ಬಾಡಿಗೆ ಮನೆಯಲ್ಲಿ ಇದ್ದವರಿಗೆ ಗುಡ್ ನ್ಯೂಸ್, 12 ವರ್ಷದಿಂದ ಒಂದೇ ಮನೆಯಲ್ಲಿ ಇದ್ದಿರಾ.? ಹಾಗಿದ್ರೆ ಇನ್ಮುಂದೆ ಆ ಮನೆ ನಿಮ್ಮದೆ ಆಗುತ್ತೆ.! ಇಲ್ಲಿದೆ ನೋಡಿ ಕೋರ್ಟ್ ತೀರ್ಪು

 

WhatsApp Group Join Now
Telegram Group Join Now

12 ವರ್ಷಗಳ ನಿರಂತರ ಸ್ವಾಧೀನತೆ ನಿಮ್ಮನ್ನು ಆ ಆಸ್ತಿಯ ಮಾಲೀಕರನ್ನಾಗಿಸುತ್ತದೆvಹೇಗೆ ಗೊತ್ತಾ.? ಪ್ರತಿಕೂಲ ಸ್ವಾಧೀನ ಅಥವಾ ಪ್ರತಿಕೂಲ ಕಬ್ಜೆ ಎಂದರೆ ಯಾವುದೋ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮಾಲೀಕತ್ವದಲ್ಲಿರುವ ಆಸ್ತಿಯನ್ನು ಸ್ವಾಧೀನ ಪಡಿಸಿಕೊಂಡು, ಆ ಸ್ವಾಧೀನ ಪಡಿಸಿಕೊಂಡ ಆಸ್ತಿಯನ್ನು ಪ್ರತ್ಯಕ್ಷವಾಗಿ, ಬಹಿರಂಗವಾಗಿ, ನಿರಂತರವಾಗಿ 12 ವರ್ಷಗಳಿಗಿಂತಲೂ ಹೆಚ್ಚುಕಾಲ ಯಾವುದೇ ಅಡೆತಡೆ ಇಲ್ಲದೆ ಆ ಆಸ್ತಿಯ ಸ್ವಾಧೀನಾನುಭವ ಹೊಂದಿದ್ದ ಪಕ್ಷದಲ್ಲಿ ಅದನ್ನು ಪ್ರತಿಕೂಲ ಸ್ವಾಧೀನ ಎನ್ನುತ್ತಾರೆ.

ಇದನ್ನು ಪ್ರತಿಕೂಲ ಸ್ವಾಧೀನ ಎಂದು ಕರೆಯಲು ಕಾರಣ ಆ ಆಸ್ತಿ ಮಾಲಿಕ ಬೇರೆ ಯಾರೋ ಆಗಿರುತ್ತಾರೆ ಆದರೆ ಈ ವ್ಯಕ್ತಿಯು ಅದನ್ನು ಸ್ವಾಧೀನ ಪಡಿಸಿಕೊಂಡಿರುತ್ತಾನೆ ಹಾಗಾಗಿ ಪ್ರತಿಕೂಲ ಸ್ವಾಧೀನ ಎನ್ನುತ್ತಾರೆ. ಈ ರೀತಿ ಪ್ರತಿಕೂಲ ಸ್ವಾಧೀನ ಎಂದು ಕರೆಸಿಕೊಳ್ಳಬೇಕು ಎಂದರೆ ಹಲವು ಅಂಶಗಳನ್ನು ಅದು ಹೊಂದಿರಬೇಕಾಗುತ್ತದೆ. ಅದರಲ್ಲಿ ಪ್ರಮುಖವಾದವು ಈ ರೀತಿ ಇವೆ ನೋಡಿ.

ಪ್ರತಿಕೂಲ ಸ್ವಾಧೀನ ಎಂದು ಕರೆಸಿಕೊಳ್ಳಬೇಕು ಎಂದರೆ ಪ್ರತ್ಯಕ್ಷವಾಗಿ ಆತ ಅದನ್ನು ಅನುಭವಿಸುತ್ತಿರಬೇಕು, ಆ ಆಸ್ತಿ ಆತನ ಸ್ವಾಧೀನಾನುಭವದಲ್ಲಿರಬೇಕು. ಯಾವ ವ್ಯಕ್ತಿ ಈ ರೀತಿ ನಾನು ಪ್ರತಿಕೂಲಸ್ವಾಧೀನಾನುಭವ ಹೊಂದಿದ್ದೇನೆ ಎಂದು ಹೇಳುತ್ತಾರೋ ಆ ವ್ಯಕ್ತಿಯು ಪ್ರತ್ಯಕ್ಷವಾಗಿ ಅವನೇ ಸ್ವಾಧೀನಾನುಭವದಲ್ಲಿ ಇರಬೇಕು. ಆಗ ಮಾತ್ರ ಅದು ಪ್ರತಿಕೂಲ ಸ್ವಾಧೀನಾನುಭವ ಎಂದು ಕರೆಸಿಕೊಳ್ಳುತ್ತದೆ.

ಅವನ ನೆರೆಹೊರೆಯವರು, ಸಾರ್ವಜನಿಕರು ಮತ್ತು ಮುಖ್ಯವಾಗಿ ಆ ಆಸ್ತಿಯ ಮಾಲೀಕನಿಗೂ ಗೊತ್ತಿಬೇಕು. ಈ ವ್ಯಕ್ತಿ ಪ್ರತಿಕೂಲ ಸ್ವಾಧೀನಾನುಭವದಲ್ಲಿ ಇದ್ದಾನೆ ಎಂದು. ಎರಡನೇ ಮುಖ್ಯ ಅಂಶ ಏನು ಎಂದರೆ ಆತ ಬಹಿರಂಗವಾಗಿ ಆ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು. ಇದೆಲ್ಲವು ಆ ಆಸ್ತಿಯ ಮಾಲೀಕನಿಗೂ ಅರಿವಿರಬೇಕು. ನಾನು ಈ ಆಸ್ತಿಯ ಮಾಲೀಕನು ಆಗಿದ್ದರು ಕೂಡ ಅವನು ನನ್ನ ಆಸ್ತಿಯ ಸ್ವಾಧೀನಾನುಭವದಲ್ಲಿ ಇದ್ದಾನೆ ಎಂದು.

ಹಾಗೆ ಆ ಆಸ್ತಿಯ ನೆರೆಹೊರೆಯಲ್ಲಿ ಇರುವವರೆಗೂ ಕೂಡ ಈ ಆಸ್ತಿಯ ಮಾಲೀಕ ಈತನಲ್ಲ, ಸ್ವಾಧೀನಾನುಭವದಲ್ಲಿ ಈತನಿದ್ದಾನೆ ಎನ್ನುವುದು ಗೊತ್ತಿರಬೇಕು. ಈ ವಿಚಾರವಾಗಿ ಮತ್ತೊಂದು ಪ್ರಮುಖ ಅಂಶ ಏನೆಂದರೆ ಒಂದು ಆಸ್ತಿಯ ಸ್ವಾಧೀನಾನುಭವದಲ್ಲಿ ಇರುವ ವ್ಯಕ್ತಿ ನಿರಂತರವಾಗಿ 12 ಅಥವಾ 12 ಕ್ಕಿಂತ ಹೆಚ್ಚು ವರ್ಷಗಳ ಕಾಲ ಆ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು.

ಅಂತಹ ಸಂದರ್ಭದಲ್ಲಿ ಮಾತ್ರ ಅದನ್ನು ಪ್ರತಿಕೂಲ ಸ್ವಾಧೀನಾನುಭವ ಎಂದು ಒಪ್ಪಬಹುದು. ಈ 12 ವರ್ಷಗಳಲ್ಲಿ ಸಂಪೂರ್ಣವಾಗಿ 12 ವರ್ಷವೂ ಕೂಡ ಆತ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು. ಎರಡು ವರ್ಷ ಇರುವುದು, ಮಧ್ಯೆ ಆರು ತಿಂಗಳು ಅಥವಾ ವರ್ಷ ಇಲ್ಲದಿರುವುದು ಮೂರು ವರ್ಷಗಳ ನಂತರ ಮತ್ತೆ ಬಂದು ಅನುಭವದಲ್ಲಿ ಇರುವುದು ಈ ರೀತಿ ಆದಾಗ ಅದು ಪರಿಗಣನೆಗೆ ಬರುವುದಿಲ್ಲ. ಹಾಗಾಗಿ ಹೇಳಿರುವುದು ನಿರಂತರವಾಗಿ 12 ಅಥವಾ 12ಕ್ಕಿಂತ ಹೆಚ್ಚು ವರ್ಷಗಳು ಸ್ವಾಧಿನಾನುಭವದಲ್ಲಿ ಇರಬೇಕು ಎಂದು.

ಒಬ್ಬ ವ್ಯಕ್ತಿ ಒಂದು ಆಸ್ತಿಯ ಸ್ವಾದೀನಾನುಭವ ಹೊಂದಿರುವಾಗ ಅದರ ಮಾಲೀಕ ನ್ಯಾಯಾಲಯದಲ್ಲಿ ಈ ಆಸ್ತಿಯ ಬಗ್ಗೆ ಯಾವುದೇ ರೀತಿ ತಕರಾರು ಹೊಂದಿರಬಾರದು. ಈತ ಅಕ್ರಮವಾಗಿ ಅಥವಾ ಬಲವಂತವಾಗಿ ಈ ರೀತಿ ಕಬ್ಜೆ ಮಾಡಿದ್ದಾನೆ ಎನ್ನುವ ದೂರು ಮಾಲೀಕನ ಕಡೆಯಿಂದ ಇರಬಾರದು. ಅಂತಹ ಆಸ್ತಿ ಮಾತ್ರ ಪ್ರತಿಕೂಲ ಸ್ವಾಧೀನ ಎನಿಸಿಕೊಳ್ಳುತ್ತದೆ. ಇದೆಲ್ಲ ಇದ್ದ ಪಕ್ಷದಲ್ಲಿ ಅದನ್ನು ನಿಮ್ಮ ಸ್ವಂತ ಆಸ್ತಿಯಾಗಿ ಮಾಡಿಕೊಳ್ಳಬಹುದು. ಅದಕ್ಕೆ ಮುಂದಿನ ಕ್ರಮಗಳನ್ನು ಏನೇನು ಕೈಗೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now