ಮುತ್ತುಗದ ಎಲೆ ಸಾಮಾನ್ಯವಾಗಿ ಈ ಹೆಸರನ್ನು ನೀವು ಕೇಳೇ ಇರುತ್ತೀರ ಹಿಂದಿನ ಕಾಲದಲ್ಲಿ ಯಾವುದೇ ಮದುವೆ ಸಮಾರಂಭ ಅಥವಾ ಇನ್ನಿತರ ಶುಭಕಾರ್ಯಗಳು ಆದಾಗ ಮುತ್ತುಗದ ಎಲೆಯಲ್ಲಿ ನಮಗೆ ಊಟವನ್ನು ಬಡಿಸುತ್ತಿದ್ದರು ಈ ಎಲೆಯ ಮೂಲಕ ಆಹಾರವನ್ನು ಯಾರು ಸೇವನೆ ಮಾಡುತ್ತಾರೆ ಅಂತವರಿಗೆ ಅಸಿಡಿಟಿ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಕಾಲ ಬದಲಾದಂತೆ ನಾವು ಬಳಕೆ ಮಾಡುತ್ತಿದ್ದಂತ ಆಹಾರ ಪದಾರ್ಥ ಆಗಿರಬಹುದು ಅಥವಾ ಬಳಕೆ ಮಾಡುತ್ತಿದ್ದಂತ ವಸ್ತುಗಳು ಆಗಿರಬಹುದು ಎಲ್ಲವೂ ಕೂಡ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಮೊದಲೆಲ್ಲಾ ಬಾಳೆಎಲೆ ಅಥವಾ ಮುತ್ತುಗದ ಎಲೆಯಲ್ಲಿ ನಾವು ಆಹಾರವನ್ನು ಸೇವನೆ ಮಾಡುತ್ತಿದ್ದೇವೆ ಆದರೆ ಈಗ ಪ್ಲಾಸ್ಟಿಕ್ ಪ್ಲೇಟ್ ಬಂದಿರುವುದನ್ನು ನೋಡಬಹುದಾಗಿದೆ ಇವುಗಳಿಂದಲೇ ನಮ್ಮ ಆರೋಗ್ಯದ ಹಾಳಾಗುತ್ತಿದೆ ಅಂತ ಹೇಳಿದರೂ ಕೂಡ ತಪ್ಪಾಗಲಾರದು.
ಏಕೆಂದರೆ ಊಟ ಬಡಿಸುವಾಗ ಊಟ ಬಿಸಿ ಇರುತ್ತದೆ ಪ್ಲಾಸ್ಟಿಕ್ ತಟ್ಟೆ ಅಥವಾ ಪೇಪರ್ ತಟ್ಟೆಗೆ ಬಿಸಿಯಾದ ಊಟ ಹಾಕಿದಾಗ ಅದು ಕೆಮಿಕಲ್ ರಿಯಾಕ್ಷನ್ ಮಾಡುವುದಕ್ಕೆ ಪ್ರಾರಂಭವಾಗುತ್ತದೆ ನಾವು ಇಂತಹ ಆಹಾರವನ್ನು ಸೇವನೆ ಮಾಡಿದಾಗ ಹಲವಾರು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ನೋಡಿ ಎಷ್ಟು ವಯಸ್ಸಾದರೂ ಕೂಡ ಅವರಿಗೆ ಯಾವುದೇ ರೀತಿಯಾದಂತಹ ರೋಗ ರುಜಿನಗಳು ಬರುತ್ತಿರಲಿಲ್ಲ ಅವರು ಸೇವನೆ ಮಾಡುತ್ತಿದ್ದಂತ ಆಹಾರವೂ ಕೂಡ ಅಷ್ಟೇ ಗಟ್ಟಿಯಾಗಿತ್ತು. ಅವರು ಬಳಕೆ ಮಾಡುತ್ತಿದ್ದಂತಹ ಸಾಮಗ್ರಿಗಳು ಕೂಡ ಬಹಳ ನೈಸರ್ಗಿಕವಾಗಿ ಸದಾಕಾಲ ಆರೋಗ್ಯಯುತವಾದ ಜೀವನವನ್ನು ಮಾಡುತ್ತಿದ್ದರು. ಆದರೆ ನಾವು ಕಾಲ ಬದಲಾದಂತೆ ತಾಂತ್ರಿಕತೆಗೆ ಮತ್ತು ವೈಜ್ಞಾನಿಕತೆಗೆ ನಮ್ಮ ಜೀವನವನ್ನು ಬದಲಾಯಿಸಿಕೊಂಡು ಬಿಟ್ಟಿದ್ದೇವೆ ಈ ಒಂದು ಕಾರಣಕ್ಕಾಗಿಯೇ ನಾನಾ ರೀತಿಯಾದಂತಹ ಕಾಯಿಲೆಗಳು ಬರುತ್ತಿರುವುದು.
ಇನ್ನು ಈ ಒಂದು ಮುತ್ತುಗದ ಎಲೆಯನ್ನು ಯಾವ ರೀತಿಯಾಗಿ ಬಳಕೆ ಮಾಡಬೇಕು ಇದರಲ್ಲಿ ಇರುವಂತಹ ಔಷಧೀಯ ಗುಣ ಲಕ್ಷಣಗಳು ಆದರೂ ಏನು ಎಂಬುದರ ಬಗ್ಗೆ ತಿಳಿಯುವುದಾದರೆ. ಮುತ್ತುಗದ ಚಿಗುರಿನ ಎಳೆಯನ್ನು ತೆಗೆದುಕೊಂಡು ಬಂದು ಅದನ್ನು ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಅರೆಯಬೇಕು ಇದರ ರಸವನ್ನು ಒಂದು ಬಟ್ಟಲಿಗೆ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ ತದನಂತರ ಒಂದು ಗ್ಲಾಸ್ ಗೆ ಹಾಕಿ ಮಾಡಿಕೊಂಡು ಸೇವನೆ ಮಾಡುವುದರಿಂದ ಮೂಲವ್ಯಾದಿ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಈ ಮುತ್ತುಗದ ಎಲೆಯ ಬೇರನ್ನು ಸಂಗ್ರಹಣೆ ಮಾಡಿ ಅದರ ಬೇರನ್ನು ನೀರಿನಲ್ಲಿ ತೆದರರೆ ಒಂದು ರೀತಿಯಾದಂತಹ ಗಂಧ ಉತ್ಪತ್ತಿಯಾಗುತ್ತದೆ ಎರಡರಿಂದ ಮೂರು ಹನಿಗಳಷ್ಟು ಗಂಧವನ್ನು ಕಣ್ಣಿಗೆ ಹಾಕುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಇನ್ನು ನಿಮ್ಮ ಹೊಟ್ಟೆಯಲ್ಲಿ ಅಥವಾ ನಿಮ್ಮ ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳು ಏನಾದರೂ ಇತ್ತು ಅಂದರೆ ಮುತ್ತುಗದ ಎಲೆಯ ಕಾಯನ್ನು ಸಂಗ್ರಹಣೆ ಮಾಡಿ ಅದನ್ನು ಚೆನ್ನಾಗಿ ಒಣಗಿಸಿ ಅದರ ಚೂರ್ಣವನ್ನು ಮಾಡಿ ಅಲ್ಪ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಜಂತು ಹುಳುಗಳು ನಿವಾರಣೆಯಾಗುತ್ತದೆ.
ಇನ್ನು ಈ ಒಂದು ಮುತ್ತುಗದ ಮರದ ತೊಗಟೆಯನ್ನು ಸಂಗ್ರಹಣೆ ಮಾಡಿ ಅದನ್ನು ಚೂರ್ಣ ಮಾಡಿಕೊಳ್ಳಬೇಕು ಎರಡರಿಂದ ಮೂರು ಗ್ರಾಂ ನಷ್ಟು ಚೂರ್ಣವನ್ನು ಜೇನುತುಪ್ಪ ಹಾಲು ಅಥವಾ ಮಜ್ಜಿಗೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಸಮಯ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಸೇವನೆ ಮಾಡುವುದರಿಂದ ಪುರುಷರ ನರದೌರ್ಬಲ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಧಾತುಪುಷ್ಟಿ ಮಾಡುವುದಕ್ಕೆ ಇದು ಅದ್ಭುತವಾದಂತಹ ಮನೆಮದ್ದು ಅಂತನೇ ಹೇಳಬಹುದು. ಇನ್ನು ಮುತ್ತುಗದ ಹೂವುಗಳನ್ನು ಸಂಗ್ರಹಣೆ ಮಾಡಿ ಅದನ್ನು ನೀರಿನಲ್ಲಿ ಹಾಕಿ ಕುದಿಸಿ ನಂತರ ಸೇವನೆ ಮಾಡುವುದರಿಂದ ಮಧುಮೇಹಿಗಳಿಗೆ ರಕ್ತದಲ್ಲಿರುವ ಸಕ್ಕರೆಯ ಮಟ್ಟ ನಿವಾರಣೆಯಾಗುತ್ತದೆ.
ಇನ್ನು ದೇಹದಲ್ಲಿ ಇರುವಂತಹ ಕಲ್ಮಶಗಳನ್ನು ಹೊರ ತೆಗೆಯಬೇಕು ಅಂತ ನೀವೇನಾದರೂ ಅಂದುಕೊಂಡರೆ ವಾರಕ್ಕೆ ಒಂದು ಬಾರಿ ಒಂದು ಟೇಬಲ್ ಸ್ಪೂನ್ ನಷ್ಟು ಮುತ್ತುಗದ ಎಲೆಯ ಚೂರ್ಣವನ್ನು ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ದೇಹದಲ್ಲಿ ಇರುವಂತಹ ಸಂಪೂರ್ಣ ಕಲ್ಮಶವನ್ನು ಹೊರತೆಗೆಯುತ್ತದೆ. ಇನ್ನು ನೀವೇನಾದರೂ ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಮುತ್ತುಗದ ಎಲೆಯ ಬೀಜದ ಚೂರ್ಣಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಇದನ್ನು ನಿಮ್ಮ ಚರ್ಮದ ಮೇಲೆ ಲೇಪನ ಮಾಡುವುದರಿಂದ ಅಲರ್ಜಿ ಗಜಕರ್ಣಕ್ಕೆ ಸಂಬಂಧಪಟ್ಟಂತಹ ಇನ್ನಿತರ ಸಮಸ್ಯೆಗಳು ನಿವಾರಣೆಯಾಗುವುದೆಂದು ನೋಡಬಹುದು. ಇನ್ನು ನೀವೇನಾದರೂ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಬೆಟ್ಟದ ನಲ್ಲಿಕಾಯಿ ಪುಡಿ ಹಾಗೂ ಮುತ್ತುಗದ ಎಲೆಯ ಪೌಡರ್ ಇವೆರಡನ್ನು ಕೂಡ ಸಮ ಪ್ರಮಾಣದಲ್ಲಿ ತೆಗೆದುಕೊಂಡು 1 ಟೇಬಲ್ ಸ್ಪೂನ್ ಸಕ್ಕರೆ 1 ಟೇಬಲ್ ಸ್ಪೂನ್ ಶುದ್ಧವಾದ ಹಸುವಿನ ತುಪ್ಪ ಈ ನಾಲ್ಕನ್ನೂ ತೆಗೆದುಕೊಂಡು ರಾತ್ರಿಯ ಸಮಯ ಮಲಗುವುದಕ್ಕಿಂತ ಮುಂಚೆ ಸೇವನೆ ಮಾಡಿ ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
ಇನ್ನು ನೀವೇನಾದರೂ ಮೂತ್ರಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಇನ್ಫೆಕ್ಷನ್ ಅಥವಾ ಉರಿಮೂತ್ರ ಸಮಸ್ಯೆಯಿಂದ ತುಂಬಾನೇ ಬಾದೆ ಪಡುತ್ತಿದ್ದರೆ. ಅಂತಹ ಸಮಯದಲ್ಲಿ ನೀವು ಮುತ್ತುಗದ ಹೂವಿನ ಕಷಾಯವನ್ನು ಮಾಡಿಕೊಂಡು ಸೇವನೆ ಮಾಡುವುದರಿಂದ ಯೂರಿನ್ ಇನ್ಫೆಕ್ಷನ್ ಅನ್ನು ತಡೆಗಟ್ಟಬಹುದು. ಒಂದು ಮುತ್ತುಗದ ಎಲೆಯಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನವನ್ನು ಒದಗಿಸುತ್ತದೆ ಅಂತ ನೋಡಿದ್ರಲ್ಲ ತಪ್ಪದೇ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.