ನಿಮಗಿರುವ ಕಾಯಿಲೆಗಳು ನಿಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಪ್ರವೇಶಿಸಿ ಕಾಡುತ್ತ.? ಇಲ್ಲಿದೆ ನೋಡಿ ಸೂಕ್ತ ಮಾಹಿತಿ.. !

 

ಸ್ನೇಹಿತರೇ, ಕೆಲವೊಮ್ಮೆ ನೀವು ನಿಮ್ಮ ಪುಟಾಣಿ ಮಕ್ಕಳನ್ನೋ ಅಥವಾ ಅಣ್ಣ-ತಮ್ಮಂದಿರನ್ನೋ ನೋಡಿ, ಇವರು ನನ್ನ ಅಪ್ಪನ ಹಾಗೆ ಇದ್ದಾನೆ; ಅಜ್ಜನ ಹಾಗೆ ನಡೆಯುತ್ತಾನೆ; ಅಜ್ಜಿಯ ಹಾಗೆ ಸೂಕ್ಷ್ಮವಾಗಿ ಗಮನಿಸುತ್ತಾನೆ ಎಂದೆಲ್ಲ ಚರ್ಚೆಗಳನ್ನು ಮಾಡಿರಬಹುದು. ಹೌದು ಕೆಲವು ಗುಣಗಳು ವಂಶೀಯವಾಗಿ ಪಾಲಕರಿಂದ ಮಕ್ಕಳಿಗೆ ಬಂದಿರುತ್ತವೆ.

ಕೆಲವು ಸಿದ್ಧಾಂತಗಳು ಜೀವಕೋಶದ ರಚನಾ ಸಮಯದಲ್ಲಿ ಗುಣಗಳು ಹರಿಯುತ್ತವೆ ಎಂದು ಹೇಳಿದರೆ, ಇನ್ನು ಕೆಲವು ಆತ್ಮದ ಮುಖೇನ ಗುಣಗಳು ದೇಹವನ್ನು ಸೇರುತ್ತವೆ ಎಂದು ಹೇಳುತ್ತವೆ. ಪಾಲಕರಿಂದ ಅಂಶಗಳು ಮಕ್ಕಳಿಗೆ ಬರುವುದಾದರೆ ಕಾಯಿಲೆಗಳು ಮಕ್ಕಳನ್ನು ಸೇರಿ ತೊಂದರೆ ನೀಡಬಹುದೇ.? ಎಂಬುದು ಹಲವರಲ್ಲಿ ಕಾಡುವ ಪ್ರಶ್ನೆ.

ಈ ಬಗ್ಗೆ ಆಯುರ್ವೇದವು ಏನು ಹೇಳುತ್ತದೆ? ಎಂದು ತಿಳಿದುಕೊಳ್ಳಲು ಬಯಸುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ..
ದೇಹದಲ್ಲಿ ಅನೇಕ ಅಂಶಗಳು ಅಥವಾ ಗುಣಗಳು ಜೀವಕೋಶಗಳ DNA ಯಲ್ಲಿ ಶೇಖರಣೆಗೊಳ್ಳುತ್ತವೆ ಅಥವಾ ನೆನಪುಗಳಾಗಿ ಉಳಿಯುತ್ತವೆ ಎಂದು ಹೇಳಬಹುದು.

ಇದೇ ರೀತಿಯಾಗಿ ಯಾವುದೇ ಕಾಯಿಲೆಯ ಅಂಶವು ಡಿಎನ್ಎಯಲ್ಲಿ ಶೇಖರಣೆಗೊಂಡಿದ್ದು, ಅದು ಮುಂದುವರೆದು ಮಕ್ಕಳ ಅಥವಾ ಮೊಮ್ಮಕ್ಕಳ ದೇಹವನ್ನು ಸೇರಬಹುದು. ಜೊತೆಯಾಗಿ ಆ ಕಾಯಿಲೆಯ ಅಂಶಗಳಿಗೆ ಪೂರಕವಾದ ವಾತಾವರಣವು ಹೊಸದೇಹದಲ್ಲಿ ಕಂಡು ಬಂದರೆ ಅಂದರೆ ಹೊಸ ಶರೀರವು ದೋಷಪೂರಿತವಾಗಿದ್ದರೆ, ಮಲಮೂತ್ರಗಳ ವಿಸರ್ಜನೆಯು ಸರಿಯಾಗಿ ಆಗದೆ ಇದ್ದರೆ, ಧಾತುಗಳು ಬಲಿಷ್ಠವಾಗಿ ಇರದಿದ್ದರೆ ರೋಗ ಲಕ್ಷಣಗಳು ಕಾಣಬಹುದು.

ವಂಶಗತವಾಗಿ ಹರಿದು ಬರುವಂತಹ ಕಾಯಿಲೆಯನ್ನು ಉಂಟುಮಾಡುವ ಈ ರೀತಿಯ ಅಂಶಗಳಿಗೆ ಆಣವಮಲ ಎಂದು ಕರೆಯುತ್ತಾರೆ. ಇವುಗಳನ್ನು ಹಲವರು ಆತ್ಮದ ಫಲ ಎಂಬ ಶಬ್ದವನ್ನು ಬಳಸಿ ಹೇಳುತ್ತಾರೆ. ಯಾಕೆಂದರೆ ಆತ್ಮವು ದೇಹವನ್ನು ಪ್ರವೇಶಿಸುವಾಗ ರೋಗ ಉದ್ಭವಿಸುವ ಅಂಶಗಳನ್ನು ಅಂಟಿಸಿಕೊಂಡು ಒಳಸೇರಬಹುದು ಎಂದು ನಂಬುತ್ತಾರೆ.

ಅವುಗಳನ್ನು ಆತ್ಮವಿಕಾರಗಳೆಂದು ಗುರುತಿಸುವುದು ಉಂಟು ಸ.ತ್ತಿರುವವರ ಆತ್ಮ ವು ಸ್ವಲ್ಪ ವರ್ಷಗಳ ಒಳಗಾಗಿಯೇ ಮನೆಯಲ್ಲಿ ಹೊಸದಾಗಿ ಹುಟ್ಟುವ ಶರೀರವನ್ನು ಸೇರುತ್ತದೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಂತಹ ವಿಚಾರ. ಈ ಜೀವನದಲ್ಲಿಯೂ ಉತ್ತಮ ದಿನಚರಿಯನ್ನು ಅನುಸರಿಸದೇ ಇದ್ದಲ್ಲಿ ಅಂದರೆ ಸರಿಯಾದ ಸಮಯದಲ್ಲಿನ ಸಾಕಷ್ಟು ನಿದ್ದೆ ಮಾಡದೆ ಇರುವುದು.

ಪೋಷಕಾಂಶಗಳ ಕೊರತೆ ಮತ್ತು ರಾಸಾಯನಿಕ ಬಳಕೆಯ ಆಹಾರ ಸೇವನೆ, ಯೋಗ ವ್ಯಾಯಾಮಗಳ ರೂಢಿ ಇಲ್ಲದೆ ಇರುವುದು ಪಾಶ್ಚಿಮಾತ್ಯ ಔಷಧಿಗಳ ಅತಿಯಾದ ಬಳಕೆ ಈ ರೀತಿಯಾದ ಪಾಲನೆಯು ದೇಹದಲ್ಲಿ ದೋಷಪೂರಿತ ವ್ಯವಸ್ಥೆಯು ಸೃಷ್ಟಿಯಾಗುವಂತೆ ಮಾಡುತ್ತದೆ. ಈ ರೀತಿಯಾಗಿ ನಿಮ್ಮಲ್ಲಿ ಉಲ್ಬಣಗೊಂಡ ಕಾಯಿಲೆಯು ವಂಶೀಯವಾಗಿ ಮುಂದೆ ಹರಿಯಬಹುದು ಅಥವಾ ವಂಶಗತವಾಗಿ ನಿಮ್ಮನ್ನು ಸೇರಿರುವ ವಿಕಾರ ಅಂಶಗಳು ಅದಕ್ಕೆ ಪೂರಕವಾದ ವಾತಾವರಣದಲ್ಲಿ ಬೆರೆತು ದೇಹವನ್ನು ಕಾಯಿಲೆಯ ಗೂಡಾಗಿಸಬಹುದು.

ಇದಕ್ಕೆ ಪರಿಹಾರವಿಲ್ಲವೇ? ಎಂಬ ಪ್ರಶ್ನೆಯು ಈಗ ನಿಮ್ಮನ್ನು ಕಾಡುತ್ತಿರಬಹುದು. ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಮಾನಸಿಕ ಸಮಸ್ಯೆಗಳು ವಂಶವಾಹಿನಿಯಿಂದ ಬರಬಹುದು. ಆಯುರ್ವೇದದ ಅನುಸರಣೆಯಿಂದ ಮತ್ತು ಯೋಗಾಭ್ಯಾಸಗಳಿಂದ ಈ ರೀತಿಯ ಕಾಯಿಲೆಗಳು ದೇಹವನ್ನು ಭಾದಿಸಿದಂತೆ ನೋಡಿಕೊಳ್ಳಬಹುದು. ದೋಷಕ್ಕೆ ಪೋಷಣೆಯನ್ನು ನೀಡುವಂತಹ ಅಭ್ಯಾಸಗಳಿಂದ, ದುಶ್ಚಟಗಳಿಂದ ದೂರವಿರುವುದು ಒಳಿತು.

ನಿಯಮಿತ ವ್ಯಾಯಾಮ, ದಿನನಿತ್ಯದ ಯೋಗ, ಪ್ರಾಣಾಯಾಮ, ಸಮತೋಲನ ಆಹಾರ ಸೇವನೆ, ರಾಸಾಯನಿಕಗಳ ಬಳಕೆಯಲ್ಲಿ ಕಡಿವಾಣ, ಧ್ಯಾನ ಈ ಎಲ್ಲಾ ವಿಧಾನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹಲವಾರು ರೋಗಗಳಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು. ಅಶುದ್ಧ ಅಂಶಗಳು ದೇಹವನ್ನು ಸೇರಿದಾಗ ಅವುಗಳನ್ನು ಸ್ವಚ್ಛಗೊಳಿಸುವ ಶಕ್ತಿಯು ಬರುತ್ತದೆ.

ಅನುವಂಶೀಯ ಕಾಯಿಲೆಗಳ ಬಗ್ಗೆ ಆತಂಕ ಪಡದೆ, ಉತ್ತಮ ಜೀವನ ಪದ್ಧತಿಯನ್ನು ರೂಢಿಸಿಕೊಳ್ಳುವುದರ ಮುಖಾಂತರ ಸದೃಢ ಮಾನಸಿಕ ಹಾಗೂ ದೈಹಿಕ ಆರೋಗ್ಯವುಳ್ಳ ದೇಹವನ್ನು ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ.

Leave a Comment

%d bloggers like this: