ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ದೇವರ ಸಮಾಗ್ರಿಗಳು ಇರುವುದನ್ನು ನಾವು ನೋಡಬಹುದಾಗಿದೆ ದೇವರ ಮನೆಯಲ್ಲಿ ನಾವು ಹೆಚ್ಚಾಗಿ ತಾಮ್ರದ ಪಾತ್ರೆಗಳನ್ನು ಬಳಕೆ ಮಾಡುತ್ತೇವೆ. ಇದು ತುಂಬಾನೇ ಚೆನ್ನಾಗಿ ಕಾಣುತ್ತದೆ ಅಷ್ಟೇ ಅಲ್ಲದೆ ಹೊಳೆಯುತ್ತದೆ ಆದರೆ ನಾಲ್ಕೈದು ದಿನಗಳು ಕಳೆದ ಮೇಲೆ ಇದರ ಮೇಲೆ ಕಲೆಗಳು ಕುಳಿತುಕೊಳ್ಳುವುದು ಅಥವಾ ಮಂಕಾಗಿ ಕಾಣುವುದು ನಾವು ನೋಡಬಹುದು. ತಾಮ್ರದ ಅಥವಾ ಲೋಕದ ಪಾತ್ರೆಗಳನ್ನು ಅಥವಾ ಬೆಳ್ಳಿಯ ಸಮಾಗ್ರಿಗಳನ್ನು ಶುಚಿಗೊಳಿಸುವುದು ಸುಲಭವಾದ ಮಾತಲ್ಲ ತುಂಬಾನೇ ಕಠಿನ ಪರಿಶ್ರಮವನ್ನು ವಹಿಸಬೇಕಾಗುತ್ತದೆ. ನೀವು ಯಾವುದೇ ರೀತಿಯಾದಂತಹ ಡಿಟರ್ಜೆಂಟ್ ಪೌಡರನ್ನು ಬಳಕೆ ಮಾಡಿದರು ಕೂಡ ಕೆಲವೊಮ್ಮೆ ಸಾಮಗ್ರಿಗಳ ಮೇಲೆ ಇರುವಂತಹ ಕಲೆಗಳು ಹೋಗುವುದಿಲ್ಲ.
ಹಾಗಾಗಿ ಇಂದು ನಿಮಗೆ ಮನೆಯಲ್ಲಿ ತುಂಬಾ ಸರಳವಾಗಿ ಮತ್ತು ತುಂಬಾ ಸುಲಭವಾಗಿ ಯಾವ ರೀತಿಯಾಗಿ ಪೀತಾಂಬರಿ ಪೌಡರನ್ನು ತಯಾರು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ನಾವು ತಿಳಿಸುವಂತಹ ಈ ಮಾಹಿತಿಯನ್ನು ನೀವು ಪಾಲನೆ ಮಾಡಿದರೆ ಖಂಡಿತವಾಗಿಯೂ ಕೂಡ ತುಂಬಾ ಸರಳವಾಗಿ ಪಿತಂಬರಿ ಪೌಡರ್ ಅನ್ನು ನೀವು ಸಿದ್ದ ಪಡಿಸಬಹುದಾಗಿದೆ. ಸಾಮಾನ್ಯವಾಗಿ ಅಂಗಡಿಯಲ್ಲಿ ಪಿತಂಬರಿ ಪೌಡರ್ ಮಾರಾಟ ಮಾಡುವುದನ್ನು ನೀವು ನೋಡಬಹುದು ಆದರೆ ಒಂದು ಬಾರಿ ಪಿತಂಬರಿ ಪೌಡರ್ ಅನ್ನು ಖರೀದಿ ಮಾಡಿಕೊಂಡು ಬಂದರೆ ಕೇವಲ ಒಂದೇ ವಾರದಲ್ಲಿ ಖಾಲಿ ಆಗುತ್ತದೆ. ಅಂದರೆ ಒಂದು ಬಾರಿ ಬಳಕೆ ಮಾಡುವುದಕ್ಕೆ ಮಾತ್ರ ಇದು ಯೋಗ್ಯವಾಗುತ್ತದೆ ಮತ್ತೆ ಬಳಕೆ ಮಾಡಬೇಕಾದರೆ ಹಣವನ್ನು ಕೊಟ್ಟು ಖರೀದಿ ಮಾಡಬೇಕಾಗುತ್ತದೆ. ಇದರಿಂದಾಗಿ ಹೆಚ್ಚಿನ ಹಣ ವ್ಯರ್ಥವಾಗುತ್ತದೆ. ಹಾಗಾಗಿ ಮನೆಯಲ್ಲೇ ಇರುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಯಾವ ರೀತಿ ಪಿತಂಬರಿ ಪೌಡರ್ ಅನ್ನು ತಯಾರಿ ಮಾಡಬಹುದು ಎಂಬುದನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ.
ಈ ಪಿತಾಂಭರಿ ಪೌಡರ್ ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಇಟ್ಟಿಗೆ, ಎರಡನೆಯದಾಗಿ ನಿಂಬೆಹಣ್ಣು, ಮೂರನೆಯದಾಗಿ ಅಡುಗೆ ಸೋಡ, ನಾಲ್ಕನೆಯದಾಗಿ ಡಿಟರ್ಜಂಟ್ ಪೌಡರ್ ಈ 4 ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಪೌಡರ್ ತಯಾರಿ ಮಾಡಬಹುದು. ಇಟ್ಟಿಗೆ ಸಾಮಾನ್ಯವಾಗಿ ಇದು ಎಲ್ಲಾ ಭಾಗದಲ್ಲಿಯೂ ಕೂಡ ದೊರೆಯುತ್ತದೆ ಅರ್ಧ ಇಟ್ಟಿಗೆಯನ್ನು ತೆಗೆದುಕೊಂಡು ಅದನ್ನು ಯಾವುದಾದರೂ ಕಲ್ಲಿನ ಸಹಾಯದ ಮೂಲಕ ಚೂರುಗಳನ್ನಾಗಿ ಮಾಡಿಕೊಳ್ಳಬೇಕು. ತದನಂತರ ಜಜ್ಜಿ ಕೊಳ್ಳಬೇಕು ಈ ರೀತಿ ಮಾಡಿದರೆ ಇಟ್ಟಿಗೆಯಲ್ಲಿ ಪೌಡರ್ ಬರುತ್ತದೆ ಈ ಪೌಡರನ್ನು ನೀವು ಒಂದರಿಯ ಸಹಾಯದ ಮೂಲಕ ಜರಡಿ ಹಿಡಿದುಕೊಳ್ಳಬೇಕು. ಈ ಪೌಡರ್ ತುಂಬಾನೇ ನುಣ್ಣಗೆ ಇರಬೇಕು ಒಂದು ವೇಳೆ ನುಣ್ಣಗೆ ಇಲ್ಲ ಅಂದರೆ ಮಿಕ್ಸಿ ಜಾರಿಗೆ ಹಾಕಿ ಕೂಡ ಇದನ್ನು ಪುಡಿಮಾಡಿಕೊಂಡು ತದನಂತರ ಜರಡಿ ಹಿಡಿದುಕೊಳ್ಳಿ.
ಸುಮಾರು 150 ಗ್ರಾಂನಷ್ಟು ಇಟ್ಟಿಗೆ ಪುಡಿಯನ್ನು ಸಂಗ್ರಹಣ ಮಾಡಿಕೊಳ್ಳಿ ನಂತರ ಇದಕ್ಕೆ 2 ಟೇಬಲ್ ಸ್ಪೂನ್ ನಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಎಲ್ಲವನ್ನು ಕೂಡ ಒಂದು ಬಾರಿ ಕಲಸಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಅಡುಗೆ ಸೋಡ ಹಾಗೂ 1 ಟೇಬಲ್ ಸ್ಪೂನ್ ಡಿಟರ್ಜಂಟ್ ಪೌಡರ್ ಅನ್ನು ಹಾಕಿ ಇವೆಲ್ಲವನ್ನು ಕೂಡ ಮತ್ತೊಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ಈಗ ಈ ಮಿಶ್ರಣವನ್ನು ರೂಂ ಟೆಂಪರೇಚರ್ ನಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ತಣ್ಣಗಾಗಲು ಬಿಡಬೇಕು. ತದನಂತರ ಯಾವುದಾದರೂ ಒಂದು ಏರ್ಟೈಟ್ ಕಾಂಟೇನರ್ ಬಾಕ್ಸ್ ಒಳಗೆ ಹಾಕಿ ಇದನ್ನು ಶೇಖರಣೆ ಮಾಡಿಕೊಂಡು ಇಟ್ಟುಕೊಳ್ಳಬಹುದು. ಇದನ್ನು ನೀವು ಸುಮಾರು ಒಂದು ವರ್ಷದವರೆಗೂ ಕೂಡ ಬಳಕೆ ಮಾಡಬಹುದು ಯಾವುದೇ ಕಾರಣಕ್ಕೂ ಕೂಡ ಹಾಳಾಗುವುದಿಲ್ಲ.
ಈಗ ನಾವು ಸಿದ್ಧಪಡಿಸಿದಂತಹ ಪಿತಂಬರಿ ಪೌಡರ್ ಅನ್ನು ಯಾವ ರೀತಿ ಬಳಕೆ ಮಾಡಬೇಕು ಅಂತ ನೋಡುವುದಾದರೆ ಯಾವುದಾದರೂ ಒಂದು ಬಟ್ಟಲಿಗೆ ಎರಡು ಟೇಬಲ್ ಸ್ಪೂನ್ ಈ ಪೌಡರ್ ಹಾಕಿ ನಂತರ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ಪಾತ್ರೆ ತೊಳೆಯುವಂತಹ ಸ್ಕ್ರಬ್ಬರ್ ನಿಂದ ತಾಮ್ರದ ಸಾಮಗ್ರಿಗಳನ್ನು ಅಥವಾ ದೇವರ ಸಾಮಾಗ್ರಿಗಳನ್ನು ಅಥವಾ ಬೆಳ್ಳಿಯ ಸಾಮಗ್ರಿಗಳನ್ನು ತೊಳಿಯಿರಿ. ಈ ರೀತಿ ಮಾಡಿದರೆ ಖಚಿತವಾಗಿಯೂ ಕೂಡ ಸಾಮಗ್ರಿಗಳ ಮೇಲೆ ಇರುವಂತಹ ಕಪ್ಪು ಕಲೆಗಳು ಆಗಿರಬಹುದು ಅಥವಾ ಧೂಳು ಆಗಿರಬಹುದು ಎಲ್ಲವೂ ಕೂಡ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಇದಕ್ಕೆ ನೀವು ಹೆಚ್ಚಿಗೆ ಶ್ರಮ ಪಡಬೇಕಾದಂತಹ ಅಗತ್ಯವಿಲ್ಲ ಸಾಮಾನ್ಯವಾಗಿ ಮನೆ ಎಂದ ಮೇಲೆ ಅಲ್ಲಿ ನಿಂಬೆಹಣ್ಣು ಸೋಡಾ ಡಿಟರ್ಜಂಟ್ ಪೌಡರ್ ಇದೆ ಇರುತ್ತದೆ ಇನ್ನು ಇಟ್ಟಿಗೆ ನಿಮ್ಮ ಅಕ್ಕಪಕ್ಕದ ಪ್ರದೇಶದಲ್ಲಿ ಯಾರಾದರೂ ಮನೆ ಕಟ್ಟುತ್ತಿದ್ದಾರೆ ಅಲ್ಲಿಂದ ಅರ್ಧ ಇಟಿಕೆ ಕೇಳಿ ಪಡೆದರೆ ಮುಗಿಯಿತು.
ಒಂದು ವರ್ಷಕ್ಕೆ ಆಗುವಷ್ಟು ಪಿತಂಬರಿ ಪೌಡರ್ ಮನೆಯಲ್ಲಿ ಸಿದ್ಧ ಮಾಡಬಹುದಾಗಿದೆ ನೋಡಿದ್ರಲ್ಲ ಯಾವ ರೀತಿಯಾಗಿ ಸರಳ ವಿಧಾನದಲ್ಲಿ ಪಿತಂಬರಿ ಪೌಡರ್ ಅನ್ನು ತಯಾರು ಮಾಡಬಹುದು ಅಂತ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರಿಗೆ. ಇದೇ ಮೊದಲ ಬಾರಿಗೆ ನಮ್ಮ ಫೇಸ್ಬುಕ್ ಪೇಜ್ ಅನ್ನು ನೋಡುತ್ತಿದ್ದಾರೆ ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ ಇದೇ ರೀತಿಯಾದಂತಹ ಆರೋಗ್ಯಕ್ಕೆ ಸಂಬಂಧಪಟ್ಟ ಮತ್ರು ದಿನನಿತ್ಯದ ಕೆಲಸಕ್ಕೆ ಸಂಬಂಧಿಸಿದ ಟಿಪ್ಸ್ ಗಳನ್ನು ಈ ಪೇಜ್ ನಲ್ಲಿ ಹಾಕಲಾಗುತ್ತದೆ.