ಕುತ್ತಿಗೆ ಸುತ್ತಲೂ ಇರುವ ಕಪ್ಪುಕಲೆಗಳನ್ನು ನಿವಾರಣೆ ಮಾಡುವುದಕ್ಕೆ ಈ ಮನೆಮದ್ದು ಬಳಸಿ, ಕೇವಲ ನಾಲ್ಕೇ ದಿನದಲ್ಲಿ ನಿಮ್ಮ ಚರ್ಮಕ್ಕೆ ಹೊಳಪು ಬರುತ್ತದೆ.

ಮಹಿಳೆಯರಲ್ಲಿ ಆಗಿರಬಹುದು ಅಥವಾ ಪುರುಷರಲ್ಲಿ ಆಗಿರಬಹುದು ಹೆಚ್ಚಾಗಿ ಕತ್ತಿನ ಭಾಗದಲ್ಲಿ ಕಪ್ಪು ಹೆಚ್ಚಾಗಿ ಉಂಟಾಗುವುದನ್ನು ನಾವು ನೋಡಬಹುದಾಗಿದೆ. ಅಷ್ಟಕ್ಕೂ ಈ ಕಪ್ಪು ಕಲೆಗಳು ಯಾಕೆ ಬರುತ್ತದೆ ಎಂಬುದನ್ನು ನೋಡುವುದಾದರೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು ಮಹಿಳೆಯರಲ್ಲಿ. ಏಕೆಂದರೆ ಮಹಿಳೆಯರು ಹಲವಾರು ಆಭರಣಗಳನ್ನು ಧರಿಸಿಕೊಳ್ಳುತ್ತಾರೆ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಧರಿಸಿಕೊಂಡರೆ ಅಷ್ಟಾಗಿ ಕಪ್ಪು ಕಲೆಗಳು ಉಂಟಾಗುವುದಿಲ್ಲ. ಆದರೆ ಯಾರು ಆರ್ಟಿಫಿಶಿಯಲ್ ಬಂಗಾರಗಳನ್ನು ಅಥವಾ ಆರ್ಟಿಫಿಶಿಯಲ್ ಒಡವೆಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಅಂತವರಲ್ಲಿ ಈ ರೀತಿಯಾದಂತಹ ಕಪ್ಪು ಕಲೆಗಳು ಉಂಟಾಗುವುದು ನಾವು ನೋಡಬಹುದು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಧರಿಸುವ ಆಭರಣಗಳಲ್ಲಿ ಒಂದು ದ್ರವ ಇರುತ್ತದೆ ಈ ದ್ರವ ಆಚೆ ಬಂದಾಗ ಕುತ್ತಿಗೆ ಸುತ್ತಲಿನ ಕಪ್ಪು ಬಣ್ಣ ಆಗುತ್ತದೆ ಇದು ಕೆಲವೊಮ್ಮೆ ಇನ್ಫೇಕ್ಷನ್ ನಿಂದನೂ ಕೂಡ ಉಂಟಾಗುತ್ತದೆ.
ಹಾಗಾಗಿ ನೀವು ಆದಷ್ಟು ಬೆಳ್ಳಿ ಅಥವಾ ಚಿನ್ನದ ಆಭರಣಗಳನ್ನು ಬಳಕೆ ಮಾಡಿ ಆದರೆ ಇವುಗಳನ್ನು ನೀವು ಹೆಚ್ಚಾಗಿ ಬಳಕೆ ಮಾಡದಿರುವುದು ಸೂಕ್ತ ಕಪ್ಪು ಕಲೆಗಳು ಮೂಡುವುದಕ್ಕೆ ಕಾರಣ ಏನು ಎಂಬ ಅಂಶಗಳನ್ನು ತಿಳಿದುಕೊಂಡಿರಿ. ಇನ್ನು ಈ ಕಪ್ಪು ಕಲೆಗಳನ್ನು ಯಾವ ರೀತಿಯಾಗಿ ನಾವು ನಿವಾರಣೆ ಮಾಡಿಕೊಳ್ಳಬೇಕು ಎಂಬುದನ್ನು ನೋಡುವುದಾದರೆ. ಇದು ತುಂಬಾ ಸರಳ ವಿಧಾನವಿದೆ ಹೌದು ನಾವು ಹೇಳುವಂತಹ ಈ ಮನೆಮದ್ದನ್ನು ನೀವು ಕೇವಲ ನಾಲ್ಕರಿಂದ ಐದು ಬಾರಿ ಬಳಕೆ ಮಾಡಿದರೆ ಸಾಕು ಖಂಡಿತವಾಗಿಯೂ ಕುತ್ತಿಗೆಯ ಸುತ್ತಲೂ ಇರುವಂತಹ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಹಾಗಾದರೆ ಆ ಮನೆಮದ್ದು ಯಾವುದು ಮತ್ತು ಮನೆಮದ್ದನ್ನು ಮಾಡುವ ವಿಧಾನ ಮತ್ತು ಬೇಕಾಗುವ ಪದಾರ್ಥಗಳು ಇವೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ.
ಮೊದಲಿಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಕೊಬ್ಬರಿ ಎಣ್ಣೆ, ಅರಿಶಿಣದ ಪುಡಿ, ರೋಸ್ ವಾಟರ್, ಶ್ರೀಗಂಧದ ಪುಡಿ ಈ ನಾಲ್ಕು ಪದಾರ್ಥಗಳು ಕೂಡ ಬೇಕಾಗುತ್ತದೆ. ಈ 4 ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಯಾವ ರೀತಿಯಾಗಿ ಮನೆಮದ್ದನ್ನು ಮಾಡಬೇಕು ಎಂಬುದನ್ನು ನೋಡುವುದಾದರೆ. ಒಂದು ಬಟ್ಟಲಿಗೆ ಎರಡು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ, 2 ಟೇಬಲ್ ಸ್ಪೂನ್ ಅರಿಶಿಣದ ಪುಡಿ, 2 ಟೇಬಲ್ ಸ್ಪೂನ್ ಚಂದನದ ಪುಡಿ, 2 ಟೇಬಲ್ ಸ್ಪೂನ್ ರೋಸ್ ವಾಟರ್ ಅನ್ನು ಹಾಕಿ ಇವೆಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಬೇಕು ಇದನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ನೆನೆಯಲು ಬಿಡಬೇಕು. ಇದು ಸಂಪೂರ್ಣವಾಗಿ ನೆನೆದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ತೊಳೆದುಕೊಳ್ಳುವುದು ಉತ್ತಮ ಇದನ್ನು ನೀವು ರಾತ್ರಿಯ ಸಮಯ ಮಾಡಬಹುದು ಅಥವಾ ಬೆಳಗಿನ ಸಮಯವು ಕೂಡ ಮಾಡಬಹುದು.
ಈ ವಿಧಾನವನ್ನು ನೀವು ರಾತ್ರಿಯ ಸಮಯ ಮಾಡಿದರೆ ಸ್ವಲ್ಪ ನಿಮಗೆ ಅಡೆತಡೆಗಳು ಉಂಟಾಗಬಹುದು ಅಂದರೆ ನಿಮ್ಮ ಬಟ್ಟೆಗೆ ಆಗಿರಬಹುದು ಅಥವಾ ಮಲಗುವಂತಹ ಹಾಸಿಗೆ ಅಥವಾ ದಿಂಬಿಗೆ ಈ ಕಲೆಗಳು ಬೀಳಬಹುದು ಹಾಗಾಗಿ ಇದನ್ನು ನೀವು ರಾತ್ರಿಯ ಸಮಯ ಮಾಡುವುದಕ್ಕಿಂತ ಬೆಳಗಿನ ಸಮಯ ಸ್ನಾನ ಮಾಡುವುದಕ್ಕಿಂತ ಅರ್ಧ ಗಂಟೆ ಅಥವಾ ಒಂದು ಗಂಟೆ ಮುಂಚಿತವಾಗಿ ಮಾಡಿಕೊಂಡರೆ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ. ಸ್ನಾನ ಮಾಡುವ ಮೊದಲು ಲೇಪನವನ್ನು ಹಚ್ಚಬೇಕು ಅರ್ಧಗಂಟೆ ಬಿಟ್ಟು ತದನಂತರ ಸ್ನಾನ ಮಾಡುವಂತಹ ಸಮಯದಲ್ಲಿ ಇದನ್ನು ಹೊರ ತೆಗೆಯಬಹುದು. ನಾವು ಹೇಳುವಂತಹ ಈ ವಿಧಾನವನ್ನು ನೀವು ಅನುಸರಣೆ ಮಾಡಿದರೆ ಖಂಡಿತವಾಗಿಯೂ ಕುತ್ತಿಗೆಯಲ್ಲಿ ಇರುವಂತಹ ಕಪ್ಪು ಕಲೆಗಳು ಅಥವಾ ಕಪ್ಪು ಚರ್ಮ ಸಹಜ ಸ್ಥಿತಿಗೆ ಬರುತ್ತದೆ ಕಾಂತಿಯುತವಾಗಿ ಕಾಣುತ್ತದೆ.
ನೋಡಿದ್ರಲ್ಲ ಸ್ನೇಹಿತರೆ ಯಾವ ರೀತಿಯಾಗಿ ಮನೆಮದ್ದನ್ನು ತಯಾರಿಸಿದೆವು ಅಂತ ಇದರಲ್ಲಿ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾದಂತಹ ಅಗತ್ಯವೂ ಇಲ್ಲ ಏಕೆಂದರೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಕೊಬ್ಬರಿಎಣ್ಣೆ, ಅರಶಿಣದ ಪುಡಿ, ಗಂಧದ ಪುಡಿ, ಹಾಗೂ ರೋಸ್ ವಾಟರ್ ಇದ್ದೇ ಇರುತ್ತದೆ. ಮನೆಮದ್ದು ಮಾಡಬೇಕು ಅಂತ ನೀವು ಅನಗತ್ಯವಾಗಿ ಹಣ ಖರ್ಚು ಮಾಡಬೇಕಾದ ಅಗತ್ಯವೂ ಕೂಡ ಇಲ್ಲ. ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಳ್ಳಬಹುದು ಅಷ್ಟೇ ಅಲ್ಲದೆ ಇದು ಬಹಳ ನೈಸರ್ಗಿಕ ವಿಧಾನ ಇದರಲ್ಲಿ ಯಾವುದೇ ರೀತಿಯಾದಂತಹ ಕೆಮಿಕಲ್ಸ್ ಇಲ್ಲದೆ ಇರುವುದನ್ನು ಕೂಡ ನೀವು ನೋಡಬಹುದಾಗಿದೆ. ನೀವೇ ನಿಮ್ಮ ಕೈಯಾರ ನೈಸರ್ಗಿಕವಾಗಿ ಆಯುರ್ವೇದಿಕ್ ಪದ್ಧತಿಯನ್ನು ಅನುಸರಣೆ ಮಾಡಿಕೊಂಡು ಈ ಮನೆಮದ್ದನ್ನು ಬಳಕೆ ಮಾಡಿ ಲೇಪನ ಮಾಡಿದ್ದೀರ. ಆಗಲಿ ಇದರಿಂದ ಯಾವುದೇ ರೀತಿಯಾದಂತಹ ಸ್ಕಿನ್ ಗೆ ಸಂಬಂಧಪಟ್ಟಂತಹ ತೊಂದರೆಗಳು ನಿಮಗೆ ಉಂಟಾಗುವುದಿಲ್ಲ.
ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ತುಂಬಾನೇ ಬಿಜಿಯಾಗಿದ್ದರೆ ಅಂದರೆ ಬೆಳಗಿನ ಸಮಯದಲ್ಲಿ ಆಫೀಸಿಗೆ ಹೋಗುವುದು ಅಥವಾ ಸಾಯಂಕಾಲದ ಸಮಯದಲ್ಲಿ ಮನೆ ಕೆಲಸ ಮಾಡುವುದು ಬಿಡುವು ಇಲ್ಲ ಆದರೂ ಕೂಡ ಈ ಕುತ್ತಿಗೆ ಭಾಗದಲ್ಲಿ ಇರುವಂತಹ ಕಪ್ಪುಕಲೆಗಳನ್ನು ತೊಲಗಿಸಬೇಕು ನಮ್ಮಿಂದ ಮನೆಮದ್ದು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಬೇರೆ ಏನಾದರೂ ಉಪಾಯವನ್ನು ತಿಳಿಸಿ ಅನ್ನುವುದಾದರೆ. ನಿಮ್ಮ ಅಕ್ಕ ಪಕ್ಕದಲ್ಲಿ ಯಾವುದಾದರೂ ಆಯುರ್ವೇದಿಕ್ ಅಥವಾ ಗ್ರಂಥಿಗೆ ಅಂಗಡಿ ಇದ್ದರೆ ಅಲ್ಲಿ ಹೋಗಿ ನೀವು ನೈಸರ್ಗಿಕವಾದ ಔಷಧಿಯನ್ನು ಕೊಳ್ಳಬಹುದಾಗಿದೆ. ನಾವು ಈಗ ಹೇಳಿದ ಮಾದರಿಯಲ್ಲೇ ಆಯುರ್ವೇದಿಕ್ ಅಂಗಡಿಯಲ್ಲೂ ಕೂಡ ಲೇಪನವನ್ನು ತಯಾರು ಮಾಡಿ ಇಟ್ಟಿರುತ್ತಾರೆ. ಅದನ್ನು ಕೂಡ ನೀವು ಖರೀದಿ ಮಾಡಿಕೊಂಡು ಬಂದು ಹಚ್ಚಬಹುದು ಒಟ್ಟಾರೆಯಾಗಿ ಹೇಳುವುದಾದರೆ ನಾವು ತಿಳಿಸಿದಂತಹ ಎರಡು ವಿಧಾನದಲ್ಲಿ ನೀವು ಯಾರನ್ನು ಬೇಕಾದರೂ ಕೂಡ ಅನುಸರಣೆ ಮಾಡಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Leave a Comment

%d bloggers like this: