ಇತ್ತೀಚಿನ ದಿನಗಳಲ್ಲಿ ಹಲವಾರು ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ಮಂಡಿನೋವು ಹೌದು ತುಂಬಾ ಜನರಿಗೆ ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದಕ್ಕಾಗಿ ಅವರು ಹಲವಾರು ರೀತಿಯಾದಂತಹ ಮಾತ್ರೆಗಳು ಅಥವಾ ಹಲವಾರು ರೀತಿಯಾದಂತಹ ಟ್ರೀಟ್ಮೆಂಟ್ ಗಳನ್ನು ತೆಗೆದುಕೊಂಡರು ಆ ಕ್ಷಣಕ್ಕೆ ಮಂಡಿ ನೋವು ಕಡಿಮೆ ಎನಿಸಿದರು ಸೊಲ್ಪ ಅಮಯದ ನಂತರ ಮಂಡಿನೋವು ಬಂದೇ ಬರುತ್ತದೆ. ಮಂಡಿ ನೋವು ಅಷ್ಟೇ ಅಲ್ಲದೆ ಕೀಲುನೋವು, ಕೈಗಳ ನೋವು, ಮೈ ಕೈ ನೋವು, ಕುತ್ತಿಗೆ ನೋವು ಈ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇದಕ್ಕೆ ಕಾರಣ ಅತಿಯಾಗಿ ಕೆಲಸ ಮಾಡುವುದು ಅಥವಾ ಯಾವಾಗಲೂ ಕೂತಲ್ಲಿಯೆ ಕೂತಿರುವುದು ಹೌದು ಅತಿಯಾಗಿ ಕೆಲಸ ಮಾಡುವವರಲ್ಲು ಸಹ ಈ ಸಮಸ್ಯೆ ಕಂಡುಬರುತ್ತದೆ ಹಾಗೆಯೆ ಒಂದೇ ಕಡೆಯಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿರುವವರಿಗೂ ಸಹ ಈ ಸಮಸ್ಯೆ ಎದುರಾಗುತ್ತದೆ ಯಾರೆಲ್ಲ ಒಂದೇ ಕಡೆ ಆಫೀಸ್ ಗಳಲ್ಲಿ ಕುಳಿತು ಹೆಚ್ಚಾಗಿ ಕೆಲಸ ಮಾಡುವವರು ಸಹ ಈ ಒಂದು ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ.
ಹಿಂದಿನ ಕಾಲದ ಜನರಿಗೆ ಅಷ್ಟಾಗಿ ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಾ ಇರಲಿಲ್ಲ ಯಾಕೆಂದರೆ ಅವರ ಜೀವನ ಶೈಲಿಯೇ ಬೇರೆಯಾಗಿತ್ತು ಹಾಗೆಯೇ ಈಗಿನ ಜನಗಳ ಜೀವನ ಶೈಲಿಯೇ ಬೇರೆ ಹಾಗಿದೆ ಹೌದು ನಮ್ಮ ಆಹಾರ ಪದ್ಧತಿ ಇರಬಹುದು ಅಥವಾ ಜೀವನಶೈಲಿ ಆಗಿರಬಹದು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನ ಬೀರಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಹಿಂದಿನ ಕಾಲದಲ್ಲಿ ಹೋಲಿಸಿಕೊಂಡರೆ ಅವರು ಸೇವಿಸುವ ಆಹಾರ ಪೌಷ್ಟಿಕಾಂಶದಿಂದ ಕೂಡಿತ್ತು ಇತ್ತೀಚಿಗೆ ನಮ್ಮ ಕಾಲದ ಜನರು ಅತಿಯಾಗಿ ಎಣ್ಣೆಯಲ್ಲಿ ಕರಿದಂತಹ ಪದಾರ್ಥಗಳನ್ನು ಉಪಯೋಗಿಸುತ್ತ ಬರುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಆರೋಗ್ಯಯುತ ಜೀವನವನ್ನು ನಡೆಸುತ್ತಿದ್ದರು ಈಗಿನ ಕಾಲದ ಜನರಿಗೆ ನಾನಾ ರೀತಿಯಾದಂತಹ ರೋಗ ಬಾಧೆಗಳು ಕಾಣಿಸಿಕೊಂಡು ಅವರ ಜೀವನವೇ ಬೇಸತ್ತು ಹೋಗಿರುತ್ತದೆ.
ಈಗಿನ ಕಾಲದ ಒಂದಲ್ಲಾ ಒಂದು ರೀತಿಯಾದಂತಹ ಅನಾರೋಗ್ಯ ಸಮಸ್ಯೆ ಎದುರಾಗುತ್ತಲೇ ಇರುತ್ತದೆ ಅದಕ್ಕೆ ನಾವು ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಮುಂದಾಗುತ್ತೇವೆ ಆದರೂ ಸಹ ನಮಗೆ ಎಲ್ಲ ಸಮಸ್ಯೆಗಳು ಸಹ ನಿವಾರಣೆಯಾಗುವುದಿಲ್ಲ. ಮಂಡಿ ನೋವಿನ ಸಮಸ್ಯೆಯನ್ನು ನಾವು ಕಡಿಮೆ ಮಾಡಿಕೊಳ್ಳಬೇಕಾದರೆ ಕೇವಲ 4 ಪದಾರ್ಥಗಳು ಅಂದರೆ ನಮ್ಮ ಮನೆಯಲ್ಲಿ ಸಿಗುವಂತಹ 4 ಪದಾರ್ಥಗಳನ್ನು ಬಳಸಿಕೊಂಡು ನಮ್ಮ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅಂತಹ ಪದಾರ್ಥಗಳು ಯಾವುದೆಂದರೆ ಸಕ್ಕರೆ, ಸುಣ್ಣ, ಸಾಸಿವೆ ಎಣ್ಣೆ, ಅರಿಶಿಣಪುಡಿ ಈ ನಾಲ್ಕು ಪದಾರ್ಥಗಳಿಂದ ನಾವೆಷ್ಟೇ ದೊಡ್ಡದಾದ ಮಂಡಿ ನೋವಿನ ಸಮಸ್ಯೆ ಇದ್ದರೂ ಸಹ ಅದನ್ನು ನಾವು ಆದಷ್ಟು ಕಡಿಮೆ ಮಾಡಿಕೊಳ್ಳಬಹುದು.
ಈ ಒಂದು ಮನೆಮದ್ದನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ ಒಂದು ಗಾಜಿನ ಬಟ್ಟಲು ಅಥವಾ ಪಿಂಗಾಣಿ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಅರ್ಧಾ ಟೇಬಲ್ ಸ್ಪೂನ್ ಸಕ್ಕರೆಯ ಪುಡಿ ಅಂದರೆ ನಾವು ಮನೆಯಲ್ಲಿ ಇರುವಂತಹ ಸಕ್ಕರೆಯನ್ನು ಪುಡಿ ಮಾಡಿಕೊಂಡು ಬಳಸಿಕೊಳ್ಳಬಹುದು, ಕಾಲು ಟೇಬಲ್ ಸ್ಪೂನ್ ಅರಿಶಿನ ಪುಡಿ ನಂತರ ಸ್ವಲ್ಪ ಸುಣ್ಣವನ್ನು ಸೇರಿಸಿ ನಂತರ ಕೊನೆಯಲ್ಲಿ ಅರ್ಧ ಟೇಬಲ್ ಸ್ಪೂನ್ ನಷ್ಟು ಸಾಸಿವೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದನ್ನು ನೀವು ಎಲ್ಲಿ ನೋವು ಕಂಡುಬರುತ್ತದೆ ಅಂತಹ ಸ್ಥಳಕ್ಕೆ ಹಚ್ಚಿಕೊಂಡು ಅರ್ಧ ಗಂಟೆಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಅಥವಾ ನೀವು ರಾತ್ರಿ ಹಚ್ಚಿ ಬಿಟ್ಟು ನಂತರ ಅದನ್ನು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಮಂಡಿ ನೋವು, ಮೈಕೈನೋವು ಯಾವುದೇ ರೀತಿಯ ನೋವು ಸಹ ನಿವಾರಣೆಯಾಗುತ್ತದೆ.
ನಾವು ಇಲ್ಲಿ ಬಳಸುವಂತಹ ಪದಾರ್ಥಗಳಾದ ಸಕ್ಕರೆಯಲ್ಲಿ ನೋವು ನಿರ್ವಹಣೆಯನ್ನು ಮಾಡುವಂತಹ ಒಂದು ಗುಣ ಹೆಚ್ಚಾಗಿ ಕಂಡುಬರುತ್ತದೆ. ಅರಿಶಿಣ ಇದಲ್ಲಿ ಸಹ ಆಂಟಿಆಕ್ಸಿಡೆಂಟ್, ಮಿನರಲ್ ಅಧಿಕವಾಗಿ ಇರುತ್ತದೆ ಆದ್ದರಿಂದ ಯಾವುದೇ ರೀತಿಯ ನೋವುಗಳ ನಿವಾರಣೆಗೂ ಸಹ ಬಳಸಿಕೊಳ್ಳಲಾಗುತ್ತದೆ. ನಂತರ ಸುಣ್ಣ ಇದರಲ್ಲಿ ಕ್ಯಾಲ್ಶಿಯಮ್ ಅಧಿಕವಾಗಿದ್ದು ಮೂಳೆಗಳನ್ನು ಬಲಪಡಿಸುವಂತಹ ಒಂದು ಗುಣವನ್ನು ಹೊಂದಿದೆ ನಾವು ಅಡಿಕೆಯ ಜೊತೆಯಲ್ಲಿ ತಿನ್ನುವಂತಹ ಸುಣ್ಣವನ್ನು ಬಳಸಿಕೊಳ್ಳಬೇಕು. ಸಾಸಿವೆ ಎಣ್ಣೆ ಇದು ಸಹ ನೋವು ನಿವಾರಣೆ ಮಾಡುವಂತಹ ಒಂದು ಶಕ್ತಿ ಇರುತ್ತದೆ. ಈ ಮನೆಮದ್ದನ್ನು ನೀವು ಮಾಡಿದ್ದೆ ಆದಲ್ಲಿ ಯಾವುದೇ ರೀತಿಯಾದಂತಹ ನೋವು ಕಾಣಿಸಿಕೊಳ್ಳುವುದಿಲ್ಲ ನೀವು ಹೊರಗಿನ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಈ ವಿಧಾನವನ್ನು ಒಂದು ತಿಂಗಳುಗಳ ಕಾಲ ಮಾಡಿದ್ದೆ ಆದಲ್ಲಿ ನಿಮ್ಮ ಮಂಡಿನೋವು ಶಾಶ್ವತವಾಗಿ ನಿವಾರಣೆಯಾಗುತ್ತದೆ.