ಕುತ್ತಿಗೆ ಅಥವಾ ಮುಖದ ಯಾವುದೇ ಭಾಗದ ಮೇಲೆ ನರುಳ್ಳೆಗಳು ಇದ್ದರೆ, ಈ ಮನೆಮದ್ದ ಬಳಸಿ ಎರಡೇ ದಿನಗಳಲ್ಲಿ ಆಗುತ್ತೆ.!

 

WhatsApp Group Join Now
Telegram Group Join Now

ನರುಳ್ಳೆ ಸಮಸ್ಯೆ ಅಥವಾ ನರಹುಲಿ ಸಮಸ್ಯೆ ಎಂದು ಈ ಚರ್ಮ ಸಮಸ್ಯೆಯನ್ನು ಕರೆಯುತ್ತಾರೆ. ಇದೇನು ಅಂತಹ ಗಂಭೀರವಾದ ಆರೋಗ್ಯ ಸಮಸ್ಯೆ ಅಲ್ಲದಿದ್ದರೂ ಕೂಡ ತ್ವಚೆಯ ಸೌಂದರ್ಯವನ್ನು ಹಾಳು ಮಾಡುತ್ತದೆ ಯಾಕೆಂದರೆ ಮುಖದ ಮೇಲೆ ಕುತ್ತಿಗೆಯ ಮೇಲೆ ಹೀಗೆ ದೇಹದ ನಾನಾ ಕಡೆ ಚರ್ಮವು ಗಂಟುಗಂಟಾದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಕೆಲವೊಬ್ಬರಿಗೆ ಇದು ಸಣ್ಣ ಅಕ್ಕಿ ಕಾಳಿನ ಗಾತ್ರದಲ್ಲಿ ಇದ್ದರೆ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಗಾತ್ರದಲ್ಲಿ ಇರುತ್ತದೆ. ಇದರಿಂದ ವ್ಯಕ್ತಿಯ ಸೌಂದರ್ಯವು ಹಾಳಾಗುತ್ತದೆ ಆದ್ದರಿಂದ ಎಲ್ಲರೂ ಸಹ ಇದರಿಂದ ಮುಕ್ತಿ ಪಡೆಯಲು ಬಯಸುತ್ತಾರೆ. ಈ ಸಮಸ್ಯೆಗೆ ವೈದ್ಯಲೋಕದ ಪರಿಹಾರಕ್ಕಿಂತ ಆಯುರ್ವೇದದ ಪರಿಹಾರವೂ ಹೆಚ್ಚು ಪರಿಣಾಮಕಾರಿಯಾಗಿ ಈ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ.

ಇದು ತ್ವಚೆಗೆ ಸಂಬಂಧಪಟ್ಟ ಸಮಸ್ಯೆ ಆಗಿದ್ದರೂ ಕೂಡ ಸೋಪು ಹಾಗೂ ಕ್ರೀಮ್ ಗಳಿಂದ ಹೋಗುವಂತಹ ಸಣ್ಣ ಸಮಸ್ಯೆಯೂ ಅಲ್ಲ. ಹಾಗಾಗಿ ಇದಕ್ಕೆ ಶಸ್ತ್ರ ಚಿಕಿತ್ಸೆಯ ಮೊರೆ ಹೋಗುವುದು ಬಹಳ ರಿಸ್ಕ್ ನ ವಿಷಯ ಮತ್ತು ಹೆಚ್ಚಿನ ಹಣ ವ್ಯಯವಾಗುವ ವಿಷಯ. ಆದ್ದರಿಂದ ಕಡಿಮೆ ಹಣದಲ್ಲಿಯೇ ಕಡಿಮೆ ಸಮಯದಲ್ಲಿಯೇ ಸಂಪೂರ್ಣವಾಗಿ ಈ ಕಾಯಿಲೆ ಗುಣ ಮಾಡಿಕೊಳ್ಳಬೇಕು ಎಂದರೆ ಆಯುರ್ವೇದದ ಮೊರೆ ಹೋಗುವುದು ಉತ್ತಮ.

ಯಾಕಂದರೆ ಆಯುರ್ವೇದದಲ್ಲಿ ಈ ರೀತಿ ಮನುಷ್ಯನ ಎಲ್ಲಾ ಸಮಸ್ಯೆಗಳಿಗೂ ಕೂಡ ತೀಕ್ಷ್ಣವಾಗಿ ಪರಿಹಾರ ಕೊಡುವ ಶಕ್ತಿ ಇರುತ್ತದೆ. ಆದರೆ ಯಾವ ಸಮಸ್ಯೆಗೆ ಯಾವ ಮೂಲಿಕೆ ಉಪಯೋಗಕ್ಕೆ ಬರುತ್ತದೆ ಎನ್ನುವುದನ್ನು ಅರಿತುಕೊಳ್ಳದೆ ನಾವು ನಿರ್ಲಕ್ಷ ತೋರುತ್ತೇವೆ. ಎಷ್ಟೋ ಸಮಯದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕ ಇರುವ ಗಿಡಗಳೇ ಗಂಭೀರ ಕಾಯಿಲೆಗಳಿಗೆ ಔಷಧಿ ಆಗಿರುತ್ತವೆ.

ಆಯುರ್ವೇದ ತಜ್ಞರು ಇದನ್ನು ಗುರುತಿಸಿ ನಮಗೆ ತಿಳಿಸುವವರೆಗೆ ನಮಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ. ನರುಳೆ ಅಥವಾ ನರಹುಲಿ ಸಮಸ್ಯೆ ಪರಿಹಾರಕ್ಕೂ ಕೂಡ ಆಯುರ್ವೇದದಲ್ಲಿ ಒಂದು ಗಿಡ ಇದೆ. ಈ ಗಿಡದಿಂದ ಒಂದೇ ವಾರದಲ್ಲಿ ಇದನ್ನು ಸಂಪೂರ್ಣವಾಗಿ ಗುಣ ಮಾಡಬಹುದು. ಇದು ಆಯುರ್ವೇದ ಚಿಕಿತ್ಸೆ ಆಗಿರುವ ಕಾರಣ ಯಾವುದೇ ರೀತಿಯ ಅಡ್ಡ ಪರಿಣಾಮಗಳ ಭಯವು ಇರುವುದಿಲ್ಲ.

ಯಾಕೆಂದರೆ ಇದು ಕುತ್ತಿಗೆಯ ಭಾಗದಲ್ಲಿ ಮತ್ತು ಮುಖದ ಭಾಗದಲ್ಲಿ ಕಾಣಿಸಿಕೊಳ್ಳುವುದರಿಂದ ಸೈಡ್ ಎಫೆಕ್ಟ್ ಆದರೆ ಅದು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸೌಂದರ್ಯವನ್ನು ಕೆಡಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಚರ್ಮದ ವಿಚಾರ ಬಂದಾಗ ಮತ್ತೊಮ್ಮೆ, ಮಗದೊಮ್ಮೆ ವಿಚಾರ ಮಾಡಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಕೆಂಪು ನೆನೆ ಅಕ್ಕಿಯ ಸೊಪ್ಪಿನ ಗಿಡ, ಬಿಳಿ ಚಿತ್ರ ಫಲ, ಹಚ್ಚೆ ಗಿಡ, ದೊಡ್ಡ ಹಾಲು ಕುಡಿ ಗಿಡ, ಮರಿಜೀವನಿಗೆ ಈ ರೀತಿ ಪ್ರಾಂತ್ಯಗಳಿಗೆ ಅನುಸಾರವಾಗಿ ಈ ಆಯುರ್ವೇದ ಗಿಡವನ್ನು ಹೆಸರಿಸುತ್ತಾರೆ.

ನಮ್ಮ ಮನೆಯ ಅಕ್ಕ ಪಕ್ಕ ಹೊಲಗದ್ದೆಗಳ ಬದುಗಳಲ್ಲಿ ತೇವಾಂಶ ಇರುವ ಜಾಗದಲ್ಲಿ ಇದು ಹಬ್ಬಿಕೊಂಡಿರುತ್ತದೆ. ಇದನ್ನು ಮುರಿದರೆ ಹಾಲಿನ ರೂಪದ ದ್ರವ ಬರುತ್ತದೆ. ಈ ದ್ರವವನ್ನು ನರುಳ್ಳೆ ಇರುವ ಜಾಗದಲ್ಲಿ ಸವರುತ್ತಾ ಬಂದರೆ ಹೆಚ್ಚೆಂದರೆ ಒಂದು ವಾರದ ಒಳಗಡೆ ಸಂಪೂರ್ಣವಾಗಿ ನರುಳ್ಳೆ ಉದುರಿ ಹೋಗುತ್ತದೆ. ಆಶ್ಚರ್ಯ ಆಗುವ ರೀತಿಯಲ್ಲಿ ನಿಮ್ಮ ದೇಹದಿಂದ ಈ ನರುಳ್ಳೆ ಮಾಯವಾಗಿ ಹೋಗಿರುತ್ತದೆ. ಇದನ್ನು ಈ ಕೂಡಲೇ ನರುಳ್ಳೆ ಸಮಸ್ಯೆ ಇರುವವರಿಗೆ ತಿಳಿಸಿ ಸಹಾಯ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now