ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಬೆಳ್ಳಗೆ ಕಾಣಬೇಕು ಸುಂದರವಾಗಿ ಕಾಣಬೇಕು ಅಂತ ಅಂದುಕೊಳ್ಳುತ್ತಾರೆ ಆದರೆ ಸೌಂದರ್ಯ ಎಂಬುದು ಕೆಲವರಿಗೆ ಸಹಜವಾಗಿ ಹುಟ್ಟುತ್ತನೆ ಬರುತ್ತದೆ ಇನ್ನೂ ಕೆಲವರಿಗೆ ಬರುವುದಿಲ್ಲ. ಹಾಗಾಗಿ ಇಂದು ನೈಸರ್ಗಿಕ ವಿಧಾನದಿಂದ ಯಾವ ರೀತಿಯಾಗಿ ನಾವು ನಮ್ಮ ಮುಖದ ಕಾಂತಿಯನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ನಾವು ಹೇಳುವಂತಹ ಈ ವಿಧಾನವನ್ನು ನೀವು ಚಾಚುತಪ್ಪದೇ ಪರಿಪಾಲನೆ ಮಾಡಿದರೆ ಖಚಿತವಾಗಿಯೂ ಕೂಡ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ನಾವು ಬಳಕೆ ಮಾಡಿರುವಂತಹ ಎಲ್ಲಾ ಪದಾರ್ಥಗಳು ಕೂಡ ನೈಸರ್ಗಿಕ ಪದಾರ್ಥಗಳು ಹಾಗಾಗಿ ಇದರಿಂದ ಯಾವುದೇ ರೀತಿಯಾದಂತಹ ಅಡ್ಡಪರಿಣಾಮಗಳು ನಿಮ್ಮ ಚರ್ಮದ ಮೇಲೆ ಬೀಳುವುದಿಲ್ಲ.
ಹಾಗಾಗಿ ಇಂದು ಮುಖದ ಕಾಂತಿಯನ್ನು ಹೆಚ್ಚಿಸುವುದಕ್ಕೆ ತಯಾರು ಮಾಡಬೇಕಾದಂತಹ ಮನೆಮದ್ದು ಯಾವುದು ಹಾಗೂ ಇದಕ್ಕೆ ಬಳಕೆ ಮಾಡುವಂತಹ ಪದಾರ್ಥಗಳು ಏನು ಹಾಗೂ ಇದನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ. ಮೊದಲಿಗೆ ಮನೆಮದ್ದಿಗೆ ಬೇಕಾಗುವಂತಹ ಪದಾರ್ಥಗಳು ಕಾಫಿ ಪೌಡರ್, ಸಕ್ಕರೆ, ಕೊಬ್ಬರಿ ಎಣ್ಣೆ, ನಿಂಬೆಹಣ್ಣು ಈ ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಮನೆಮದ್ದನ್ನು ಸಿದ್ದ ಮಾಡಬಹುದಾಗಿದೆ. ಮೊದಲಿಗೆ ಒಂದು ಬಟ್ಟಲಿಗೆ 2 ಟೇಬಲ್ ಸ್ಪೂನ್ ಕಾಫಿ ಪೌಡರ್ ಹಾಕಿ ನೀವು ಮನೆಯಲ್ಲಿ ಯಾವ ಕಾಫಿ ಪೌಡರ್ ಉಪಯೋಗ ಮಾಡುತ್ತಿರುವವರನ್ನು ಬಳಕೆ ಮಾಡಬಹುದು. ಇಂತಹದ್ದೆ ಬ್ರ್ಯಾಂಡನ್ನು ನೀವು ಬಳಕೆ ಮಾಡಬೇಕು ಎಂಬ ಪ್ರಮೇಯವೇ ಇಲ್ಲ ನೀವು ಪ್ರತಿನಿತ್ಯ ಯಾವ ಕಾಫಿಯನ್ನು ಕುಡಿಯುತ್ತಿರು ಅದೇ ಕಾಫಿ ಪೌಡರನ್ನು ಬಳಕೆ ಮಾಡಬಹುದಾಗಿದೆ.
ತದನಂತರ ಇದೆ ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಹಾಕಿಕೊಳ್ಳಿ ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಿ ನೀವು ಎಷ್ಟು ಪ್ರಮಾಣದಲ್ಲಿ ಕಾಫಿ ತೆಗೆದುಕೊಂಡಿರುತ್ತಿರೋ ಅದರ ಅರ್ಧದಷ್ಟು ಪ್ರಮಾಣದಲ್ಲಿ ಸಕ್ಕರೆಯನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ನೀವು 4 ಟೇಬಲ್ ಸ್ಪೂನ್ ಕಾಫಿ ಪೌಡರ್ ತೆಗೆದುಕೊಂಡರೆ ಅದಕ್ಕೆ 2 ಟೇಬಲ್ ಸ್ಪೂನ್ ಸಕ್ಕರೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಂತರ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿ ಇವೆಲ್ಲವನ್ನು ಕೂಡ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ ಮತ್ತೊಮ್ಮೆ ಎಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಅಪ್ಲೈ ಮಾಡಬೇಕು. ಮುಖಕ್ಕೆ ಮಾತ್ರವಲ್ಲದೆ ಕೈ ಕಾಲು ಅಥವಾ ದೇಹದ ಯಾವುದೇ ಭಾಗಕ್ಕೂ ಬೇಕಾದರೂ ಕೂಡ ನೀವು ಇದನ್ನು ಲೇಪನ ಮಾಡಬಹುದು.
ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ತದನಂತರ ಇದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ಎರಡರಿಂದ ಮೂರು ದಿನಗಳ ಕಾಲ ಮಾಡಿದರೆ ಸಾಕು ನಿಮ್ಮ ಮುಖದ ಕಾಂತಿ ವೃದ್ಧಿಯಾಗುತ್ತದೆ ನಿಮ್ಮ ಚರ್ಮದ ಬಣ್ಣ ಕಪ್ಪು ಇದ್ದರು ಕೂಡ ಅದು ಬಿಳಿ ಬಣ್ಣಕ್ಕೆ ಮಾರ್ಪಡುತ್ತದೆ. ಇಲ್ಲಿ ಬಳಕೆ ಮಾಡಿರುವಂತಹ ಎಲ್ಲಾ ಪದಾರ್ಥಗಳು ಕೂಡ ನೈಸರ್ಗಿಕ ವಿಧಾನವಾಗಿದೆ ಹಾಗಾಗಿ ನೀವು ಭಯ ಪಡುವಂತಹ ಅಗತ್ಯವಿಲ್ಲ ಕೇವಲ ಮೂರು ದಿನ ಬಳಕೆ ಮಾಡಿ ನೋಡಿ ಅದರ ಫಲಿತಾಂಶವನ್ನು ನೀವೇ ನಿಮ್ಮ ಕಣ್ಣಾರೆ ನೋಡಬಹುದಾಗಿದೆ. ಇದನ್ನು ಹತ್ತು ವರ್ಷದ ಮೇಲ್ಪಟ್ಟವರು ಬಳಕೆ ಮಾಡಬಹುದು ಅದಕ್ಕಿಂತ ಕಡಿಮೆ ವಯಸ್ಸಿನವರು ಬಳಕೆ ಮಾಡದೇ ಇರುವುದು ಒಳ್ಳೆಯದು.
ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಬಳಕೆ ಮಾಡಬಹುದಾಗಿದೆ ಇದಕ್ಕೆ ಯಾವುದೇ ರೀತಿಯಾದಂತಹ ವಯೋಮಿತಿಯ ಅಂತರವಿಲ್ಲ. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಅಂಶವಿರುವುದರಿಂದ ಇದು ಮುಖದಲ್ಲಿ ಇರುವಂತಹ ಬೇಡವಾದ ಜಿಡ್ಡಿನ ಅಂಶವನ್ನು ಹೊರಹಾಕುವುದಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ಮುಖದಲ್ಲಿ ಅನಗತ್ಯವಾಗಿ ಇರುವಂತಹ ಕಲೆಗಳನ್ನು ಕೂಡ ನಿವಾರಣೆ ಮಾಡುವುದಕ್ಕೆ ಇದು ತುಂಬಾನೇ ಉಪಯುಕ್ತಕಾರಿ. ಇನ್ನು ಸಕ್ಕರೆಯಲ್ಲಿ ನಮ್ಮ ಸ್ಕಿನ್ ಅನ್ನು ಗ್ಲೋ ಮಾಡುವಂತಹ ಪವರ್ ಇರುವುದನ್ನು ನಾವು ನೋಡಬಹುದಾಗಿದೆ ಈ ಒಂದು ಕಾರಣಕ್ಕಾಗಿಯೇ ಸಕ್ಕರೆ ಬಳಕೆ ಮಾಡುವುದರಿಂದ ಚರ್ಮದ ಕಾಂತಿಯು ವೃದ್ಧಿಯಾಗುತ್ತದೆ. ಕೊಬ್ಬರಿ ಎಣ್ಣೆ ಮುಖದ ಕಾಂತಿಯನ್ನು ಹಾಗೂ ಕೋಮಲತೆಯನ್ನು ಹೆಚ್ಚು ಮಾಡುತ್ತದೆ ಹೌದು ಕೊಬ್ಬರಿ ಎಣ್ಣೆಯನ್ನು ನಮ್ಮ ಸ್ಕಿನ್ ಗೆ ಅಪ್ಲೈ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಚರ್ಮವು ಬಹಳ ಮೃದುವಾಗುತ್ತದೆ.
ಇನ್ನು ಕಾಫಿ ಪೌಡರ್ ನಲ್ಲಿ ನಮ್ಮ ಚರ್ಮದ ಬಣ್ಣವನ್ನು ಬದಲಾಯಿಸುವಂತಹ ಶಕ್ತಿ ಇದೆ ಹಾಗಾಗಿ ನಾವು ಬಳಕೆ ಮಾಡಿರುವಂತಹ ಎಲ್ಲಾ ಪದಾರ್ಥಗಳು ಕೂಡ ನಮ್ಮ ಚರ್ಮಕ್ಕೆ ತುಂಬಾನೇ ಉಪಯುಕ್ತಕಾರಿ ಆದಂತಹ ಅಂಶವಾಗಿದೆ. ಹಾಗಾಗಿ ನಾವು ಹೇಳುವಂತಹ ಈ ಮನೆಮದ್ದನ್ನು ಬಳಕೆ ಮಾಡಿ ನೋಡಿ ಇದರಿಂದ ಅದ್ಭುತವಾದಂತಹ ಫಲಿತಾಂಶವನ್ನು ನೀವು ಪಡೆಯಬಹುದಾಗಿದೆ ಈಗಾಗಲೇ ಸಾಕಷ್ಟು ಜನ ಈ ಒಂದು ತಂತ್ರವನ್ನು ಮಾಡಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.