ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಕೆಮ್ಮು, ನೆಗಡಿ, ಕಫ ಯಾವುದೇ ಋತುವನ್ನು ನೋಡದೆ ಆವರಿಸುತ್ತದೆ. ಆದರೆ ದೊಡ್ಡವರಿಗೆ ಅದನ್ನು ತಡೆಯಲು ಶಕ್ತಿ ಇರುತ್ತದೆ. ಚಿಕ್ಕ ಮಕ್ಕಳಿಗೆ ಚಿಕ್ಕ ಕಾಯಿಲೆಯನ್ನು ತಡಿಯುವ ಶಕ್ತಿ ಇರುವುದಿಲ್ಲ. ಹಾಗಾಗಿ ಅವರಿಗಾಗಿ ಸ್ವಲ್ಪ ಹೆಚ್ಚು ಶಕ್ತಿಯುತವಾದ ಔಷಧಿಯನ್ನು ಕೊಡಲು ಆಗುವುದಿಲ್ಲ. ಹಾಗಾಗಿ ಮಕ್ಕಳಿಗಾಗಿ ಸ್ವಲ್ಪ ಕಡಿಮೆ ಶಕ್ತಿಯುಳ್ಳ ಔಷಧಿಯನ್ನು ಕೊಡಬೇಕಾಗುತ್ತದೆ.
ಹಳ್ಳಿಗಳಲ್ಲಿ ಚಿಕ್ಕ ಮಕ್ಕಳಿಗೆ ಶೀತ, ಕೆಮ್ಮು ಪ್ರಾರಂಭವಾದ ತಕ್ಷಣ ಮೊದಲು ನೀಡುವ ಔಷಧಿಯೇ ದೊಡ್ಡಪತ್ರೆ ಎಲೆಯ ರಸ. ಈ ಎಲೆಯನ್ನು ಬಳಸೋದ್ರಿಂದ ನೆಗಡಿ, ಕಫ, ತಲೆಭಾರ, ಅಜೀರ್ಣ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಕೂಡ ಇದನ್ನು ನೀಡುತ್ತಾರೆ. ದೊಡ್ಡಪತ್ರೆ ಎಲೆಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿರೋದ್ರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಇಷ್ಟೆಲ್ಲ ಔಷಧೀಯ ಗುಣಗಳನ್ನು ಹೊಂದಿರೋ ದೊಡ್ಡಪತ್ರೆ ಎಲೆಗಳಿಂದ ನಾನಾ ಖಾದ್ಯಗಳನ್ನು ಕೂಡ ಸಿದ್ಧಪಡಿಸಬಹುದು.
ಇನ್ನು ಈ ಎಲೆಯನ್ನು ಒಂದು ಹತ್ತಿಯ ಬಟ್ಟೆಯೊಳಗೆ ಚೆನ್ನಾಗಿ ಪುಡಿ ಮಾಡಿ ರಸವನ್ನು ಒಂದು ಒಳ್ಳೆ ಗೆ ಹಾಕಿ ಮಕ್ಕಳಿಗೆ ಕುಡಿಸಬೇಕು ಮಕ್ಕಳಿಗೆ ಕೆಲವು ಕಾಲ ಸ್ವಲ್ಪ ಕಾರವಾಗಬಹುದು ಆದರೂ ಸಹ ಬಿಡದೆ ಔಷಧಿಯನ್ನು ಹಾಕಬೇಕು. ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ಎತ್ತಿನ ಗಾಡಿಯ ಎಣ್ಣೆ ಎಂಬ ಕಾರಣಕ್ಕೇ ಹೆಚ್ಚಿನವರು ಹರಳೆಣ್ಣೆಯನ್ನು ಉಪಯೋಗಿಸದೇ ಮೂಲೆಗುಂಪಾಗಿಸಿದ್ದಾರೆ.
ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ ಎಂಬುದನ್ನು ಜನರು ತಿಳಿದಿಲ್ಲ. ಅದರಲ್ಲೂ ಔಷಧಿಗಳು ವಾಸಿ ಮಾಡಲಾಗದಂತಹ ಕೆಲವು ವ್ಯಾಧಿಗಳನ್ನು ಈ ಹರಳೆಣ್ಣೆ ಸುಲಭವಾಗಿ ಗುಣಪಡಿಸುತ್ತದೆ. ಚರ್ಮದ ಕಂದು ಕಲೆ, ಸೊಂಟನೋವು, ಉಳುಕಿದ ಹಿಮ್ಮಡಿ ಮೊದಲಾದವುಗಳಿಗೆ ಹರಳೆಣ್ಣೆ ಅತ್ಯುತ್ತಮವಾಗಿದೆ.ಕೇವಲ ಸ್ವಲ್ಪ ಪ್ರಮಾಣದ ಕ್ಯಾಸ್ಟರ್ ಆಯಿಲ್ ಅನ್ನು ಅನ್ವಯಿಸಿ.
ಹಲವಾರು ದುಗ್ಧರಸ ಗ್ರಂಥಿಗಳು ಇವೆ, ಅವುಗಳು ಶೀತ ಅಥವಾ ಜ್ವರದಿಂದ ಊದಿಕೊಳ್ಳುತ್ತವೆ ಎಂದು ನಮಗೆ ತಿಳಿದಿದೆ. ಆ ಎಣ್ಣೆಯನ್ನು ಕುತ್ತಿಗೆಯ ಕೆಳಗೆ ನಿಧಾನವಾಗಿ ಅನ್ವಯಿಸುವುದರಿಂದ ಆ ದುಗ್ಧರಸ ದ್ರವವನ್ನು ಹೊರಹಾಕಲು ಸಹಾಯ ಮಾಡುತ್ತದೆ. ವೀಳ್ಯದೆಲೆ, ಇದು ಕೆಮ್ಮಿನ ಸಮಸ್ಯೆ ಮತ್ತು ಉಸಿರಾಟದ ತೊಂದರೆಗೂ ಕೂಡ ಒಂದು ಒಳ್ಳೆಯ ಮನೆ ಮದ್ದಾಗಿದ್ದು, ಪ್ರತಿ ದಿನ ವೀಳ್ಯದೆಲೆಯನ್ನು ಸೇವಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು.
ವೀಳ್ಯದೆಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ನೀರು, ಪ್ರೋಟೀನ್, ಕೊಬ್ಬು, ಖನಿಜ, ಫೈಬರ್, ಕ್ಲೋರೊಫಿಲ್, ಕಾರ್ಬೋಹೈಡ್ರೇಟ್, ನಿಕೋಟಿನ್ ಆಮ್ಲ, ವಿಟಮಿನ್ ಸಿ, ವಿಟಮಿನ್ ಎ, ರಿಬೋಫ್ಲಾವಿನ್, ಸಾರಜನಕ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಅಯೋಡಿನ್, ಕ್ಯಾಲೊರಿಗಳು, ಇತ್ಯಾದಿ ಪೋಷಕಾಂಶಗಳನ್ನು ವೀಳ್ಯದೆಲೆ ಹೊಂದಿದೆ.
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ನ (ಎನ್ಸಿಬಿಐ) ಸಂಶೋಧನಾ ಲೇಖನದ ಪ್ರಕಾರ, ವಿಳ್ಯದೆಲೆಗಳು ಡಿಟಾಕ್ಸಿಫೈಯರ್ ಆಗಿ ಕಾರ್ಯನಿರ್ವಹಿಸುತ್ತವೆ. ಅಂದರೆ ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ನಿಯಮಿತವಾಗಿ ಇವುಗಳನ್ನು ಸೇವಿಸುವುದು ಬಾಯಿಯ ಕಾಯಿಲೆಗಳನ್ನು ನಿವಾರಿಸಲು ಮತ್ತು ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ.
ಇದು ರೋಗ ನಿರೋಧಕ ಶಕ್ತಿ ವೃದ್ಧಿಸಲು ಮತ್ತು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಎರಡನೆಯದಾಗಿ ವೀಳ್ಯದೆಲೆ ಅನ್ನು ಒಂದು ದೀಪದ ಬೆಳಕಿನಲ್ಲಿ ಬಿಸಿ ಮಾಡಿ ಅದನ್ನು ಮಕ್ಕಳ ಹೊಟ್ಟೆಯ ಮೇಲೆ ಎರಡು ಕಡೆ ಹಾಕಬೇಕು ಇದರಿಂದ ಕೆಮ್ಮು ಕಡಿಮೆ ಆಗಿ ಎಲೆಯ ಬಣ್ಣವೂ ಬದಲಾಗುತ್ತದೆ. ಹೀಗೆ ಒಮ್ಮೆ ನಿಮ್ಮ ಮಕ್ಕಳಿಗೆ ಕೆಮ್ಮು ಅಥವಾ ನೆಗಡಿ ಬಂದರೆ ಮಾಡಿ ನೋಡಿ.