ಮನೆಕಟ್ಟುವ ಆಸೆ ಇರುವವರಿಗಾಗಿ ಈ ವಿಚಾರ
ಸ್ನೇಹಿತರೆ ನಮ್ಮ ಭಾರತದಲ್ಲಿ ಹಿಂದೂ ಧಾರ್ಮಿಕ ವ್ಯವಸ್ಥೆಯು ಭಾರತದ ಹರಡಿದೆ ಇನ್ನು ಒಂದೊಂದು ಪ್ರದೇಶಗಳಲ್ಲೋ ವಿವಿಧ ವಿವಿಧ ರೀತಿಯ ಬಗೆಯ ದೈವದ ಆರಾಧನೆ ಇರುತ್ತದೆ ಆದರೆ ಎಲ್ಲಾ ಕಡೆ ಇರುವ ದೈವವನ್ನು ತಲುಪುವ ಮಾರ್ಗ ಒಂದೇ ಅದು ಭಕ್ತಿಯ ಮಾರ್ಗವಾಗಿದೆ ಇಂದು ಭಕ್ತಾದಿಗಳು ತಮ್ಮ ಕಷ್ಟಗಳನ್ನು ದೇವರ ಮುಂದೆ ಇಟ್ಟು ಬೇಡಿಕೊಳ್ಳುತ್ತಾರೆ ಅದೇ ರೀತಿ ದೈವವೂ ಕೂಡ ಭಕ್ತರನ್ನು ಸದಾ ರಕ್ಷಿಸುತ್ತಾ ಅವರ ಕಷ್ಟಗಳನ್ನು ಈಡೇರಿಸುತ್ತಾ ತಮ್ಮ ಭಕ್ತರನ್ನು ಕಾಪಾಡುತ್ತಾರೆ ಇದಕ್ಕೆ ಸಾಕ್ಷಿ ಆಗುವಂತೆ ಹಲವು ಕಡೆ ಹಲವು ತರದ ಪೂಜೆ ಪುನಸ್ಕಾರಗಳು ಪ್ರಾಪಂಚಿಕವಾಗಿ ಹೆಸರುವಾಸಿಯಾಗಿದೆ.
ಸದ್ಯ ನಮ್ಮ ಪುಟದ ಮೂಲ ಉದ್ದೇಶವೇ ದೇಶದ ಹಲವು ಭಾಗಗಳಲ್ಲಿರುವ ದೈವ ಸಾನ್ಯದ ಬಗ್ಗೆ ಓದುಗರಿಗೆ ತಿಳಿಸುವುದು. ಸ್ನೇಹಿತರೆ ಕಂಬಳಿಪೂರದ ಕಾಟೇರಮ್ಮ ದೇವಸ್ಥಾನದ ಕುರಿತು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಹೌದು ಸ್ನೇಹಿತರೆ ಈ ಕ್ಷೇತ್ರಕ್ಕೆ ಹಲವು ಕಡೆಯಿಂದ ಭಕ್ತಾದಿಗಳು ಹರಿದು ಬರುತ್ತಿದ್ದಾರೆ ಅಲ್ಲದೆ ಈ ಕ್ಷೇತ್ರದ ತಾಯಿಯಾದ ಕಾಟೇರಮ್ಮ(Kateramma temple) ದೇವಿಯು ಭಕ್ತರ ಮೊರೆಗಳನ್ನು ಆಲಿಸುತ್ತಾ ಅವರ ಕಷ್ಟಗಳನ್ನು ಕೇಳುತ್ತಾ, ಅವರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಾಳೆ.
ಅಲ್ಲದೆ ಈ ಕ್ಷೇತ್ರದಲ್ಲಿ ಇರುವಂತಹ ಆಲದ ಮರಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ ಎಂಬುವುದು ವಿಶೇಷವಾದ ಮಾಹಿತಿ ಒಮ್ಮೆ ಇಲ್ಲಿ ಬಂದು ತಮ್ಮ ಕಷ್ಟಗಳನ್ನು ಕೇಳಿಕೊಂಡರೆ ಸಾಕಂತೆ ಆ ತಾಯಿಯು ತನ್ನ ಭಕ್ತರನ್ನು ಎಂದೂ ಕೈ ಬಿಡದೆ ರಕ್ಷಿಸುತ್ತಾಳೆ ಎಂಬ ನಂಬಿಕೆ ಇದೆ ಅಲ್ಲದೆ ಭಕ್ತಾದಿಗಳು ತಮ್ಮ ಸ್ನೇಹಿತರನ್ನು ಅಥವಾ ಕಷ್ಟದಲ್ಲಿರುವವರನ್ನು ಈ ದೇವಸ್ಥಾನಕ್ಕೆ ಹೋಗುವ ಸಲಹೆಯನ್ನು ನೀಡುತ್ತಾರೆ. ಇನ್ನು ವಿದ್ಯಾಭ್ಯಾಸದಗಳಲ್ಲಿ ಸಮಸ್ಯೆ ಇದ್ದರೆ ಹಾಗೂ ವಿವಾಹದ ವಿಷಯದಲ್ಲಿ ಸಮಸ್ಯೆವಿದ್ದರೆ ಕಂಕಣವು ಕೂಡಿ ಬರುವುದು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಕೊಡುವ ಶಾರದಾದೇವಿಯು ಕೂಡ ಈ ತಾಯಿಯು ಆಗಿದ್ದಾಳೆ.
ಅಲ್ಲದೆ ಜಮೀನು ವಿಷಯಗಳಲ್ಲಿ ಕಷ್ಟ ಇರುವವರು ಕೂಡ ಈ ತಾಯಿಯ ಬಳಿ ಬಂದಿರುವುದು ಉಂಟು. ಇನ್ನು ವ್ಯವಹಾರ ವ್ಯಾಪಾರಗಳಲ್ಲಿ ಯಾವುದೇ ತರಹದ ಕಷ್ಟ ನಷ್ಟವಾದರೂ ಇಲ್ಲಿಗೆ ಬಂದು ತಾಯಿಯ ಬಳಿ ಪರಿಹಾರ ಮಾಡಿಕೊಂಡು ಹೋದವರು ಹಲವು ಜನ ಅಲ್ಲದೆ ಈ ಕ್ಷೇತ್ರದ ಆಲದ ಮರ ಬಳಿ ಬಂದು ಹಲವು ವರ್ಷಗಳಿಂದ ಮಕ್ಕಳಾಗದೆ ಇರುವವರು ಇಲ್ಲಿಗೆ ಬಂದು ತೆಂಗಿನ ಕಾಯಿಯನ್ನು ಕಟ್ಟುವುದು ಉಂಟು.
ಯಾವುದೇ ತರಹದ ಪೀಡೆ ಪಿಚಾಚಿಗಳನ್ನು ಓಡಿಸುವ ಸಲುವಾಗಿ ಜನರು ಇಲ್ಲಿಗೆ ಬರುತ್ತಾರೆ. ಇನ್ನು ಈ ಕ್ಷೇತ್ರಕ್ಕೆ ಬಂದು 9 ವಾರಗಳ ಕಾಲ ಹರಕೆಯನ್ನು ಕಟ್ಟಿ ಹೋದರೆ ಯಾವ ಕೆಲಸವೂ ಬಿಡದೆ ಈಡೇರುತ್ತದೆ ನಂತರ ಅವರ ಜೀವನದಲ್ಲಿ ಹೊಸದಾದ ಜೀವನ ಶುರುವಾಗುತ್ತದೆ ಎಂದು ಹಲವು ಜನರ ಅನುಭವದ ಮಾತಾಗಿದೆ. ಇನ್ನು ಈ ಕ್ಷೇತ್ರದಲ್ಲಿ ಪೂರ್ವಜರು ಎರಡು ಆರದ ಮರವನ್ನು ಪವಾಡವನ್ನು ತೋರಿಸುತ್ತದೆ ಈ ಎರಡು ಆಲದ ಮರವು ಕಾಟೇರಮ್ಮ ಹಾಗೂ ಶ್ರೀ ಮುನೇಶ್ವರ ಸ್ವಾಮಿಯು ಎಂದು ಹೇಳಲಾಗಿದೆ.
ಅಂದು ನೆಟ್ಟ ಆಲದ ಮರದ ಗಿಡ ಇಂದು ಎಷ್ಟೋ ಜನರನ್ನು ಕಾಪಾಡುವ ದೈವ ಶಕ್ತಿ ಉಳ್ಳ ಆಲದ ಮರವಾಗಿದೆ. ಇನ್ನು ನಮ್ಮ ಭಾರತ ಸಂಸ್ಕೃತಿಯಲ್ಲಿ ಗಿಡ ಮರ ಪ್ರಾಣಿಗಳಲ್ಲಿ ದೈವವನ್ನು ನೋಡುವ ಸಂಸ್ಕಾರ ನಮ್ಮ ಭಾರತೀಯರದು. ಇನ್ನು ಅಮಾವಾಸ್ಯೆಗಳಲ್ಲಿ ಹೋಮಗಳು ನಡೆಯುವುದು ಇಲ್ಲಿ ಸಾಮಾನ್ಯವಾಗಿದೆ. ಈ ದೇವಸ್ಥಾನದಗಳಲ್ಲಿ ಪ್ರತ್ಯಂಗಿರಾ ಹೋಮಗಳು ನಡೆಯುವಾಗ ಭಕ್ತಾದಿಗಳು ದೃಷ್ಟಿ ತೆಗೆದು ಮೆಣಸಿನ ಕಾಯಿಯನ್ನು ಹಾಕುವುದರಿಂದ ಮನೆಯಲ್ಲಿ ಆಗಿರುವಂತಹ ಕೆಟ್ಟ ದೃಷ್ಟಿಗಳನ್ನು ತೆಗೆದು ಹಾಕಬಹುದು ಆಗಿದೆ.