ತಂಗಡಿ ಗಿಡ / ಅವರಿಕೆ ಗಿಡ ಎಂದು ಕರೆಯಲ್ಪಡುವ ಈ ಒಂದು ಸಸ್ಯವು ಸಾಮಾನ್ಯವಾಗಿ ಹೊಲ ಗದ್ದೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಸಾಮಾನ್ಯವಾಗಿ ಯಾರು ಕೂಡ ಬೀಜವನ್ನು ಹಾಕಿ ಈ ಗಿಡವನ್ನು ಬೆಳೆಸುವುದಿಲ್ಲ ಇದು ತನ್ನಿಂದತಾನೆ ಬೆಳೆಯುವಂತಹ ಗಿಡವಾಗಿದೆ. ಇವುಗಳನ್ನು ಕಳೆ ಗಿಡಗಳಾಗಿ ಕಾಣುತ್ತಾರೆ. ಈ ಗಿಡ ಹೆಚ್ಚಾಗಿ ಉತ್ತರ ಕರ್ನಾಟಕದ ಬಳಿ ಹೊಲ ಗದ್ದೆಗಳಲ್ಲಿ ನೋಡಲು ಸಿಗುತ್ತದೆ. ತಂಗಡಿ ಗಿಡದ ವೈಜ್ಞಾನಿಕ ಹೆಸರು ಸನ್ನ ಆರ್ಕ್ಯೋಲೆಟ ಎಂದು. ಸಂಸ್ಕೃತದಲ್ಲಿ ಆವರ್ತಿಕಿ ಹಾಗೂ ಪಿಕ್ಕಲಿಕಾ ಎಂದು ಕರೆಯಲಾಗುತ್ತದೆ. ಗಿಡದ ಎಲೆಗಳು ಸಾಮಾನ್ಯವಾಗಿ ಹುಣಸೆ ಮರದ ಎಲೆಗಳ ರೀತಿ ಸಣ್ಣದಾಗಿ ಇರುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಈಗಿಡವು ಹಳದಿ ಬಣ್ಣದ ಹೂವನ್ನು ಹೆಚ್ಚಾಗಿ ಬಿಡುತ್ತದೆ. ಸಾಮಾನ್ಯವಾಗಿ ಈ ಗಿಡವು ಮೂರರಿಂದ ಹತ್ತು ಅಡಿ ಉದ್ದ ಇರುತ್ತದೆ ಈ ಗಿಡದಲ್ಲಿ ಸಣ್ಣ ಎಲೆಗಳಿದ್ದು ತುದಿಯಲ್ಲಿ ಅರಿಶಿಣ ಬಣ್ಣದ ಹೂಗೊಂಚಲು ಬಿಡುತ್ತದೆ.
ಉತ್ತರ ಕರ್ನಾಟಕದ ಎಲ್ಲಾ ಹೊಲ ಗದ್ದೆಗಳಲ್ಲಿ ಇದು ನೋಡುವುದಕ್ಕೆ ಹೇರಳವಾಗಿ ಸಿಗುತ್ತದೆ. ಈ ಆವರಿಕೆ ಗಿಡದ ಎಲೆ ಹೂ ಬೀಜ ಕಾಂಡ ಎಲ್ಲವೂ ಕೂಡ ಔಷಧಿ ಗುಣಗಳನ್ನು ಹೊಂದಿರುತ್ತವೆ. ಹಾಗಾದರೆ ಈ ಗಿಡದಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಈ ಗಿಡದ ಉಪಯೋಗ ಏನು ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಈ ತಂಗಡಿ ಗಿಡ / ಆವರಿಕೆ ಗಿಡದ ಎಲೆಗಳು ಅಥವಾ ಹೂವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಆದರಿಂದ ಚಹಾ ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ತಂಪಾಗಿಸಲು, ಬಿಪಿ, ಶುಗರ್ ಗಳನ್ನು ನಿಯಂತ್ರಿಸಲು, ವಿಷಹಾರದ ತೊಂದರೆಗಳಿಂದ ಕಾಪಾಡಲು ಸಹಕಾರಿ.
ನಿಮಗೆ ಏನಾದರು ಗಾಯ ಆದಾಗ ತಕ್ಷಣ ತಂಗಡಿ ಗಿಡದ ಹೂಗಳನ್ನು ತಂದು ಅದನ್ನು ಚೆನ್ನಾಗಿ ಹುರಿಯಬೇಕು ಗಾಯಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಹುರಿದಿರುವ ಹೂವುಗಳನ್ನು ಅದರ ಮೇಲೆ ಹಾಕಬೇಕು. ಹೀಗೆ ಮಾಡುವುದರಿಂದ ಗಾಯ ಬೇಗ ಕಡಿಮೆ ಯಾಗುತ್ತದೆ. ನಿಮಗ ಏನಾದರೂ ಹೊಟ್ಟೆಯಲ್ಲಿ ಜಂತು ಹುಳುಗಳ ಸಮಸ್ಯೆ ಇದ್ದರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ಕಷಾಯ ಮಾಡಿ ಕುಡಿಯುತ್ತಾ ಬಂದರೆ ಜಂತು ಹುಳುಗಳು ನಾಶ ಆಗುವುದಕ್ಕೆ ಸಹಾಯ ಆಗುತ್ತದೆ.
ಈ ಗಿಡದ ಹೂವುಗಳ ದಳದಿಂದ ಚಹಾ ಮಾಡಿ ಕುಡಿಯುತ್ತಾ ಬಂದರೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದಕ್ಕೆ ಸಹಾಯ ಆಗುತ್ತದೆ. ಇದಷ್ಟೇ ಅಲ್ಲದೆ ಇದರ ಕಷಾಯವನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ತಂಪು ಸಿಗುತ್ತದೆ. ಇನ್ನು ತಂಗಡಿ ಗಿಡದ ಬೇರುಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಹಾಲಿನಲ್ಲಿ ಹಾಕಿ ಕುಡಿಯುವುದರಿಂದ ಪುರುಷರಲ್ಲಿ ಇರುವ ಲೈಂಗಿಕ ಸಮಸ್ಯೆ ನಿವಾರಣೆ ಯಾಗುತ್ತದೆ. ಈ ಗಿಡದ ಕಾಯಿ ಮತ್ತು ಬೀಜವನ್ನು ಒಣಗಿಸಿ ಪುಡಿ ಮಾಡಿ ಹಾಲಿನಲ್ಲಿ ಹಾಕಿ ಕುಡಿಯುತ್ತಾ ಬಂದರೆ ದೇಹಕ್ಕೆ ಒಳ್ಳೆಯ ಚೈತನ್ಯ ಶಕ್ತಿ ದೊರೆಯುತ್ತದೆ. ಇನ್ನು ನಿಮ್ಮ ಮುಖದಲ್ಲಿ ಕಪ್ಪು ಕಲೆಗಳು ಅಥವಾ ಗಾಯದ ಕಲೆಗಳು ಇದ್ದರೆ ಅದಕ್ಕೆ ಈ ಗಿಡವು ಒಳ್ಳೆಯ ಮನೆ ಮದ್ದಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ನೀವು ಈ ಗಿಡದ ಹೂಗಳನ್ನು ತಂದು ಚೆನ್ನಾಗಿ ಹುರಿದು ಅಥವಾ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅವುಗಳನ್ನು ಪುಡಿ ಮಾಡಿ ಪ್ರತಿ ನಿತ್ಯ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಫೇಸ್ ಪ್ಯಾಕ್ ರೀತಿ ಯಲ್ಲಿ ತಯಾರಿಸಿ ಅದನ್ನು ಮುಖಕ್ಕೆ ತೆಳುವಾಗಿ ಹಚ್ಚಬೇಕು. ನಂತರ 30 ರಿಂದ 40 ನಿಮಿಷ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು.
ಹೀಗೆ ಮಾಡುತ್ತಾ ಬಂದರೆ ಕಪ್ಪು ಕಲೆಗಳು ಹಾಗೂ ಮುಖದ ಮೇಲಿನ ಗಾಯಗಳು ಮಾಯವಾಗಿ ಮುಖ ಕಾಂತಿಯುತ ಆಗುತ್ತವೆ. ಈ ಗಿಡದ ಕಾಯಿ ಹಾಗೂ ಬೀಜಗಳಿಂದ ಸಂಧಿವಾತಕ್ಕೆ ಚಿಕಿತ್ಸೆಯನ್ನು ಕೂಡ ನೀಡಲಾಗುತ್ತದೆ. ಈ ಗಿಡದ ಔಷಧಿ ಗುಣದಿಂದ ಇದನ್ನು ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ ಆದರೂ ಕೂಡ ಇತ್ತೀಚೆಗೆ ಆಪರೇಷನ್ ಮಾಡಿಸಿಕೊಂಡಿರುವವರು ಗರ್ಭಿಣಿಯರು ಹಾಲುಣಿಸುವ ತಾಯಂದಿರು ಇದನ್ನು ಬಳಸುವಂತಿಲ್ಲ. ಮಧುಮೇಹ ಇರುವವರು ಈ ಗಿಡದ ಹಳದಿ ಹೂವಿನ 5 ರಿಂದ 6 ದಳಗಳನ್ನು ಖಾಲಿ ಹೊಟ್ಟೆಯಲ್ಲಿ ನೇರವಾಗಿ ಸೇವಿಸಿದರೆ ಮಧುಮೇಹ ನಿಯಂತ್ರಣ ಆಗುತ್ತದೆ. ದೇಹದ ತಂಪಿಗೆ ತಾಂಬೂಲದ ಜೊತೆ ತಂಗಡಿ ಚಕ್ಕೆಯನ್ನು ಹಿರಿಯರು ಬಳಸುತ್ತಿದ್ದರು. ಅಡಿಕೆ ಬೇಯಿಸುವಾಗ ಕೆಲವರು ತಂಗಡಿ ಚಕ್ಕೆಗಳನ್ನು ಹಾಕಿ ಬೇಯಿಸುವುದು ಉಂಟು ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮಾಡಿ
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ