ಮನುಷ್ಯನಿಗೆ ಹಣದ ಅವಶ್ಯಕತೆ ಎಷ್ಟು ಇರುತ್ತದೆ ಎಂದರೆ ನಮ್ಮ ಜೀವನ ನಿಂತಿರುವುದೇ ಹಣದ ಮೇಲೆ ಅನ್ನಬಹುದು. ನಮ್ಮ ಮೂಲಭೂತ ಅವಶ್ಯಕತೆ ಇರಬಹುದು, ಆಸೆ ಆಕಾಂಕ್ಷೆಗಳಿರಬಹುದು ಎಲ್ಲವೂ ಕೂಡ ಈಡೇರುವುದು ಹಣ ಕೈಲಿದ್ದಾಗ ಮಾತ್ರ. ಹಣ ಇಲ್ಲ ಎಂದರು ಕೂಡ ಕೆಲವೊಮ್ಮೆ ಸಾಲ ಮಾಡಿ ನಮ್ಮ ಸಮಸ್ಯೆಗಳನ್ನು ಅಥವಾ ಇಷ್ಟಗಳನ್ನು ಪೂರ್ತಿ ಮಾಡಿ ಕೊಳ್ಳಬೇಕಾಗುತ್ತದೆ. ಆದರೆ ಈ ರೀತಿ ಮಾಡಿದ ಸಾಲಗಳು ಮುಂದೊಂದು ದಿನ ಶೂಲ ಆಗಿ ನಮ್ಮನ್ನು ಮುಗಿಸೀ ಬಿಡುತ್ತದೆ.
ಜಿಒವನದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಸಾಲ ಮಾಡುತ್ತಾರೆ. ಆದರೆ ಒಂದು ವೇಳೆ ನಾವು ಸಾಲ ತಿಳಿಸಿಕೊಳ್ಳಲು ಮಾಡಿದ ಲೆಕ್ಕಾಚಾರ ಎಡವಟ್ಟು ಆದರೆ ಆ ಸಾಲ ತೀರಿಸಲಾಗದೆ ಸಾಲಕ್ಕೆ ಸಾಲ ಅಥವಾ ಅದಕ್ಕೆ ಬಡ್ಡಿ, ಬಡ್ಡಿಯಿಂದ ಚಕ್ರ ಬಡ್ಡಿ ಈ ರೀತಿ ಅದರ ಪಟ್ಟಿ ಬೆಳೆದು ಸಾಲ ಪಡೆದವರನ್ನು ಸುಳಿಗೆ ಸಿಲುಕಿಸಬಹುದು.
ಅಂತಹ ಸಮಯದಲ್ಲಿ ಸಾಲ ಹೆಚ್ಚಾದಾಗ ನಮ್ಮ ಕುಟುಂಬದವರೇ ಆಗಲಿ ಸ್ನೇಹಿತರೆ ಆಗಲಿ ಬಂಧುಗಳೇ ನಮ್ಮನ್ನು ಕೈಜೋಡಿಸಿ ಮೇಲೆತ್ತುತ್ತಾರೆ ಎಂದು ಎಲ್ಲಾ ಸಮಯದಲ್ಲೂ ನಿರೀಕ್ಷಿಸುವುದು ಕಷ್ಟ. ಏಕೆಂದರೆ ಇಂತಹ ಒಳ್ಳೆಯ ಮನಸ್ಸು ಇರುವ ಜನ ಈಗ ಈ ಪ್ರಪಂಚದಲ್ಲಿ ಇಲ್ಲ. ಹಾಗೂ ಇದ್ದರೆ ಅದು ತೀರ ಅಪರೂಪ ಎಲ್ಲರ ಜೀವನದಲ್ಲಿ ಸಹ ಇದು ಸಾಧ್ಯವಾಗುವುದಿಲ್ಲ.
ಹಾಗಾಗಿ ನಮ್ಮ ಎಲ್ಲಾ ಕಷ್ಟಗಳಿಗೂ ದೇವರೊಬ್ಬನೇ ದಿಕ್ಕು. ಇಂತಹ ಸಮಯದಲ್ಲಿ ನಾವು ಯಾವ ದೇವರನ್ನು ಪೂಜೆ ಮಾಡಿದರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ನೋಡುವುದಾದರೆ ಈ ರೀತಿ ಸಾಲಕ್ಕೆ ಸಿಲುಕಿಕೊಂಡವರ ಸಮಸ್ಯೆ ಪರಿಹಾರ ಆಗಬೇಕು ಎಂದರೆ ಅವರು ಆಂಜನೇಯ ಸ್ವಾಮಿಯ ದರ್ಶನ ಮಾಡಬೇಕು ಮತ್ತು ದರ್ಶನ ಮಾಡುವುದರ ಜೊತೆಗೆ ಈ ಒಂದು ಚಿಕ್ಕ ಕೆಲಸ ಮಾಡುವುದರಿಂದ ನೀವು ಸಾಲದ ಸಮಸ್ಯೆಯಿಂದ ಹೊರ ಬರಬಹುದು.
ಅದೇನೆಂದರೆ ಪ್ರತಿ ಶನಿವಾರ ನೀವು ಆಂಜನೇಯ ಸ್ವಾಮಿಯ ದರ್ಶನ ಮಾಡಿ ಬನ್ನಿ ಮತ್ತು ಸಾಧ್ಯವಾದರೆ ವೀಳ್ಯದೆಲೆಯ ಹಾರವನ್ನು ಆಂಜನೇಯ ಸ್ವಾಮಿಗೆ ಅರ್ಪಿಸಿ. ಶ್ರೀ ಆಂಜನೇಯ ಸ್ವಾಮಿಯು ಅತಿ ಶಕ್ತಿವಂತ ದೇವರು ಹಾಗೂ ಧೈರ್ಯವಂತ ದೇವರು ಎಂತಹ ಸಮಸ್ಯೆ ಬಂದರೂ ಆಂಜನೇಯನನ್ನು ನೆನೆದರೆ ಅದು ಪರಿಹಾರ ಆಗುತ್ತದೆ. ಆ ಶಕ್ತಿಯನ್ನು ಆಂಜನೇಯ ನಮ್ಮಲ್ಲಿ ತುಂಬುತ್ತಾರೆ. ಜೊತೆಗೆ ವೀಳ್ಯದೆಲೆ ಕೂಡ ಅಂತಹ ಆಕರ್ಷಣೆ ಹೊಂದಿದೆ.
ಅದಕೆಂದಲೇ ಶುಭ ಕಾರ್ಯಗಳಲ್ಲಿ ತಪ್ಪದೇ ವೀಳ್ಯದೆಲೆಯನ್ನು ಬಳಸುತ್ತೇವೆ. ಒಂದು ವೇಳೆ ವೀಳ್ಯದೆಲೆ ಹಾರ ಅರ್ಪಿಸುವಷ್ಟು ಶಕ್ತಿವಂತರು ನಾವಲ್ಲದಿದ್ದರೆ ವೀಳ್ಯದೆಲೆಗೆ ಒಂದು ಏಲಕ್ಕಿ ಮತ್ತು ಒಂದು ಲವಂಗ ಹಾಕಿ ಅದನ್ನು ಪಾನ್ ರೀತಿ ಮಡಚಿ ಶುದ್ಧವಾದ ಬಟ್ಟೆಯಲ್ಲಿ ಕಟ್ಟಿಕೊಂಡು ದೇವಸ್ಥಾನಕ್ಕೆ ಹೋಗಿ ಆಂಜನೇಯನ ವಿಗ್ರಹದ ಮುಂದೆ ಇಟ್ಟು ಭಕ್ತಿಯಿಂದ ಪ್ರಾರ್ಥಿಸಿ ನಿಮ್ಮ ಸಮಸ್ಯೆಗಳನ್ನೆಲ್ಲ ಹೇಳಿಕೊಂಡು ಬಿಡಿ ನಂತರ ನಡೆಯುವ ಜಾದು ನಿಮಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ.
ಸ್ವಲ್ಪ ಸ್ವಲ್ಪವಾಗಿ ನೀವು ನಿಮ್ಮ ಸಮಸ್ಯೆಯಿಂದ ಹೊರಬರಲು ಆರಂಭಿಸುತ್ತೀರಿ ಆದರೆ ಇದಕ್ಕೆಲ್ಲ ನಂಬಿಕೆ ಮುಖ್ಯ ಅಷ್ಟೇ ಜೊತೆಗೆ ಯಾವುದೇ ಕಾರಣಕ್ಕೂ ನೀವು ಬುಧವಾರ ಹಾಗೂ ಶುಕ್ರವಾರ ಮಾತ್ರ ಸಾಲವನ್ನು ತೆಗೆದುಕೊಳ್ಳಬೇಕು. ಶನಿವಾರದಂದು ಸಾಲ ತೆಗೆದುಕೊಂಡರೆ ಅದನ್ನು ತಿರೀಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಯಾರು ಕೂಡ ಈ ದಿನದಂದು ಸಾಲ ಮಾಡಬೇಡಿ.