ಮೊದಲೆಲ್ಲ ಜನರು ಹಳ್ಳಿಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರು ಹಾಗೂ ಅವರು ತಿನ್ನುತ್ತಿದ್ದ ಆಹಾರ ಪದಾರ್ಥಗಳು ಒಳ್ಳೆಯ ಪೋಷಕಾಂಶಗಳಿಂದ ಕೂಡಿರುತ್ತಿದ್ದವು. ಮತ್ತು ಸುತ್ತಲಿನ ವಾತಾವರಣ ತುಂಬಾ ಆರೋಗ್ಯಕರವಾಗಿದ್ದರಿಂದ ನೆಮ್ಮದಿಯಾಗಿ 4 ತಲೆಮಾರುಗಳನ್ನು ನೋಡಿಕೊಂಡು ನೂರು ವರ್ಷಕ್ಕಿಂತಲೂ ಹೆಚ್ಚು ಕಾಲ ಬದುಕುತ್ತಿದ್ದರು. ಆಗ ಹಳ್ಳಿಯ ಜನರಿಗೆ ವಯಸ್ಸಾದರೂ ಕೂಡ ಶಕ್ತಿ ಕಡಿಮೆಯಾಗುತ್ತಿರಲಿಲ್ಲ. ಪುರುಷರು ಕಾಡಿಗೆ ಹೋಗಿ ಕಟ್ಟಿಗೆ ಕಡಿದು ಹೊತ್ತು ಬರುತ್ತಿದ್ದರು, ದನಕರು ಜಾನುವಾರುಗಳ ಸಂಪೂರ್ಣ ಪೋಷಣೆ ಅವುಗಳಿಗೆ ಹುಲ್ಲುತರುವುದು ಅವುಗಳನ್ನು ತೊಳೆಯುವುದು ಮೇಯಿಸುವುದು ಇತ್ಯಾದಿ ಕೆಲಸಗಳನ್ನು ಸರಾಗವಾಗಿ ಮಾಡುತ್ತಿದ್ದರು. ಬಿಸಿಲು ಮಳೆಗೆ ಅಂಜದೆ ಬೆಳಗ್ಗೆಯಿಂದ ಸಂಜೆಯ ತನಕ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಹಾಗೂ ಮನೆಗೆ ಬಂದಮೇಲೆ ತೃಪ್ತಿಯಾಗಿ ಊಟ ಮಾಡಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆಗಿನ ಕಾಲದ ಜೀವನ ಹೋಲಿಸಿಕೊಂಡರೆ ಈಗ ಲಕ್ಷ ಸಂಬಳ ತೆಗೆದು ಕೊಳ್ಳುವವರಿಗೂ ಸಹ ಆ ರೀತಿಯ ನೆಮ್ಮದಿ ಸಿಗುವುದಿಲ್ಲ ಎನ್ನಬಹುದು.
ಮಹಿಳೆಯರು ಅಷ್ಟೇ ಬೆಳಗ್ಗೆಯಿಂದ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೆ ಮನೆಯ ಎಲ್ಲ ಕೆಲಸಗಳನ್ನು ಕೈಗಳ ಶ್ರಮ ಉಪಯೋಗಿಸಿಯೇ ಮಾಡುತ್ತಿದ್ದರು. ಆಗ ಅವರಿಗೆ ಅನುಕೂಲ ಮಾಡಿಕೊಡಲು ಯಾವುದೇ ಮಿಕ್ಸರ್ ಆಗಲಿ ಗ್ರೈಂಡರ್ ಆಗಲಿ ವಾಷಿಂಗ್ ಮಿಷನ್ ಆಗಲಿ ಗ್ಯಾಸ್ ಸಿಲಿಂಡರ್ ಆಗಲಿ ಯಾವ ಅನುಕೂಲತೆಯು ಇರಲಿಲ್ಲ. ಇಂದು ಹೆಂಗಸರು ಮಿಷನ್ ಬಳಸಿ ಮಾಡುವ ಎಲ್ಲಾ ಕೆಲಸಗಳನ್ನು ಆಗ ಅವರು ತಮ್ಮ ಕೈಯಾರೆ ಮಾಡಬೇಕಾಗಿತ್ತು. ಹಿಟ್ಟು ರುಬ್ಬುವುದು, ಒನಕೆ ಸಹಾಯದಿಂದ ಭತ್ತ ಕುಟ್ಟಿ ಅಕ್ಕಿ ಮಾಡುವುದು, ಕೇರುವುದು, ತೂರುವುದು, ಬಟ್ಟೆ ಒಗೆಯುವುದು, ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವುದು ಇಷ್ಟೆಲ್ಲಾ ಕೆಲಸಗಳ ಜೊತೆ ಸಮಯ ಸಿಕ್ಕರೆ ಕೃಷಿ ಕೆಲಸದಲ್ಲಿ ಸಹ ಪಾಲ್ಗೊಳ್ಳುವುದು. ಇಷ್ಟೆಲ್ಲ ಕೆಲಸಗಳನ್ನು ಮಾಡುತ್ತಿದ್ದ ಕಾರಣ ಅವರಿಗೆ ಯಾವುದೇ ವ್ಯಾಯಾಮದ ಅವಶ್ಯಕತೆಯೇ ಇರಲಿಲ್ಲ. ಹಾಗಾಗಿ ಅವರು ಸಹ ಯಾವ ಕಾಯಿಲೆಯೂ ಇಲ್ಲದೆ ನೂರು ವರ್ಷಕ್ಕಿಂತ ಹೆಚ್ಚಿನ ಕಾಲ ಆರೋಗ್ಯದಿಂದ ಬದುಕುತ್ತಿದ್ದರು.
ಆದರೆ ಈಗ ಕಾಲ ತುಂಬ ಬದಲಾಗಿ ಹೋಗಿದೆ, ಈಗ ಮನುಷ್ಯನಿಗೆ ದಿನಕ್ಕೊಂದು ಕಾಯಿಲೆ ಕಾಣಿಸಿಕೊಳ್ಳುತ್ತದೆ. ಯಾವ ರೋಗವು ಇರದೇ ಅವನು ಆರೋಗ್ಯವಾಗಿ ಇರುವ ದಿನಗಳೇ ಇಲ್ಲ. ಇದಕ್ಕೆಲ್ಲ ಕಾರಣ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಿಲುಕಿಕೊಂಡು ಅವನ ಜೀವನ ಶೈಲಿಯನ್ನು ಹಾಳು ಮಾಡಿಕೊಂಡಿರುವುದೇ ದೊಡ್ಡ ಕಾರಣ ಇರಬಹುದು. ಈಗ ಸಮಯ ಇರದ ಕಾರಣ ವ್ಯಾಯಾಮ ಯೋಗ ಪ್ರಾರ್ಥನೆ ಧ್ಯಾನ ಇದನ್ನೆಲ್ಲಾ ಅವನು ಮಾಡುವುದಿಲ್ಲ ಮತ್ತು ಇವನ ಎಲ್ಲಾ ಕೆಲಸಗಳಿಗೂ ಮಿಷನ್ ಗಳು ಬಂದಿರುವುದರಿಂದ ದೇಹ ಶ್ರಮವನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ. ಇದರಿಂದ ಮನುಷ್ಯ ನೂರಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಡಾಕ್ಟರ್ ಅಂಜನಪ್ಪ ಅವರು ಹೇಳುವ ಪ್ರಕಾರ ನೂರು ವರ್ಷ ಆರೋಗ್ಯಕರ ಜೀವನ ನಡೆಸಬೇಕು ಎಂದರೆ ಮೊದಲು ಬದುಕುತ್ತಿರುವ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ತುಂಬಾ ಮುಖ್ಯ. ಯಾವುದೇ ಟೆನ್ಶನ್ ಮಾಡಿಕೊಳ್ಳದೆ ಪ್ರತಿದಿನವೂ ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾ ಹಾಗೆಯೇ ಅಷ್ಟೇ ದೇಹವನ್ನು ದಂಡಿಸುತ್ತಾ, ಸುತ್ತಮುತ್ತ ಇರುವವರ ಜೊತೆ ನಗುನಗುತ ಕಾಲ ಕಳೆದರೆ ಸಾಕು.
ಎಲ್ಲರೂ ಕೂಡ ಆರೋಗ್ಯವಾಗಿ ನೂರು ವರ್ಷ ಬದುಕಬಹುದು ಎನ್ನುತ್ತಾರೆ ಇವರು. ಇದರ ಜೊತೆ ಮನುಷ್ಯನಿಗೆ ಯಾವಾಗಲೂ ಕಾಡುವ ಗ್ಯಾಸ್ಟಿಕ್ ಸಮಸ್ಯೆಗೆ ಇವರು ಪರಿಹಾರವೊಂದನ್ನು ಹೇಳಿದ್ದಾರೆ. ಇವರು ಹೇಳುವ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೂ ಗ್ಯಾಸ್ಟಿಕ್ ಇದ್ದೇ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಸರಿಯಾದ ಸಮಯಕ್ಕೆ ಊಟ ಸೇವಿಸದೆ ಇರುವುದು. ಅಥವಾ ಅರ್ಧ ಹೊಟ್ಟೆ ಊಟ ಮಾಡುವುದು ಮತ್ತು ಖಾಲಿಹೊಟ್ಟೆಯಲ್ಲಿ ಪೇನ್ ಕಿಲ್ಲರ್ ಮಾತ್ರೆಗಳನ್ನು ಸೇವಿಸುವುದು. ಇವುಗಳನ್ನು ಮಾಡುವುದನ್ನು ಬಿಟ್ಟರೆ ಖಂಡಿತವಾಗಿ ಗ್ಯಾಸ್ಟಿಕ್ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಇವರು. ಮತ್ತು ರೋಡ್ ಸೈಡ್ ಆಹಾರ ಸೇವಿಸುವುದರಿಂದ ಮನುಷ್ಯನ ಜಠರಕ್ಕೆ ಎಚ್ ಫೈಲಾರಿಯ ಎನ್ನುವ ಬ್ಯಾಕ್ಟೀರಿಯ ಸೇರುತ್ತದೆ ಇದರಿಂದ ಗ್ಯಾಸ್ಟಿಕ್ ಬರುತ್ತದೆ . ಈ ರೀತಿ ಸಮಸ್ಯೆ ಇದ್ದಾಗ ಎಂಡೋಸ್ಕೋಪಿ ಮಾಡಿ ಬ್ಯಾಕ್ಟರಿಯ ಇರುವುದನ್ನು ಗುರುತಿಸುತ್ತಾರೆ. ಆದರೆ ಅವನ್ನು ಕೊಲ್ಲಲು ಸಹ ಡ್ರಗ್ಸ್ಗಳು ಇವೆ. ಈ ಬ್ಯಾಕ್ಟೀರಿಯವನ್ನು ಕಂಡುಹಿಡಿದ ವಿಜ್ಞಾನಿ ಗೆ ನೊಬೆಲ್ ಪ್ರಶಸ್ತಿ ಕೂಡ ಲಭಿಸಿದೆ. ಈ ಬ್ಯಾಕ್ಟೀರಿಯವನ್ನು ಕೊಲ್ಲಲು ಎಂಟರಿಂದ ಹತ್ತು ದಿನ ಎಚ್ಪಿ ಕಿಟ್ ಎಂದು ಬರುತ್ತದೆ ಅದರಲ್ಲಿ ಒಂದು ಆಂಟಿ-ಬ್ಯಾಕ್ಟಿರಿಯಾ ಮತ್ತು ಒಂದು ಪ್ರೋಟನ್ ಪಂಪ್ ಇಂಹಿಬಿಟರ್ ಇರುತ್ತದೆ.ಈ ಔಷಧಿಯನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಮತ್ತು ಅಲ್ಸರ್ ಸಮಸ್ಯೆಗೆ ಕಾರಣವಾಗಿರುವ ಬ್ಯಾಕ್ಟೀರಿಯಗಳು ಸಾಯುತ್ತವೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ