ಮಕ್ಕಳಿರುವ ಪ್ರತಿಯೊಬ್ಬ ತಂದೆ ತಾಯಿ ಇದನ್ನು ನೋಡಲೇಬೇಕು.

ಭೂಮಿಯ ಮೇಲೆ ಒಂದು ಅದ್ಭುತವಾದ ಸೃಷ್ಟಿ ಎಂದರೆ ಅದು ತಂದೆ ತಾಯಿಯರಿಗೆ ಮಕ್ಕಳೊಂದಿಗಿನ ಸಂಬಂಧ ಈ ಒಂದು ಪರಿಕಲ್ಪನೆ ಎಷ್ಟೊಂದು ಅದ್ಭುತ ಎಂದು ನಮಗೆ ಅನಿಸುತ್ತದೆ. ಭೂಮಿಯ ಮೇಲೆ ತಂದೆ ತಾಯಿಯರು ತೋರಿಸುವಂತಹ ಪ್ರೀತಿಯನ್ನು ಯಾರು ಸಹ ತೋರಿಸಲು ಆಗುವುದಿಲ್ಲ, ಮಕ್ಕಳು ಹುಟ್ಟಿದಾಗಿನಿಂದ ಸಾಯುವ ತನಕ ಇವರ ಪ್ರೀತಿ ಕಡಿಮೆ ಆಗುವುದಿಲ್ಲ ಆದರೆ ನಾವು ಮಕ್ಕಳು ಬೆಳೆಸುವಂತಹ ಸರಿಯಾದ ವಿಧಾನವನ್ನು ಅರಿತುಕೊಳ್ಳಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಚಿಕ್ಕ ವಯಸ್ಸಿನಿಂದ ತುಂಬಾ ಧೈರ್ಯಯುತವಾಗಿ ಬೆಳೆಸಬೇಕು ಸಮಾಜದಲ್ಲಿ ಅವರು ನೆಲೆ ನಿಲ್ಲಬೇಕು ಎಂದರೆ ಅವರಲ್ಲಿ ಮೊದಲು ಆತ್ಮಸ್ಥೈರ್ಯ ಎನ್ನುವಂತಹದ್ದು ಇರಬೇಕು ಯಾವುದೇ ಪರಿಸ್ಥಿತಿಯನ್ನು ಬಂದರು ಸಹ ಅದನ್ನು ಎದುರಿಸುವಂತಹ ದಿಟ್ಟ ಧೈರ್ಯವನ್ನು ಅವರು ಮಾಡಬೇಕು.

WhatsApp Group Join Now
Telegram Group Join Now

ಹಲವು ತಂದೆ ತಾಯಿಯರು ಮಾಡುವಂತಹ ತಪ್ಪು ಏನು ಎಂದರೆ ಮಕ್ಕಳನ್ನು ಚಿಕ್ಕವಯಸ್ಸಿನಿಂದ ಮುದ್ದು ಮಾಡುತ್ತೇವೆ ಅವರಲ್ಲಿ ಸಮಾಜ ಜ್ಞಾನದ ಅರಿವನ್ನು ಮೂಡಿಸುವುದಿಲ್ಲ. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಸಾಕದಿದ್ದರೆ ಆಗುವಂತಹ ಕೆಟ್ಟ ಪರಿಣಾಮಗಳನ್ನು ನಾವಿಲ್ಲಿ ತಿಳಿಸುತ್ತೇವೆ. ಒಂದು ಕುಟುಂಬದಲ್ಲಿ ತಂದೆ ತಾಯಿ ಹಾಗೆ ಒಂದು ಹೆಣ್ಣು ಮಗು ಇರುತ್ತದೆ ಆ ಹೆಣ್ಣು ಮಗು ಶಾಲೆಗೆ ಹೋಗುವಂತಹ ಹೆಣ್ಣು ಮಗಳು ಆಗಿದ್ದು ತಂದೆ ತಾಯಿಯು ತುಂಬಾ ಪ್ರೀತಿಯಿಂದ ಸಾಕಿರುತ್ತಾರೆ. ಅವರ ಮನೆಗೆ ಮನೆ ಯಜಮಾನನ ಭಾವ ಬರುತ್ತಾನೆ ಆತನಿಗೆ ತುಂಬಾ ವಯಸ್ಸಾಗಿರುತ್ತದೆ ಈ ದಂಪತಿಗಳು ಮನೆಯ ಹೊರಗೆ ಹೋಗಿ ದುಡಿಯುವಂತಹವರು ಆಗಿರುತ್ತಾರೆ ಮಗಳನ್ನು ಆತನ ಜೊತೆಯಲ್ಲಿ ಬಿಟ್ಟು ಹೋಗುತ್ತಾರೆ ಆಗ ಮನೆಗೆ ಬಂದಂತಹ ಸಂಬಂಧಿ ಕೆಟ್ಟದಾಗಿ ವರ್ತಿಸುತ್ತಾನೆ ಆಗ ಆ ಹುಡುಗಿ ಭಯದಿಂದ ಓಡಿ ಹೋಗುತ್ತದೆ.

ನಂತರದಲ್ಲಿ ಅದೇ ಹುಡುಗಿ ಶಾಲೆಗೆ ಹೋಗುವ ಆಟೋ ಡ್ರೈವರ್ ಆ ಹುಡುಗಿಯನ್ನು ಆಟೋ ಓಡಿಸುವುದನ್ನು ಕಲಿಸುವದಾಗಿ ಹೇಳಿ ಆಕೆಯ ಜೊತೆ ಕೆಟ್ಟದಾಗಿ ವರ್ತಿಸುತ್ತಾನೆ ಆಗ ಹುಡುಗಿ ಭಯಪಡುತ್ತದೆ ಇದನ್ನು ಮನೆಯವರಿಗೆ ತಿಳಿಸಬಾರದೆಂದು ಆ ಆಟೋ ಡ್ರೈವರ್ ಭಯಪಡಿಸುತ್ತಾನೆ. ನಂತರದಲ್ಲಿ ಹುಡುಗಿಯ ಪಕ್ಕದ ಮನೆಯ ಒಂದು ಹುಡುಗ ಮನೆಗೆ ಬಂದಿರುತ್ತಾನೆ ಅಂತಹ ಸಮಯದಲ್ಲಿ ಆತನು ಹುಡುಗಿಯ ಜೊತೆಯಲ್ಲಿ ಕೆಟ್ಟದಾಗಿ ವರ್ತಿಸುತ್ತಾನೆ ಅದಕ್ಕೂ ಸಹ ಆ ಹುಡುಗಿ ಏನು ಮಾತನಾಡುವುದಿಲ್ಲ ಅಲ್ಲಿ ನಡೆದಂತಹ ಯಾವುದೇ ಒಂದು ಸಂಗತಿಗಳನ್ನು ತಂದೆ-ತಾಯಿಯರಿಗೆ ಹೇಳುವುದಿಲ್ಲ ಆ ಹುಡುಗಿ ಚಿಕ್ಕ ವಯಸ್ಸಿನಿಂದಲೂ ಸಹ ಭಯದಿಂದ ಬೆಳೆದಿರುತ್ತದೆ. ಆದ್ದರಿಂದ ನಾವು ಯಾವಾಗಲೂ ಮಕ್ಕಳನ್ನು ತುಂಬಾ ಧೈರ್ಯದಿಂದ ಯಾವ ಪರಿಸ್ಥಿತಿಯಲ್ಲಿ ಆದರೂ ಸಂದರ್ಭವನ್ನು ನಿಭಾಯಿಸುವಂತೆ ಹೇಳಿಕೊಡಬೇಕು.

ಹಾಗೆಯೇ ಯಾವುದು ಒಳ್ಳೆಯದು ಯಾವ ವಿಷಯ ಕೆಟ್ಟದ್ದು ಎಂಬುವ ಅರಿವು ಮಕ್ಕಳಲ್ಲಿ ಮೂಡುವ ಹಾಗೆ ಮಾಡಬೇಕು. ಮಕ್ಕಳಿಗೆ ಕೇವಲ ಶಿಕ್ಷಣವನ್ನು ಕೊಡಿಸಿದರೆ ಅಷ್ಟೇ ಸಾಲದು ಅವರಿಗೆ ಕಷ್ಟ ಬಂದಂತಹ ಸಂದರ್ಭದಲ್ಲಿ ಅದನ್ನು ಹೇಗೆ ನಿಭಾಯಿಸಬೇಕು ಹಾಗೆಯೆ ಮತ್ತೊಬ್ಬರಿಗೆ ಹೇಗೆ ಸಹಾಯ ಮಾಡಬೇಕು ಎನ್ನುವುದರ ಅರಿವು ಸಹ ಅವರಲ್ಲಿ ಇರಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರನ್ನು ಚಿಕ್ಕವಯಸ್ಸಿನಿಂದ ನಾವು ಧೈರ್ಯಯುತರಾಗಿ ಮಾಡಿದರೆ ಮುಂದೊಂದು ದಿನ ಅವರು ಯಾವುದೇ ರೀತಿಯಾದಂತಹ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಈ ಸಮಾಜ ಒಂದು ಹೆಣ್ಣು ಮಗುವನ್ನು ಯಾವ ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತದೆ ಎಂಬ ಉದಾರಣೆಯನ್ನು ಈ ಮೇಲಿನ ವಿಡಿಯೋ ಮೂಲಕ ತಿಳಿದುಕೊಳ್ಳಿ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now