ಪ್ರತಿಯೊಬ್ಬರೂ ಕೂಡ ತಮ್ಮ ಚರ್ಮ ಕಾಂತಿಯುತವಾಗಿ ಮತ್ತು ಕೋಮಲವಾಗಿ ಇರಬೇಕು ಅಂತ ಬಯಸುತ್ತಾರೆ ಅಷ್ಟೇ ಅಲ್ಲದೆ ಹೆಣ್ಣುಮಕ್ಕಳು ಆಗಿರಬಹುದು ಅಥವಾ ಗಂಡುಮಕ್ಕಳು ಆಗಿರಬಹುದು ಚೆನ್ನಾಗಿ ಕಾಣಬೇಕು ಹಾಗೂ ನಮಗೆ ಯಾವುದೇ ರೀತಿಯಾದಂತಹ ಚರ್ಮದ ಸಮಸ್ಯೆಗಳು ಬರಬಾರದು ಅಂತ ಹೇಳುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ ಆದರೆ ಕೆಲವರು ಸದಾಕಾಲ ಯಾವುದಾದರೂ ಒಂದು ಚರ್ಮದ ಸಮಸ್ಯೆಗೆ ಒಳಗಾಗುವುದನ್ನು ನಾವು ನೋಡಬಹುದಾಗಿದೆ. ಮುಖದಲ್ಲಿ ಕಪ್ಪು ಕಲೆಗಳು ಉಂಟಾಗುವುದು ಇರಬಹುದು ಅಥವಾ ಕೈ ಕಾಲು ಕುತ್ತಿಗೆ ಭಾಗದಲ್ಲಿ ಅಥವಾ ಬೆನ್ನಿನ ಭಾಗದಲ್ಲಿ ಚರ್ಮಕ್ಕೆ ಸಂಬಂಧಪಟ್ಟಂತಹ ದದ್ದುಗಳು, ತುರಿಕೆ, ಅಥವಾ ಗಜಕರ್ಣ, ಕೈ ಮತ್ತು ಕಾಲು ಕಂಕಳಿನ ಭಾಗದಲ್ಲಿ ವಿಪರೀತವಾದಂತಹ ನವೇ ಉಂಟಾಗುವುದು ಹಾಗಾಗಿ ಇಂದು ಚರ್ಮಕ್ಕೆ ಸಂಬಂಧಪಟ್ಟಂತಹ ನಾನಾ ರೀತಿಯಾದಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಒಂದು ಅದ್ಭುತವಾದ ಮನೆಮದ್ದನ್ನು ತಿಳಿಸುತ್ತಿದ್ದೇವೆ.
ಹೌದು ಈ ಮನೆಮದ್ದನ್ನು ನೀವು ಬಳಕೆ ಮಾಡುವುದರಿಂದ ಕಂಡಿತವಾಗಿಯೂ ಕೂಡ ನಿಮ್ಮ ಚರ್ಮಕ್ಕೆ ಸಂಬಂಧಪಟ್ಟಂತಹ ಸರ್ವ ಸಮಸ್ಯೆಗಳು ಕೂಡ ದೂರವಾಗುತ್ತದೆ ನೀವೇನಾದರೂ ಅಲರ್ಜಿ ಸಮಸ್ಯೆ ಅನುಭವಿಸುತ್ತಿದ್ದಾರೆ ಅದು ಕೂಡ ನಿವಾರಣೆಯಾಗುತ್ತದೆ. ಹಾಗಾದರೆ ಅ ಮನೆಮದ್ದು ಯಾವುದು ಮತ್ತು ಮನೆಮದ್ದಿಗೆ ಬೇಕಾಗುವಂತಹ ಪದಾರ್ಥಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಚಿತವಾಗಿ ತಿಳಿಸುತ್ತೇವೆ ನೋಡಿ. ನಾವು ತಿಳಿಸುವ ವಿಧಾನವನ್ನು ಯಾರು ಚಾಚುತಪ್ಪದೆ ಪರಿಪಾಲನೆ ಮಾಡುತ್ತಾರೆ ಅಂತವರಿಗೆ ಖಂಡಿತವಾಗಿಯೂ ಕೂಡ ನೂರಕ್ಕೆ ನೂರರಷ್ಟು ಫಲಿತಾಂಶಗಳು ದೊರೆಯುತ್ತದೆ. ಏಕೆಂದರೆ ನಾವು ತಿಳಿಸುವಂತಹ ಪದಾರ್ಥಗಳು ಕೂಡ ಆಯುರ್ವೇದಿಕ್ ನಲ್ಲಿ ಬಳಕೆ ಮಾಡುತ್ತಾರೆ ಅಷ್ಟೇ ಅಲ್ಲದೆ ಇದು ನೈಸರ್ಗಿಕವಾದ ಸಿದ್ದಪಡಿಸುವಂತಹ ಮನೆಮದ್ದು ಆಗಿದೆ. ಹಾಗಾಗಿ ಇದನ್ನು ಬಳಕೆ ಮಾಡುವುದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ನೀವು ನಿಶ್ಚಿಂತೆಯಾಗಿ ಮನೆಮದ್ದನ್ನು ಬಳಕೆ ಮಾಡಬಹುದು.
ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಕರ್ಪೂರ, ಎರಡನೆಯದಾಗಿ ತುಳಸಿ ಎಲೆಗಳು, ಮೂರನೆಯದಾಗಿ ಅಲೋವೇರ ಜಲ್, ನಾಲ್ಕನೆಯದಾಗಿ ನಿಂಬೆಹಣ್ಣು ಈ ನಾಲ್ಕು ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಮನೆಮದ್ದನ್ನು ಸಿದ್ಧಪಡಿಸಬಹುದು ಆಗಿದೆ. ಮೊದಲಿಗೆ ನಾಲ್ಕರಿಂದ ಐದು ಕರ್ಪೂರದ ಉಂಡೆಗಳನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು ಈಗ ಒಂದು ಬಟ್ಟಲಿಗೆ ಕರ್ಪೂರದ ಪುಡಿಯನ್ನು ಹಾಕಿ ನಂತರ 15 ರಿಂದ 20 ತುಳಸಿದಳಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಶುದ್ಧವಾಗಿ ತೊಳೆದುಕೊಂಡು ಚೆನ್ನಾಗಿ ಅರೆದು ಪೇಸ್ಟ್ ಮಾದರಿಯಲ್ಲಿ ತಯಾರಿಸಿಕೊಳ್ಳಿ. ಈಗ ಈ ಮಿಶ್ರಣವನ್ನು ಕೂಡಾ ಕರ್ಪೂರ ಇರುವಂತಹ ಬಟ್ಟಲಿಗೆ ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ತದನಂತರ ಒಂದು ಟೇಬಲ್ ಸ್ಪೂನ್ ಆಲೋವೆರ ಹಾಕಿ ಇದು ನೈಸರ್ಗಿಕವಾಗಿದ್ದರೆ ಇನ್ನು ತುಂಬಾನೇ ಒಳ್ಳೆಯದು. ಆಲೋವೆರಾ ಗಿಡವನ್ನು ತೆಗೆದುಕೊಂಡು ಒಳಭಾಗಲ್ಲಿ ಇರುವಂತಹ ಜೆಲ್ ಮಾದರಿಯನ್ನು ಇದಕ್ಕೆ ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ತದನಂತರ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ ಸಂಪೂರ್ಣವಾಗಿ ಎಲ್ಲವನ್ನು ಕೂಡ ಮಿಕ್ಸ್ ಮಾಡಿಕೊಳ್ಳಬೇಕು.
ಈಗ ತಯಾರಿಸಿದಂತಹ ಮಿಶ್ರಣವನ್ನು ನಿಮ್ಮ ಚರ್ಮದ ಮೇಲೆ ಯಾವ ಭಾಗದಲ್ಲಿ ಕಜ್ಜಿ, ತುರಿಕೆ, ಅಲರ್ಜಿ ಅಥವಾ ಗಜಕರ್ಣ ಅಥವಾ ಸ್ಕಿನ್ ರಾಸಸ್, ಅಲರ್ಜಿ ಹೀಗೆ ಯಾವುದಾದರೂ ತೊಂದರೆ ಇದು ಅಂದರೆ ಅದರ ಮೇಲೆ ಲೇಪನ ಮಾಡಬೇಕು. ತದನಂತರ ಇದನ್ನು ಸಂಪೂರ್ಣವಾಗಿ ಒಣಗಲು ಬಿಡಬೇಕು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಇದೇ ರೀತಿ ನಾಲ್ಕರಿಂದ ಐದು ಬಾರಿ ಬಳಕೆ ಮಾಡಿದರೆ ಖಂಡಿತವಾಗಿಯೂ ಕೂಡ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಬಹಳನೇ ನೈಸರ್ಗಿಕ ವಿಧಾನ ಹಾಗಾಗಿ ನೀವು ಇದನ್ನು ಯಾವುದೇ ರೀತಿಯಾದಂತಹ ಭಯವಿಲ್ಲದೆ ಬಳಕೆ ಮಾಡಬಹುದು. ಕರ್ಪೂರದಲ್ಲಿ ಚರ್ಮವ್ಯಾದಿ ನಿವಾರಣೆ ಮಾಡುವಂತಹ ಗುಣಗಳು ಹೆಚ್ಚಾಗಿ ಇರುವುದರಿಂದ ಚರ್ಮದಲ್ಲಿ ಇರುವಂತಹ ವೈರಾಣುಗಳು ತೊಲಗಿಸುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ.
ಇನ್ನು ತುಳಸಿ ತುಳಸಿಯಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಇರುವುದನ್ನು ನಾವು ನೋಡಬಹುದಾಗಿದೆ ಇದು ಅದ್ಭುತವಾದಂತಹ ಔಷಧೀಯ ಗುಣವನ್ನು ಹೊಂದಿದೆ ಹಾಗಾಗಿ ಆಯುರ್ವೇದದಲ್ಲಿ ಪ್ರತಿಯೊಂದು ಔಷಧಿಯನ್ನು ಸಿದ್ಧ ಮಾಡಬೇಕಾದರೆ ಇದನ್ನು ಬಳಕೆ ಮಾಡುತ್ತಾರೆ. ಈ ತುಳಸಿಯನ್ನು ಭೂಲೋಕದಲ್ಲಿ ಸಿಗುವಂತಹ ಅಮೃತ ಅಂತ ಹೇಳಿದರೂ ಕೂಡ ತಪ್ಪಾಗಲಾರದು ಅಷ್ಟೊಂದು ಔಷಧೀಯ ಗುಣಗಳನ್ನು ತುಳಸಿ ಹೊಂದಿರುವುದನ್ನು ನೋಡಬಹುದಾಗಿದೆ. ಹಾಗಾಗಿ ತುಳಸಿ ರಸವನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮಕ್ಕೆ ಸಂಬಂಧಪಟ್ಟಂತಹ ನಾನಾ ರೀತಿಯಾದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮೂರನೆಯದಾಗಿ ಆಲುವೇರೆ ಜೆಲ್ ಇದನ್ನು ಲೋಳೆರಸ ಅಂತಾನು ಕೂಡ ಕರೆಯುತ್ತಾರೆ ಲೋಳೆರಸ ಇದು ಚರ್ಮದ ಕಾಂತಿಯನ್ನು ಹೆಚ್ಚು ಮಾಡುತ್ತದೆ ಅಷ್ಟೇ ಅಲ್ಲದೆ ಚರ್ಮ ಸದಾಕಾಲ ತಾಜಾಯುತವಾಗಿ ಮತ್ತು ಕೋಮಲವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ಕೊನೆಯದಾಗಿ ನಿಂಬೆಹಣ್ಣು ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಅಂಶ ಇರುವುದರಿಂದ ಇದನ್ನು ನಾವು ನಮ್ಮ ಚರ್ಮದ ಮೇಲೆ ಲೇಪನ ಮಾಡುವುದರಿಂದ ದೇಹದ ಮೇಲೆ ಇರುವಂತಹ ಕೀಟಾಣುಗಳು ಅಥವಾ ಸೂಕ್ಷ್ಮಜೀವಿಗಳನ್ನು ಕೊ’ಲ್ಲು’ವುದಕ್ಕೆ ಇದು ಸಹಾಯ ಮಾಡುತ್ತದೆ. ಹಾಗಾಗಿ ನಾವು ಮೇಲೆ ತಿಳಿದಿರುವಂತಹ ಎಲ್ಲಾ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಈ ಒಂದು ಮನೆಮದ್ದನ್ನು ತಯಾರು ಮಾಡಿ ಅದನ್ನು ನೀವು ಲೇಪನ ಮಾಡುವುದರಿಂದ ಖಂಡಿತವಾಗಿಯೂ ಕೂಡ ಚರ್ಮದ ಸಮಸ್ಯೆಗೆ ನಿವಾರಣೆ ಎಂಬುವುದು ದೊರೆಯುತ್ತದೆ. ನೀವು ಸುಖಾಸುಮ್ಮನೆ ಹಣವನ್ನು ಖರ್ಚು ಮಾಡಿ ಇಂಗ್ಲಿಷ್ ಮೆಡಿಸನ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯಾದಂತಹ ಪ್ರಯೋಜನವಿಲ್ಲ ಇದರಿಂದ ನಿಮ್ಮ ದೇಹಕ್ಕೆ ಅಡ್ಡಪರಿಣಾಮಗಳು ಉಂಟಾಗುತ್ತದೆ.
ಹಾಗಾಗಿ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮವಿಲ್ಲದೆ ಮನೆಯಲ್ಲಿ ಸಿಗುವಂತಹ ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಈ ರೀತಿಯಾದಂತಹ ಮನೆಮದ್ದನ್ನು ಬಳಸಿ ಖಂಡಿತವಾಗಿಯೂ ಕೂಡ ಇದರಿಂದ ಅದ್ಭುತವಾದಂತಹ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ