ಮಂಡಿ, ಸೊಂಟ, ಕೀಲು ನೋವಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಈ ಮನೆ ಮದ್ದು, ಒಮ್ಮೆ ಬಳಸಿ ನೋಡಿ ಅದ್ಭುತ ಪ್ರಯೋಜನ ದೊರೆಯುತ್ತೆ.

ಜೀವನದಲ್ಲಿ ಎಲ್ಲರಿಗೂ ಒಮ್ಮೆಯಾದರೂ ಕಾಡುವ ಕಾಯಿಲೆ ಜಾಯಿಂಟ್ ಪೇನ್. ಇದರ ಜೊತೆಗೆ ಮಂಡಿನೋವು, ಬೆನ್ನು ನೋವು, ಕೈ ಕಾಲು ನೋವು, ಮೂಳೆಗಳಲ್ಲಿ ಊತ ಇವೆಲ್ಲವೂ ಕೂಡ ಜಾಯಿಂಟ್ ಪೇನ್ ಜೊತೆ ಜೊತೆಗೆ ಕಾಡುವ ಕಾಯಿಲೆಗಳು. ಮೊದಲೆಲ್ಲಾ ಇವುಗಳನ್ನು ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿತ್ತು ಯಾಕೆಂದರೆ 60 ವರ್ಷದ ಬಳಿಕ ವಯಸ್ಸಾದಂತೆ ಸಾಮಾನ್ಯವಾಗಿ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈ ಕಾರಣದಿಂದ ಅವರಿಗೆ ಹೆಚ್ಚು ದೂರ ನಡೆಯಲಾಗುತ್ತಿಲ್ಲ, ಕುಂತರೆ ಏಳಲು ಆಗುತ್ತಿರಲಿಲ್ಲ, ಒಂದೇ ಕಡೆ ಕುಳಿತು ಕೊಳ್ಳಲು ಆಗುತ್ತಿರಲಿಲ್ಲ ಚಿತ್ರವಿಚಿತ್ರವಾದ ನೋವನ್ನು ಅನುಭವಿಸುತ್ತಿದ್ದರು. ಇದಕ್ಕೆ ಕಾರಣ ವಯಸ್ಸಾಗುತ್ತಿದ್ದಂತೆ ಅವರ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತಿತ್ತು, ಶಕ್ತಿ ಕಡಿಮೆಯಾದಂತೆಲ್ಲ ಮೂಳೆಗಳು ಸಹ ದುರ್ಬಲವಾಗಿ ಅವುಗಳು ಬಲವನ್ನು ಕಳೆದುಕೊಳ್ಳುತ್ತಿದ್ದವು. ಆಗ ಈ ರೀತಿಯಾಗಿ ನೋವುಗಳು ಉಂಟಾಗುವುದು ಸಹಜವಾಗಿತ್ತು ಆದರೆ ಈಗಿನ ಕಾಲದಲ್ಲಿ ಯುವಕರಲ್ಲೇ ಈ ಕಾಯಿಲೆ ಕಾಡುತ್ತಿರುವುದು ಅತಿಯಾಗಿ ಹೋಗಿದೆ.
ಇದಕ್ಕೆಲ್ಲ ಕಾರಣ ಏನೆಂದರೆ ಈಗಿನ ಕಾಲದ ಯುವಕರು ಸೇವಿಸುತ್ತಿರುವ ಆಹಾರ. ಈಗಿನ ಕಾಲದ ಯುವಕರು ರುಚಿಕರವಾದ ಆಹಾರಕ್ಕೆ ಮೊರೆ ಹೋಗಿ ಸಾಂಪ್ರದಾಯಿಕ ಶಕ್ತಿಯುತ ಆಹಾರವನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಮತ್ತು ಈಗಿನ ಕಾಲದ ಎಲ್ಲಾ ಹಣ್ಣು ತರಕಾರಿ ಸೊಪ್ಪುಗಳು ಧಾನ್ಯಗಳು ಇವನ್ನೆಲ್ಲ ಬೆಳೆಯಲು ರಾಸಾಯನಿಕಗಳ ಬಳಕೆ ಹೆಚ್ಚಾಗಿದೆ ಹೀಗಾಗಿ ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶವೇ ಇಲ್ಲದಂತಾಗುತ್ತದೆ. ಹೀಗಿರುವಾಗ ದೇಹಕ್ಕೆ ಅವಶ್ಯಕ ಪೋಷಕಾಂಶಗಳಾದ ವಿಟಮಿನ್ ಪ್ರೊಟೀನ್ ಕ್ಯಾಲ್ಸಿಯಂ ಐರನ್ ಇವುಗಳ ಕೊರತೆ ಕಂಡುಬರುತ್ತಿದೆ. ಮತ್ತು ಈಗಿನ ಕಾಲದ ಯುವಕರು ಸರಿಯಾದ ಜೀವನಕ್ರಮ ಪಾಲಿಸುತ್ತಿಲ್ಲ. ಆರೋಗ್ಯಕರ ಶಿಸ್ತುಬದ್ಧವಾದ ಜೀವನ ಪದ್ಧತಿ ಇಲ್ಲ ಆದ್ದರಿಂದ ಎಲ್ಲಾ ರೀತಿಯ ನೋವುಗಳಿಗೂ ದೇಹ ತುತ್ತಾಗಬೇಕಾಗಿದೆ. ಹಾಗಾಗಿ ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ ಇವನ್ನೆಲ್ಲಾ ಪಾಲಿಸುವುದು ಸೂಕ್ತ.
ಇವುಗಳ ಜೊತೆಗೆ ಈಗ ಆಫೀಸಿಗೆ ಹೋಗಿ ದುಡಿಯುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಬಹುತೇಕ ದಿನದ ಹೆಚ್ಚುವರಿ ಸಮಯ ಅವರು ಕುಂತಲ್ಲೇ ಕುಂತು ಕಳೆಯುತ್ತಾರೆ. ಹೀಗಾಗಿ ಅವರು ಒಂದೇ ಭಂಗಿಯಲ್ಲಿ ಇರುವುದರಿಂದ ಕೂಡ ಬೆನ್ನು ನೋವು ಸೊಂಟ ನೋವು ಇವೆಲ್ಲ ಕಾಣಿಸಿಕೊಳ್ಳುವುದು ಮಾಮೂಲು. ಇವುಗಳಿಗೆಲ್ಲಾ ಆಸ್ಪತ್ರೆಯ ಮೊರೆ ಹೋಗುವುದರಿಂದ ಅಲ್ಲಿ ಕೊಡುವ ಔಷಧಿಗಳಿಂದ ಪೂರ್ತಿಯಾಗಿ ಗುಣವಾಗದೇ ಹೋಗಬಹುದು ಅಥವಾ ಅದರಿಂದ ಸೈಡ್ ಎಫೆಕ್ಟ್ ಕೂಡ ಆಗಬಹುದು ಆದರೆ ಆಯುರ್ವೇದ ಪದ್ಧತಿಯಲ್ಲಿ ಈ ನೋವುಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಅದಕ್ಕಾಗಿ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಕೆಲವೊಂದು ಮನೆಮದ್ದುಗಳನ್ನು ಮಾಡಿಕೊಳ್ಳುವುದು ಸೂಕ್ತ. ಈ ರೀತಿಯಾದ ಜಾಯಿಂಟ್ ಪೇನ್ ಗೆ ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ ಹೇಳಿ ಮಾಡಿಸಿದ ಔಷಧಿ. ಆದರೆ ಅದನ್ನು ಹೇಗೆ ಬಳಸಬೇಕು ಎನ್ನುವುದು ಗೊತ್ತಿರಬೇಕು.
ಒಂದು ಬೌಲ್ ನಲ್ಲಿ ಒಂದು ಸ್ಪೂನ್ ಕೊಬ್ಬರಿ ಎಣ್ಣೆ ಮತ್ತು ಒಂದು ಸ್ಪೂನ್ ಹರಳೆಣ್ಣೆ ತೆಗೆದುಕೊಂಡು ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಚಿಕ್ಕ ಸಿಲ್ವರ್ ಕಡಾಯಿಗೆ ಹಾಕಿ ಸ್ವಲ್ಪ ಬಿಸಿ ಆಗುವವರೆಗೂ ಕಾಯಿಸಿಕೊಳ್ಳಬೇಕು ನಂತರ ಅದನ್ನು ನೋವಿರುವ ಜಾಗಕ್ಕೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಚೆನ್ನಾಗಿ ಮಸಾಜ್ ಮಾಡುವುದರಿಂದ ಎಲ್ಲಾ ಬಗೆಯ ನೋವುಗಳು ತಕ್ಷಣವೇ ಮಾಯವಾಗುತ್ತವೆ ಮತ್ತು ಈ ರೀತಿ ಮಾಡಿದ ಬಳಿಕ ನೀವು ಬಿಸಿ ನೀರಲ್ಲಿ ಸ್ನಾನ ಮಾಡುವುದು ಇನ್ನೂ ರಿಲೀಫ್ ಕೊಡುತ್ತದೆ. ಇದೇ ರೀತಿಯಾದ ಇನ್ನೊಂದು ಉತ್ತಮವಾದ ಮನೆಮದ್ದು ಎಂದರೆ ಅರಿಶಿಣ. ಅರಿಶಿಣ ಒಂದು ಆಂಟಿಬಯೋಟಿಕ್. ಇದು ಎಲ್ಲಾ ಬಗೆಯ ನೋವುಗಳನ್ನು ಕೂಡ ನಿವಾರಣೆ ಮಾಡುತ್ತದೆ. ಇದನ್ನು ಹೇಗೆ ಸೇವಿಸಬೇಕು ಎಂದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕಾಯಿಸಿ ಕುಡಿಯುತ್ತ ಬರುವುದರಿಂದ ಒಂದು ವಾರ ಈ ರೀತಿ ಮಾಡಿದರೆ ಪರಿಣಾಮಕಾರಿಯಾಗಿ ನಿಮ್ಮ ಎಲ್ಲಾ ನೋವುಗಳು ನಿವಾರಣೆಯಾಗುತ್ತದೆ.
ಇದರ ಜೊತೆಗೆ ನೀವು ಒಂದು ಲೋಟ ನೀರನ್ನು ಕುದಿಯಲು ಇಟ್ಟು ಅದಕ್ಕೆ ಒಂದು ಚಮಚ ಓಂ ಕಾಳು ಮತ್ತು ಒಂದು ಪಲಾವ್ ಎಲೆ ಹಾಕಿ ಚೆನ್ನಾಗಿ ಕುದಿಸಿ ಇಳಿಸಿಕೊಂಡು ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಪ್ರತಿದಿನ ರಾತ್ರಿ ತಪ್ಪದೇ ಕುಡಿಯುತ್ತಾ ಬರುವುದರಿಂದ ದೇಹದಲ್ಲಿರುವ ವಾಯು ಅಂಶವು ಆಚೆ ಹೋಗುತ್ತದೆ. ಆಗ ವಾಯು ಅಂಶ ಮೂಳೆಗಳಲ್ಲಿ ಸೇರಿಕೊಂಡರೆ ನೋವು ಬರಲು ಕಾರಣವಾಗುತ್ತದೆ ಈ ಮೂಲಕ ವಾಯು ಆಚೆ ಹೋಗುವುದರಿಂದ ದೇಹವು ಎಲ್ಲಾ ನೋವುಗಳಿಂದ ಮುಕ್ತವಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Leave a Comment

%d bloggers like this: