ಮೌಥ್ ಉಲ್ಸರ್ ಎನ್ನುವುದು ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರನ್ನೂ ಕಾಡುವ ಒಂದು ಅತಿದೊಡ್ಡ ಆರೋಗ್ಯ ಸಮಸ್ಯೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಈ ಮೌಥ್ ಉಲ್ಸರ್ ತುಂಬಾ ಚಿಕ್ಕ ಪ್ರಮಾಣದಲ್ಲಿದ್ದರೂ ತಡೆದು ಕೊಳ್ಳಲಾಗದಷ್ಟು ನೋವನ್ನು ನೀಡುತ್ತದೆ. ಸಾಮಾನ್ಯವಾಗಿ ಮೌತ್ ಅಲ್ಸರ್ ಆದರೆ ಅದು ಬಾಯಿಯ ಒಳಗಡೆ ವಸಡುಗಳಲ್ಲಿ ತುಟಿಯಲ್ಲಿ ನಾಲಿಗೆಯಲ್ಲಿ ಸಣ್ಣ ಸಣ್ಣ ಗಾಯಗಳ ರೀತಿ ಮಾಡಿ ವಿಪರೀತವಾದ ನೋವನ್ನು ತರುತ್ತದೆ. ಕೆಲವೊಮ್ಮೆ ಒಂದೇ ಬಾರಿಗೆ ಬಾಯಿಯಲ್ಲಿ ಐದಾರು ಗಾಯಗಳು ಆಗುತ್ತದೆ. ಇದರ ನೋವಿನಿಂದ ಮುಖ ಊದಿಕೊಂಡ ಹಾಗೆ ಕಾಣುತ್ತದೆ. ಕೆಲವೊಮ್ಮೆ ವಿಪರೀತ ಜಾಸ್ತಿ ನೋವುಂಟಾದಾಗ ಜ್ವರ ಕೂಡ ಬರುವ ಸಾಧ್ಯತೆಗಳು ಇವೆ. ಈ ರೀತಿಯಾಗಿ ಬಾಯಿಯಲ್ಲಿ ಉಂಟಾಗುವ ಗಾಯದಿಂದಾಗಿ ಸರಿಯಾಗಿ ಊಟ ಮಾಡಲು ಸಹ ಆಗುವುದಿಲ್ಲ. ಈ ರೀತಿ ಮನುಷ್ಯನಿಗೆ ತುಂಬಾ ನೋವನ್ನು ನೀಡುತ್ತದೆ.
ಈ ರೀತಿ ಮೌಥ್ ಅಲ್ಸರ್ ವಿಟಮಿನ್ ಕೊರತೆಯಿಂದ ಬರುತ್ತದೆ ಎಂದು ಸಹ ಹೇಳುತ್ತಾರೆ ಹಾಗೂ ದೇಹದಲ್ಲಿ ಉಷ್ಣ ಹೆಚ್ಚಾದಾಗ ಕೂಡ ಈ ರೀತಿ ಬಾಯಿಯಲ್ಲಿ ಗುಳ್ಳೆಗಳು ಹಾಗೂ ಗಾಯ ಆಗುತ್ತದೆ ಎಂದು ಹೇಳುತ್ತಾರೆ. ಈ ಬಾಯಿಯ ಗುಳ್ಳೆಗಳಿಗೆ ಪರಿಹಾರವಾಗಿ b-complex ಪಾತ್ರೆಗಳನ್ನು ಜನ ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ ಅಥವಾ ಗಾಯವಾಗಿರುವ ಜಾಗದಲ್ಲಿ ಹಚ್ಚಲು ಜೆಲ್ ತೆಗೆದುಕೊಂಡು ಸುಮ್ಮನಾಗುತ್ತಾರೆ. ಈ ರೀತಿ ಮಾಡಿದರು ಸಹ ಇದು ವಾಸಿಯಾಗಲು ಕನಿಷ್ಠ ವಾರವಾದರೂ ಬೇಕು ಅಲ್ಲಿಯವರೆಗೂ ಈ ನೋವಿನ ಜೊತೆಯೇ ಇರಬೇಕಾಗುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳಿಗೆ ಆಸ್ಪತ್ರೆ ಔಷಧಿಗಳ ಮೊರೆ ಹೋಗುವ ಬದಲು ನಮ್ಮ ಸುತ್ತಮುತ್ತ ಇರುವ ಮೂಲಿಕೆಗಳನ್ನು ಬಳಸಿಕೊಂಡು ಔಷಧಿ ಮಾಡಿಕೊಳ್ಳುವುದು ಒಳ್ಳೆಯದು. ಮತ್ತು ಈ ರೀತಿಯ ನೈಸರ್ಗಿಕ ಔಷಧಿಗಳು ಆಸ್ಪತ್ರೆ ಔಷಧಿ ಗಳಿಗಿಂತ ಬೇಗನೆ ಕೆಲಸ ಮಾಡುತ್ತದೆ.
ನಮ್ಮ ಪ್ರಕೃತಿಯಲ್ಲಿ ಈ ರೀತಿ ಮನುಷ್ಯನಿಗೆ ಸಾಮಾನ್ಯವಾಗಿ ಕಾಡುವ ಹಲವಾರು ಸಮಸ್ಯೆಗಳಿಗೆ ನೈಸರ್ಗಿಕವಾಗಿ ಔಷಧಿ ಇದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರೆಲ್ಲರೂ ಈ ರೀತಿ ಮನೆ ಮದ್ದುಗಳನ್ನು ಮಾಡಿಕೊಂಡು ಅಥವಾ ನೈಸರ್ಗಿಕ ಪದಾರ್ಥಗಳಿಂದ ಔಷಧಿ ತಯಾರಿಸಿಕೊಂಡು ಅದರಿಂದಲೇ ಎಂತಹ ಕಾಯಿಲೆ ಆದರೂ ಅವುಗಳನ್ನು ಗುಣ ಪಡಿಸಿಕೊಳ್ಳುತ್ತಿದ್ದರು. ಆದರೆ ಈಗಿನ ಜನತೆ ಅವುಗಳ ಬಗ್ಗೆ ಆಸಕ್ತಿ ಕಳೆದು ಕೊಂಡು ಚಿಕ್ಕ ಪುಟ್ಟ ಎಲ್ಲ ಸಮಸ್ಯೆಗಳಿಗೂ ಕೂಡ ಆಸ್ಪತ್ರೆ ಕಡೆ ಹೋಗುತ್ತಾರೆ. ಇದರಿಂದ ಹಣ ಹಾಗೂ ಸಮಯ ವ್ಯರ್ಥವಾಗುವುದರ ಜೊತೆ ಆರೋಗ್ಯಕ್ಕೆ ಸೈಡ್ ಎಫೆಕ್ಟ್ ಗಳು ಕೂಡ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ಆಸ್ಪತ್ರೆ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸವನ್ನು ಬಿಡಬೇಕು. ಆದಷ್ಟು ನೈಸರ್ಗಿಕ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳುವುದರ ಕಡೆ ಯುವಜನತೆ ಗಮನ ಕೊಡಬೇಕು.
ಇದೇ ಹಾದಿಯಲ್ಲಿ ಮೌತ್ ಅಲ್ಸರ್ ಸಮಸ್ಯೆಗೆ ಇರುವ ನೈಸರ್ಗಿಕ ಮನೆ ಮದ್ದು ಯಾವುದೆಂದರೆ ಕೊಗ್ಗೆ ಗಿಡ, ಕೊಗ್ಗಲಿ ಗಿಡ ಹಾಗೂ ಇಂಪಲಿ ಗಿಡ ಎಂದು ಕೆಲವು ಕಡೆಗಳಲ್ಲಿ ಇದನ್ನು ಕರೆಯುತ್ತಾರೆ. ಆಯಾ ಪ್ರದೇಶಗಳಿಗೆ ಅನುಗುಣವಾಗಿ ಬೇರೆ ಬೇರೆ ಹೆಸರಿನಿಂದ ಈ ಗಿಡವನ್ನು ಕರೆಯುತ್ತಾರೆ. ಈ ಗಿಡದ ಎಲೆಗಳು ತುಂಬಾ ಔಷಧಿಯ ಗುಣವನ್ನು ಹೊಂದಿದೆ. ಮತ್ತು ಹಲವಾರು ಕಾಯಿಲೆಗಳನ್ನು ಈ ಗಿಡದ ಔಷಧಿಗಳಿಂದ ಗುಣ ಪಡಿಸಿಕೊಳ್ಳಬಹುದು. ಇಂತಹ ಅದ್ಭುತವಾದ ಗುಣಗಳು ಹೊಂದಿರುವ ಈ ಗಿಡದ ಎಲೆಗಳಿಂದ ಔಷಧಿಯನ್ನು ಮಾಡಿಕೊಂಡು ಮೌಥ್ ಅಲ್ಸರ್ ಸಮಸ್ಯೆ ಗುಣ ಪಡಿಸಬಹುದು. ಮೊದಲಿಗೆ ಈ ಗಿಡದ ಎಲೆಗಳನ್ನು ಬಿಡಿಸಿ ತಂದು ತಣ್ಣಗಿರುವ ನೀರಲ್ಲಿ ನೆನೆಸಿ ಆನಂತರ ಎಲೆಗಳನ್ನು ಸ್ವಚ್ಛ ಗೊಳಿಸಿಕೊಳ್ಳಬೇಕು. ಆಮೇಲೆ ಆ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ ಕುದಿಯತ್ತಿರುವ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಚೆನ್ನಾಗಿ ಕುದಿದ ಬಳಿಕ ಸ್ವಲ್ಪ ಆರಲು ಬಿಡಬೇಕು.
ಸ್ವಲ್ಪ ಬೆಚ್ಚಗೆ ಆದಮೇಲೆ ಇದನ್ನು ತೆಗೆದುಕೊಂಡು ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ ಆಚೆ ಹಾಕಬೇಕು. ಒಂದು ದಿನಕ್ಕೆ ಮೂರ್ನಾಲ್ಕು ಬಾರಿಯಾದರೂ ಈ ರೀತಿ ಔಷಧಿ ಮಾಡಿಕೊಂಡು ಈ ರೀತಿ ಅನುಸರಿಸಬೇಕು. ಈ ರೀತಿ ಮಾಡುವುದರಿಂದ ಬೇಗನೆ ಮೌಥ್ ಅಲ್ಸರ್ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಜೊತೆಗೆ ದೇಹವನ್ನು ತಂಪಾಗಿ ಇಟ್ಟುಕೊಳ್ಳಬೇಕು. ಉಷ್ಣ ಉಂಟುಮಾಡುವ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ ದೇಹಕ್ಕೆ ತಂಪು ನೀಡುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ಆಗಿರುವ ಮೌತ್ ಅಲ್ಸರ್ ಬೇಗನೆ ವಾಸಿಯಾಗುವುದರ ಜೊತೆಗೆ ಮತ್ತೆ ಬರುವ ಸಾಧ್ಯತೆಗಳು ಕಡಿಮೆಯಾಗುತ್ತದೆ.