ನಮಸ್ತೆ ಸ್ನೇಹಿತರೆ ಈ ವರ್ಷ ಅಕ್ಷಯ ತೃತೀಯ ಬರುತ್ತದೆ ಮೇ 3ನೇ ತಾರೀಖು ಅಕ್ಷಯ ತೃತೀಯ ಇದೆ ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ ಇನ್ನೂ ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಕಾನುಪುಂಕವಾಗಿ ಪೂಗುತ್ತಾರೆ ನೆನಪಿಡಿ ಈ ಕಾರ್ಯಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಷೋರೂಂಗಳೇ ಗೋಲ್ಡ್ ಷೋರೂಂಗಳಂತೂ ಭರ್ಜರಿ ಆಫರ್ ಗಳ ಜೊತೆಗೆ ಅದೃಷ್ಟಲಕ್ಷ್ಮಿಯನ್ನು ನಿಮ್ಮ ಮನೆಗೆ ಇವರೇ ಖುದ್ದಾಗಿ ಕಳುಹಿಸಿಕೊಡುವಂತೆ ವರ್ತಿಸುತ್ತಾರೆ ಒಂದು ಚೂರು ಯೋಚನೆ ಮಾಡಿ ನೋಡಿ ಒಂದು 15-20ವರ್ಷಗಳ ಹಿಂದಕ್ಕೆ ಹೋಗಿ ಆಗ ದೊಡ್ಡ ದೊಡ್ಡ ಗೋಲ್ಡ್ ಷೋರೂಂಗಳು ಇರಲಿಲ್ಲ ಖಾಸಗಿ ಟಿವಿ ಚಾನೆಲ್ ಗಳು ಕೂಡ ದೊಡ್ಡದಾಗಿರಲಿಲ್ಲ ಬ್ರಹ್ಮಾಂಡ ಬೃಹಸ್ಪತಿಗಳು ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಜನರು ಮುಗಿದು ಬಿದ್ದು ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿ ಕೂಡ ಮಾಡುತ್ತಿರಲಿಲ್ಲ
ಈಗಂತೂ ವಾರಕ್ಕೆ ಮೊದಲೇ ಪ್ರತಿವರ್ಷ ಅಕ್ಷಯ ತೃತೀಯ ಕಾರ್ಯಕ್ರಮಗಳು ಪ್ರಸಾರ ಶುರು ಆಗುತ್ತದೆ ಅಕ್ಷಯ ತೃತೀಯ ಸ್ಪೆಷಲ್ ಕಾರ್ಯಕ್ರಮಗಳ ಹಿಂದೆ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳ ಕೈವಾಡ ಇರುತ್ತದೆ ಜ್ಯೋತಿಷ್ಯಗಳ ಮೂಲಕ ಇದೇ ದಿನ ಬಂಗಾರ ಖರೀದಿ ಮಾಡಬೇಕು ಆ ದಿನ ಬಂಗಾರವನ್ನು ಖರೀದಿ ಮಾಡುವುದರಿಂದ ಅಕ್ಷಯ ಅಂದರೆ ವೃದ್ಧಿಸುತ್ತದೆ ಎಂಬ ಭಾವನೆಯನ್ನು ಬೀತುಬಿಡ್ತಾರೆ ತಿಂಗಳಿಗೆ ಮೊದಲೇ ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿಗೆ ಮುಂಗಡ ಬುಕ್ಕಿಂಗ್ ಗೋಲ್ಡ್ ಶೋರೂಮ್ ಗಳು ಆರಂಭಿಸುತ್ತವೆ ಬೃಹಸ್ಪತಿಗಳ ಮಾತನ್ನು ನಂಬಿಕೊಂಡು ಅದೆಷ್ಟು ಮಧ್ಯ ವರ್ಗದವರು ಸಾಲಸೋಲ ಮಾಡಿ ಇದೇ ದಿನ ಬಂಗಾರದ ಖರೀದಿಗೆ ಮುಗಿದು ಬೀಳುತ್ತಾರೆ ಅಷ್ಟಕ್ಕೂ ಅಕ್ಷಯ ತೃತೀಯ ಅಂದರೆ ಏನು ಸರಿಯಾಗಿ ಹೇಳ್ತೀವಿ ಕೇಳಿ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ದಿನವನ್ನು ಅಕ್ಷಯ ತೃತೀಯ ಎಂದು ಕರೆಯುತ್ತಾರೆ ಅಕ್ಷಯ ಅಂದರೆ ಸದಾ ವೃದ್ಧಿಯಾಗುವುದು ಎಂದಿಗೂ ಸಹ ಕರಗದೆ ಇರುವ ಸಂಪತ್ತು ಎಂಬ ಅರ್ಥವನ್ನು ಕೊಡುತ್ತದೆ
ಅಕ್ಷಯ ತೃತೀಯ ಅಂದರೆ ದಾನ ಮಾಡುವ ದಿನ ಹೌದು ನಮ್ಮಲ್ಲಿರುವಂತಹ ದವಸಧಾನ್ಯಗಳು ಜತೆಗೆ ಬಡವರಿಗೆ ಬಟ್ಟೆಗಳನ್ನು ದಾನ ಮಾಡುವ ಮೂಲಕ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳುವ ದಿನ ಅಕ್ಷಯ ತೃತೀಯ ಅಕ್ಷಯ ತೃತೀಯ ದಿನ ಮಾಡಬೇಕಾದದ್ದು ಬರಿ ದಾನ ದಾನ ಹೌದು ಈ ದಿನ ತನ್ನಲ್ಲಿರುವ ಸಂಪತ್ತನ್ನು ಬಡವರಿಗೆ ಅಸಹಾಯಕರಿಗೆ ದಾನ ಮಾಡುವುದರಿಂದ ಪುಣ್ಯ ಧಕ್ಕಿ ಅದರಿಂದ ದಾನ ಮಾಡಿದವರ ಬದುಕಿನಲ್ಲಿ ಕುಟುಂಬಗಳಲ್ಲಿ ಸಂತೋಷ ನೆಮ್ಮದಿ ಶಾಂತಿ ಆರೋಗ್ಯಗಳು ಅಕ್ಷಯವಾಗಲಿ ಎಂಬ ಸದುದ್ದೇಶ ಅಕ್ಷಯ ತೃತೀಯ ದಿನದ ಆಚರಣೆಯ ಹಿನ್ನೆಲೆಯಲ್ಲಿ ಇರುವಂತದ್ದು ಅಕ್ಷಯ ತೃತೀಯ ದಿನ ಬಡವರಿಗೆ ನಿರ್ಗತಿಕರಿಗೆ ಅಸಹಾಯಕರಿಗೆ ಏನನ್ನು ದಾನದ ರೂಪದಲ್ಲಿ ನೀಡುತ್ತೀರೊ ಅದು ನಿಮ್ಮನ್ನು ಕೊನೆಯವರೆಗೂ ಕಾಪಾಡುತ್ತದೆ ನೀವು ಏನನ್ನು ನೀಡಿರುತ್ತೀರೊ ಅದು ನಿಮಗೆ ಅಕ್ಷಯವಾಗಲಿ ಹಾರೈಕೆಯ ಹಿನ್ನೆಲೆ ಅಕ್ಷಯ ತೃತೀಯ ಆಚರಣೆ ಅಕ್ಷಯ ತೃತೀಯ ದಿನ ಮುಖ್ಯವಾಗಿ ಮೂರು ದಾನಗಳನ್ನು ಮಾಡುತ್ತಿದ್ದರು
ಅದು ಮಣ್ಣಿನ ಮಡಿಕೆ ನೀರು ಮತ್ತು ಕೆಲವೊಂದಷ್ಟು ಧವಸದಾನ್ಯಗಳು ಹೌದು ಇನ್ನೂ ಬಂಗಾರದ ಖರೀದಿ ಮಾಡಿದರೆ ದಾ’ರಿ’ದ್ರ್ಯ’ವನ್ನು ಮನೆಗೆ ತೆಗೆದುಕೊಂಡು ಹೋದಂತಯೇ ಹೌದು ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಯಾವ ಶಾಸ್ತ್ರದಲ್ಲೂ ಸಹ ಇಲ್ಲ ಅದಕ್ಕಿಂತ ಮುಖ್ಯವಾಗಿ ನೆನಪಿಡಬೇಕಾದ ಮತ್ತೊಂದು ವಿಚಾರವೇನೆಂದರೆ ಕಲಿಪುರುಷ ಎಂದಿಂಲ್ಲದಂತೆ ಜನರನ್ನು ಕಾಡುತ್ತಾನೆ ಕಲಿಪುರುಷನ ವಾಸಸ್ಥಾನದಲ್ಲಿ ಮೊದಲನೆಯದು ಬಂಗಾರ ಹೀಗಾಗಿ ನಿಮ್ಮ ಮನೆಯಲ್ಲಿ ಎಷ್ಟು ಬಂಗಾರವಿರುತ್ತೇ ಅಷ್ಟು ಅಶಾಂತಿ ಮನೆಮಾಡಿರುತ್ತದೆ ಮನೆಗೆ ಕನ್ನ ಹಾಕುವ ಕಳ್ಳರು ಕೂಡ ಮೊದಲು ದೋಚುವುದು ಕೂಡ ಬಂಗಾರವನ್ನೇ ಅಂತಹ ಬಂಗಾರವನ್ನು ನೀವು ಅಕ್ಷಯ ತೃತೀಯ ದಿನ ಖರೀದಿ ಮಾಡಿದರೆ ಕಲಿಪುರುಷನ ಪ್ರವೇಶ ನಿಮ್ಮ ಮನೆಗೆ ಆಗುತ್ತದೆ ಮನೆಯಲ್ಲಿ ಅಶಾಂತಿ ನಿತ್ಯಾ ಗಲಾಟೆಗಳು ರಂಪಾಟಗಳು ಶುರುವಾಗುತ್ತದೆ ನಿಮ್ಮ ಬಳಿ ಹಣವಿದ್ದಾಗ ಬಂಗಾರವನ್ನು ಖರೀದಿ ಆದರೆ ಯಾರೋ ಟಿವಿಯಲ್ಲಿ ಬೃಹಸ್ಪತಿ ಹೇಳಿದನ್ನು ಕೇಳಿಕೊಂಡು ಅಪ್ಪಿತಪ್ಪಿಯೂ ಕೂಡ ಅಕ್ಷಯ ತೃತೀಯ ದಿನ ಸಾಲ ಬಂಗಾರ ಖರೀದಿ ಮಾಡಿ ಸಂ’ಕ’ಷ್ಟ’ಗಳಿಗೆ ಸಿಲುಕಬೇಡಿ
ಅಕ್ಷಯ ತೃತೀಯದ ದಿನ ನೀವು ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದರೆ ಮುಂದಿನ ಅಕ್ಷಯ ತೃತೀಯದ ದಿನದವರೆಗೂ ನಿಮ್ಮ ಮನೆಯಲ್ಲಿ ಕಲಿಪುರುಷ ಸ್ಥಿರನಾಗಿರುತ್ತಾನೆ ಅಶಾಂತಿಯ ಗೂಡು ನಿಮ್ಮ ಮನೆಯಲ್ಲಿ ಇರುತ್ತದೆ ಇನ್ನೂ ನೆಮ್ಮದಿಯ ನಿದ್ದೆಯೂ ಕೂಡ ಹೋಗುತ್ತದೆ ಅವಮಾನಗಳು ಎದುರಾಗುತ್ತವೆ ಹೀಗಾಗಿ ಆಯ್ಕೆ ನಿಮ್ಮದು ಅಕ್ಷಯ ತೃತೀಯ ದಿನ ಸಾಧ್ಯವಾದರೆ ಯಾವುದಾದರೂ ಅನಾಥಶ್ರಮದ ಮಕ್ಕಳಿಗೆ ಊಟ ಹಾಕಿಸಿ ಪರಿಸರ ಸಂರಕ್ಷಸಿಸಲು ಒಂದು ಗಿಡವನ್ನು ನೆಡಿ ಸಾಧ್ಯವಾದಷ್ಟು ಒಳ್ಳೆಯ ವಿಷಯಗಳನ್ನು ಒಳ್ಳೆಯ ತರದಲ್ಲಿ ಬದುಕಿನ ಆಲೋಚನೆಗಳನ್ನು ಮಾಡಿ ನಿಮ್ಮ ಬದುಕು ಅಕ್ಷಯವಾಗುತ್ತದೆ.