Skip to content
ಆಧುನಿಕ ಜೀವನ ಶೈಲಿಯಲ್ಲಿ ಕಣ್ಣಿನ ಕೆಳಗೆ ಕಪ್ಪಾಗುವುದು ಸಾಮಾನ್ಯವಾಗಿಬಿಟ್ಟಿದೆ ಈ ಕಣ್ಣಿನ ಸುತ್ತ ಕಪ್ಪುಗೆ ಉಂಟಾಗುವಂತಹ ಕಲೆಯಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ. ಹೀಗೆ ಕಪ್ಪಗಿರುವುದು ರಿಂದ ಸಾಕಷ್ಟು ಜನರಿಗೆ ಇದು ಒಂದು ದೊಡ್ಡ ಚಿಂತೆಯಾಗಿ ಪರಿಣಮಿಸಿ ಬಿಡುತ್ತದೆ. ನಾವು ಎಷ್ಟೇ ಸುಂದರವಾಗಿದ್ದರೂ ಸಹ ನಮ್ಮ ಕಣ್ಣಿನ ಕೆಳಗೆ ಅಥವಾ ಸುತ್ತ ಕಪ್ಪಗಿದ್ದರೆ ನಮ್ಮ ಮುಖವನ್ನು ಹಾಳು ಮಾಡಿಬಿಡುತ್ತದೆ ಆದ್ದರಿಂದ ನಮ್ಮ ಕಣ್ಣಿನ ರಕ್ಷಣೆಯನ್ನು ನಾವು ಆದಷ್ಟು ಗಮನವಿಟ್ಟು ನೋಡಿಕೊಳ್ಳಬೇಕು. ನಾನಾ ಕಾರಣಗಳಿಗೆ ನಮ್ಮ ಕಣ್ಣಿನ ಸುತ್ತ ಕಪ್ಪಗೆ ಆಗುತ್ತದೆ ನಾವು ಸರಿಯಾಗಿ ನಿದ್ರೆ ಮಾಡದೇ ಇರುವುದು ಅಥವಾ ಏನಾದರೂ ಚಿಂತೆಯನ್ನು ಮಾಡುವುದು, ಸರಿಯಾಗಿ ನೀರು ಕುಡಿಯದೇ ಇರುವುದು ಇನ್ನು ಹಲವಾರು ಕಾರಣಗಳಿಗಾಗಿ ನಮ್ಮ ಕಣ್ಣಿನ ಸುತ್ತಲೂ ಕಪ್ಪು ಕಲೆಗಳು ಮೂಡುತ್ತದೆ.
ನಾವು ಬಳಸುವಂತಹ ಅಂದರೆ ಮಾರ್ಕೆಟ್ ನಲ್ಲಿ ಸಿಗುವಂತಹ ಕಾಸ್ಮೆಟಿಕ್ಸ್ ಪ್ರಾಡಕ್ಟ್ ಗಳನ್ನು ಬಳಸುವುದರಿಂದ ಸಹ ಅಡ್ಡ ಪರಿಣಾಮದಿಂದ ನಮ್ಮ ಕಣ್ಣಿನ ಸುತ್ತ ಕಪ್ಪಗೆ ಆಗುತ್ತದೆ. ನಮ್ಮ ಕಣ್ಣಿನ ಕೆಳಗೆ ಇರುವಂತಹ ಕಪ್ಪು ಕಲೆಯನ್ನು ಹೋಗಲಾಡಿಸಲು ನಾವು ಮಾರ್ಕೆಟ್ ನಲ್ಲಿ ಸಿಗುವ ಯಾವುದೋ ಒಂದು ಕ್ರೀಮ್ ಅನ್ನು ಬಳಸಿದರೆ ಅದು ನಮ್ಮ ಕಣ್ಣಿನ ಸುತ್ತ ಇರುವ ಕಪ್ಪು ಹೋಗಲಾಡಿಸಲು ಕೆಲವೊಂದು ಅಡ್ಡಪರಿಣಾಮಗಳನ್ನು ಸಹ ಬರಬಹುದು ಆದ್ದರಿಂದ ನಾವು ನೈಸರ್ಗಿಕ ರೀತಿಯಲ್ಲಿ ನಮ್ಮ ಕಣ್ಣಿನ ಕೆಳಗೆ ಇರುವಂತಹ ಕಪ್ಪು ಕಲೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಬೇಕು. ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಮ್ಮ ಕಣ್ಣಿನ ಕೆಳಗೆ ಇರುವ ಕಪ್ಪು ಭಾಗವನ್ನು ಹೋಗಲಾಡಿಸಬಹುದು ಇದಕ್ಕೆ ಬೇಕಾಗಿರುವಂತಹ ಮುಖ್ಯ ಸಾಮಗ್ರಿಗಳು ಹಸಿ ಆಲೂಗೆಡ್ಡೆ, ಅರ್ಧ ಟೊಮೆಟೊಣ 1 ಟೇಬಲ್ ಸ್ಪೂನ್ ಅಲೋವೆರಾ ಜೆಲ್, ಹಾಕಿ 4 ರಿಂದ 5 ಡ್ರಾಪ್ ರೋಸ್ ವಾಟರ್.
ಮೊದಲಿಗೆ ಆಲೂಗೆಡ್ಡೆಯ ಸಿಪ್ಪೆಯನ್ನು ತೆಗೆದು ಅದನ್ನು ಒಂದು ಗ್ರೇಟರ್ ಸಹಾಯದಿಂದ ತುರಿದುಕೊಳ್ಳಿ ತುರಿದ ನಂತರ ಅದರಿಂದ ಚೆನ್ನಾಗಿ ರಸವನ್ನು ತೆಗೆದುಕೊಳ್ಳಿ ನಂತರ ಆ ರಸಕ್ಕೆ ನೀವು ಅರ್ಧ ಟೊಮೆಟೊ ಜ್ಯೂಸ್ ಹಾಕಿ ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ಆಲುವೆರಾ ಜೆಲ್ ಹಾಗೆ 4 ರಿಂದ 5 ಡ್ರಾಪ್ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದನ್ನು ಒಂದು ಹೇರ್ ಟೈಟ್ ಕಾಂಟೇನರ್ ನಲ್ಲಿ ಹಾಕಿ ಹತ್ತು ನಿಮಿಷಗಳ ಕಾಲ ಫ್ರೀಜರ್ ನಲ್ಲಿಟ್ಟು ನಂತರ ಅದನ್ನು ತೆಗೆದುಕೊಂಡು ನಿಮ್ಮ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಇರುವಲ್ಲಿಗೆ ಹಚ್ಚುತ್ತ ಬಂದರೆ ನಿಮ್ಮ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ನೀವು ಎಷ್ಟು ದಿನಗಳಾದರು ಪ್ರೀಜರ್ ನಲ್ಲಿ ಇಟ್ಟುಕೊಂಡು ಬೇಕಾದರೂ ಉಪಯೋಗಿಸಬಹುದು.
ಈ ಒಂದು ರೆಮಿಡಿ ಯನ್ನು ಮಾಡುವುದು ಅಷ್ಟೇ ಅಲ್ಲದೆ ನೀವು ಚೆನ್ನಾಗಿ ನಿದ್ರೆ ಏನು ಮಾಡಬೇಕು ನಮ್ಮ ದೇಹವೂ ದಿನನಿತ್ಯ ಹಲವಾರು ರೀತಿಯಾದಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತದೆ ಅದರಿಂದ ನಮಗೆ ಆಯಾಸ ಉಂಟಾಗಿರುತ್ತದೆ ಆದ್ದರಿಂದ ನಾವು ಕನಿಷ್ಟ ಎಂಟು ಗಂಟೆಗಳ ಕಾಲವಾದರೂ ಸಹ ನಿದ್ದೆಯನ್ನು ಮಾಡಬೇಕು ಆಗಿದ್ದಲ್ಲಿ ನಮ್ಮ ದೇಹಕ್ಕೆ ಹಾಗೆಯೇ ನಮ್ಮ ಚರ್ಮಕ್ಕೂ ಒಂದು ಉತ್ತಮವಾದಂತಹ ಆರೋಗ್ಯ ಎನ್ನುವಂತಹದ್ದು ಸಿಗುತ್ತದೆ. ಯಾರಿಗೆಲ್ಲ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಸಿಗುತ್ತದೆಯೋ ಅಂತಹವರು ದಿನ ಚೆನ್ನಾಗಿ ನೀರನ್ನು ಕುಡಿಯಬೇಕು ಅಂತಹವರು ದಿನದಲ್ಲಿ 8 ಲೋಟ ನೀರನ್ನು ಕುಡಿಯಬೇಕು ಆಗಿದ್ದಲ್ಲಿ ನಿಮ್ಮ ಕಣ್ಣಿನ ಸುತ್ತ ಇರುವಂತಹ ಸರ್ಕಲ್ ಕಡಿಮೆಯಾಗುತ್ತದೆ ಉತ್ತಮ ತ್ವಚೆ ನಿಮ್ಮದಾಗುತ್ತದೆ.
ಅಷ್ಟೇ ಅಲ್ಲದೆ ವಿಟಮಿನ್ ಕೆ ಇರುವ ಆಹಾರ ಪದಾರ್ಥಗಳನ್ನು ನಮ್ಮ ದೈನಂದಿನ ಆಹಾರ ಪದಾರ್ಥಗಳಿಗೆ ಅಳವಡಿಸಿಕೊಂಡರೆ ಅದು ಸಹ ನಮ್ಮ ಕಣ್ಣಿನ ಸುತ್ತ ಇರುವಂತಹ ಡಾರ್ಕ್ ಸರ್ಕಲ್ ನ್ನು ಕಡಿಮೆ ಮಾಡುತ್ತದೆ ಅಂತಹ ಆಹಾರ ಪದಾರ್ಥಗಳು ಯಾವುದೆಂದರೆ ಎಲೆಕೋಸು, ಗೆಡ್ಡೆಕೋಸು, ಹೂಕೋಸು ಇಂತಹ ತರಕಾರಿಗಳಲ್ಲಿ ವಿಟಮಿನ್ ಕೆ ಎಂಬುದು ಹೇರಳವಾಗಿರುತ್ತದೆ. ಇದರಿಂದ ನೀವು ಇಂತಹ ಆಹಾರ ಪದಾರ್ಥಗಳನ್ನು ಸೇವಿಸಿಕೊಂಡು ಹೆಚ್ಚಾಗಿ ನೀರನ್ನು ಕುಡಿದ್ದೆ ಆದಲ್ಲಿ ನಮ್ಮ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೆ ನಮ್ಮ ನಮ್ಮ ಕಣ್ಣಿನ ಸುತ್ತ ಇರುವಂತಹ ಸರ್ಕಲ್ ಕೂಡ ಕಡಿಮೆ ಮಾಡಿಕೊಳ್ಳಬಹುದು. ನಾವು ಕ್ರೀಮ್ ಗಳನ್ನು ಬಳಸಿದ್ದೇ ಆದಲ್ಲಿ ಅದರಿಂದ ಶಾಶ್ವತವಾದ ಪರಿಹಾರ ಸಿಗುವುದಿಲ್ಲ ಅದು ಅಲ್ಲದೆ ಅದರಿಂದ ಕೆಲವು ಅಡ್ಡ ಪರಿಣಾಮಗಳು ಸಹ ಉಂಟಾಗಬಹುದು ಆದರೆ ನೈಸರ್ಗಿಕ ವಿಧಾನದಲ್ಲಿ ಯಾವುದೇ ರೀತಿ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಹಾಗೆಯೇ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
Like this:
Like Loading...