ಒಂದೇ ಸೆಕೆಂಡ್ ನಲ್ಲಿ ತಾಮ್ರದ ಪಾತ್ರೆಗಳನ್ನು ಪಳಪಳ ಹೊಳೆಯುವಂತೆ ಮಾಡುವ ಜಾದು ನೀರು ಇದು.! ಇನ್ನು ದೇವರ ಸಾಮಾಗ್ರಿಗಳನ್ನು ತೊಳೆಯಲು ಕಷ್ಟಪಡಬೇಕಿಲ್ಲ.

 

WhatsApp Group Join Now
Telegram Group Join Now

ಸ್ನೇಹಿತರೆ ನಮ್ಮ ಜನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸ್ಟೀಲ್ ಹಾಗೂ ಪ್ಲಾಸ್ಟಿಕ್ಗಳನ್ನು ಬಳಸುತ್ತಿದ್ದಾರೆ, ಆದರೆ ನಮ್ಮ ಹಿಂದಿನ ಕಾಲದ ಹಿರಿಯರು ತಾಮ್ರ ಮತ್ತು ಇತ್ತಾಳೆಯನ್ನು ಹೆಚ್ಚಾಗಿ ಬಳಸುತ್ತಿದ್ದರು ಅದಕ್ಕೆ ವೈಜ್ಞಾನಿಕ ಕಾರಣಗಳು ಇವೆ. ತಾಮ್ರವು ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳಲ್ಲಿ ಒಂದಾಗಿದೆ, ಇದು ಹಲವಾರು ಆರೋಗ್ಯಕರ ಪ್ರಯೋಜನ ಗಳನ್ನು ನೀಡುತ್ತದೆ. ಅಲ್ಲದೇ ಆಹಾರದಿಂದ ದೇಹಕ್ಕೆ ಅಗತ್ಯವಿರುವ ಶಕ್ತಿಯ ಉತ್ಪಾದನೆ ಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಧಾರ್ಮಿಕ ಗ್ರಂಥಗಳು ಮತ್ತು ಜ್ಯೋತಿಷ್ಯದಲ್ಲಿಯೂ ಸಹ, ಹಿತ್ತಾಳೆಯ ಪಾತ್ರೆಗಳನ್ನು ಪೂಜೆಗೆ ಅತ್ಯುತ್ತಮವೆಂದು ವಿವರಿಸಲಾಗಿದೆ.

ಹಿತ್ತಾಳೆಯ ಪಾತ್ರೆಯಲ್ಲಿ ಪೂಜಿಸುವುದರಿಂದ ದೇವತೆಗಳು ಸಂತೋಷಪಡುತ್ತಾರೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹಿತ್ತಾಳೆಯ ಪಾತ್ರೆಗಳ ಬಣ್ಣವು ಹಳದಿ ಬಣ್ಣವು ಯಾವುದೇ ಧಾರ್ಮಿಕ ಅಥವಾ ಮಂಗಳಕರ ಆಚರಣೆಗಳಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಾವು ಪೂಜೆ ಅಥವಾ ಧಾರ್ಮಿಕ ಆಚರಣೆಗಳ ಇತೆ ಲೋಹದ ಪಾತ್ರೆಗಳಿಗೆ ಬದಲಾಗಿ ಹಿತ್ತಾಳೆ ಪಾತ್ರೆಗಳನ್ನು ಹೆಚ್ಚಾಗಿ ಬಳಸುವುದು ಒಳಿತು ಎನ್ನಲಾಗಿದೆ.

ಇನ್ನು ಈ ಹಿತ್ತಾಳೆ ಹಾಗೂ ತಾಮ್ರದ ಪಾತ್ರಗಳನ್ನು ಬರಬರುತ್ತ ಬಳಸುವುದೇ ಕಡಿಮೆಯಾಗಿದೆ ಇದರ ಜೊತೆಗೆ ಅದರ ಬೆಲೆಯು ಕೂಡ ಹೆಚ್ಚಾಗಿದೆ ಹಾಗಾಗಿ ನಮ್ಮ ಜನತೆಯು ತಾಮ್ರ ಹಾಗೂ ಇದ್ದಾಳ ಪಾತ್ರೆಯನ್ನು ಬಳಸೋದೆ ಕಡಿಮೆಯಾಗಿದೆ ಇನ್ನು ದೇವರ ಸಾಮಗ್ರಿಗಳಲ್ಲಿ ಪಾತ್ರೆಯನ್ನು ಬಳಸುತ್ತೇವೆ. ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ವಿಶೇಷವಾದ ವಿಷಯವನ್ನು ಹಂಚಿಕೊಳ್ಳುತ್ತಿದ್ದೇವೆ. ಹೌದು ಇಂದು ನಾವು ದಿನನಿತ್ಯ ಬಳಸುತ್ತಿರುವ ತಾಮ್ರ ಹಾಗೂ ಇತ್ತಾಳೆ ಪಾತ್ರೆಯನ್ನೇ ಆಗಬಹುದು ಅಥವಾ ದೇವರ ಸಾಮಾಗ್ರಿಗಳು ಆಗಬಹುದು ಇವುಗಳನ್ನು ಸುಲಭವಾಗಿ ಸ್ವಚ್ಛಗೊಳಿಸುವ ವಿಧಾನದ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ

ತಾಮ್ರದ ಹಾಗೂ ಇತ್ತಾಳೆಯ ಪಾತ್ರ ಮೇಲೆ ಹಾಕಿದರೆ ಸಾಕು ಕೇವಲ ನಿಮಿಷಗಳಲ್ಲಿ ಉಜ್ಜದೆ ಬೆಳ್ಳಗಾಗುತ್ತದೆ. ಸ್ನೇಹಿತರೆ ನಾವು ಪೂಜೆ ಮಾಡುವ ಸಮಯದಲ್ಲಿ ಅರ್ಧದಷ್ಟು ಸಮಯ ಪಾತ್ರಗಳನ್ನು ತೊಳೆಯುವುದರಲ್ಲಿ ಕಳೆದು ಹೋಗುತ್ತದೆ. ಕೇವಲ ನಿಮಿಷಗಳಲ್ಲದೆ ಕ್ಷಣಗಳಲ್ಲಿ ಪಾತ್ರಗಳನ್ನು ಬಿಳುಪಾಗಿಸಲು ಅಥವಾ ಸ್ವಚ್ಛಗೊಳಿಸಲು ಬೇಕಾಗಿರುವ ಸಾಮಗ್ರಿಗಳ ಬಗ್ಗೆ ತಕ್ಷಣವೇ ನೋಡೋಣ ಮೊದಲನೇದಾಗಿ ಸಿಟ್ರಿಕ್ ಆಸಿಡ್ ಪೌಡರನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಪೌಡರ್ ಎಲ್ಲ ಗಿರಣಿ ಅಂಗಡಿಗಳಲ್ಲೂ ದೊರೆಯುತ್ತದೆ ಇದು ಸುಮಾರು 20 ರೂಪಾಯಿಗೆ 50 ಗ್ರಾಂ ಅಷ್ಟು ದೊರೆಯಬಹುದು ಇದು ನೋಡಲು ಸಕ್ಕರೆಯಂತೆ ಕಂಡರು ನಿಂಬೆಹಣ್ಣಿನ ಸತ್ವವನ್ನು ಹೊಂದಿರುತ್ತದೆ.

ಇದನ್ನು ನಾವು ಪಾತ್ರಗಳು ಎಷ್ಟು ಕೊಳೆಯಾಗಿದೆ ಎಂದು ನೋಡಿ ಅದರ ಮೇಲೆ ಹೆಚ್ಚಾಗಿ ಬಳಸಬಹುದು ಈಗ ನಾವು ಒಂದು ಚಮಚದಷ್ಟು ಪೌಡರನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು ನಂತರ ಅದಕ್ಕೆ ಅರ್ಧ ಹೋಳು ನಿಂಬೆಹಣ್ಣನ್ನು ಹಿಂಡಿಕೊಂಡು ಚೆನ್ನಾಗಿ ಕರಗಿಸಿಕೊಳ್ಳಬೇಕು ನಂತರ ಅರ್ಧ ಚಮಚದಷ್ಟು ಉಪ್ಪನ್ನು ಬಳಸಿ ಇದಕ್ಕೆ ಎರಡರಿಂದ ಮೂರು ಸ್ಪೂನಿನಷ್ಟು ನೀರನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣ ವಾಗಿರುವ ಜಾದು ನೀರಿನಿಂದ ತಾಮ್ರ ಹಾಗೂ ಇದ್ದಾಳ ಪಾತ್ರೆಯನ್ನು ಕ್ಷಣಮಾತ್ರದಲ್ಲೇ ಬಿಡಪಾಲಿಸಬಹುದು ಮೊದಲನೆಯದಾಗಿ ದ್ರವ್ಯವನ್ನು ಬಳಸಿ ಸ್ವಲ್ಪ ತೊಳೆದರೆ ಸಾಕು.

ಆದರೆ ನೀರು ಬಳಸಿರುವ ಕಾರಣ ನೀರಿನ ಕಲೆಗಳು ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಕ್ಕಾಗಿ ಸ್ವಲ್ಪ ಸೋಪಿನ ಪುಡಿಯನ್ನು ಅಥವಾ ಸೋಪನ್ನು ಬಳಸಿ ತೊಳೆದರೆ ಇನ್ನೂ ಸ್ವಚ್ಛವಾಗಿ ಕಾಣುತ್ತದೆ ನಂತರ ಸ್ವಚ್ಛವಾದ ಮೇಲೆ ಮುಖ್ಯವಾದ ವಿಷಯವೆಂದರೆ ಒಂದು ಒಣಬಟ್ಟೆಯನ್ನು ತೆಗೆದುಕೊಂಡು ತಾಮ್ರದ ಹಾಗೂ ಇತ್ತಾಳೆ ಪಾತ್ರೆಯನ್ನು ಒರೆಸಿದರೆ ಕಲೆಗಳು ತುಂಬಾ ದಿನದವರೆಗೆ ಬರುವುದಿಲ್ಲ ಹಾಗೂ ಸ್ವಚ್ಛವಾಗಿ ಕಾಂತಿಯುತವಾಗಿ ಪಳಪಳ ಎಂದು ಕಾಣುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now