ನಾರಾಯಣ ಅಂದರೆ ಸಾಕು ಕಣ್ಣು ತೆರೆದು ದರ್ಶನ ಕೊಡುವ ಆಂಡಾಳ ದೇವಿ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.!

 

WhatsApp Group Join Now
Telegram Group Join Now

ಹೆಡತಲೆಯು ನಂಜನಗೂಡಿನ ದೇವಾಲಯದ ಪಟ್ಟಣಕ್ಕೆ ಸಮೀಪವಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಶ್ರೀ ಲಕ್ಷ್ಮೀಕಾಂತಸ್ವಾಮಿಯ ಪುರಾತನವಾದ ಹೊಯ್ಸಳ ದೇವಾಲಯವನ್ನು ಹೊಂದಿದೆ, ಇದು ವಾಸ್ತುಶಿಲ್ಪದ ಮಹತ್ವವನ್ನು ಹೊಂದಿದೆ. 12ನೇ ಶತಮಾನದ ಲಕ್ಷ್ಮೀಕಾಂತಸ್ವಾಮಿ ದೇವಾಲಯವು ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ. ಮುಖ್ಯ ದೇವಾಲಯದ ಒಳಗೆ ನರಸಿಂಹಸ್ವಾಮಿ ಮತ್ತು ವೇಣುಗೋಪಾಲಸ್ವಾಮಿ ವಿಗ್ರಹಗಳು ಮತ್ತು ಶ್ರೀ ಲಕ್ಷ್ಮೀಕಾಂತ ಸ್ವಾಮಿಯ ಮುಖ್ಯ ವಿಗ್ರಹವಿದೆ.

ಇದರ ಹೊರತಾಗಿ ನಮಗೆ ಸುಂದರವಾದ ಆಂಡಾಳ್(Andal) ವಿಗ್ರಹವೂ ಎದುರಾಗುತ್ತದೆ. ಈ ವಿಗ್ರಹದ ವಿಶೇಷತೆಯೆಂದರೆ ಸಾಮಾನ್ಯ ಬೆಳಕಿನಲ್ಲಿ ಇದು ಸಾಮಾನ್ಯ ವಿಗ್ರಹದಂತೆ ಕಾಣುತ್ತದೆ, ಆದರೆ ಪೂಜೆ ಮತ್ತು ಅರ್ಚನೆ ಮಾಡುವಾಗ ದೀಪಗಳನ್ನು ಸ್ವಿಚ್ ಆಫ್ ಮಾಡಲಾಗುತ್ತದೆ ಮತ್ತು ಒಮ್ಮೆ ಆರತಿಯನ್ನು ಹಣೆಯ ಬಳಿ ಇಡಲಾಗುತ್ತದೆ, ಆಂಡಾಳ್ ಕಣ್ಣುಗಳು ನಿಜವಾಗಿ ಕಾಣುತ್ತವೆ ಮತ್ತು ನೇರವಾಗಿ ಕಾಣುತ್ತವೆ. ನಮ್ಮ ಕಣ್ಣಿಗೆ. ಈ ರೀತಿಯ ಸೌಂದರ್ಯವು ಬೇರೆ ಯಾವುದೇ ಸ್ಥಳದಲ್ಲಿ ಅಪರೂಪ.

21ನೇ ಶತಮಾನದಲ್ಲಿ ದೇವರನ್ನು ಈಗ ನಂಬುವವರು ಯಾರಿದ್ದಾರೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ದೇವರಿದ್ದಾನೋ ಇಲ್ಲವೋ ಎನ್ನುವ ಅನೇಕರ ಸವಾಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲಿದೆ ಈ ದೇವಾಲಯ. ಈ ದೇವಾಲಯದ ವಿಶೇಷವೆಂದರೆ ನಾರಾಯಣ(Narayana) ಎಂದೊಡನೆ ದೇವಿ ಅಂಡಾಳಮ್ಮ ತನ್ನ ತೆರೆಯುತ್ತಾಳೆ. ಬನ್ನಿ ಎಲ್ಲಿದೆ ಈ ದೇವಾಲಯ, ಈ ದೇವಾಲಯದ ವಿಶೇಷವೇನು, ಈ ದೇವಾಲಯದ ಮಹಿಮೆ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯೋಣ.

ಆಂಡಾಳು ದೇವಿಯ ವಿಗ್ರಹಕ್ಕೆ ಅರ್ಚಕರು ಪೂಜೆ ಯನ್ನು ಮಾಡುವಾಗ ಆರತಿ ಮಾಡುವ ಸಮಯದಲ್ಲಿ ಮಂತ್ರ ಹೇಳಿ ನಂತರ ನಾರಾಯಣ ಅಂದೊಡನೆ ತಾಯಿ ಆಂಡಾಳು ದೇವಿಯು ತನ್ನ ಎರಡು ಕಣ್ಣು ಗಳನ್ನು ಬಿಟ್ಟು ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. ಈ ಪವಾಡವನ್ನು ಅದೆಷ್ಟೋ ಭಕ್ತಾದಿಗಳು ಕಣ್ತುಂಬಿಕೊಂಡಿದ್ದಾರೆ. ದೇವಿಯ ಮಹಿಮೆಯನ್ನು ಕಾಣಲು ಅದೆಷ್ಟೋ ಭಕ್ತಾದಿಗಳು ದೂರದೂರುಗಳಿಂದಲೂ ಆಗಮಿಸುತ್ತಾರೆ. ಇಲ್ಲಿ ಲಕ್ಮೀನರಸಿಂಹ ಸ್ವಾಮಿಗೆ ನಡೆಯುವ ಅಷ್ಟೋತ್ತರ ಪೂಜೆಯು ತುಂಬಾನೆ ವಿಭಿನ್ನವಾಗಿರುತ್ತದೆ ಎನ್ನುವುದು ಭಕ್ತಾದಿಗಳ ಅಭಿಪ್ರಾಯ.

ಆಂಡಾಳ್ ಹೆಣ್ಣು ಮಗಳು ಕನಸಿನ ದೈವವೊಂದಕ್ಕೆ ಉಸಿರು ಹೊಯ್ದು ಆತನನ್ನು ವರಿಸಿ ಆತನಲ್ಲೇ ಮೈಗರೆದಳು. ತಂದೆ ತನ್ನ ತೋಟದಿಂದ ಆರಿಸಿ ತಂದ ಹೂಗಳನ್ನು ಮಾಲೆಗಟ್ಟಿ ಈ ಮಾಲೆ ದೇವರಿಗೆ ಸೊಗಸುವುದೇ ಎಂಬುದನ್ನು ತಾನು ಮೊದಲು ಮುಡಿದು ಪರೀಕ್ಷಿಸಿ ಆಳ್ವಾರರ ಬುಟ್ಟಿಯಲ್ಲಿ ಇಡುತ್ತಿದ್ದ ಈಕೆಯ ಪರಿಪಾಠವನ್ನು ಒಂದು ದಿನ ಅವರು ಕಂಡು ಕೋಪಿಸಿ, ಹೂಮಾಲೆಯನ್ನು ಅದು ಅಶುದ್ಧವೆಂಬ ಕಾರಣಕ್ಕಾಗಿ ಗುಡಿಗೊಯ್ಯಲಿಲ್ಲ. ಆದರೆ ಆ ದೇವನಿಗೆ ಈಕೆಯ ಹೂವವನ್ನು ಬಿಟ್ಟು ಬೇರೆ ವದಿಸಲು ಇಷ್ಟವಿರುವುದಿಲ್ಲ ಆಳ್ವಾರರು ಈಕೆ ಮುಡಿದದ್ದನ್ನೇ ದೇವರಿಗೊಪ್ಪಿಸ ಬೇಕಾಯಿತು.ಹರೆಯಕ್ಕೇರಿ ದೈವವನ್ನು ನಂಬಿ ಉನ್ಮತ್ತಳಂತೆ ಇದ್ದ ಈ ಹುಡುಗಿಯನ್ನು ಏನು ಮಾಡಬೇಕೆಂಬ ಬಗ್ಗೆ ಆಳ್ವಾರರು ಚಿಂತೆಗೀಡಾದರು.

ಇದು ಸಿಕ್ಕ ಹಸುಳೆ, ಸಾಕಿದ ಮಗು, ಸುಸಂಸ್ಕೃತಳೂ ಕೋಮಲಮನಸ್ಕಳೂ ಸುಂದರಿಯೂ ಆದ ಇವಳ ವರ್ತನೆಯೋ ಸಾಮಾನ್ಯ ಸ್ತ್ರೀಯರದಿದ್ದಂತಲ್ಲ ಎಂದು ಎಲ್ಲರಿಗೂ ತಿಳಿದಿತ್ತು, ಕೊನೆಯಲ್ಲಿ ಆಂಡಾಳ್ ಸ್ವಾಮಿಗೆ ವರಣಮಾಲೆಯನ್ನು ಹಾಕಿ ಆತನ ಹೃದಯವನ್ನು ಹೊಕ್ಕು ಕಣ್ಮರೆಯಾದಳು. ಇದು ಆಂಡಳ ದೇವಿಯ ಕಥೆ. ಇನ್ನು ಇಲ್ಲಿಗೆ ತಲುಪಬೇಕಾದರೆ ಮೊದಲು ನಂಜನಗೂಡು ತಾಲೂಕು ಹೆಡತಲೆ ಗ್ರಾಮದಲ್ಲಿ ಈ ದೇವಾಲಯವಿದೆ. ಇಲ್ಲಿಗೆ ತಲುಪಲು ನೀವು ಮೈಸೂರು ಜಿಲ್ಲೆಗೆ ಆಗಮಿಸಬೇಕು. ನಂತರ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮಕ್ಕೆ ಭೇಟಿ ನೀಡಿದರೆ, ನೀವು ಈ ದೇವಾಲಯವನ್ನು ತಲುಪಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now