ಸ್ನೇಹಿತರೆ ಇಂದು ನಾವು ವಿಶೇಷವಾದ ಪುಟರೊಂದಿಗೆ ಹಾಗೂ ದಿನನಿತ್ಯ ಬಳಸುವ ಹೂವನ್ನು ಯಾವುದೇ ತರದ ಫ್ರಿಡ್ಜ್ ಅನ್ನು ಬಳಸದೆ ಹೇಗೆ ಫ್ರೆಶ್ ಆಗಿ ಇಡುವುದು ಎಂದು ತಿಳಿಯೋಣ. ಅನಾದಿ ಕಾಲದಿಂದಲೂ ದೇವರನ್ನು ಪೂಜಿಸಲು ಹೂವನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲೊಂದೇ ಅಲ್ಲ, ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲೂ ಪೂಜೆಗೆ ಹೂವು ಬಳಸುತ್ತಾರೆ. ದೇವರ ಮೂರ್ತಿಗಳಿಲ್ಲದ ಧರ್ಮಗಳಲ್ಲೂ ಪೂಜೆಯಲ್ಲಿ ಹೂವು ಮಾತ್ರ ಇದ್ದೇ ಇರುತ್ತದೆ.
ಹೂವುಗಳು ಪ್ರಕೃತಿಯಲ್ಲಿ ಸಿಗುವ ಅತ್ಯಂತ ಸುಂದರ ವಸ್ತುಗಳು. ದೇವರನ್ನು ಮೆಚ್ಚಿಸಲು ಉತ್ಕೃಷ್ಟವಾದದ್ದನ್ನೇ ಆತನಿಗೆ ನೀಡಬೇಕಲ್ಲವೆ? ಎಲ್ಲ ಧರ್ಮಗಳೂ ಪ್ರಕೃತಿಯನ್ನು ದೇವರೆಂದೇ ಪರಿಗಣಿಸುವುದರಿಂದ, ಪ್ರಕೃತಿದತ್ತವಾದ ಪುಷ್ಪಗಳು ದೇವರನ್ನು ಆರ್ಕಸುತ್ತವೆ ಎಂದೂ ನಂಬುತ್ತೇವೆ. ಪೂಜೆಯ ವೇಳೆ ಭೂಮಿಗಿಳಿದು ಬರುವ ದೇವತೆಗಳು ಯಾವ ಸ್ಥಳದಿಂದ ಸುವಾಸನೆ ಬರುತ್ತಿದೆಯೋ, ಯಾವ ಸ್ಥಳ ಅತ್ಯಂತ ಸುಂದರವಾಗಿದೆಯೋ ಅಲ್ಲಿಗೇ ಬರುತ್ತಾರೆ ಎಂಬ ನಂಬಿಕೆ ಆಸ್ತಿಕರಲ್ಲಿದೆ. ಹೂವುಗಳನ್ನು ಎಲ್ಲಿ ಬಳಸಿದರೂ ಆ ಸ್ಥಳ ಸುಂದರವಾಗಿಯೇ ಕಾಣಿಸುತ್ತದೆ ಮತ್ತು ಅಲ್ಲಿ ಸುವಾಸನೆ ಹರಡಿರುತ್ತದೆ.
ಒಟ್ಟಿನಲ್ಲಿ ಪೂಜಾಸ್ಥಳ ಪರಿಮಳದಿಂದ ಕೂಡಿರಬೇಕು, ಭಕ್ತನ ಮನಸ್ಸಿನಲ್ಲಿ ಏಕಾಗ್ರತೆ ಮೂಡಿಸಬೇಕು, ಮನಸ್ಸನ್ನು ಪ್ರಶಾಂತಗೊಳಿಸಬೇಕು ಮತ್ತು ಬೇಡದ ಯೋಚನೆಗಳನ್ನು ಮನಸ್ಸಿನಿಂದ ಹೊರಹಾಕಬೇಕು ಎಂಬುದು ಪೂಜೆಗೆ ಹೂವುಗಳನ್ನು ಬಳಸುವುದಕ್ಕೆ ಮುಖ್ಯ ಕಾರಣ. ವಾತಾವರಣದಲ್ಲಿರುವ ಮಾಲಿನ್ಯವನ್ನು ಹೀರಿಕೊಳ್ಳುವ ಶಕ್ತಿಯೂ ಕೆಲವು ಹೂವುಗಳಿಗೆ ಇದೆ. ಸುಗಂಧಿತ ವಸ್ತುಗಳು ಧನಾತ್ಮಕ ಶಕ್ತಿಯನ್ನು ಆರ್ಕಸುತ್ತವೆ ಎಂದು ವಿಜ್ಞಾನವೂ ಹೇಳುತ್ತದೆ. ಇನ್ನು ಇಂತಹ ಹೂಗಳನ್ನು ಫ್ರಿಡ್ಜ್ ನಲ್ಲಿಡದೇ ಹೇಗೆ ಫ್ರೆಶ್ ಆಗಿ ಇಡುವುದು ಎಂದು, ಬನ್ನಿ ಸ್ನೇಹಿತರೆ ಇದನ್ನು ತಿಳಿಯೋಣ.
ಇನ್ನು ಇತ್ತೀಚಿನ ದಿನಗಳಲ್ಲಿ ಹೂವಿನ ಬೆಲೆಯನ್ನು ಗಗನಕ್ಕೇರಿದೆ ಕಡಿಮೆ ಸಿಕ್ಕಾಗ ಶೇಖರಣೆ ಮಾಡೋಣ ಎಂದರೆ ಬಾಡಿ ಹೋಗುತ್ತದೆ, ಅಂತಹ ಸಮಸ್ಯೆಗೆ ಇಂದು ಉತ್ತಮವಾದ ಸಲಹೆಯನ್ನು ನಿಮಗೆ ತಿಳಿಸುತ್ತೇವೆ. ಮೊದಲನೆಯದಾಗಿ ಹೂವನ್ನು ಖರೀದಿಸಿದ ನಂತರ ಒಂದು ಒಣ ಬಟ್ಟೆಯ ಮೇಲೆ ಹರಡಬೇಕು ನಂತರ ಒಂದು ಡಬ್ಬಕ್ಕೆ ನ್ಯೂಸ್ ಪೇಪರ್ ಅಥವಾ ನಾವು ಅಂಗಡಿಯಿಂದ ತಂದಂತಹ ಪೇಪರ್ ಬ್ಯಾಗ್ ಕತ್ತರಿಸಿ ಕೆಳಗೆ ಹಾಕಬೇಕು ನಂತರ ಹೂವನ್ನು ಅದಕ್ಕೆ ಹಾಕಬೇಕು ಇದರ ಮೇಲೆ ವಿಶೇಷವಾದ ವಸ್ತುವನ್ನು ಹಾಕುತ್ತಿದ್ದೇವೆ ಅದೇ ಅಕ್ಕಿ. ಅಕ್ಕಿಯನ್ನು ಆ ಡಬ್ಬಕ್ಕೆ ಹಾಕುವುದರಿಂದ ತೇವಾಂಶವನ್ನು ಹೀರಿಕೊಂಡು ತಿಂಗಳವರೆಗೂ ಹೂವನ್ನು ತಾಜಾ ಆಗಿ ಕಾಣಲು ಸಹಾಯ ಮಾಡುತ್ತದೆ.
ಇನ್ನು ಕೆಲವರು ಪ್ಲಾಸ್ಟಿಕ್ ಕವರನ್ನು ಕೂಡ ಬಳಸುತ್ತಾರೆ ಅವರು ಒಂದು ಪ್ಲಾಸ್ಟಿಕ್ ಕವರ್ ಗೆ ಹೂವನ್ನು ಹಾಕುತ್ತಾರೆ ಆಗ ಅದಕ್ಕೆ ಒಂದು ಚಮಚ ಅಕ್ಕಿಯನ್ನು ಹಾಕಿ ಗಾಳಿಯನ್ನು ಹೊರಹಾಕಿ ಕವರ್ನನ್ನು ಮಡಚಿ ಫ್ರಿಡ್ಜ್ ನಲ್ಲಿ ಇಡಬೇಕು ಹೀಗೆ ಮಾಡಿದರೆ ಹೂವು ಕೆಡುವುದಿಲ್ಲ. ಇದು ಫ್ರಿಡ್ಜ್ ಇರುವವರಿಗೆ ಹೇಳುತ್ತಿರುವುದು, ಇನ್ನು ಫ್ರಿಡ್ಜ್ ಇಲ್ಲದೆ ಇರುವವರು ಹೀಗೆ ಮಾಡಿ. ಒಂದು ಬಟ್ಟೆಯನ್ನು ತೇವ ಮಾಡಿಕೊಂಡು, ಒದ್ದೆಯಾದ ಬಟ್ಟೆಯ ಮೇಲೆ ಹೂವನ್ನು ಹರಡಬೇಕು, ಅದನ್ನು ಬಿಗಿಯಾಗಿ ಸುತ್ತಬಾರದು, ಬಟ್ಟೆಯನ್ನು ಸುತ್ತಿದ ನಂತರ ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿಕೊಳ್ಳಬೇಕು.
ನಂತರ ಆ ಪಾತ್ರೆಯ ಮೇಲೆ ಗಾಳಿ ಆಡುವಂತಹ ಪಾತ್ರೆಯನ್ನು ಇಟ್ಟು ಆ ಪಾತ್ರೆಯು ನೀರು ತಾಕದಂತೆ ಇಡಬೇಕು ಅದರ ಮೇಲೆ ಹೂವನ್ನು ಸುತ್ತಿರುವಂತಹ ಬಟ್ಟೆಯನ್ನು ಇಡಬೇಕು ಇನ್ನು ಇಲ್ಲಿ ಬಳಸಿರುವಂತಹ ನೀರನ್ನು ಮೂರರಿಂದ ನಾಲ್ಕು ದಿವಸಕ್ಕೇ ಒಮ್ಮೆ ಬದಲಾಯಿಸಬೇಕು ಹಾಗೂ ಬಟ್ಟೆಯನ್ನು ಕೂಡ ಮೂರರಿಂದ ನಾಲ್ಕು ದಿನಕ್ಕೆ ಬದಲಾಯಿಸಿದರೆ ತಿಂಗಳಾದರೂ ಹೂ ಕೆಡುವುದಿಲ್ಲ ಸ್ನೇಹಿತರೆ ಇಂದು ಹೂವನ್ನು ಕೆಡದಂತೆ ನೋಡಿಕೊಳ್ಳುವ ಬಗ್ಗೆ ನಿಮ್ಮೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇವೆ.