ಕರ್ನಾಟಕದಲ್ಲಿ 2023ನೇ ವಿಧಾನಸಭಾ ಎಲೆಕ್ಷನ್ ರಣಾಂಗಣ ಮತದಾನದ ದಿನಕ್ಕೆ ಇನ್ನು ಬೆರಳಣಿಕೆಯ ದಿನಗಳಷ್ಟೇ ಬಾಕಿ ಉಳಿದಿದ್ದು, ಎಲ್ಲರ ಚಿತ್ತ ಈಗ ಎಲೆಕ್ಷನ್ ಅತ್ತ ಇದೆ. ಎಲ್ಲಾ ಪಕ್ಷಗಳು ಕೂಡ ಭರ್ಜರಿ ತಯಾರಿ ನಡೆಸುತ್ತಿದ್ದು, ಸ್ಟಾರ್ ಪ್ರಚಾರಕರಿಂದ ಪ್ರಚಾರ ಮಾಡಿಸುವುದರ ಜೊತೆಗೆ ಕರ್ನಾಟಕ ಜನತೆಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಪ್ರಣಾಳಿಕೆ ಹೊರಡಿಸಿ ಜನಮತ ಸೆಳೆಯಲು ಪ್ರಯತ್ನಿಸುತ್ತಿವೆ.
ಮತ್ತೊಂದೆಡೆ ಚುನಾವಣೆ ಆಯೋಗವು ಮತಗಟ್ಟೆಗಳಲ್ಲಿ ಯಾವುದೇ ಅಡಚಣೆ, ಅವ್ಯವಹಾರ ಇಲ್ಲದೆ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಎಲೆಕ್ಷನ್ ದಿನ ಹತ್ತಿರವಾಗುತ್ತಿದ್ದಂತೆ ಎಲ್ಲೆಲ್ಲಿ ಹೋದರು ಕೂಡ ಎಲೆಕ್ಷನ್ ಬಗ್ಗೆ ಮಾತು ಜೋರಾಗಿದೆ. ಇದರ ನಡುವೆ ಮತದಾನ ಮಾಡುವುದಕ್ಕಾಗಿ ನಾವು ಕೂಡ ನಮ್ಮ ವೋಟರ್ ಐಡಿ ಹುಡುಕುವಂತಾಗಿದೆ.
ಯಾಕೆಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಅಂತಹ ಗುರುತಿನ ಚೀಟಿಗಳು ಸದಾ ಕಾಲ ಬಳಕೆಗೆ ಬರುತ್ತವೆ. ಒಂದಲ್ಲ ಒಂದು ಖಾಸಗಿ ಅಥವಾ ಸರ್ಕಾರಿ ವಲಯದ ಯೋಜನೆಗಳ ಸಲುವಾಗಿ ಅಥವಾ ಮತ್ಯಾವುದೋ ವಿಷಯವಾಗಿ ನಾವು ಇವುಗಳನ್ನು ದಿನನಿತ್ಯ ಬಳಸುತ್ತಿರುತ್ತೇವೆ.
ಆದರೆ ಈಗ ವೋಟರ್ ಐಡಿ ಬಳಕೆ ಹೆಚ್ಚಾಗಿ ಇಲ್ಲ ವೋಟರ್ ಐಡಿ ಬಳಸುತ್ತಿದ್ದ ಜಾಗದಲ್ಲೆಲ್ಲಾ ಆಧಾರ್ ಕಾರ್ಡ್ ಮಾನ್ಯವಾಗಿರುವುದರಿಂದ ಭಾರತದ ಚುನಾವಣಾ ಆಯೋಗ ನೀಡುವ ಗುರುತಿನ ಚೀಟಿ ಪಡೆದಿದ್ದರು ಸಹ ಅದನ್ನು ಎಲ್ಲಿ ಇಟ್ಟಿದ್ದೆವು ಎನ್ನುವುದೇ ಮರೆತು ಹೋಗಿದೆ. ಆದರೆ ಎಲೆಕ್ಷನ್ ಸಮಯದಲ್ಲಿ ವೋಟರ್ ಐಡಿ ಇಲ್ಲದೆ ಇದ್ದರೆ ವೋಟ್ ಹಾಕಲು ಸಾಧ್ಯವಿಲ್ಲ ಎಂದು ತಲೆಕೆಡಿಸಿಕೊಳ್ಳುವವರಿಗೆ ವೋಟರ್ ಐಡಿ ಬದಲು ಬೇರೆ ದಾಖಲೆಗಳನ್ನು ತೋರಿಸಿ ಕೂಡ ವೋಟ್ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ.
ಮತದಾನ ಮಾಡಲು ಮತದಾರರ ಚೀಟಿ ಬದಲು ಮಾನ್ಯ ಆಗುವ ಗುರುತಿನ ಚೀಟಿಗಳು :-
● ಆಧಾರ್ ಕಾರ್ಡ್
● ಜಾಬ್ ಕಾರ್ಡ್ ಅಂದರೆ ನರೇಗಾ ಕೆಲಸದ ಕಾರ್ಡ್
● ಫೋಟೋ ಲಗತ್ತಿಸಿರುವ ಬ್ಯಾಂಕ್ ಪಾಸ್ ಪುಸ್ತಕ
● ಪೋಸ್ಟ್ ಆಫೀಸ್ ಪಾಸ್ ಬುಕ್
● ಕಾರ್ಮಿಕ ಸಚಿವಾಲಯದಿಂದ ನೀಡಿರುವಂತಹ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್
● ಚಾಲನ ಪರವಾನಗಿ
● NPR ಅಡಿ ನೀಡಲಾದ ಸ್ಮಾರ್ಟ್ ಕಾರ್ಡ್
● ಪಾಸ್ಪೋರ್ಟ್
● ಫೋಟೋ ಇರುವಂತಹ ಪಿಂಚಣಿ ದಾಖಲೆ
● ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ
● ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ
● ಶಾಸಕ ಮತ್ತು ಸಂಸದರಿಗೆ ನೀಡುತ್ತಿರುವ ಅಧಿಕೃತ ಗುರುತಿನ ಚೀಟಿ
● ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ ನೀಡಲಾಗಿರುವಂತಹ ವಿಶಿಷ್ಟ ವಿಕಲಚೇತನರ ಗುರುತಿನ ಚೀಟಿ
ಆದರೆ ಈ ಕುರಿತು ಬಹು ಮುಖ್ಯವಾದ ಮತ್ತೊಂದು ವಿಚಾರ ಏನೆಂದರೆ ಈ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆಯಲ್ಲಿ ಇರುವ ಚುನಾವಣಾ ಅಧಿಕಾರಿಗಳಿಗೆ ತೋರಿಸಿ ನೀವು ಮತದಾನ ಮಾಡಬಹುದು. ಆದರೆ ಮತದಾರರ ಲಿಸ್ಟ್ ಅಲ್ಲಿ ಕೂಡ ನಿಮ್ಮ ಹೆಸರಿರುವುದು ಮುಖ್ಯ.
ನೀವು ಈ ಮೇಲಿನ ಯಾವುದೇ ದಾಖಲೆ ಹೊಂದಿದ್ದರು ಮತದಾರರಲ್ಲಿ ನಿಮ್ಮ ಹೆಸರು ಇಲ್ಲ ಎಂದರೆ ಆಗ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಐದು ವರ್ಷಕ್ಕೊಮ್ಮೆ ಬರುವ ಈ ಮತ ಚಲಾವಣೆಯ ಅಧಿಕಾರವನ್ನು ಎಲ್ಲರೂ ತಪ್ಪದೇ ಚಲಾಯಿಸಿ ಜನಪರ ನಾಯಕನನ್ನು ಆರಿಸಿ. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಿ.