ಸಾಮಾನ್ಯವಾಗಿ ಹಳ್ಳಿಗಳ ಕಡೆಗಳಲ್ಲಿ ಒಲ ಗದ್ದೆಯ ಕಡೆಗಳಲ್ಲಿ ಕಾಡು ತುಳಿಸಿ ಗೆಳವು ಬೆಳೆದಿರುತ್ತದೆ ಈ ಕಾಡು ತುಳಿಸಿ ಗಿಡವು ನಾನಾ ರೀತಿಯಾದಂತಹ ಆರೋಗ್ಯ ಗುಣಗಳನ್ನು ಹೊಂದಿದ್ದು ಅನೇಕ ಜನರಿಗೆ ಈ ಒಂದು ತುಳಸಿ ಗಿಡದ ಉಪಯೋಗದ ಬಗ್ಗೆ ತಿಳಿದಿರುವುದಿಲ್ಲ. ಈ ಕಾಡು ತುಳಸಿ ಗಿಡವು ಚರ್ಮರೋಗದ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿ ನಿವಾರಣೆಯನ್ನು ನೀಡುತ್ತದೆ ಅದರಲ್ಲಿ ಡ್ರೈ ಸೋರಿಯಾಸಿಸ್, ಹುಳು ಕಾಟ ಇಂತಹ ಸಮಸ್ಯೆಗೆ ಈ ಗಿಡದ ಎಲೆಗಳನ್ನು ಮಜ್ಜಿಗೆಯಲ್ಲಿ ಚೆನ್ನಾಗಿ ಅರೆಯಬೇಕು, ನಂತರ ಮಜ್ಜಿಗೆ ಜೊತೆಯಲ್ಲಿ ಅರೆದಿರುವಂತಹ ಕಾಡು ತುಳಸಿ ಗಿಡದ ಎಲೆಯ ರಸವನ್ನು ಒಂದು ಲೋಟ ಕುಡಿಯುವುದರಿಂದ ನಿಮಗೆ ಚರ್ಮರೋಗದ ಸಮಸ್ಯೆ ನಿವಾರಣೆ ಆಗುತ್ತದೆ.
ಅಷ್ಟೇ ಅಲ್ಲದೆ ಈ ತುಳಸಿ ಗಿಡದ ಎಲೆಯನ್ನು ಚೆನ್ನಾಗಿ ಮಜ್ಜಿಗೆಯಲ್ಲಿ ಹರೆದು ನಂತರ ನೀವು ಅದನ್ನು ನಿಮ್ಮ ಪೂರ್ತಿ ಮೈ ಚರ್ಮಕ್ಕೆ ಹಚ್ಚಿ ಸಾಯಂಕಾಲದ ಸಮಯದಲ್ಲಿ ಚೆನ್ನಾಗಿ ಇದನ್ನು ಸೀಗೆಕಾಯಿ ಪುಡಿಯಿಂದ ತೊಳೆದುಕೊಳ್ಳುವುದರಿಂದ ನಿಮಗೆ ಚರ್ಮ ಸಮಸ್ಯೆ ನಿವಾರಣೆ ಆಗುತ್ತದೆ. ಎಲ್ಲರ ಮನೆಗಳಲ್ಲಿಯೂ ಸಹ ಸೊಳ್ಳೆಗಳ ಕಾಟ ಹೆಚ್ಚಾಗಿ ಇರುತ್ತದೆ ಇದರಿಂದ ನಮಗೆ ಸರಿಯಾಗಿ ರಾತ್ರಿ ಸಮಯದಲ್ಲಿ ನಿದ್ರಿಸಲು ಆಗುವುದಿಲ್ಲ ಅಷ್ಟೇ ಅಲ್ಲದೆ ಈ ಒಂದು ಸೊಳ್ಳೆಗಳು ಕಚ್ಚುವುದರಿಂದ ದೊಡ್ಡವರಿಗೆ ಹಾಗೆಯೇ ಚಿಕ್ಕ ಮಕ್ಕಳಿಗೆ ಅನೇಕ ರೀತಿಯಾದಂತಹ ಕಾಯಿಲೆಗಳು ಬರಬಹುದು ಆದ್ದರಿಂದ ಈ ಸೊಳ್ಳೆಗಳನ್ನು ಓಡಿಸುವ ಅನೇಕ ರೀತಿಯಾದಂತಹ ಸೊಳ್ಳೆ ಬತ್ತಿ ಹಾಗೆ ಇನ್ನಿತರ ಖಾಯಿಲ್ ಗಳು ನಾವು ಉಪಯೋಗ ಮಾಡುತ್ತೇವೆ.
ಆದರೆ ಅದು ನಮ್ಮ ಆರೋಗ್ಯಕ್ಕೆ ಅಷ್ಟೊಂದು ಆರೋಗ್ಯಕರವಲ್ಲ ನಾವು ಅವುಗಳನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಾದಂತಹ ತೊಂದರೆಗಳನ್ನು ಉಂಟುಮಾಡುತ್ತದೆ. ಉಸಿರಾಟದ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಸಂದರ್ಭ ಇರುತ್ತದೆ ಆದ್ದರಿಂದ ನಾವು ಈ ಒಂದು ಕಾಡು ತುಳಸಿ ಗಿಡದ ಎಲೆಗಳನ್ನು ಕಿತ್ತು ಚೆನ್ನಾಗಿ ಅದನ್ನು ನೆರಳಿನಲ್ಲಿ ಒಣಗಿಸಿ ಮನೆಯಲ್ಲಿ ಹೊಗೆ ಹಾಕಿದರೆ ಅದು ಮನೆಯಲ್ಲಿ ಸೊಳ್ಳೆಗಳು ಬರದೇ ಇರುವಂತೆ ನೋಡಿಕೊಳ್ಳುತ್ತದೆ ಅಷ್ಟೊಂದು ಪರಿಣಾಮಕಾರಿಯಾಗಿ ಈ ಒಂದು ಗಿಡದ ಎಲೆಗಳು ಕೆಲಸ ಮಾಡುತ್ತದೆ. ಕಾಡು ತುಳಿಸಿ ಗಿಡದ ವಾಸನೆ ತುಳಸಿಯ ರೀತಿಯಲ್ಲೇ ಇರುತ್ತದೆ ಹಾಗೆ ಇದರ ಹೂಗಳು ನೀಲಿ ಬಣ್ಣದಿಂದ ಕೂಡಿರುತ್ತದೆ, ಮಳೆಗಾಲದಲ್ಲಿ ಎಲೆಗಳು ದೊಡ್ಡ ದೊಡ್ಡದಾಗಿರುತ್ತದೆ ಮಳೆಗಾಲ ಮುಗಿದ ಮೇಲೆ ಈ ಗಿಡದ ಎಲೆಗಳು ಸ್ವಲ್ಪ ಚಿಕ್ಕದಾಗಿ ಕಾಣಿಸಿಕೊಳ್ಳುತ್ತದೆ.
ಹಾಗೆಯೇ ಇದರ ಹಸಿ ಸೊಪ್ಪನ್ನ ಕಿತ್ತುಕೊಂಡು ಕೈಯಲ್ಲಿ ಚೆನ್ನಾಗಿ ತೀಡಿ ಅದನ್ನು ನಿಮ್ಮ ಮೈಗೆ ಹಚ್ಚಿಕೊಂಡರೆ ನಿಮ್ಮ ಹತ್ತಿರ ಸೊಳ್ಳೆಗಳು ಸುಳಿಯುವುದಿಲ್ಲ. ಸಾಮಾನ್ಯವಾಗಿ ಹಸುವಿನ ಕೊಟ್ಟಿಗೆಗಳಲ್ಲಿ ಹೆಚ್ಚಾಗಿ ಸೊಳ್ಳೆಗಳು ಇರುತ್ತವೆ ಅಂತಹ ಸಮಯದಲ್ಲಿ ಈ ಒಂದು ಸೊಪ್ಪಿನ ಹೊಗೆಯನ್ನು ಕೊಟ್ಟಿಗೆಗಳಲ್ಲಿ ಹಾಕಿದರೆ ಸೊಳ್ಳೆಗಳ ಕಾಟ ನಿಮಗೆ ನಿವಾರಣೆಯಾಗುತ್ತದೆ ಇದರ ಜೊತೆಯಲ್ಲಿ ಬೇಕಾದರೆ ನೀವು ಬೇವಿನ ಎಲೆಗಳನ್ನು ಸಹ ಉಪಯೋಗ ಮಾಡಿಕೊಳ್ಳಬಹುದು. ಬೇವಿನ ಮರವು ಎಲ್ಲಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ ಈ ಒಂದು ಬೇವಿನ ಎಲೆಗಳನ್ನು ಸಹ ನೀವು ಸೊಳ್ಳೆಗಳನ್ನು ನಿವಾರಣೆ ಮಾಡಿಕೊಳ್ಳುವಲ್ಲಿ ಬಳಸಬಹುದು ಕಾಡು ತುಳಸಿ ಗಿಡದ ಜೊತೆಗೆ ಉಪಯೋಗ ಮಾಡುವುದರಿಂದ ಇಷ್ಟೆಲ್ಲಾ ಆರೋಗ್ಯಕರವಾದ ಪ್ರಯೋಜನಗಳನ್ನು ನಾವು ಪಡೆಯುತ್ತೇವೆ.