ಹೆಣ್ಣುಮಕ್ಕಳು ಸೌಂದರ್ಯ ಬಗ್ಗೆ ಎಷ್ಟು ಕಾಳಜಿ ಮಾಡುತ್ತಾರೆ ಎಂದರೆ ಪ್ರತಿಕ್ಷಣವೂ ಅವರು ಏನು ಕೆಲಸ ಮಾಡುತ್ತಿದ್ದರು ಅವರ ಪ್ರಜ್ಞೆ ಅವರ ಸೌಂದರ್ಯದ ಮೇಲೆ ಇರುತ್ತದೆ. ಹೆಣ್ಣುಮಕ್ಕಳೆಂದರೆ ಹಾಗೆ ಅವರಿಗೆ ಅಂದವಾಗಿ ಕಾಣುವುದು ಎಂದರೆ ತುಂಬಾ ಖುಷಿ ಇದಕ್ಕಾಗಿ ಅವರು ಅವರ ಸೌಂದರ್ಯವನ್ನು ಕಾಪಾಡಿಕೊಳ್ಳಲು ಎಂತಹ ಹರಸಾಹಸವನ್ನೇ ಬೇಕಾದರೂ ಪಡುತ್ತಾರೆ. ಇದಕ್ಕಾಗಿ ಅವರು ಮಾಡುವ ಕೆಲಸ ಒಂದೆರಡಲ್ಲ. ತಿಂಗಳಿಗೊಮ್ಮೆಯಾದರೂ ಪಾರ್ಲರ್ ಗೆ ಹೋಗಿ ಖರ್ಚು ಮಾಡುವುದು, ಪ್ರತಿದಿನವೂ ನಾಲ್ಕೈದು ತರದ ಹೋಮ್ ರೆಮಿಡೀಸ್ ಮಾಡಿಕೊಂಡು ಹಚ್ಚಿಕೊಳ್ಳುವುದು. ಯೋಗ ಡಯಟ್ ಎಕ್ಸಸೈಜ್ ಜಿಮ್ ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತಾರೆ. ಹಾಗೂ ಅವಳ ಚರ್ಮ ಮತ್ತು ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಆಗಲೇ ಆಸ್ಪತ್ರೆಗೆ ಓಡುತ್ತಾರೆ.
ಇಷ್ಟೆಲ್ಲಾ ಮಾಡಿದರೂ ಕೂಡ ಸುಂದರವಾಗಿ ಕಾಣುತ್ತಿದ್ದೇವೆ ಎನ್ನುವ ತೃಪ್ತಿಯೂ ಕೂಡ ಕೆಲವೊಮ್ಮೆ ಹೆಣ್ಣುಮಕ್ಕಳಿಗೆ ಇರುವುದಿಲ್ಲ. ಯಾಕೆಂದರೆ ಎಷ್ಟೇ ಕಾಳಜಿ ವಹಿಸಿದರೂ ಕೂಡ ಕಾಸ್ಮೆಟಿಕ್ ಅತಿಯಾದ ಬಳಕೆಯಿಂದ ಸ್ಕಿನ್ ಡಲ್ಲಾಗಿ ಹೋಗುವುದು, ವಯಸ್ಸು ಆಗುವುದಕ್ಕಿಂತ ಮುಂಚೆ ರಿಂಕಲ್ ಆಗುವುದು, ಹಾರ್ಮೋನ್ಸ್ ವೇರಿಯೇಶನ್ ಇಂದ ಪಿಂಪಲ್ಸ್ ಬರುವುದು, ಮುಖ ಶೈನ್ ಇಲ್ಲದೆ ಇರುವುದು ಈ ರೀತಿ ಇನ್ನು ಅನೇಕ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುತ್ತಾರೆ. ಮತ್ತು ನಾವು ಬಳಸುವ ಕಾಸ್ಮೇಟಿಕ್ ಕೆಮಿಕಲ್ ಆಗಿರುವುದರಿಂದ ಅವುಗಳ ಬಳಕೆ ಮಾಡುವಾಗ ಅದರ ಬ್ರಾಂಡ್ ಮತ್ತು ಎಕ್ಸ್ಪರಿ ಡೇಟ್ ಗಳ ಬಗ್ಗೆ ಗಮನ ಹರಿಸಲೇಬೇಕು. ಇಲ್ಲವಾದಲ್ಲಿ ಅದು ರಾಂಗ್ ರಿಯಾಕ್ಷನ್ ಆಗಿ ಚರ್ಮಕ್ಕೆ ತೊಂದರೆ ಕೊಡುವ ಸಾಧ್ಯತೆಗಳು ಹೆಚ್ಚು. ಹೀಗೆ ಹೆಣ್ಣುಮಕ್ಕಳ ಸೌಂದರ್ಯದ ವಿಷಯದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೂಡ ಅದು ಕಡಿಮೆಯೇ.
ಹೆಣ್ಣುಮಕ್ಕಳು ಯಾವುದಾದರೂ ಸಭೆ ಸಮಾರಂಭಕ್ಕೆ ಹೋಗುತ್ತಿದ್ದಾರೆ ಎಂದರೆ ಅವರ ಮನದಲ್ಲಿ ಆಗುವ ಖುಷಿಯನ್ನು ಮಾತಿನಲ್ಲಿ ವಿವರಿಸಲು ತುಂಬಾ ಕಷ್ಟ. ಅವರು ಧರಿಸುವ ಬಟ್ಟೆಯ ಮ್ಯಾಚಿಂಗ್ ಕಾಸ್ಟ್ಯೂಮ್ಸ್ ಹೇರ್ ಸ್ಟೈಲ್ ಗಳ ಬಗ್ಗೆ ವಾರದಿಂದಲೇ ತಲೆ ಕೆಡಿಸಿಕೊಂಡು ಹುಡುಕಿ ತರುತ್ತಾರೆ. ಮತ್ತು ಅದಕ್ಕೆ ತಕ್ಕ ಹಾಗೆ ಅಲಂಕಾರವೆಲ್ಲ ಆದಮೇಲೆ ಅವರನ್ನು ನೋಡುವುದೇ ಒಂದು ಚೆಂದ. ಹಾಗೂ ಇವೆಲ್ಲದರ ಜೊತೆ ಮುಖ ಕೂಡ ಅಷ್ಟೇ ಬ್ರೈಟಾಗಿ ಕಾಣುವುದು ಎಲ್ಲಕ್ಕಿಂತ ಹೆಚ್ಚು ಮುಖ್ಯ. ಆದರೆ ಇದು ನ್ಯಾಚುರಲ್ ಆಗಿ ಇದ್ದರೆ ಇನ್ನು ಸೂಕ್ತ. ಅದಕ್ಕಾಗಿ ಕೆಲವು ಪ್ರಾಚೀನ ಕಾಲದ ಕೆಲವೊಂದು ಟಿಪ್ಸ್ ಗಳು ಇವೆ. ಇವುಗಳನ್ನು ಫಾಲೋ ಮಾಡುವುದರಿಂದ ನ್ಯಾಚುರಲ್ ಆಗಿಯೇ ನಾವು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ನಾವು ಹಣವನ್ನು ವ್ಯರ್ಥ ಮಾಡುವ ಅವಶ್ಯಕತೆಯೂ ಇಲ್ಲ. ಪ್ರತಿದಿನ ಕೆಲವೇ ಕೆಲವು ನಿಮಿಷಗಳ ಸಮಯವನ್ನು ಮೀಸಲಿಟ್ಟರೆ ಸಾಕು.
ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನಾವು ದೇವರ ಮುಖವನ್ನು ನೋಡುವುದು ಅಭ್ಯಾಸ ಹಾಗೂ ಹೀಗೆ ಮಾಡುವುದರ ಜೊತೆಗೆ ಕರವನ್ನು ಉಜ್ಜಿ ಮಂತ್ರಗಳನ್ನು ಹೇಳುತ್ತಾ ದಿನವನ್ನು ಪ್ರಾರಂಭ ಮಾಡುವುದು ನಮ್ಮ ಸಂಸ್ಕೃತಿಯ ರೂಢಿ. ನೀವು ಹೀಗೆ ಮಾಡುವುದರ ಜೊತೆಗೆ ನಾವು ಹೇಳುವ ಈ ಮೂರು ಟಿಪ್ಸ್ಗಳನ್ನು ಆ ಸಮಯದಲ್ಲಿ ಫಾಲೋ ಮಾಡಬಹುದು. ನೀವು ಎದ್ದ ತಕ್ಷಣ ನಿಮ್ಮ ಕಣ್ಣಿನ ಸುತ್ತ ನಿಮ್ಮ ಹಸ್ತದಿಂದ ಕಣ್ಣಿನ ಮೇಲೆ ಪ್ರೆಶರ್ ಹಾಕದೇನೆ ಮಸಾಜ್ ಮಾಡಬೇಕು. ಕನಿಷ್ಠ 20 ಸಲವಾದರೂ ಈ ರೀತಿ ಕಣ್ಣುಗಳ ಸುತ್ತ ಮಸಾಜ್ ಮಾಡಬೇಕು. ಅದಕ್ಕಾಗಿ ನೀವು ಯಾವುದೇ ಕ್ರೀಂ ಅಥವಾ ಆಯಿಲ್ ಏನನ್ನು ಬಳಸುವ ಅವಶ್ಯಕತೆ ಇಲ್ಲ. ಬರಿ ಕೈನಿಂದ ಹಸ್ತಗಳ ಸಹಾಯದಿಂದ ಹೀಗೆ ಮಾಡಿದರೆ ಸಾಕು. ಮತ್ತು ಇದನ್ನು ಪೂರ್ತಿಗೊಳಿಸಿದ ನಂತರ ಇನ್ನೊಂದು ಎಕ್ಸಸೈಸ್ ಇದೆ.
ಹೇಗೆ ನೀವು ಕಣ್ಣಿನ ಸುತ್ತ ಮಸಾಜ್ ಮಾಡಿದಿರೋ, ನಿಮ್ಮ ಎರಡು ಕಿವಿಗಳ ಸುತ್ತವೂ ಕೂಡ ಅದೇ ರೀತಿಯಾಗಿ ಮಸಾಜ್ ಮಾಡಬೇಕು ಇದನ್ನು ಕೂಡ ಕನಿಷ್ಠ 20 ಸಲವಾದರೂ ಮಾಡಬೇಕು. ಈ ರೀತಿ ಮಾಡಿದ ಮೇಲೆ ಎರಡು ಹಸ್ತಗಳನ್ನು ಚೆನ್ನಾಗಿ ಉಜ್ಜಿ ನಿಮ್ಮ ಕುತ್ತಿಗೆ ಹಾಗೂ ಮುಖದ ಮೇಲೆ ಟ್ಯಾಪ್ ಮಾಡಬೇಕು. ಹೀಗೆ ಒಂದು ನಿಮಿಷಗಳ ಕಾಲ ಟಾಪ್ ಮಾಡಿಕೊಂಡು ದಿನವನ್ನು ಶುರುಮಾಡಬೇಕು ಈ ರೀತಿ ನೀವು ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗುವುದರ ಜೊತೆಗೆ, ನಿಮ್ಮ ಹಾರ್ಮೋನ್ ಇಂಬ್ಯಾಲೆನ್ಸ್ ಇದ್ದರೆ ಅದು ಕೂಡ ಸರಿ ಆಗಿ ದಿನಪೂರ್ತಿ ನೀವು ಉತ್ಸಾಹದಿಂದ ಹಾಗೂ ಖುಷಿಯಿಂದ ಇರುವಂತೆ ಇದು ಮಾಡುತ್ತದೆ.