ಬಂಗು ಸಾಮಾನ್ಯವಾಗಿ ಈ ಬಂಗಿನ ಸಮಸ್ಯೆ ಮಹಿಳೆಯರಲ್ಲಿ ಕಂಡು ಬರುವುದನ್ನು ನಾವು ನೋಡಬಹುದಾಗಿದೆ ಅದರಲ್ಲಿಯೂ ಕೂಡ 25 ವರ್ಷ ಮೇಲ್ಪಟ್ಟವರಿಗೆ ಈ ರೀತಿಯಾದಂತಹ ಸಮಸ್ಯೆ ಕಂಡುಬರುತ್ತದೆ. ಬಂಗಿನ ಸಮಸ್ಯೆಗೆ ಬರುವುದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಪರಿಣಾಮಗಳು ಬೀರುವುದಿಲ್ಲ. ಆದರೆ ಇದು ನಮ್ಮ ಮುಖದ ಕಾಂತಿಯನ್ನು ಅಥವಾ ಸೌಂದರ್ಯವನ್ನು ಹಾಳು ಮಾಡುತ್ತದೆ ಹಾಗಾಗಿ ಇತ್ತೀಚಿನ ದಿನದಲ್ಲಿ ಯುವ ಪೀಳಿಗೆ ಈ ಬಂಗಿನ ಸಮಸ್ಯೆಯಿಂದ ಬಹುದೊಡ್ಡ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಅಂತಾನೆ ಹೇಳಬಹುದು. ಹಾಗಾಗಿ ಇಂದು ಈ ಬಂಗನ್ನು ನೈಸರ್ಗಿಕವಾಗಿ ಯಾವ ರೀತಿಯಾಗಿ ಹೋಗಲಾಡಿಸಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸುತ್ತೇವೆ ನೋಡಿ.
ಬಂಗು ಎಂಬುವುದು ಮುಖದಲ್ಲಿ ಮೂಡುವಂತಹ ಕಪ್ಪು ಕಪ್ಪು ಚುಕ್ಕೆಗಳಾಗಿವೆ ಇದರ ಪರಿಣಾಮ ಎಷ್ಟರ ಮಟ್ಟಿಗೆ ಇದೆ ಅಂದರೆ ಒಂದು ಬಾರಿ ಬಂಗು ಬಂದರೆ ಅದರ ಸುತ್ತಲೂ ಇರುವಂತಹ ಪ್ರದೇಶಕ್ಕೆ ಇದು ಹರಡಿಕೊಂಡು ಹೋಗುತ್ತದೆ. ಮೊದಲ ಬಾರಿಗೆ ಸಾಸಿವೆ ಕಾಳಿನಷ್ಟು ಗಾತ್ರದಲ್ಲಿ ಮಾತ್ರ ಇದು ಕಾಣಿಸಿಕೊಳ್ಳುತ್ತದೆ ತದನಂತರ ಇದು ಎಷ್ಟರ ಮಟ್ಟಿಗೆ ಬೆಳೆಯುತ್ತದೆ ಅಂದರೆ ಮುಖದ ಮೂಗಿನ ಮೇಲೆ , ಕೆನ್ನೆಯ ಮೇಲೆ ಅಥವಾ ಹಣೆಯ ಮೇಲೆ ಮುಖದ ಸಂಪೂರ್ಣ ಭಾಗವನ್ನು ಆವರಿಸಿಕೊಂಡು ಬಿಡುತ್ತದೆ. ಅಷ್ಟೇ ಅಲ್ಲದೆ ಬಂಗು ಬಂದರೆ ಬಿಳಿ ಇರುವಂತಹ ಚರ್ಮ ಕಪ್ಪು ಬಣ್ಣಕ್ಕೆ ಅಥವಾ ಕಂದು ಬಣ್ಣಕ್ಕೆ ತಿರುಗಿ ಹೋಗುತ್ತದೆ ಆದಕಾರಣ ಪ್ರತಿಯೊಬ್ಬರೂ ಕೂಡ ಬಂಗು ಬಂದರೆ ಸಾಕು ತುಂಬಾನೇ ಭಯಪಡುತ್ತಾರೆ.
ಇದು ಸೌಂದರ್ಯ ದೃಷ್ಟಿಯಿಂದ ನಾವು ಹೇಳುತ್ತಿರುವಂತಹ ಮಾತಾಗಿದೆ ಆದರೆ ಇದನ್ನು ಕೆಲವೊಮ್ಮೆ ಹಿರಿಯರು ದೈವಿಕ ಕಾರಣಗಳಿಂದಲು ಕೂಡ ಬಂದಿರುತ್ತದೆ ಅಂತ ಹೇಳುವುದನ್ನು ನಾವು ಕೇಳಬಹುದಾಗಿದೆ. ಹೌದು ಬಂದರೆ ಕ’ಷ್ಟಗಳು ಬರುತ್ತದೆ ಜೀವನದಲ್ಲಿ ಸಾಕಷ್ಟು ಸಂ’ಕ’ಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಬಹುದು. ಅದೇ ರೀತಿಯಲ್ಲಿ ಎರಡು ವಿಧಗಳು ಇರುವುದನ್ನು ನಾವು ನೋಡಬಹುದಾಗಿದೆ ಒಂದು ಒಳ್ಳೆಯ ಬಂಗು ಮತ್ತೊಂದು ಕೆ’ಟ್ಟ ಬಂಗು ಈ ಹೆಸರನ್ನು ಕೇಳುತ್ತಿದ್ದ ಹಾಗೆ ನಿಮಗೆ ವಿಚಿತ್ರ ಅಂತ ಅನಿಸಬಹುದು. ಹೌದು ಕೆಲವೊಬ್ಬರಿಗೆ ಬಂಗು ಬಂತು ಅಂದಕೂಡಲೇ ಕ’ಷ್ಟಗಳ ಸರಮಾಲೆ ಒಂದರಂತೆ ಒಂದು ಬರುತ್ತದೆ ಇನ್ನೂ ಕೆಲವರಿಗೆ ಬಂತು ಅಂದರೆ ಇರುವ ಕ’ಷ್ಟಗಳೆಲ್ಲವೂ ಕೂಡ ನಿವಾರಣೆಯಾಗಿ ಸುಖದ ಹಾದಿಯೂ ಸಿಗುತ್ತದೆ. ಹಿರಿಯರು ಬಂಗು ಬಂತು ಅಂದರೆ ಎರಡು ರೀತಿಯಾದಂತಹ ಅಭಿಪ್ರಾಯಗಳನ್ನು ಹೇಳುವುದನ್ನು ನಾವು ಕೇಳಬಹುದಾಗಿದೆ. ಅದೇನೇ ಆಗಿರಲಿ ಬಂಗು ಬಂತು ಅಂದಕೂಡಲೇ ಯುವಪೀಳಿಗೆ ಅಂತೂ ತುಂಬಾನೇ ನಿರಾಸೆಯಾಗುವುದು ಖಚಿತ.
ಈ ಬಂಗನ್ನು ನಿವಾರಣೆ ಮಾಡುವುದಕ್ಕೆ ನಾವು ಯಾವ ರೀತಿಯಾದಂತಹ ಮನೆಮದ್ದನ್ನು ಬಳಕೆಮಾಡಬೇಕು ಹಾಗೂ ಇದಕ್ಕೆ ಬೇಕಾಗುವ ಪದಾರ್ಥಗಳು ಏನು ಎಂಬುದನ್ನು ನೋಡುವುದಾದರೆ. ಮನೆಮದ್ದು ಮಾಡುವುದಕ್ಕೆ ನಿಮಗೆ ಬೇಕಾಗುವಂತಹ ಪದಾರ್ಥ ಗುಡ್ಡೆಕಾಯಿ ಬೀಜಾ & ಜಾಜಿಪಲ ಈ ಗುಡ್ಡೆ ಕಾಯಿ ನಿಮಗೆ ಹಳ್ಳಿ ಪ್ರದೇಶದಲ್ಲಿ ಎಲ್ಲಾ ಭಾಗದಲ್ಲಿಯೂ ಕೂಡ ದೊರೆಯುತ್ತದೆ ಇದು ಬಳ್ಳಿಯ ಮಾದರಿಯಲ್ಲಿ ಅಬ್ಬಿಕೊಂಡಿರುತ್ತದೆ ಇದರ ಕಾಯಿ ಅಂಟು ಅಂಟಾಗಿರುವುದನ್ನು ನೋಡಬಹುದಾಗಿದೆ. ಕಾಯಿಯ ಒಳಗೆ ಚಿಕ್ಕ-ಚಿಕ್ಕ ಜಾಗದ ಬೀಜಗಳು ದೊರೆಯುತ್ತದೆ ಈ ಗುಡ್ಡೆ ಕಾಯಿ ಬೀಜವನ್ನು ತೆಗೆದುಕೊಂಡು ಬಂದು ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು ಅದರ ಒಳಗೆ ಇರುವಂತಹ ಬೀಜವನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ. ಎರಡನೇದಾಗಿ ಜಾಜಿ ಫಲ ಇದು ಕೂಡ ನಿಮಗೆ ಆಯುರ್ವೇದಿಕ್ ಅಥವಾ ಹಳ್ಳಿ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುವಂತಹ ಸಸ್ಯವಾಗಿದೆ. ಈ ಸಸ್ಯದಲ್ಲಿ ಬಿಡುವಂತಹ ಕಾಯನ್ನು ತೆಗೆದುಕೊಂಡು ಅದರ ಒಳಭಾಗದಲ್ಲಿ ಇರುವಂತಹ ಕಾಯನ್ನು ಶೇಖರಣೆ ಮಾಡಿ ಇದನ್ನು ಕೂಡ ಬಿಸಿಲಿನಲ್ಲಿ ಒಣಗಿಸಬೇಕು.
ಈಗ ಗುಡ್ಡೆ ಕಾಯಿ ಪ್ರಮಾಣ ಸುಮಾರು 200 ಗ್ರಾಂನಷ್ಟು ಇರಬೇಕು ಅದೇ ರೀತಿ ಜಾಜಿಫಲದ ಬೀಜ ಸುಮಾರು 100 ಗ್ರಾಂನಷ್ಟು ಪ್ರಮಾಣ ಇರಬೇಕು. ಇವೆರಡನ್ನು ಕೂಡ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು ಇದನ್ನು ಚೂರ್ಣ ಅಂತನು ಕೂಡ ಕರೆಯುತ್ತಾರೆ ನಿಮಗೆ ಒಂದು ವೇಳೆ ಮನೆಯಲ್ಲಿ ಈ ರೀತಿ ಸಿದ್ಧಪಡಿಸಲು ಸಾಧ್ಯವಾಗದಿದ್ದರೆ. ಇದನ್ನು ನೀವು ಗ್ರಂಥಿಗೆ ಅಂಗಡಿ ಅಥವಾ ಯಾವುದಾದರೂ ಆಯುರ್ವೇದಿಕ್ ಅಂಗಡಿಯಲ್ಲೂ ಕೂಡ ಖರೀದಿ ಮಾಡಬಹುದಾಗಿದೆ. ಈಗ ಒಂದು ಬಟ್ಟಲಿಗೆ ಎರಡು ಚಿಟಿಕೆಯಷ್ಟು ಈ ಪುಡಿಯನ್ನು ಹಾಕಿ ನಂತರ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಇವೆರಡನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಗಂಧದ ರೀತಿಯಲ್ಲಿ ನಿಮ್ಮ ಮುಖಕ್ಕೆ ಲೇಪನ ಮಾಡಬೇಕು. ಅಂದರೆ ಯಾವ ಭಾಗದಲ್ಲಿ ಬಂಗು ಇರುತ್ತದೆ ಆ ಜಾಗದಲ್ಲಿ ಇದನ್ನು ಲೇಪನ ಮಾಡಬೇಕು ಈ ರೀತಿಯಾಗಿ ನಾಲ್ಕರಿಂದ ಐದು ದಿನಗಳ ಕಾಲ ಮಾಡಿದರೆ ಸಾಕು ಖಚಿತವಾಗಿ ಕೂಡ ಮುಖದಲ್ಲಿ ಇರುವಂತಹ ಬಂಗಿನ ಸಮಸ್ಯೆ ನಿವಾರಣೆಯಾಗುತ್ತದೆ ಈಗಾಗಲೇ ಇದರ ಪ್ರಯೋಜನವನ್ನು ಸಾಕಷ್ಟು ಜನ ಪಡೆದುಕೊಂಡಿರುವುದನ್ನು ನಾವು ನೋಡಬಹುದಾಗಿದೆ.
ಬಂಗು ಬಂತು ಅಂತ ಕೂಡಲೇ ಸುಮಾರು ಜನ ಇದಕ್ಕೆ ಕ್ರೀಂಗಳನ್ನು ಹಚ್ಚುವುದನ್ನು ನಾವು ನೋಡಿದ್ದೇವೆ ಆದರೆ ಈ ರೀತಿ ಕ್ರೀಂ ಹಚ್ಚುವುದರಿಂದ ಮುಖದ ಕಾಂತಿ ಹಾಳಾಗುತ್ತದೆ. ಅಷ್ಟೇ ಅಲ್ಲದೆ ಮುಖದಲ್ಲಿ ಇರುವಂತಹ ಸೆಲ್ಸ್ ಗಳು ಕೂಡ ಸಾ’ಯುತ್ತವೆ ಹಾಗಾಗಿ ಇಂತಹ ನೈಸರ್ಗಿಕ ಪದ್ಧತಿಯನ್ನು ಬಳಸಿ ನಿಮ್ಮ ಚರ್ಮಕ್ಕೆ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಈ ಒಂದು ಮನೆಮದ್ದನ್ನು ಬಳಕೆ ಮಾಡಿ ಈಗಾಗಲೇ ಸಾಕಷ್ಟು ಜನ ಉತ್ತಮ ರೀತಿಯ ಪ್ರಯೋಜನವನ್ನು ಪಡೆದು ಕೊಂಡಿದ್ದಾರೆ. ಹಾಗಾಗಿ ನೀವು ಕೂಡ ಒಂದು ಬಾರಿ ಬಳಕೆ ಮಾಡಿ ನೋಡಿ ಇದರ ಚಮತ್ಕಾರವನ್ನು ನಿಮ್ಮ ಕೈಯಲ್ಲಿ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟು ಅದ್ಭುತವಾಗಿ ಇದು ಕೆಲಸ ಮಾಡುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.