ನಿಮಗೆ ಕೈ ಕಾಲು ಜೋಮು ಹಿಡಿಯುತ್ತಿದ್ದರೆ ತಪ್ಪದೆ ಇದನ್ನು ನೋಡಿ, ನಿರ್ಲಕ್ಷ್ಯ ಮಾಡಬೇಡಿ.

ಒಂದೇ ಕಡೆ ಸ್ವಲ್ಪ ಜಾಸ್ತಿ ಹೊತ್ತು ಕುಳಿತು ‌ಕೊಂಡರೆ ನಿಮಗೂ ಕೈ ಕಾಲು ಜೋಮು‌ ಹಿಡಿಯುತ್ತದೆಯೇ ಅಥವಾ ಕೈ ಕಾಲುಗಳಲ್ಲಿ ಇರುವೆ ಕಚ್ಚಿದ ಹಾಗೆ ಫೀಲ್ ಆಗುತ್ತದೆಯೇ ರಾತ್ರಿ ಹೊತ್ತು ಮಲಗಿ ಬೆಳಗ್ಗೆ ಏಳುವಾಗ ಕೈಗಳಲ್ಲಿ ಒಂದು ತರಹದ ನಮ್ನೆಸ್ ಬರುತ್ತದೆಯೇ ಸ್ವಲ್ಪ ಜಾಸ್ತಿ ಕೆಲಸ ಮಾಡಿದರು ಕೂಡ ಕೈಗಳಲ್ಲಿ ಸೆಳೆತ ಬಂದ ಹಾಗೆ ಜೋಮು ಬಂದ ಹಾಗೆ ಆಗುತ್ತದೆಯೇ ಇವೆಲ್ಲ ಏಕೆ ಆಗುತ್ತವೆ ಈ ಸಮಸ್ಯೆಯನ್ನು ಔಷಧಿ ಪಡೆಯದೆ ಹೇಗೆ ಸರಿಪಡಿಸುವುದು ಎಂಬುದರ ಎಲ್ಲ ಮಾಹಿತಿಗಳನ್ನು ಇಲ್ಲಿ ತಿಳಿಸಲಾಗಿದೆ ನಮ್ಮ ದೇಹದಲ್ಲಿ ವಾತ, ಪಿತ್ತ, ಕಫ ಎಂಬ ಮೂರು ಪ್ರಕೃತಿಗಳು ಇರುತ್ತವೆ. ಈ ಮೂರು ಪ್ರಕೃತಿಗಳಲ್ಲಿ ಯಾವುದಾದರೂ ಒಂದು ಜಾಸ್ತಿ ಆದರೂ ಕೂಡ ನಮ್ಮ ದೇಹದಲ್ಲಿ ಹಲವಾರು ವ್ಯತ್ಯಾಸಗಳು ಆಗಿ ದೇಹಕ್ಕೆ ಕೆಲವು ತೊಂದರೆಗಳು ಆಗುತ್ತದೆ. ಆದ್ದರಿಂದ ಈ ವಾತ, ಪಿತ್ತ, ಕಫಗಳು ಮೂರು ಕೂಡ ಸರಿ ಸಮನಾಗಿ ನಮ್ಮ ದೇಹದಲ್ಲಿ ಇರುವುದು ಮುಖ್ಯ ದೇಹದಲ್ಲಿ ವಾಯು/ ವಾತ ಜಾಸ್ತಿ ಆದಾಗ ರಕ್ತ ಸಂಚಲನೆ ತೊಂದರೆ ಆಗುತ್ತದೆ.

ದೇಹದಲ್ಲಿ ರಕ್ತದ ಚಲನೆ ಸರಿಯಾಗಿ ಆಗುವುದಿಲ್ಲ ಅಂದರೆ ರಕ್ತ ಸಂಚರಿಸುವ ಜಾಗಕ್ಕೆ ಗಾಳಿ / ವಾಯು ಸೇರಿಕೊಂಡಾಗ ಆ ಜಾಗದಲ್ಲಿ ರಕ್ತ ಸರಿಯಾಗಿ ಸಂಚರಿಸುವುದಿಲ್ಲ ಹಾಗಾಗಿ ನಮ್ನೆಸ್, ಜೋಮು‌ ಹಿಡಿಯುವುದು, ಇರುವೆ ಕಚ್ಚಿದ ಹಾಗೆ ಫೀಲ್‌ ಆಗುವುದು ಇವೆಲ್ಲ ಆಗುತ್ತದೆ. ಇದನ್ನು ಹೇಗೆ ನಿಯಂತ್ರಿಸುವುದು/ ಗುಣಪಡಿಸುವುದು ಎಂದರೆ ಯಾರಿಗೆಲ್ಲ ಮೊದಲಿನಿಂದಲೂ ಕೂಡ ವಾಯುವಿನ ತೊಂದರೆ, ಗ್ಯಾಸ್ಟ್ರಿಕ್‌ ತೊಂದರೆ ಇದೆಯೋ ಅಂತಹವರು ಅವರ ಆಹಾರದಲ್ಲಿ ಕಡಲೆ ಹಿಟ್ಟನ್ನು ಜಾಸ್ತಿ ಬಳಸಬಾರದು. ಶೇಂಗಾ/ ಕಡಲೆಬೀಜ, ನಟ್ಸ್, ಕಾಳುಗಳನ್ನು ಸಹ ಜಾಸ್ತಿ ಬಳಸಬಾರದು ಇವುಗಳನ್ನು ಮಿತಿಯಾಗಿ ಸ್ವಲ್ಪ ಮಟ್ಟಿಗೆ ತಿಂದರೆ ಏನು ತೊಂದರೆ ಆಗುವುದಿಲ್ಲ ಆದರೆ ಮಿತಿ ಮೀರಿ ಜಾಸ್ತಿ ತಿಂದರೆ ಗ್ಯಾಸ್ಟ್ರಿಕ್‌ ತೊಂದರೆ ಇಂದ ವಾತ ಅಥವಾ ವಾಯು ರಕ್ತ ಸಂಚಲನಕ್ಕೆ ಸೇರಿಕೊಂಡಾಗ ಈ ರೀತಿಯ ತೊಂದರೆ ಆಗುತ್ತದೆ. ಕೆಲವು ವೇಳೆ ನಮ್ನೆಸ್ ತಲೆಯ ಭಾಗದ ವರೆಗೂ ಹೋಗುತ್ತದೆ‌ ನೆತ್ತಿಯ ಭಾಗ ಬಾರ ಎಂದು ಎನಿಸುತ್ತದೆ. ಎದೆಯ ಭಾಗದಲ್ಲಿ ಇರುವೆ ಕಚ್ಚಿದ ಹಾಗೆ, ಎದೆ ಉರಿದ ಹಾಗೆ ಅನುಭವ ಆಗುತ್ತದೆ ಇದೆಲ್ಲವು ಇದರ ತೊಂದರೆಯೆ ಆಗಿರುತ್ತದೆ.

ಅಲ್ಲದೆ ಜಾಸ್ತಿ ಫ್ಯಾನ್ ಗಾಳಿ, ಎಸಿಯ ಗಾಳಿಯನ್ನು ಪಡೆಯುವುದು ಕೂಡ ಈ ರೀತಿಯ ಸಮಸ್ಯೆಗೆ ಕಾರಣವಾಗಿದೆ ಅದು ಹೇಗೆ ಎಂದರೆ ನಮ್ಮ‌ ಫ್ಯಾನ್/ ಎಸಿಯ ಗಾಳೀಯಿಂದ ಚರ್ಮದಲ್ಲಿರುವ ರಂಧ್ರಗಳ ಮೂಲಕ ವಾತ / ವಾಯು ದೇಹದ ಒಳಗಡೆ ಸೇರಿಕೊಂಡು ನಮ್ನೆಸ್ ಅಂತಹ, ಜೋಮು ಹಿಡಿಯುವಂತಹ‌‌ ತೊಂದರೆ ಉಂಟುಮಾಡುತ್ತದೆ. ಸ್ವಲ್ಪ ಮಟ್ಟಿಗೆ ನೋಡುವುದಾದರೆ ಇದು ಅಷ್ಟೇನೂ ದೊಡ್ಡ ತೊಂದರೆ ಅಲ್ಲ. ಆದರೆ ದಿನ ಕಳೆದಂತೆ ಈ ತೊಂದರೆ ಹೆಚ್ಚಾದರೆ ಗಂಭೀರ ಸಮಸ್ಯೆಗಳು ಕೂಡ ಈ ನಮ್ನೆಸ್ ನಿಂದ ಬರುತ್ತದೆ. ಇದಕ್ಕೆ ಪರಿಹಾರವೇನು ಎಂದರೆ ಯಾವುದೇ ಔಷಧಿಗಳು ಇಲ್ಲದೆ ಪ್ರೆಶರ್ ಪಾಯಿಂಟ್ ನಿಂದ ನಾವು ಈ ನಮ್ನೆಸ್ ಅನ್ನು ಜೋಮು ಹಿಡಿಯುವುದನ್ನು ಸಂಪೂರ್ಣವಾಗಿ ಗುಣಪಡಿಸಿ ಕೊಳ್ಳಬಹುದು‌. ಅದು ಹೇಗೆ ಎಂದರೆ ಕಾಲಿನ ಎಲ್ಲ‌ ಬೆರಳುಗಳ ಮಧ್ಯದಲ್ಲಿ ‌ಫ್ರೆಶರ್ ಪಾಯಿಂಟ್ ಅನ್ನು ಪೆನ್ನಿನಿಂದ‌ ಗುರುತಿಸಿಕೊಳ್ಳಬೇಕು. ನಂತರ ಗುರುತಿಸಿಕೊಂಡಿರುವ ಪಾಯಿಂಟ್ ನಲ್ಲಿ ಪೆನ್ ಅಥವಾ ಪೆನ್ಸಿಲ್ ಅಥವಾ ಚೂಪಾದ ವಸ್ತುವಿನಿಂದ ಮೂರು ಬಾರಿ ಒತ್ತಬೇಕು.

ಇದರಿಂದ ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ. ಹೀಗೆ ಎರಡೂ ಕಾಲಿನ ಎಲ್ಲ ಬೆರಳುಗಳ ಮಧ್ಯೆ ಮಾಡಬೇಕು ಇದನ್ನು ದಿನದಲ್ಲಿ ಎರಡು ಅಥವಾ ಮೂರು ಬಾರಿ ಮಾಡಿಕೊಳ್ಳಬೇಕು ಸ್ವಲ್ಪ‌ ಜಾಸ್ತಿ ಕೆಲಸ ಮಾಡಿದಾಗ ಮುಷ್ಟಿ ಕಟ್ಟಿದಾಗ ನಮ್ನೆಸ್ ಬರುತ್ತದೆ ಜೋಮು ಹಿಡಿದ ಹಾಗೆ ಆಗುತ್ತದೆ. ಆಗ ಕೈ ನ ಪ್ರತಿ ಬೆರಳಿನ ಮಧ್ಯದಲ್ಲಿ ಅದೆ ರೀತಿ ಪ್ರೆಶರ್ ಅನ್ನು ಮಾಡಬೇಕಾಗುತ್ತದೆ ಇದನ್ನು ನೀವು ಯಾವ ಸಮಯದಲ್ಲಾದರೂ ಮಾಡಬಹುದು ಇದರಿಂದ‌ ರಕ್ತ ಸಂಚಲನ ಸರಿಯಾಗಿ ಆಗುತ್ತದೆ. ಒಂದು ವೇಳೆ ಪೆನ್ಸಿಲ್ / ಪೆನ್ನನಿಂದ ಮಾಡಲು ಸಾಧ್ಯವಾಗದಿದರೆ ಬಟ್ಟೆಯನ್ನು‌ ಒಣಗಾಕಲು ಬಳಸುವ ಕ್ಲಿಪ್ ಗಳನ್ನು ಕೂಡ ಬಳಸಿ 5-8 ಸೆಕೆಂಡ್ ಗಳ ಕಾಲ ದಿನಕ್ಕೆ ಮೂರು ಬಾರಿ ಹೀಗೆ ಮಾಡುವುದರಿಂದ ನಮ್ನೆಸ್, ಜೋಮು ಹಿಡಿಯುವುದು ಕೈ ಕಾಲುಗಳಲ್ಲಿ ಇರುವೆ ಕಚ್ಚಿದ ಹಾಗೆ ಆಗುವುದು ಇವೆಲ್ಲ ಕಡಿಮೆ ಆಗುತ್ತವೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು.

Leave a Comment

%d bloggers like this: