ಈ ಜಗತ್ತಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಕಷ್ಟ ಇರುತ್ತದೆ. ಪ್ರತಿಯೊಬ್ಬ ಜೀವನದಲ್ಲಿ ಏನಾದರೂ ಒಂದೊಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ. ಕಷ್ಟ ಬಂದಾಗ ಮನುಷ್ಯ ತಲೆಯ ಮೇಲೆ ಕೈ ಹಾಕಿ ಯಾವತ್ತು ಕೂಡ ಕುಳಿತುಕೊಳ್ಳಬಾರದು. ಹೀಗೆ ಮಾಡಿದರೆ ಕಷ್ಟ ನಿಮ್ಮ ಹೆಗಲ ಮೇಲೆ ಏರಿ ಕುಳಿತುಕೊಳ್ಳುತ್ತದೆ.
ಕಷ್ಟದ ದಿನಗಳು ಬಂದಾಗ ಮನಸ್ಸನ್ನು ದೃಢವಾಗಿ ಇಟ್ಟುಕೊಳ್ಳಬೇಕು ಮತ್ತು ಕಷ್ಟವೇ ನಿಮ್ಮನ್ನು ನೋಡಿ ಎದುರಿ ಹೋಗುವಷ್ಟು ಧೈರ್ಯ ನಿಮ್ಮಲ್ಲಿ ಇದ್ದರೆ ಸಾಕು ಎಲ್ಲ ಕಷ್ಟಗಳನ್ನು ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ ಮನೆಯಲ್ಲಿ ಕಿರಿಕಿರಿ ಜಗಳಗಳು ಆಗುತ್ತದೆ. ಇದಕ್ಕೆ ಕಾರಣ ನಿಮ್ಮ ಮನೆಯ ಮೇಲೆ ಬಿದ್ದಿರುವ ಕೆಟ್ಟದೃಷ್ಟಿಗಳು ಹಿಂದೆ ಮಾಡಿದ ತಪ್ಪು ಇವತ್ತು ಸಮಸ್ಯೆಯಾಗಿ ನಿಮಗೆ ಕಾಡುತ್ತವೆ.
ಮನೆಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಿದಾರೆ ಕೈಯಲ್ಲಿ ಹಣಕಾಸು ಓಡಾಡುತ್ತದೆ. ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ದೂರವಾಗುತ್ತದೆ. ಈ ಒಂದು ಸರಳ ಕೆಲಸವನ್ನು ಮನೆಯಲ್ಲಿ ಮಾಡಿದಾರೆ ಮನೆಯಲ್ಲಿ ಎಂತಹದೇ ಕಷ್ಟಗಳು ಬಂದರು ಕೂಡ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮ್ಮಲ್ಲಿ ಬರುತ್ತದೆ.
ಮೊದಲು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಬೇಕು, ಒಂದು ಲೋಟ ಉಪ್ಪು,5 ನಾಣ್ಯಗಳು ತೆಗೆದುಕೊಂಡು ದೇವರ ಮನೆಯಲ್ಲಿ ಇಡಬೇಕು. ಆ ಉಪ್ಪಿಗೆ ಸ್ವಲ್ಪ ಅರಿಶಿಣ-ಕುಂಕುಮವನ್ನು ಬೆರೆಸಿ, ನಂತರ ಮೂರು ತರ ಎಲೆ ಮತ್ತು 3 ತುಳಸಿ ಎಲೆ ತೆಗೆದುಕೊಳ್ಳಿ. ಇನ್ನು ಕೆಂಪು ಬಟ್ಟೆಯಲ್ಲಿ ಅರಿಶಿಣ-ಕುಂಕುಮ, ಉಪ್ಪು,3 ಹೂವು ಮತ್ತು ತುಳಸಿ ಎಲೆ, ನಾಣ್ಯವನ್ನು ಇಟ್ಟು ಕೆಂಪು ಬಟ್ಟೆಯನ್ನು ಕಟ್ಟಬೇಕು.
ಇದನ್ನು ಹಣಕಾಸು ಇಡುವ ಜಾಗದಲ್ಲಿ ಅಥವಾ ದೇವರ ಮನೆಯಲ್ಲಿ ಇಡಬೇಕು. ದೇವರ ಮನೆಯಲ್ಲಿ ಮೂರುವಾರ ಪ್ರತಿದಿನ ಇದನ್ನು ಪೂಜೆ ಮಾಡಬೇಕು. ನಂತರ ಹರಿಯುವ ನೀರಿಗೆ ಈ ಒಂದು ಯಂತ್ರವನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ಮನೆಯ ಮೇಲೆ ಬಿದ್ದಿರುವ ಕೆಟ್ಟದೃಷ್ಟಿ ನಿವಾರಣೆ ಆಗುತ್ತದೆ. ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ ಅನಿರೀಕ್ಷಿತ ಲಾಭ ದೊರೆಯುತ್ತದೆ.