ್ಬಲತೆ ಕಾಡುವುದು ಹಾಗೂ ಇದರೆಲ್ಲದರ ಜೊತೆ ನೆನಪಿನ ಶಕ್ತಿಯನ್ನು ಕೂಡ ಕಳೆದು ಕೊಳ್ಳುತ್ತಾರೆ. ಎಲ್ಲವೂ ಲಕ್ವ ಹೊಡೆಯುವ ಮುನ್ನ ಆ ವ್ಯಕ್ತಿಗೆ ಕೊಡುವ ಸೂಚನೆಗಳಾಗಿವೆ. ಈ ಸೂಚನೆಗಳು ಹೆಚ್ಚಾಗಿ ಕಂಡು ಬಂದಲ್ಲಿ ನಿರ್ಲಕ್ಷ್ಯ ಮಾಡದೆ ತಕ್ಷಣವೇ ವೈದ್ಯರ ಬಳಿ ಹೋಗುವುದು ತುಂಬಾ ಒಳ್ಳೆಯದು.