ಸ್ವಂತ ಜಾಗ & ಮನೆ ಇಲ್ಲದವರಿಗೆ ಸರ್ಕಾರದಿಂದ ಗುಡ್ ನ್ಯೂಸ್. ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ ನಿಮ್ಮ ಕನಸಿನ ಮನೆಯನ್ನು ನನಸು ಮಾಡಿಕೊಳ್ಳಿ

 

ಸ್ವಂತ ಮನೆ ಕಟ್ಟಬೇಕು ತಮ್ಮ ಕುಟುಂಬಕ್ಕೆ ಸ್ವಂತದಾದ ಬೆಚ್ಚಗಿನ ಗೂಡು ನಿರ್ಮಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಆಸೆ. ಬಡವರು ಮತ್ತು ಮಧ್ಯಮ ಧರ್ಮದವರು ಮನೆ ಕಟ್ಟುವುದು ಎನ್ನುವ ವಿಷಯ ಅವರ ಜೀವಮಾನದ ದೊಡ್ಡ ಸಂತಸದ ವಿಷಯ ಹಾಗೂ ಅಷ್ಟೇ ದೊಡ್ಡ ಯೋಜನೆ ಕೂಡ. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಮನೆಯನ್ನು ನಿರ್ಮಿಸಿಕೊಳ್ಳಲು ಜೀವಮಾನ ಪೂರ್ತಿ ಹಲವರು ಅವರು ಕಷ್ಟ ಪಡುತ್ತಾರೆ.

ಈ ರೀತಿ ಕನಸು ಕಾಣುವವರಿಗೆ ಸಹಾಯ ಮಾಡಲು ಬ್ಯಾಂಕ್ಗಳು ಕೂಡ ಆಕರ್ಷಕ ಬಡ್ಡಿ ದರದಲ್ಲಿ ಮತ್ತು ರಿಯಾಯಿತಿಯಲ್ಲಿ ಲೋನ್ ಗಳನ್ನು ನೀಡುತ್ತಿದ್ದರೂ ಸಹಾ ಎಷ್ಟೋ ಜನಕ್ಕೆ ಮನೆ ಕಟ್ಟುವ ಆಸೆ ಈಗಲೂ ಎಟುಕದ ನಕ್ಷತ್ರ. ಈಗ ಸರ್ಕಾರವು ಕೂಡ ಇಂತಹವರ ಸಹಾಯಕ್ಕೆ ನಿಂತಿದ್ದು ಈಗಾಗಲೇ ಸರ್ಕಾರ ನಾನಾ ಯೋಚನೆ ಮೂಲಕ ಸಹಾಯ ಮಾಡುತ್ತಿದೆ ಮತ್ತು ಸಹಾಯ ಧನ ನೀಡುತ್ತಿದೆ.

ಈಗ ಮತ್ತೊಮ್ಮೆ ಸರ್ಕಾರದಿಂದ ಮನೆ ಇಲ್ಲದವರಿಗಾಗಿ ಖುಷಿ ಸುದ್ದಿ ಸಿಕ್ಕಿದೆ. ಸ್ವಂತ ಮನೆ ಸ್ವಂತ ಜಾಗ ಫ್ಲಾಟ್ ಇಲ್ಲದವರಿಗಾಗಿ ಸರ್ಕಾರದಿಂದ ಈ ಅನುಕೂಲ ಸಿಗುತ್ತಿತ್ತು ಈ ಬಾರಿ ನಿಮ್ಮ ಮನೆ ಕನಸು ನನಸಾಗಬಹುದು. ಅಷ್ಟಕ್ಕೂ ಏನಿದು ಯೋಜನೆ ಎಂದರೆ ಸರ್ಕಾರಿ ಭೂಮಿ ಅಥವಾ ಸರ್ಕಾರಿ ಜಾಗದಲ್ಲಿ ಈಗಾಗಲೇ ಮನೆ ನಿರ್ಮಿಸಿಕೊಂಡಿರುವವರು ಯಾವಾಗ ತಮ್ಮನ್ನು ಎತ್ತಂಗಡಿ ಮಾಡಿಸುತ್ತಾರೆ ಎಂದು ಭಯದಿಂದ ಇರುತ್ತಿದ್ದರು.

ಆದರೆ ಈಗ ಸರ್ಕಾರದ ಕಡೆಯಿಂದ ಇವರಿಗೆ ಭರವಸೆ ಸಿಕ್ಕಿದೆ. ಇನ್ನು ಮುಂದೆ ಸರ್ಕಾರಿ ಜಾಗ ಅಥವಾ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರನ್ನು ಯಾರು ಸಹ ಖಾಲಿ ಮಾಡಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸರ್ಕಾರವೇ ಆದೇಶ ನೀಡಿದ್ದು ಅದಕ್ಕಾಗಿ ನೀವು ಈ ಒಂದು ಕೆಲಸ ಮಾಡಬೇಕು ಅಷ್ಟೇ ಈ ರೀತಿ ಕ್ರಮದಲ್ಲಿ ನೀವು ಹೋದರೆ ಅದು ನಿಮ್ಮ ಸ್ವಂತ ಮನೆ ಆಗುತ್ತದೆ.

ಸರ್ಕಾರದ ಕಂದಾಯ ಸಚಿವ ಆಗಿರುವ ಆರ್ ಅಶೋಕ್ ಅವರ ಸ್ವತಃ ಇದನ್ನು ಅನೌನ್ಸ್ ಮಾಡಿದ್ದು ಅದಕ್ಕಾಗಿ ನೀವೊಂದು ಅರ್ಜಿ ಸಲ್ಲಿಸಬೇಕಾಗಿದೆ. ವಾಸಿಸಲು ಮನೆ ಇಲ್ಲದ ಬಡ ಕುಟುಂಬಗಳು ಈಗಾಗಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಅಂತಹ ಬಾಡಿಗೆ ಕುಟುಂಬಗಳಿಗೆ ಮತ್ತು ಇರಲು ಸ್ವಂತ ಜಾಗ ಇಲ್ಲದ ಬಡವರಿಗೆ ಕರ್ನಾಟಕ ರಾಜ್ಯ ಕಂದಾಯ ಸಚಿವ ಆರ್ ಅಶೋಕ್ 94 ಸಿ ಹಾಗೂ ಸಿಸಿ ಫಾರಂ ಅಲ್ಲಿ ಅರ್ಜಿಯನ್ನು ಸಲ್ಲಿಸಿ.

ಸರಕಾರಿ ಜಾಗದಲ್ಲಿ ನಿರ್ಮಿಸಿರುವ ಮನೆಯ ಹಕ್ಕುಪತ್ರ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರದಿಂದ ಈ ವರ್ಷ ಸಿಗುತ್ತಿರುವ ಬಂಪರ್ ಉಡುಗೊರೆ ಇದಾಗಿದ್ದು ನೀವು ಸಹ ಇದರ ಫಲಾನುಭವಿ ಆಗಿದ್ದರೆ ಈಗಾಗಲೇ ಸದುಪಯೋಗ ಪಡಿಸಿಕೊಳ್ಳಿ. ಇದರ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಅವರು ಗರೀಬ್ ಕಲ್ಯಾಣ ಯೋಜನೆ ಅಡಿ ಇತ್ತೀಚೆಗೆ ಪಡಿತರ ಚೀಟಿಯಲ್ಲಿ ಕೊಡುತ್ತಿರುವ ರೇಷನ್ ಪ್ರಮಾಣ ಕಡಿಮೆ ಆಗಿರುವುದರ ಬಗ್ಗೆ ಕೂಡ ಮುಖ್ಯ ಮಂತ್ರಿಗಳೊಡನೆ ಮಾತನಾಡಿ.

ಶೀಘ್ರದಲ್ಲೇ ಈ ಸಮಸ್ಯೆಯನ್ನು ಸರಿ ಮಾಡಿ ಮತ್ತೆ ಮೊದಲ ರೂಪದಲ್ಲಿ ಕೊಡಲು ವ್ಯವಸ್ಥೆ ಮಾಡಲಾಗುವುದು ಎನ್ನುವ ಭರವಸೆಯನ್ನು ಸಹ ನೀಡಿದ್ದಾರೆ. ಜೊತೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ತಮ್ಮ ಜಮೀನಿನಲ್ಲಿಯೇ ಮನೆಯನ್ನು ನಿರ್ಮಿಸಿಕೊಂಡರೆ ತಕ್ಷಣ ಭೂ ಪರಿವರ್ತನೆ ಮಾಡಿಕೊಳ್ಳಲು ಸುಧಾರಣೆ ಕಾಯ್ದೆಯನ್ನು ಸಹ ತರಲಾಗಿದೆ ಎನ್ನುವ ವಿಷಯವನ್ನು ಸಹ ತಿಳಿಸಿದ್ದಾರೆ.

Leave a Comment

%d bloggers like this: