ಬಸ್ಸು, ಕಾರ್ ನಲ್ಲಿ ಪ್ರಯಾಣ ಮಾಡುವಾಗ ವಾಂತಿ ಬಂದರೆ, ಈ ಮನೆಮದ್ದು ಸೇವಿಸಿ ಜೀವನದಲ್ಲಿ ಇನ್ನೆಂದು ವಾಂತಿ ಸಮಸ್ಯೆ ಕಂಡು ಬರುವುದಿಲ್ಲ.

ನಮ್ಮ ಆಹಾರದಲ್ಲಿ ಆಗುವ ವ್ಯತ್ಯಾಸದಿಂದ ಅಥವಾ ಯಾವುದಾದರೂ ವೈರಸ್ ಜ್ವರ ಬಂದಾಗ ಮತ್ತು ಕೆಲವೊಮ್ಮೆ ಬೇರೆ ಯಾವುದಾದರೂ ಕಾರಣದಿಂದಲೂ ನಮಗೆ ಈ ಡೈರಿಯ ಹಾಗೂ ವಾಂತಿಯ ಸಮಸ್ಯೆ ಉಂಟಾಗುತ್ತದೆ. ಆದರೆ ಇದು ಒಂದು ಬಾರಿ ಆದರೆ ಸುಮ್ಮನಾಗಬಹುದು ದಿನಪೂರ್ತಿ ನಿಲ್ಲದೆ ಅತಿಯಾದ ವಾಂತಿ ಹಾಗೂ ಅತಿಯಾದ ಬೇಧಿ ಆಗುವುದು ಆರೋಗ್ಯದ ವಿಚಾರದಲ್ಲಿ ತುಂಬಾ ಅಪಾಯ. ಮಕ್ಕಳಿಗಂತೂ ಅವರು ತುಂಬಾ ಸೂಕ್ಷ್ಮ ಇರುವುದರಿಂದ ಸ್ವಲ್ಪ ಫುಡ್ ಇನ್ಫೆಕ್ಷನ್ ಆದರೂ ಸಹ ಈ ರೀತಿ ಡೈರಿಯ ಹಾಗೂ ವಾಮಿಟಿಂಗ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ನಾವೇನಾದರೂ ಇದನ್ನು ನಿರ್ಲಕ್ಷ್ಯ ಮಾಡಿದರೆ ಪದೇಪದೇ ನಮಗೆ ವಾಂತಿ ಮತ್ತು ಭೇದಿ ಆಗುವುದರಿಂದ ಪೂರ್ತಿ ಸುಸ್ತಾಗಿ ಬಿಡುತ್ತೇವೆ. ದೇಹದಲ್ಲಿ ನೀರಿನ ಅಂಶವೆಲ್ಲಾ ಹೋಗಿ ನಿರ್ಜಲೀಕರಣ ಆಗಿ ದೇಹವು ದುರ್ಬಲವಾಗಿ ಬಿಡುತ್ತದೆ.
ಹಾಗಾಗಿ ನಾವು ತಿನ್ನುವ ಆಹಾರದ ಸ್ವಚ್ಛತೆ ಮತ್ತು ನಾವು ಆಹಾರ ತಯಾರಿಸುವ ವಾತಾವರಣ ಬಗ್ಗೆ, ನಾವು ಶೌಚಕ್ಕೆ ಹೋಗುವ ಗೃಹದ ಬಗ್ಗೆ ಆದಷ್ಟು ಕಾಳಜಿಯಿಂದ ಇರುವುದು ಉತ್ತಮ. ಯಾಕೆಂದರೆ ಯಾವುದೇ ಒಂದು ಕಾಯಿಲೆ ಕೂಡ ಶುರುವಾಗುವುದು ಮೊದಲು ಇಲ್ಲಿಂದಲೇ ಎನ್ನುವುದು ವೈದ್ಯರೇ ಹೇಳುವ ಮಾತು. ಆದ್ದರಿಂದ ಇವುಗಳ ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಬೇಕು. ಇಲ್ಲವಾದಲ್ಲಿ ದೇಹವು ಇಂತಹ ಸಮಸ್ಯೆಗಳಿಗೆ ಸಿಲುಕಿ ಹಾಕಿಕೊಂಡು ಅಪಾರವಾದ ನೋವನ್ನು ಅನುಭವಿಸ ಬೇಕಾಗುತ್ತದೆ. ಹಾಗಾಗಿ ಕಾಯಿಲೆ ಬರುವ ಮೊದಲೇ ಮುಂಜಾಗ್ರತೆ ವಹಿಸುವುದು ಎಲ್ಲ ರೀತಿಯಲ್ಲಿ ಒಳ್ಳೆಯದು. ಆದರೆ ಕೆಲವೊಮ್ಮೆ ಎಷ್ಟೇ ಕಾಳಜಿ ವಹಿಸಿದರೂ ಸಹ ಈ ರೀತಿ ಆಗಿಬಿಡುತ್ತದೆ. ಮಕ್ಕಳಿಗೆ ಆಗಲಿ ದೊಡ್ಡವರಿಗೆ ಆಗಲಿ ಈ ರೀತಿ ಸಮಸ್ಯೆ ಬಂದಾಗ ತಕ್ಷಣವೇ ಆಸ್ಪತ್ರೆಗೆ ಹೋಗುವುದು ಒಳ್ಳೆಯದು.
ಆದರೆ ಎಲ್ಲಾ ಸಮಯದಲ್ಲೂ ತಕ್ಷಣವೇ ಆಸ್ಪತ್ರೆಗೆ ಹೋಗುವ ಅನುಕೂಲತೆ ಇಲ್ಲ ವಾಗಿರುವುದರಿಂದ ನಾವು ಡಾಕ್ಟರ್ ಬಳಿ ಹೋಗಿ ಔಷಧಿ ತೆಗೆದುಕೊಳ್ಳುವವರೆಗೂ ನಮ್ಮ ಮನೆಯಲ್ಲಿ ಏನಾದರೂ ಮನೆಮದ್ದು ಮಾಡಿ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬೇಕು. ಮೊದಲೆಲ್ಲಾ ಮನೆಯಲ್ಲಿ ಹಿರಿಯರು ಇರುತ್ತಿದ್ದರು ಅವರು ಎಲ್ಲಾ ಕಾಯಿಲೆಗಳಿಗೂ ಆಸ್ಪತ್ರೆಯ ಬಳಿ ಹೋಗುತ್ತಿರಲಿಲ್ಲ. ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೊಂಡು ಮನೆ ಮದ್ದು ತಯಾರಿಸಿ ಈ ರೀತಿ ಸಮಸ್ಯೆಯಲ್ಲಿ ಸಿಲುಕಿರುವ ಅವರಿಗೆ ನೀಡಿ ಅವರು ಗುಣವಾಗುವಂತೆ ಮಾಡುತ್ತಿದ್ದರು. ಈಗಲೂ ಸಹ ನಮ್ಮ ದೇಶದಲ್ಲಿ ಎಷ್ಟೋ ಊರುಗಳಲ್ಲಿ ಆಸ್ಪತ್ರೆಯ ವ್ಯವಸ್ಥೆಯೇ ಇಲ್ಲ. ಈ ರೀತಿ ಅಕಸ್ಮಾತಾಗಿ ಡೈರಿ ಅಥವಾ ವಾಂತಿ ಸಮಸ್ಯೆ ಶುರುವಾದಾಗ ಆ ಸಮಸ್ಯೆಗೆ ತುತ್ತಾಗಿರುವ ವ್ಯಕ್ತಿಯು ಆಸ್ಪತ್ರೆ ಸೇರುವವರೆಗೂ ಈ ರೀತಿ ವಾಂತಿ ಅಥವಾ ಭೇದಿಯನ್ನು ಮಾಡುತ್ತಲೇ ಇದ್ದರೆ ಅವನ ಪ್ರಾಣಕ್ಕೆ ಕೆಲವೊಮ್ಮೆ ಅಪಾಯ ಉಂಟಾಗಬಹುದು.
ಹಾಗಾಗಿ ನಾವು ಕೂಡ ಇದನ್ನು ಮನೆಯಲ್ಲಿಯೇ ನಿವಾರಿಸಿಕೊಳ್ಳುವ ಅಥವಾ ಕಡಿಮೆ ಮಾಡುವ ಕೆಲವು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಒಳ್ಳೆಯದು. ಧೈರ್ಯ ಮತ್ತು ವಾಂತಿ ಸಮಸ್ಯೆಗೆ ಹಲವಾರು ಮನೆಮದ್ದುಗಳು ಇವೆ. ಅದರಲ್ಲೂ ಇವುಗಳನ್ನು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಯಾವುದೇ ಖರ್ಚಿಲ್ಲದೆ ಸುಲಭವಾಗಿ ಸರಳ ರೀತಿಯಲ್ಲಿ ಕೆಲವೇ ನಿಮಿಷಗಳಲ್ಲಿ ತಯಾರಿಸಿ ಕೊಳ್ಳಬಹುದು. ಈ ಮನೆಮದ್ದನ್ನು ತಯಾರಿಸುವುದು ತೀರಾ ಸುಲಭ ಆದ್ದರಿಂದ ಯಾರು ಬೇಕಾದರೂ ಇದನ್ನು ತಯಾರಿಸಿ ಕೊಡುತ್ತಾರೆ. ಇದನ್ನು ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು ಲವಂಗ, ಜೀರಿಗೆ, ಕರಿಮೆಣಸು, ಈರುಳ್ಳಿ ಮತ್ತು ಸ್ವಲ್ಪ ಶುಂಠಿ ಇದ್ದರೆ ಸಾಕು. ಮೊದಲಿಗೆ ಒಂದು ಬಾಣಲೆಯನ್ನು ಬಿಸಿಯಾಗಲು ಇಟ್ಟು ನಂತರ ಅದಕ್ಕೆ 1 ಟೀಚಮಚ ಕರಿಮೆಣಸು ಒಂದು ಟೀ ಚಮಚ ಜೀರಿಗೆ ಮತ್ತು 6 ಲವಂಗಗಳನ್ನು ಹಾಕಿ ಚೆನ್ನಾಗಿ ಉರಿಯಬೇಕು.
ಈ ರೀತಿ ಫ್ರೈ ಮಾಡುತ್ತಿರುವಾಗಲೇ ಉದ್ದವಾಗಿ ಹೆಚ್ಚಿಟ್ಟುಕೊಂಡ ಒಂದು ಈರುಳ್ಳಿ ಮತ್ತು ಒಂದು ಸಣ್ಣ ಪೀಸ್ ಶುಂಠಿಯನ್ನು ಇದಕ್ಕೆ ಹಾಕಿ ಫ್ರೈ ಮಾಡಬೇಕು. ಎಲ್ಲವನ್ನು ಚೆನ್ನಾಗಿ ಉರಿದುಕೊಂಡ ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಎರಡು ಲೋಟದಷ್ಟು ನೀರನ್ನು ಕುದಿಯಲು ಇಟ್ಟು ಅದು ಬಿಸಿಯಾದ ಮೇಲೆ ರುಬ್ಬಿಕೊಂಡಿದ್ದ ಈ ಪೇಸ್ಟನ್ನು ಕುಸಿಯುತ್ತಿರುವ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಬೇಕು. ಇವೆಲ್ಲವೂ ಚೆನ್ನಾಗಿ ಬೆಂದ ನಂತರ ಒಂದು ಲೋಟಕ್ಕೆ ಜಾಲರಿಯ ಸಹಾಯದಿಂದ ಕಷಾಯವನ್ನು ಸೋಸಿಕೊಳ್ಳಬೇಕು. ಅರ್ಧ ಲೋಟದಷ್ಟು ಕಷಾಯವನ್ನು ದೊಡ್ಡವರಿಗೆ ಕೊಡಬಹುದು ಆದರೆ ಮಕ್ಕಳಿಗಾದರೆ ಅದರಲ್ಲಿ ಕಾಲುಭಾಗ ಮಾತ್ರ ಕೊಡಬೇಕು. ಇದು ಕುಡಿಯಲು ಸ್ಪೈಸಿ ಆಗಿರುತ್ತದೆ. ಮತ್ತು ತಕ್ಷಣವೇ ಉತ್ತಮವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

Leave a Comment

%d bloggers like this: