ದಿನಕ್ಕೊಂದು ಉಂಡೆ ತಿನ್ನಿ ಸಾಕು ಮಧುಮೇಹ ಫುಲ್ ಕಂಟ್ರೋಲ್ ಆಗುತ್ತೆ. ರಕ್ತನಾಳದ ಬ್ಲಾಕೇಜ್ ತೆರೆಯುತ್ತದೆ, ಎದೆ ಹಾಲು ಉಣಿಸುವ ತಾಯಂದಿರಿಗೆ ಅಮೃತ ಈ ಉಂಡೆ.

 

ಮೆಂತ್ಯ ಕಾಳಿನ ಅದ್ಭುತವಾದ ಉಪಯೋಗ

ಅಡುಗೆಗೆ ಬಳಸಲ್ಪಡುವ ಮೆಂತ್ಯೆಯಲ್ಲಿ ಹಲವಾರು ರೀತಿಯ ವೈದ್ಯಕೀಯ ಗುಣಗಳಿವೆ ಎಂದು ನಿಮಗೆ ತಿಳಿದಿದೆಯಾ? ಮೆಂತ್ಯೆಯಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ನಿಯಾಸಿನ್, ಪೊಟಾಷಿಯಂಗಳಿವೆ. ಇದರಲ್ಲಿ ಈಸ್ಟೋಜನ್ ಗುಣಲಕ್ಷಣಗಳನ್ನು ಹೊಂದಿರುವ ಒಂದು ಸಂಯುಕ್ತ ಡಿಯೊಸ್ಗನಿನ್ ಇದೆ. ಅದೇ ರೀತಿ ಸ್ಟಿರಾಯ್ಡ್ ಸ್ಯಾಪೊನಿನ್ ಗಳಿವೆ. ಪುರುಷರ ಪುರುಷತ್ವವನ್ನು ಹೆಚ್ಚು ಮಾಡುತ್ತದೆ ಇನ್ನು ಮೆಂತ್ಯವನ್ನು ಒಂದು ಕಡಲೆ ಕಾಳು ಗಾತ್ರದ ಬೆಲ್ಲದ ಜೊತೆ ಪುಡಿ ಮಾಡಿ ಉಂಡೆಯನ್ನು ಮಾಡಿ ತಿನ್ನಬಹುದು ಅಥವಾ ನೆನೆ ಹಾಕಿ ಬೆಳಗ್ಗೆ ಎದ್ದು ತಿನ್ನಬಹುದು ಅಥವಾ ಕಷಾಯವನ್ನು ಮಾಡಿ ಕುಡಿಯಬಹುದು.

ಮೆಂತ್ಯೆಯಲ್ಲಿರುವ ಈ ಗುಣಗಳು ನಿಮ್ಮ ಸೌಂದರ್ಯ ರಕ್ಷಣೆಯ ಜತೆಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೆಂತ್ಯೆ ಕಾಳನ್ನು ಹಾಲುಣಿಸುವ ಮಹಿಳೆಯರು ಅಗತ್ಯವಾಗಿ ಸೇವಿಸಲೇಬೇಕು. ಇದರಲ್ಲಿರುವ ಡಿಯೊಸ್ಗನಿನ್ ಅಂಶವು ಹಾಲುಣಿಸುವ ಮಹಿಳೆಯರ ಸ್ತನದಲ್ಲಿ ಹಾಲಿನ ಪ್ರಮಾಣ ಹೆಚ್ಚಿಸುತ್ತದೆ. ಮೆಂತ್ಯೆಯಲ್ಲಿರುವ ಡಿಯೊಸ್ಗನಿನ್ ಸಂಯುಕ್ತ ಮತ್ತು ಈಸ್ಟ್ರೊಜೆನ್ ತರಹದ ಗುಣಗಳನ್ನು ಐಸೊಫ್ಲೆವೊನ್ಸ್ ಗಳು ಪಿಎಂಎಸ್ ಗೆ ಸಂಬಂಧಿತ ಕಿರಿಕಿರಿ ಮತ್ತು ಋತುಚಕ್ರದ ವೇಳೆ ಉಂಟಾಗುವಂತಹ ಸೆಳೆತವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಈ ಸಂಯುಕ್ತಗಳು ಮುಟ್ಟು ನಿಲ್ಲುವಾಗ ಉಂಟಾಗುವ ಲಕ್ಷಣಗಳಾದ ಹಾಟ್ ಫ್ಲ್ಯಾಷ್ ಮತ್ತು ಮನಸ್ಥಿತಿ ಬದಲಾಗುವುದನ್ನು ಕಡಿಮೆ ಮಾಡುತ್ತದೆ. ಗರ್ಭಧಾರಣೆ ಮತ್ತು ಹಾಲುಣಿಸುವ ವೇಳೆ ಮಹಿಳೆಯರು ಕಬ್ಬಿನಾಂಶದ ಕೊರತೆಯಿಂದ ಬಳಲುತ್ತಾರೆ. ಮೆಂತ್ಯೆ ಸೊಪ್ಪಿನಂತಹ ಹಸಿರು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಉತ್ತಮ ಗುಣಮಟ್ಟದ ಕಬ್ಬಿನಾಂಶ ಪಡೆಯಬಹುದು. ಮೆಂತ್ಯೆ ಸೊಪ್ಪನ್ನು ಊಟದಲ್ಲಿ ಸೇರಿಸಿದರೆ ಕಬ್ಬಿನಾಂಶ ಪಡೆಯಬಹುದು.

ನಿಮ್ಮ ಸ್ತನಗಳನ್ನು ಹಿಗ್ಗಿಸಲು ಬಯಸಿದ್ದೀರಾ? ಹಾಗಾದರೆ ದೈನಂದಿನ ಆಹಾರ ಕ್ರಮದಲ್ಲಿ ನೀವು ಮೆಂತ್ಯೆಯನ್ನು ಬಳಸಿ. ಮೆಂತ್ಯೆಯಲ್ಲಿರುವ ಒಸ್ಟೋಜನ್ ನಂತಹ ಸಂಯುಕ್ತವು ಮಹಿಳೆಯಲ್ಲಿ ಹಾರ್ಮೋನ್ ಸಮತೋಲವನ್ನು ಉಂಟುಮಾಡಿ ಮಹಿಳೆಯ ಸ್ತನದ ಗಾತ್ರ ಹೆಚ್ಚಿಸುತ್ತದೆ.ಅಧ್ಯಯನಗಳ ಪ್ರಕಾರ ಮೆಂತ್ಯೆ ಕಾಳುಗಳು ಕೊಲೆಸ್ಟ್ರಾಲ್ ನ್ನು ತಗ್ಗಿಸುತ್ತದೆ. ವಿಶೇಷವಾಗಿ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್. ಮೆಂತ್ಯೆ ಕಾಳುಗಳಲ್ಲಿರುವ ಗ್ಲಾಕ್ಟೊಮನನ್ ನಿಂದಾಗಿ ಇದು ಹೃದಯಕ್ಕೆ ಲಾಭವನ್ನು ಉಂಟುಮಾಡುತ್ತದೆ. ಇದು ಹೃದಯಾಘಾತದ ಅಪಾಯವನ್ನು ತಪ್ಪಿಸುತ್ತದೆ.

ಇದರಲ್ಲಿ ಪೊಟಾಶಿಯಂನ ಮೂಲ ಅಧಿಕವಾಗಿದ್ದು, ಇದು ಸೋಡಿಯಂನ ಕಾರ್ಯವನ್ನು ಎದುರಿಸಿ ಹೃದಯ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.ಮಧುಮೇಹದಿಂದ ಬಳಲುತ್ತಿರುವವರಿಗೆ ಮೆಂತ್ಯೆ ಕಾಳುಗಳು ತುಂಬಾ ನೆರವಾಗುತ್ತದೆ. ಮೆಂತ್ಯೆ ಕಾಳಿನಲ್ಲಿರುವ ನೈಸರ್ಗಿಕ ನಾರಿನಾಂಶ ಗ್ಲಾಕ್ಟೊಮನನ್ ರಕ್ತವು ಸಕ್ಕರೆ ಅಂಶವನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಮೆಂತ್ಯೆಯಲ್ಲಿ ಅಮಿನೊ ಆಮ್ಲವು ಇನ್ಸುಲಿನ್ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮೆಂತ್ಯೆ ಕಾಳಿನಲ್ಲಿರುವ ನಾರಿನಾಂಶವು ಆಹಾರದಲ್ಲಿನ ವಿಷಕಾರಿ ಅಂಶಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಹೊರಹಾಕುತ್ತದೆ. ಇದರಿಂದ ಕರುಳಿನ ಲೋಳೆಯ ಪೊರೆಯನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ನೆನೆಸಿದ ಮೆಂತ್ಯೆ ಕಾಳುಗಳನ್ನು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸಿದರೆ ತೂಕ ತಗ್ಗಿಸಬಹುದು.

ನೈಸರ್ಗಿಕವಾಗಿ ಹೀರಿಕೊಳ್ಳುವಂತಹ ನಾರಿನಾಂಶವು ಹೊಟ್ಟೆ ತುಂಬುವಂತೆ ಮಾಡಿ ಹಸಿವು ಕಡಿಮೆ ಮಾಡುತ್ತದೆ. ನೆನೆಸಿದ ಮೆಂತ್ಯೆಯ ಪೇಸ್ಟ್ ಮಾಡಿ ಅದನ್ನು ಸುಟ್ಟ, ಬಿಸಿ ಮತ್ತು ಇಸುಬು ಇತ್ಯಾದಿ ಸಮಸ್ಯೆಗಳ ಚಿಕಿತ್ಸೆಗೆ ಬಳಸಬಹುದು. ಗಾಯ ನಿವಾರಣೆಗೆ ಮೆಂತ್ಯೆ ಕಾಳುಗಳು ನೆರವಾಗುತ್ತದೆ. ಆಹಾರ ಕ್ರಮದಲ್ಲಿ ಮೆಂತ್ಯೆ ಕಾಳನ್ನು ಬಳಸುವುದು ಅಥವಾ ನೇರವಾಗಿ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲು ತುಂಬಾ ಕಪ್ಪಾಗಿ ಹೊಳೆಯುತ್ತದೆ. ತೆಂಗಿನ ಎಣ್ಣೆಯಲ್ಲಿ ನೆನೆಸಿಟ್ಟ ಮೆಂತ್ಯೆ ಕಾಳುಗಳನ್ನು ಬೇಯಿಸಿ ಪ್ರತೀದಿನ ನಿಮ್ಮ ತಲೆ ಮಸಾಜ್ ಮಾಡುವುದರಿಂದ ಕೂದಲು ಉದುರುವಿಕೆ ತಡೆಯಬಹುದು. ಇದಕ್ಕಿಂತ ಹೆಚ್ಚೇನು? ಮೆಂತ್ಯೆ ಕಾಳುಗಳು ತಲೆಹೊಟ್ಟು ನಿವಾರಿಸಲು ನೆರವಾಗುತ್ತದೆ.

Leave a Comment

%d bloggers like this: