Skip to content
ಮಹಿಳೆಯು ತನ್ನ ಕೂದಲಿನ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾಳೆ. ಕೂದಲು ಉದ್ದವಾಗಿ, ದಟ್ಟವಾಗಿ ಇದ್ದರೆ ಬಹಳ ಇಷ್ಟಪಡುತ್ತಾರೆ. ಅದಕ್ಕಾಗಿ ಹಲವಾರು ಬಗೆಯ ರಾಸಾಯನಿಕ ಶ್ಯಾಂಪುಗಳನ್ನು ಪ್ರತಿನಿತ್ಯ ಬಳಸುತ್ತಾರೆ. ನೀವು ಯಾವಾಗಲೂ ಉಪಯೋಗಿಸುವ ಶಾಂಪೂ ಜೊತೆ ಎರಡು ಪದಾರ್ಥಗಳನ್ನು ಮಿಕ್ಸ್ ಮಾಡಿ ಹಚ್ಚಿದರೆ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ ನಿಮಗೂ ನಿಮ್ಮ ಕೂದಲು ದಪ್ಪಗಾಗಿ ಕಪ್ಪಾಗಿ ಶೈನಿಂಗ್ ಆಗಿ ಇರಬೇಕು ಅಂತ ಆಸೆ ಇದ್ದರೆ ಈ ರೆಮಿಡಿ ನಿಮಗೆ ತುಂಬಾನೇ ಉಪಯೋಗವಾಗುತ್ತದೆ. ಇದು ತುಂಬಾ ಸರಳವಾದ ರೆಮಿಡಿ ಇದನ್ನು ಕಡಿಮೆ ಪದಾರ್ಥಗಳನ್ನು ಬಳಸಿ ಕಡಿಮೆ ಸಮಯದಲ್ಲಿ ಎಲ್ಲರೂ ಮಾಡಿಕೊಳ್ಳ ಬಹುದು. ಇದರಿಂದ ನಿಮ್ಮ ಕೂದಲ ಬೆಳವಣಿಗೆ ಜಾಸ್ತಿ ಆಗುತ್ತದೆ ಹಾಗೆ ಆಕೂದಲು ಉದ್ದ ಮತ್ತು ದಪ್ಪ ಬೆಳೆಯಲು ಪ್ರಾರಂಭವಾಗುತ್ತದೆ ಅಷ್ಟೇ ಅಲ್ಲದೆ ಕೂದಲಿನ ಹೊಳಪು ಕೂಡ ಜಾಸ್ತಿ ಯಾಗುತ್ತದೆ. ಹಾಗಾದರೆ ಆ ರೆಮಿಡಿ ಮಾಡಲು ಯಾವ ಪದಾರ್ಥಗಳನ್ನು ಬಳಸಬೇಕು ಹಾಗೂ ಅದನ್ನು ತಯಾರಿಸುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.
ಮೊದಲಿಗೆ ಟೀ ಪುಡಿಯನ್ನು ತೆಗೆದುಕೊಳ್ಳಬೇಕು ಈ ಟೀ ಪುಡಿಯು ಒಂದು ಬ್ಯೂಟಿ ಪ್ರಾಡಕ್ಟ್ ಆಗಿದೆ. ಟೀ ಪುಡಿಯ ನೀರನ್ನು ಫೇಸ್ ಪ್ಯಾಕ್ ನಲ್ಲಿ ಬಳಸುತ್ತಾರೆ. ಅಲ್ಲದೆ ಟೀ ಪುಡಿಯನ್ನು ಸ್ಕ್ರಬ್ ಗಳಲ್ಲಿ ಕೂಡ ಉಪಯೋಗಿಸುತ್ತಾರೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಆ್ಯಂಟಿ ಏಜಿಂಗ್ ಮತ್ತು ಆ್ಯಂಟಿ ಇನ್ಫ್ಲಮೇಟರಿ ಗುಣಗಳು ಇವೆ. ಇವುಗಳು ನಮ್ಮ ತ್ವಚೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಹಾಗೆಯೇ ನಮ್ಮ ಚರ್ಮ ಹೊಳೆಯಲು ಕೂಡ ಸಹಾಯ ಮಾಡುತ್ತವೆ ಇದು ಮುಖದಲ್ಲಿ ಇರುವಂತಹ ಗುಳ್ಳೆಗಳನ್ನು ಕಡಿಮೆ ಮಾಡುತ್ತದೆ ಹಾಗೂ ಮುಖದಲ್ಲಿ ಇರುವ ಸೊಕ್ಕನ್ನು ಕಡಿಮೆ ಮಾಡುತ್ತದೆ. ಚರ್ಮಕ್ಕೆ ಇಷ್ಟೆಲ್ಲಾ ಉಪಯೋಗವಾಗುವ ಟೀ ಪುಡಿ ನಮ್ಮ ಕೂದಲಿನ ಆರೈಕೆಯಲ್ಲಿ ಕೂಡ ಉಪಯೋಗವಾಗುತ್ತದೆ ಟೀ ಪುಡಿ ಯನ್ನು ಕುದಿಸಿದ ನೀರಿನಲ್ಲಿ ಮೆಹಂದಿ ಪೌಡರನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ
ಒಂದು ಪಾತ್ರೆಯಲ್ಲಿ 1 ಲೋಟದಷ್ಟು ನೀರನ್ನು ಹಾಕಿ ಇದಕ್ಕೆ ಎರಡು ಚಮಚದಷ್ಟು ಟೀವಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಈ ರೀತಿ ಟೀ ಡಿಕಾಕ್ಷನ್ ಅನ್ನು ನಮ್ಮ ಕೂದಲಿಗೆ ಉಪಯೋಗಿಸುವುದರಿಂದ ನಮ್ಮ ಕೂದಲು ಮೃದು ಮತ್ತು ಹೊಳಪು ಆಗುತ್ತದೆ. ಅಷ್ಟೇ ಅಲ್ಲ ಕೂದಲಿನ ಕಾವಲು ಹಾಗೂ ಡ್ಯಾಂಡ್ರಫ್ ಕಡಿಮೆಯಾಗುತ್ತದೆ. ಇದು ಸ್ಟ್ರಾಂಗ್ ಆಂಟಿ ಇನ್ಫಾಮೇಟರಿ ಆಗಿರುವುದರಿಂದ ನಮ್ಮ ತಲೆಯಲ್ಲಿ ಯಾವುದೇ ರೀತಿಯ ಇರಿಟೇಶನ್ ಹಾಗೆ ಕಡಿತದ ಸಮಸ್ಯೆ ಇದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ. ನೀರಿನಲ್ಲಿ ಟೀ ಪುಡಿ ಹಾಕಿ ಕುದಿಸಿದ ನೀರನ್ನು ಶೋಧಿಸಿ ತಣ್ಣಗಾಗಲು ಬಿಡಬೇಕು ಡಿಕಾಕ್ಷನ್ ಪೂರ್ತಿ ತಣ್ಣಗಾದ ಮೇಲೆ ಮಾತ್ರ ಉಪಯೋಗಿಸಬೇಕು ಇದರಲ್ಲಿ ಇರುವಂತಹ ಕ್ಯಾಫಿನ್ ಅಂಶ ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ. ನಿಮ್ಮ ಸ್ಕಾಲ್ಪ್ ಗೆ ಬ್ಲಡ್ ಸರ್ಕ್ಯುಲೇಶನ್ ಆಗಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಕೂದಲ ಬೆಳವಣಿಗೆಗೆ ಚೆನ್ನಾಗಿ ಆಗುತ್ತದೆ.
ಟೀ ಡಿಕಾಕ್ಷನ್ ಪೂರ್ತಿಯಾಗಿ ತಣ್ಣಗಾದ ಮೇಲೆ ನೀವು ಬಳಸುವ ಶಾಂಪುವನ್ನು ಒಂದು ಚಮಚದಷ್ಟು ಶಾಂಪೂವನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಬೇಕು. ನಂತರ ಅರ್ದ ಒಳು ನಿಂಬೆಹಣ್ಣಿನ ರಸವನ್ನು ಟೀ ಡಿಕಾಕ್ಷನ್ ಗೆ ಹಾಕಬೇಕು. ಲೆಮನ್ ನಲ್ಲಿ ವಿಟಮಿನ್ ಸಿ ಇರುವುದರಿಂದ ನಮ್ಮ ತಲೆಯ ಬುಡದಲ್ಲಿ ಇರುವ ಎಣ್ಣೆ ಅಂಶವನ್ನು ತೆಗೆದು ಹಾಕುತ್ತದೆ. ನಿಂಬೆಹಣ್ಣು ನಮ್ಮ ಕೂದಲಿನ ಪಿ ಎಚ್ ಲೆವೆಲ್ ಅನ್ನು ಕಾಪಾಡುತ್ತದೆ. ಹಾಗಾಗಿ ಕೂದಲು ಬೆಳವಣಿಗೆ ಚೆನ್ನಾಗಿ ಆಗುತ್ತದೆ. ನಿಂಬೆಹಣ್ಣಿನ ರಸವನ್ನು ಕೂದಲಿಗೆ ಹಚ್ಚುವುದರಿಂದ ತಲೆಯಲ್ಲಿ ಕಡಿತ ಇದ್ದರೆ ನಿವಾರಣೆ ಆಗುತ್ತದೆ. ನಿಂಬೆಹಣ್ಣಿನ ರಸವನ್ನು ಕೂದಲಿಗೆ ಹಚ್ಚಿದ ಮೇಲೆ ಬಿಸಿಲಿಗೆ ಹೋಗಬಾರದು. ಪೂರ್ತಿಯಾಗಿ ಒಣಗಿದ ನಂತರ ಕೂದಲು ತೊಳೆದು ಬಿಸಿಲಿನಲ್ಲಿ ಓಡಾಡಬಹುದು. ಈ ರೆಮಿಡಿ ಅನ್ನು ಹಚ್ಚುವ ಮೊದಲು ಕೂದಲನ್ನು ಒದ್ದೆ ಮಾಡಿಕೊಳ್ಳಬೇಕು ಅದಾದ ನಂತರ ತಯಾರಿಸಿದ ರೆಮಿಡಿ ಅನ್ನು ಕೂದಲಿನ ಬುಡದಿಂದ ತುದಿಯ ವರೆಗು ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಅದಾದನಂತರ ನೀರಿನಿಂದ ಕೂದಲು ತೊಳೆಯಿರಿ. ಈ ರೀತಿ ತಿಂಗಳಿನಲ್ಲಿ ಎರಡು ಬಾರಿ ಮಾಡುತ್ತ ಬಂದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ. ಈ ರೆಮಿಡಿ ಅನ್ನು ಬಳಸುವುದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.
Like this:
Like Loading...